AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಬ್ಬಳ್ಳಿಗೂ ಬಂತು ವಂದೇ ಭಾರತ್​ ರೈಲು! ಹುಬ್ಬಳ್ಳಿ-ಬೆಂಗಳೂರು ಸಂಚಾರ ಮಾರ್ಚ್‌ನಲ್ಲಿ ಆರಂಭ, ಏನಿದರ ವಿಶೇಷ?

ಹುಬ್ಬಳ್ಳಿ - ಬೆಂಗಳೂರು ನಡುವಿನ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಸಂಚಾರವನ್ನು ಧಾರವಾಡದವರೆಗೆ ವಿಸ್ತರಿಸುವಂತೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಅವರು ಮನವಿ ಮಾಡಿದ್ದು, ಧಾರವಾಡದಿಂದ ರೈಲು ಸಂಚಾರ ಆರಂಭವಾಗುವ ಸಾಧ್ಯತೆ ಇದೆ

ಹುಬ್ಬಳ್ಳಿಗೂ ಬಂತು ವಂದೇ ಭಾರತ್​ ರೈಲು! ಹುಬ್ಬಳ್ಳಿ-ಬೆಂಗಳೂರು ಸಂಚಾರ ಮಾರ್ಚ್‌ನಲ್ಲಿ ಆರಂಭ, ಏನಿದರ ವಿಶೇಷ?
ಹುಬ್ಬಳ್ಳಿಗೂ ಬಂತು ವಂದೇ ಭಾರತ್​ ರೈಲು!
TV9 Web
| Updated By: ಸಾಧು ಶ್ರೀನಾಥ್​

Updated on:Dec 09, 2022 | 12:19 PM

Share

ಅದು ವಿಶ್ವದ ಅತಿದೊಡ್ಡ ರೈಲ್ವೇ ಪ್ಲಾಟ್‌ಫಾರಂ ಹೊಂದಿರುವ ಮಹಾನಗರ. ಅಷ್ಟೇಅಲ್ಲಾ, ಪರಿಸರ ಸ್ನೇಹಿ ಹೆಗ್ಗಳಿಕೆ ಹೊಂದಿರುವ ಹುಬ್ಬಳ್ಳಿಯ ಸಿದ್ಧಾರೂಢ ರೈಲ್ವೇ ನಿಲ್ದಾಣದಿಂದ ಬೆಂಗಳೂರಿಗೆ ಶೀಘ್ರದಲ್ಲಿಯೇ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು (Vande Bharat Express high-speed train) ಸಂಚಾರ ಪ್ರಾರಂಭವಾಗಲಿದೆ. ಬಹುನಿರೀಕ್ಷಿತ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಹುಬ್ಬಳ್ಳಿ – ಬೆಂಗಳೂರು ನಡುವೆ (Hubballi-Bengaluru) 2023ರ ಮಾರ್ಚ್‌ನಲ್ಲಿ ಸಂಚಾರ ಆರಂಭಿಸುವ ಸಾಧ್ಯತೆ ಇದ್ದು, ನೈಋತ್ಯ ರೈಲ್ವೇ ವಲಯದಿಂದ (South Western Railway) ಕೆಲಸ ಭರದಿಂದ ಸಾಗಿದೆ…

ಭಾರತದಲ್ಲಿ ಏನೇ ಹೋಸ ಯೋಜನೆಗಳು ಅನುಷ್ಠಾನವಾದ್ರೂ ದಕ್ಷಿಣ ಭಾಗಕ್ಕೆ ಆ ಯೋಜನೆಗಳು ಸಿಗೋದು ತುಂಬಾನೇ ಅಪರೂಪ.. ಇಲ್ಲವೇ, ಸಾಕಷ್ಟು ತಡವಾಗಿ ಯೋಜನೆ ಕಾರ್ಯರೂಪಕ್ಕೆ ಬರೋದು ಸರ್ವೇಸಾಮಾನ್ಯ ಎಂಬಂತಾಗಿದೆ. ಆದರೆ, ಇತ್ತೀಚಿಗೆ ಪರಿಸ್ಥಿತಿ ಹಾಗಿಲ್ಲಾ. ಕೇಂದ್ರ ಸರಕಾರ ಯಾವುದೇ ಯೋಜನೆ ಬಿಡುಗಡೆ ಮಾಡಿದರೂ ಅದು ನಮ್ಮ ರಾಜ್ಯಕ್ಕೆ ವಿಥಿನ್ ನೋ ಟೈಂ ಎಂಬಂತೆ ನಮ್ಮಲ್ಲೂ ಕೂಡಾ ಕಾರ್ಯರೂಪಕ್ಕೆ ಬರೋದ್ರಲ್ಲಿ ಎರಡು ಮಾತಿಲ್ಲ. ಇದೀಗ ದೇಶದಲ್ಲಿ ರೈಲ್ವೆ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿರುವ ದೇಶಿ ನಿರ್ಮಿತ ವಂದೇ ಭಾರತ್ ರೈಲು ಭಾರತದಲ್ಲಿ ಹೊಸ ಭರವಸೆ ಮೂಡಿಸುವತ್ತ ದಾಪುಗಾಲು ಹಾಕುತ್ತಿದೆ.

ಈಗಾಗಲೇ ಚೆನ್ನೈ – ಬೆಂಗಳೂರು – ಮೈಸೂರು ನಡುವೆ ದಕ್ಷಿಣ ಭಾರತದ ಮೊದಲ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಸಂಚಾರ ಆರಂಭವಾಗಿದೆ. ಈಗ ಹುಬ್ಬಳ್ಳಿ – ಬೆಂಗಳೂರು ನಡುವೆ ಕರ್ನಾಟಕದಲ್ಲಿ ಎರಡನೇ ವಂದೇ ಭಾರತ್‌ ರೈಲು ಸಂಚಾರ ಆರಂಭಿಸಲು ನೈಋತ್ಯ ರೈಲ್ವೇ ಸಿದ್ಧವಾಗಿದೆ.

ಹುಬ್ಬಳ್ಳಿ – ಬೆಂಗಳೂರು ನಡುವಿನ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಸಂಚಾರವನ್ನು ಧಾರವಾಡದವರೆಗೆ ವಿಸ್ತರಿಸುವಂತೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಅವರು ಮನವಿ ಮಾಡಿದ್ದು, ಧಾರವಾಡದಿಂದ ರೈಲು ಸಂಚಾರ ಆರಂಭವಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಉದ್ಯಮಿ ಮಹೇಂದ್ರ ಸಿಂಘ್ವಿ.

Vande Bharat Rail to run between Hubballi and Bengaluru from March 2023

ಮುಂದಿನ ವರ್ಷ ಮಾರ್ಚ್​​ ಒಳಗೆ ಈ ರೈಲು ಹುಬ್ಬಳ್ಳಿಯ ವಿಶ್ವದ ಅತಿದೊಡ್ಡ ರೈಲ್ವೆ ಪ್ಲಾಟ್ ಫಾರಂ ತಲುಪಲಿದೆ. ಇದರಿಂದ ಉತ್ತರ ಕರ್ನಾಟಕ ಭಾಗದ ಜನರ ಆಶೋತ್ತರಗಳಿಗೆ ಸ್ಪಂದಿಸಿದಂತಾಗುತ್ತೆ ಅನ್ನೋ ಅಭಿಪ್ರಾಯ ಸಾರ್ವಜನಿಕವಾಗಿ ಚರ್ಚೆಯಾಗುತ್ತಿದೆ. ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಸಂಚರಿಸುವುದೆಂದರೆ ವಿಮಾನದಲ್ಲಿ ಸಂಚರಿಸಿದ ಅನುಭವವಾಗುತ್ತದೆ. ವೇಗ, ಸುರಕ್ಷತೆ ಮತ್ತು ಅತ್ಯಾಧುನಿಕ ಸೇವೆ ಈ ರೈಲಿನಲ್ಲಿ ದೊರೆಯಲಿವೆ.

ಪ್ರತಿ ಸೀಟಿಗೆ ಮೊಬೈಲ್‌ ಚಾರ್ಜರ್, ತಿಂಡಿ ಸವಿಯಲು ಟೇಬಲ್ ಇರಲಿವೆ. ಎಲ್ಲ ಬೋಗಿಗಳಿಗೆ ಆಟೋಮೆಟಿಕ್ ಬಾಗಿಲು, ಪ್ರಯಾಣಿಕರಿಗೆ ಆಡಿಯೋ ಮೂಲಕ ಮಾಹಿತಿ ನೀಡುವ ಸೌಲಭ್ಯ, ಮನರಂಜನೆಗಾಗಿ ವೈಫೈ ಸೌಲಭ್ಯ, ಸುಖಕರ ಆಸನಗಳು, ಬಯೋವ್ಯಾಕ್ಯೂಮ್ ಹೊಂದಿದ ಶೌಚಗೃಹ ಈ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಇರಲಿವೆ. ಹುಬ್ಬಳ್ಳಿ-ಧಾರವಾಡದ ಮಂದಿ ಈ ಹೊಸ ರೈಲಿನ ಸೌಕರ್ಯದ ಅನುಭವವನ್ನು ಪಡೆಯೋಕೆ ಕಾತುರರಾಗಿದ್ದಾರೆ.

Also Read: Nava Durga Utsava: ಕೋಟೆನಾಡು ದುರ್ಗದಲ್ಲಿ ನವದುರ್ಗಿಯರ ಭಕ್ತಿಭಾವದ, ಮನಮೋಹಕ ಉತ್ಸವ

ಪ್ರತಿ ಬೋಗಿಯಲ್ಲಿ ಪ್ರಯಾಣಿಕರು ಇರುವ ಸ್ಥಳದಲ್ಲಿಯೇ ತಿಂಡಿ, ಊಟ ಪೂರೈಸಲಾಗುತ್ತದೆ. 16 ಎಸಿ ಬೋಗಿಗಳಲ್ಲಿ 2 ಎಕ್ಸಿಕ್ಯೂಟಿವ್ ಕ್ಲಾಸ್ ಬೋಗಿಗಳು ಇರಲಿವೆ. 1,128 ಪ್ರಯಾಣಿಕರು ಏಕಕಾಲಕ್ಕೆ ಪ್ರಯಾಣಿಸಬಹುದು. ಅಂಗವಿಕಲ ಪ್ರಯಾಣಿಕರಿಗೂ ಸಾಕಷ್ಟು ಸೌಲಭ್ಯಗಳು ಇವೆ. ರೈಲು ಕಡಿಮೆ ನಿಲುಗಡೆಗಳನ್ನು ಹೊಂದಿದ್ದು, ಪ್ರಮುಖ ನಿಲ್ದಾಣಗಳಲ್ಲಿ ಮಾತ್ರ ನಿಲುಗಡೆ ಆಗಲಿದೆ.

ಬೆಂಗಳೂರು – ಹುಬ್ಬಳ್ಳಿ ನಡುವೆ ರಾಜ್ಯದ ಎರಡನೇ ರೈಲು ಸಂಚಾರ ನಡೆಸಲಿದೆ. ಈ ಮೂಲಕ ಉತ್ತರ ಕರ್ನಾಟಕದ ಜನರಿಗೆ ಶುಭಸುದ್ದಿ ಸಿಕ್ಕಿತ್ತು. ಬೆಂಗಳೂರು -ಹುಬ್ಬಳ್ಳಿ ನಡುವೆ ವಂದೇ ಭಾರತ್ ರೈಲು ಸಂಚಾರ ನಡೆಸಬೇಕು ಎಂಬ ಬೇಡಿಕೆ ಇಡಲಾಗಿತ್ತು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಈ ಕುರಿತು ಒತ್ತಾಯಿಸಿದ್ದರು. ಅಲ್ಲದೇ ಧಾರವಾಡದ ತನಕ ರೈಲು ವಿಸ್ತರಣೆ ಮಾಡಬೇಕು ಎಂದು ಮನವಿ ಮಾಡಿದ್ದರು. (ವರದಿ: ರಹಮತ್ ಕಂಚಗಾರ್, ಟಿವಿ 9, ಹುಬ್ಬಳ್ಳಿ)

ರಾಜ್ಯದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:14 pm, Fri, 9 December 22

ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಯಶ್ ಅಭಿಮಾನಿಗಳಿಗೆ ತುಂಬಾ ಇಷ್ಟ ಆಯ್ತು ‘ರಾಮಾಯಣ’ ಸಿನಿಮಾ ಮೊದಲ ಗ್ಲಿಂಪ್ಸ್
ಯಶ್ ಅಭಿಮಾನಿಗಳಿಗೆ ತುಂಬಾ ಇಷ್ಟ ಆಯ್ತು ‘ರಾಮಾಯಣ’ ಸಿನಿಮಾ ಮೊದಲ ಗ್ಲಿಂಪ್ಸ್
‘ರಾಮಾಯಣ’ ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಹೇಳಿದ್ದೇನು? ವಿಡಿಯೋ ನೋಡಿ
‘ರಾಮಾಯಣ’ ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಹೇಳಿದ್ದೇನು? ವಿಡಿಯೋ ನೋಡಿ
ಎಕ್ಸ್​ಟ್ರಾ ಕಾಫಿ ಕಪ್​ಗಾಗಿ ಗಲಾಟೆ: ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ!
ಎಕ್ಸ್​ಟ್ರಾ ಕಾಫಿ ಕಪ್​ಗಾಗಿ ಗಲಾಟೆ: ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ!
ಸುಖಾಸುಮ್ಮನೆ ಹೇಳಿಕೆ ನೀಡುವ ರಾಜಕಾರಣಿಗೆ ಯದುವೀರ್ ಮಾದರಿ
ಸುಖಾಸುಮ್ಮನೆ ಹೇಳಿಕೆ ನೀಡುವ ರಾಜಕಾರಣಿಗೆ ಯದುವೀರ್ ಮಾದರಿ
ಸ್ವಯಂ ನಿವೃತ್ತಿ ಬಗ್ಗೆ ಎಎಸ್​ಪಿ ನಾರಾಯಣ ಭರಮನಿ ಮೊದಲ ಪ್ರತಿಕ್ರಿಯೆ
ಸ್ವಯಂ ನಿವೃತ್ತಿ ಬಗ್ಗೆ ಎಎಸ್​ಪಿ ನಾರಾಯಣ ಭರಮನಿ ಮೊದಲ ಪ್ರತಿಕ್ರಿಯೆ
ಕೋವಿಡ್ ಲಸಿಕೆ ಪಡೆದವರಲ್ಲಿ ಹೃದಯಾಘಾತ ಅಪಾಯ ಕಡಿಮೆ: ಡಾ. ಮೋಹಿತ್ ಗುಪ್ತಾ
ಕೋವಿಡ್ ಲಸಿಕೆ ಪಡೆದವರಲ್ಲಿ ಹೃದಯಾಘಾತ ಅಪಾಯ ಕಡಿಮೆ: ಡಾ. ಮೋಹಿತ್ ಗುಪ್ತಾ
ಸಂಪುಟ ಸಭೆಯನ್ನು ಬೇರೆ ಬೇರೆ ಸ್ಥಳಗಳಲ್ಲಿ ನಡೆಸುವುದು ದುಂದು ವೆಚ್ಚವಲ್ಲವೇ?
ಸಂಪುಟ ಸಭೆಯನ್ನು ಬೇರೆ ಬೇರೆ ಸ್ಥಳಗಳಲ್ಲಿ ನಡೆಸುವುದು ದುಂದು ವೆಚ್ಚವಲ್ಲವೇ?
ಸಂವೇದನೆಯಿಲ್ಲದ, ಸೂಕ್ಷ್ಮತೆ ಗೊತ್ತಿರದ ಸಿಬ್ಬಂದಿಯಿಂದ ಸಮೀಕ್ಷೆ ಬೇಕಿತ್ತೇ?
ಸಂವೇದನೆಯಿಲ್ಲದ, ಸೂಕ್ಷ್ಮತೆ ಗೊತ್ತಿರದ ಸಿಬ್ಬಂದಿಯಿಂದ ಸಮೀಕ್ಷೆ ಬೇಕಿತ್ತೇ?
ಎಲ್ಲ ಮಂತ್ರಿಗಳು ಒಂದೇ ವಾಕ್ಯವನ್ನು ಪುನರಾವರ್ತಿಸುತ್ತಿದ್ದಾರೆ
ಎಲ್ಲ ಮಂತ್ರಿಗಳು ಒಂದೇ ವಾಕ್ಯವನ್ನು ಪುನರಾವರ್ತಿಸುತ್ತಿದ್ದಾರೆ