ಇದು ಹು-ಧಾ ಪಾಲಿಕೆಯ ಬಿಲ್ ವಿದ್ಯೆ: ರಾಷ್ಟ್ರಪತಿ ಪೌರ ಸನ್ಮಾನದ ಹೆಸರಿನಲ್ಲಿ ನಿಮಿಷಕ್ಕೆ 2.49 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ!

Hubli-Dharwad Municipal Corporation: ಊಟ ಮಾಡದವರ ಹೆಸರಿನಲ್ಲೂ ಖರ್ಚು ಹಾಕಲಾಗಿದೆ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ. ಪೌರ ಸನ್ಮಾನ ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಿರಲಿಲ್ಲ. ಇದನ್ನು ಆ ವಿಭಾಗದ ಅಧಿಕಾರಿಗಳೇ ಸ್ಪಷ್ಟಪಡಿಸುತ್ತಾರೆ.

ಇದು ಹು-ಧಾ ಪಾಲಿಕೆಯ ಬಿಲ್ ವಿದ್ಯೆ: ರಾಷ್ಟ್ರಪತಿ ಪೌರ ಸನ್ಮಾನದ ಹೆಸರಿನಲ್ಲಿ ನಿಮಿಷಕ್ಕೆ 2.49 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ!
ಇದು ಹುಬ್ಬಳ್ಳಿ ಪಾಲಿಕೆಯ ಬಿಲ್ ವಿದ್ಯೆ! ರಾಷ್ಟ್ರಪತಿ ಪೌರ ಸನ್ಮಾನದ ಹೆಸರಿನಲ್ಲಿ ನಿಮಿಷಕ್ಕೆ 2.49 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ!
Follow us
TV9 Web
| Updated By: ಸಾಧು ಶ್ರೀನಾಥ್​

Updated on: Dec 08, 2022 | 2:23 PM

ಕಳೆದ ಸೆಪ್ಟೆಂಬರ್ 26ರಂದು ದೇಶದ ಪ್ರಥಮ ಪ್ರಜೆ ದ್ರೌಪದಿ ಮುರ್ಮು ಅವರಿಗೆ ವಾಣಿಜ್ಯ ನಗರಿಯಲ್ಲಿ ನೀಡಲಾದ ಪೌರ ಸನ್ಮಾನಕ್ಕೆ ಮಹಾನಗರ ಪಾಲಿಕೆ ಎಷ್ಟು ಖರ್ಚು ಮಾಡಿದೆ ಗೊತ್ತಾ? 50 ನಿಮಿಷದ ಕಾರ್ಯಕ್ರಮಕ್ಕೆ ಮಹಾನಗರ ಪಾಲಿಕೆ ಮಾಡಿದ ಖರ್ಚಿನ ಬಾಬತ್ತು ಕೇಳಿದ್ರೆ ನೀವು ಬೆಚ್ಚಿ ಬೀಳ್ತೀರಿ.. ಸುಂಕದಾತರ ಹಣಕ್ಕೆ ರಾಮನ ಕೃಷ್ಣನ ಲೆಕ್ಕ ತೋರಿಸಿ ಹೇಗೆ ಯಾಮಾರಿಸುತ್ತಿದ್ದಾರೆ ನೀವೇ ನೋಡಿ… ದೇಶದ ಪ್ರಥಮ ಪ್ರಜೆ ಅವರು.. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು (President Droupadi Murmu) ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಅದ್ದೂರಿಯಾಗಿ ಸನ್ಮಾನಿಸಲಾಗಿತ್ತು.. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ (Hubli-Dharwad Municipal Corporation) ಅವರನ್ನು ವಾಣಿಜ್ಯ ನಗರಕ್ಕೆ ಆಹ್ವಾನಿಸಿ ಪೌರ ಸನ್ಮಾನ ಮಾಡಿ ದಕ್ಷಿಣ ಭಾರತದಲ್ಲಿ ಮೊದಲ ಪೌರ ಸನ್ಮಾನ (Poura Sanmana Felicitation) ಮಾಡಿದ ಹೆಗ್ಗಳಿಕೆಗೆ ಹುಬ್ಬಳ್ಳಿ ಪಾತ್ರವಾಗಿತ್ತು..

ಇದೆಲ್ಲಾ ಸರಿಯಾಗಿದೆ.. ಅದರೆ ಈ ಕಾರ್ಯಕ್ರಮಕ್ಕೆ ಮಹಾನಗರ ಪಾಲಿಕೆ ಮಾಡಿದೆ ಎನ್ನಲಾದ ಖರ್ಚು ವೆಚ್ಚಗಳು ಗಮನಿಸಿದರೆ ಎಂಥ ದಡ್ಡನಿಗೂ ಲೆಕ್ಕ ಅರ್ಥವಾಗದೆ ಇರದು.. 50 ನಿಮಿಷದ ಕಾರ್ಯಕ್ರಮಕ್ಕೆ ಪಾಲಿಕೆ ಖರ್ಚು ಮಾಡಿದ್ದು ಎಷ್ಟು ಗೊತ್ತಾ? ಬರೋಬ್ಬರಿ ಒಂದು ಕೋಟಿ 24 ಲಕ್ಷ ರೂಪಾಯಿ ಅಂತೆ.. ಕರ ದಾತರ ಹಣ ಯದ್ವಾತದ್ವಾ ಖರ್ಚು ಮಾಡಿ, ಒಂದೇ ಕೆಲಸಕ್ಕೆ ಎರಡೆರಡು ಬಿಲ್ ತೋರಿಸಿ ಸರಕಾರಕ್ಕೆ ಯಾಮಾರಿಸಿದ್ದಾರೆ.

ಪಾಲಿಕೆ ಅವತ್ತು ಮಾಡಿದ್ದ ಎಲ್ಲಾ ಖರ್ಚಿನ ಅಂಕಿ ಸಂಖ್ಯೆಗಳ ವಿವರ ಟಿವಿ9ಗೆ ಲಭ್ಯವಾಗಿದ್ದು, ಪ್ರತಿ ಒಂದು ನಿಮಿಷಕ್ಕೆ ಬರೋಬ್ಬರಿ 2.49 ಲಕ್ಷ ರೂ. ಖರ್ಚು ಮಾಡಿದೆ. ಅಂದರೆ 1,24,38,074 ರೂ. ವೆಚ್ಚ ತೋರಿಸಲಾಗಿದೆ. ರಾಷ್ಟ್ರಪತಿ ಪೌರಸನ್ಮಾನ ಕಾರ್ಯಕ್ರಮಕ್ಕೆ ಸಂಬಂಧಿಸಿ ಒಟ್ಟು ಖರ್ಚು ವೆಚ್ಚದ ಬಗ್ಗೆ ನಿಖರ ಮಾಹಿತಿ ಇಲ್ಲ, ಈ ಮೊದಲೇ 1.50 ಕೋಟಿ ರೂ. ಎಂದು ಆಂದಾಜಿಸಿದ್ದೆವು. ಸಂಪೂರ್ಣ ಮಾಹಿತಿ ಕೊಡಿ ಎಂದು ಕಮಿಷನರ್ ಗೆ ತಿಳಿಸಿದ್ದೆವು. ಇನ್ನೂ ಕೊಟ್ಟಿಲ್ಲ, ನಿರ್ಮಿತಿ ಕೇಂದ್ರದಿಂದ ಇನ್ನೂ ಡಿಟೇಲ್ಸ್ ಬರಬೇಕು. ಅವರಿಗೆ ಅಡ್ವಾನ್ಸ್ ಎಂದು 25 ಲಕ್ಷ ರೂ. ಕೊಡಲಾಗಿದೆ ಎನ್ನುತ್ತಾರೆ ಪಾಲಿಕೆ ಸದಸ್ಯ ಹಿರೇಮಠ್.

ರಾಷ್ಟ್ರಪತಿ ಪೌರ ಸನ್ಮಾನ ಹು-ಧಾ ಪಾಲಿಕೆ ಗೌರವ ಹೆಚ್ಚುತ್ತದೆಯಲ್ಲದೇ ಅಭಿವೃದ್ಧಿಗೂ ಸಹಕಾರಿಯಾಗಲಿದೆ ಎಂದು ಮೇಯರ್‌ ಹೇಳಿದ್ದರು. ಪೌರ ಸನ್ಮಾನದಿಂದ ಪಾಲಿಕೆಯ ಗೌರವ ವೃದ್ಧಿಸಿದೆಯೋ, ಇಲ್ಲವೋ ಎಂಬುದು ಅವಳಿ ನಗರದ ಪ್ರಜ್ಞಾವಂತ ನಾಗರಿಕರೇ ಹೇಳಬೇಕು. ಆದರೆ, ಕರದಾತರ ಹಣ ಮಾತ್ರ ಯದ್ವಾತದ್ವಾ ಖರ್ಚು ಮಾಡಿದ್ದಂತೂ ಸುಳ್ಳಲ್ಲ ಎಂಬುದು ಪಾಲಿಕೆ ಅಂಕಿ ಸಂಖ್ಯೆಗಳಿಂದಲೇ ಗೋಚರಿಸುತ್ತದೆ ಅಂತ ಮೇಯರ್ ಈರೇಶ ಅಂಚಟಗೇರಿ ಹೇಳಿದ್ದಾರೆ. ಹಾಗಾದ್ರೆ ಅವರ ಗಮನಕ್ಕೂ ಬಾರದೆ ಪಾಲಿಕೆಯ ಅಧಿಕಾರಿಗಳು ಬಿಲ್ ವಿದ್ಯೆ ತೋರಿಸಿದ್ದಾರಾ ಅನ್ನೋ ಗುಮಾನಿ ಶುರುವಾಗಿದೆ.

ಕಾಣಿಕೆಗೆ ಅಂತ ಕಾರ್ಯಕ್ರಮದಲ್ಲಿ 3.42 ಲಕ್ಷ ರೂ. ಮೊತ್ತದ ನೆನಪಿನ ಕಾಣಿಕೆ ಕೊಡಲಾಗಿದೆ. ರಾಷ್ಟ್ರಪತಿ ಅವರಿಗೆ 900 ಗ್ರಾಂ ಬೆಳ್ಳಿ ಸಿದ್ದಾರೂಢರ ಮೂರ್ತಿ, ಸಿದ್ದಾರೂಢ ಚರಿತಾಮೃತ ಪುಸ್ತಕ, ಶಾಲು, ಹಾರ ಹಾಗೂ ಬೆಳ್ಳಿ ಕಟ್ ಇರುವ ಪ್ರಶಂಸನಾ ಪತ್ರದ ಫೋಟೊ ನೀಡಿ ಸನ್ಮಾನ ಮಾಡಲಾಗಿದೆ. ಈ ಮೊತ್ತವನ್ನು ಸಾರ್ವಜನಿಕ ಸಂಪರ್ಕ ವಿಭಾಗದ ಮೂಲಕ ಅದೇ ವಿಭಾಗದ ಅಧಿಕಾರಿಗೆ ಹಣ ಪಾವತಿಸಿರುವುದು ಲಕ್ಷ ರೂಪಾಯಿ ಎಂಬುದು ವಿಶೇಷ. ಇಲ್ಲಿ ಪೂರೈಕೆದಾರರೂ ಅವರೇ ಆಗಿದ್ದರು ಎಂದೂ ನಮೂದಿಸಲಾಗಿದೆ.

ಪೆಂಡಾಲ್ ಹಾಕುವ ಕೆಲಸ ಪೂರ್ಣಗೊಂಡ ಬಳಿಕ ಟೆಂಡರ್ ಕರೆದ ಪಾಲಿಕೆ, ಬರೀ ಪೆಂಡಾಲ್‌ಗಷ್ಟೇ 64.05 ಲಕ್ಷ ರೂ. ವ್ಯಯಿಸಿದ್ದರೆ, ಊಟೋಪಚಾರಕ್ಕಾಗಿ 10 ಲಕ್ಷರೂ., ಸ್ವಾಗತ ಫಲಕಕ್ಕೆ 9.71 ಲಕ್ಷ ರೂ., ಜಾಹೀರಾತಿಗೆ 9.60 ಲಕ್ಷ ರೂ., ನೆನಪಿನ ಕಾಣಿಕೆಗೆ 3.42 ಲಕ್ಷರೂ. ಹೀಗೆ ಒಂದೊಂದು ಕೆಲಸಕ್ಕೂ ಲಕ್ಷ ಲಕ್ಷ ವ್ಯಯಿಸಲಾಗಿದೆ. 900 ವಿಶೇಷ ಆಹ್ವಾನಿತರಿಗೆ ಆಹ್ವಾನ ನೀಡಿ ಉತ್ತರ ಕರ್ನಾಟಕ ಶೈಲಿಯ ಊಟದ ವ್ಯವಸ್ಥೆ ಮಾಡಲಾಗಿತ್ತು. ಇವರ ಊಟೋಪಚಾರಕ್ಕೆ ಪ್ರತಿ 527 ರೂ. ಗಳಂತೆ 4,74, 726 ರೂ. ಪಾವತಿಸಲಾಗಿದೆ. ಪೊಲೀಸರಿಗೂ ಪಲಾವು, ಡ್ರೈ ಜಾಮೂನ್ ಊಟೋಪಚಾರ ಮಾಡಲಾಗಿತ್ತು. ಇವರಿಗೆ 1,15,174 ರೂ. ಮೊತ್ತದ ಊಟ ಸರಬರಾಜು ಮಾಡಲಾಗಿದೆ.

ಇದಕ್ಕಾಗಿ ಒಟ್ಟು 10 ಲಕ್ಷರೂ. ಖರ್ಚು ಮಾಡಲಾಗಿದೆ. ಉತ್ತರ ಕರ್ನಾಟಕದ ಶೈಲಿಯ ಊಟಕ್ಕೆ ಅವರು ಪಾವತಿ ಮಾಡಿರುವ ಬಿಲ್ ಪಂಚತಾರಾ ಹೋಟೆಲ್ ನಲ್ಲೂ ಅಷ್ಟೊಂದು ಮೊತ್ತ ಇರಲ್ಲ ಅಂತ ಪ್ರತಿಯೊಬ್ಬನಿಗೂ ಗೊತ್ತು. ಅಷ್ಟೇಅಲ್ಲ, ಒಂದೇ ಕೆಲಸಕ್ಕೆ ನಾಲ್ಕು ಬಿಲ್ ಕೂಡ ಲಗತ್ತು ಮಾಡಿದ್ದಾರೆ. ಕಾರ್ಯಕ್ರಮದ ಒಂದೇ ಕೆಲಸಕ್ಕೆ ಪಾಲಿಕೆ ಎರಡು ಬಿಲ್ ಪಾವತಿಸಿದೆಯಲ್ಲದೇ, ಈ ಬಿಲ್‌ಗಳು ಒಂದೇ ಏಜೆನ್ಸಿಗೆ ಸೇರಿವೆ ಎಂಬುದು ವಿಶೇಷ. ಸ್ವಾಗತ ಫಲಕಗಳಿಗೆ 9.71ಲಕ್ಷ ರೂ. ಖರ್ಚು ಮಾಡಿರುವ ಪಾಲಿಕೆ ಇದನ್ನು ಒಂದೇ ಏಜೆನ್ಸಿಗೆ ನೀಡಿದ್ದರೂ ನಾಲ್ಕು ಪ್ರತ್ಯೇಕ ಬಿಲ್ ಗಳನ್ನು ನೀಡಿದೆ. ಒಂದೇ ಬಿಲ್ ಪಾವತಿಸಲು ಅವಕಾಶವಿದ್ದರೂ 2.24 ಸಾವಿರ ರೂ.ಗಳ ಎರಡು ಬಿಲ್ ಸೇರಿ ನಾಲ್ಕು ಬಿಲ್ ನೀಡಿರುವುದು ಹಲವು ಸಂಶಯಗಳಿಗೆ ಎಡೆ ಮಾಡಿದೆ.

ಇನ್ನು ಊಟ ಮಾಡದವರ ಹೆಸರಿನಲ್ಲೂ ಖರ್ಚು ಹಾಕಲಾಗಿದೆ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ. ಪೌರ ಸನ್ಮಾನ ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಿರಲಿಲ್ಲ. ಎಂದಿನಂತೆ ಆಯಾ ಜೋನಲ್‌ಗಳ ವ್ಯಾಪ್ತಿಯ ಕಾರ್ಮಿಕರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಇದನ್ನು ಆ ವಿಭಾಗದ ಅಧಿಕಾರಿಗಳೇ ಸ್ಪಷ್ಟಪಡಿಸುತ್ತಾರೆ. ಪೌರಕಾರ್ಮಿಕರ ಊಟೋಪಚಾರಕ್ಕೆ 1,58,020 ರೂ. ಖರ್ಚು ಮಾಡಲಾಗಿದೆ ಎಂದು ವೆಚ್ಚ ತೋರಿಸಲಾಗಿದೆ. ಊಟ ಒಂದೇ, ಖರ್ಚಿನ ಬಾಬತ್ತು ಭಿನ್ನವಾಗಿವೆ.. ಪೌರ ಸನ್ಮಾನಕ್ಕೆ ಬಂದಿದ್ದ ವಿಶೇಷ ಗಣ್ಯ ವ್ಯಕ್ತಿಗಳಿಗೆ ವಿಶೇಷ ಊಟದ ವ್ಯವಸ್ಥೆ ಮಾಡಲಾಗಿತ್ತು.

ಆದರೆ, ಇದೇ ಊಟದ ಖರ್ಚುನ್ನು ಗಣ್ಯರಿಗೊಂದು, ವಿಶೇಷ ಆಹ್ವಾನಿತರಿಗೆ ಒಂದು ಬೇರೆ ಬೇರೆಯಾಗಿ ತೋರಿಸುವ ಮೂಲಕ ಬಿಲ್ವಿದ್ಯೆ ಪ್ರದರ್ಶಿಸಲಾಗಿದೆ. ತಲಾ ಒಬ್ಬ ಗಣ್ಯರಿಗೆ 626 ರೂ., ವಿಶೇಷ ಆಹ್ವಾನಿತರಿಗೆ 527 ರೂ.ಗಳಂತೆ ಬಿಲ್ ಪಾವತಿಸಲಾಗಿದೆ. ಊಟ ಒಂದೇ ಬಿಲ್ ಮಾತ್ರ ಎರಡು.. ಇನ್ನು ಪತ್ರಿಕೆಗೆ ನೀಡಲಾದ ಜಾಹೀರಾತಿನಲ್ಲಿ ಗೋಲ್ ಮಾಲ್ ಮಾಡಲಾಗಿದೆ ಎನ್ನಲಾಗಿದೆ. ಅವರಿಗೆ ಜಾಹೀರಾತಿಗೆ ನೀಡಿದ ಹಣವೇ ಕಡಿಮೆ, ಲೆಕ್ಕ ತೋರಿಸಿದ್ದು ಮಾತ್ರ ಹೆಚ್ಚು ಅನ್ನೋ ಆರೋಪ ಬೇರೆ ಇದೆ. ಸರಕಾರ ಕೂಡಲೇ ಈ ಕುರಿತಂತೆ ತನಿಖೆ ಕೈಗೊಳ್ಳದಿದ್ದರೆ ಕರದಾತರಿಗೆ ಮಹಾಮೊಸವೆಸಗಿದಂತೆಯೇ ಸೇರಿ. (ವರದಿ: ರಹಮತ್ ಕಂಚಗಾರ್, ಟಿವಿ 9, ಹುಬ್ಬಳ್ಳಿ)

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಒತ್ತಿ

ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ