ಹುಬ್ಬಳ್ಳಿ : ವರೂರು ಗ್ರಾಮ ಪಂಚಾಯತಿನಲ್ಲಿ ಹೆಂಡತಿ ಅಧ್ಯಕ್ಷೆ, ಗಂಡ ಉಪಾಧ್ಯಕ್ಷ

ವರೂರು ಗ್ರಾಮ ಪಂಚಾಯತಿಯ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಅಭ್ಯರ್ಥಿ ಎಂದು ಜಿಲ್ಲಾಡಳಿತ ಮೀಸಲಾತಿ ಕೂಡ ನಿಗದಿ ಪಡಿಸಿತ್ತು. ಇತ್ತ ವಿಶಾಲಾಕ್ಷಿ ಸಮಾನ್ಯ ಮಹಿಳಾ ಕೋಟಾದಿಂದಲೇ ಗೆದ್ದರೆ ಅತ್ತ ಪತಿ ಚೆನ್ನಬಸನಗೌಡ ಕೂಡ ಗೆದ್ದಿದ್ದಾರೆ.

ಹುಬ್ಬಳ್ಳಿ : ವರೂರು ಗ್ರಾಮ ಪಂಚಾಯತಿನಲ್ಲಿ ಹೆಂಡತಿ ಅಧ್ಯಕ್ಷೆ, ಗಂಡ ಉಪಾಧ್ಯಕ್ಷ
ವಿಶಾಲಾಕ್ಷಿ ಮತ್ತು ಚನ್ನಬಸವಗೌಡ
Follow us
preethi shettigar
| Updated By: ರಶ್ಮಿ ಕಲ್ಲಕಟ್ಟ

Updated on:Feb 05, 2021 | 12:34 PM

ಧಾರವಾಡ: ರಾಜ್ಯದಲ್ಲಿ ಗ್ರಾಮ ಪಂಚಾಯತಿ ಚುನಾವಣೆ ಮುಗಿದಿದ್ದು, ಫಲಿತಾಂಶವೂ ಹೊರಬಿದ್ದಿದೆ. ಸದ್ಯ ಅಧ್ಯಕ್ಷ- ಉಪಾಧ್ಯಕ್ಷ ಗಾದಿಗೆ ಪೈಪೋಟಿ ಶುರುವಾಗಿದೆ. ಆದರೆ ಇಲ್ಲೊಂದು ಗ್ರಾಮದಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಗಂಡ ಹೆಂಡತಿ ಅಧ್ಯಕ್ಷೆ -ಉಪಾಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಹೊಸ ದಾಖಲೆ ಸೃಷ್ಟಿ ಮಾಡಿದ್ದಾರೆ. ಇದು ಯಾವ ಗ್ರಾಮ ಪಂಚಾಯತಿಯಲ್ಲಿ ಅಂತೀರಾ ಇಲ್ಲಿದೆ ನೋಡಿ.

ವಿಶಾಲಾಕ್ಷಿ ಮತ್ತು ಚನ್ನಬಸವಗೌಡ ಎನ್ನುವ ಸತಿಪತಿಗಳು ಸದ್ಯ ಗ್ರಾಮ ಪಂಚಾಯತಿಯ ಚುಕ್ಕಾಣಿ ಹಿಡಿದಿದ್ದಾರೆ‌. ಹೌದು ಹುಬ್ಬಳ್ಳಿ ತಾಲೂಕಿನ ವರೂರು ಗ್ರಾಮ ಪಂಚಾಯತಿಗೆ ಕಳೆದ ಡಿಸೆಂಬರ್​ನಲ್ಲಿ ಚುನಾವಣೆ ನಡೆದಿದ್ದು, ಗ್ರಾಮದ ವಾಡ್೯ ನಂ 1 ರಿಂದ ಪತ್ನಿ ವಿಶಾಲಾಕ್ಷಿ ಹಾಗೂ ವಾಡ್೯ ನಂಬರ್ 2ರಿಂದ ಪತಿ ಚನ್ನಬಸನಗೌಡ ಆಯ್ಕೆಯಾಗಿದ್ದರು.

ವರೂರು ಗ್ರಾಮ ಪಂಚಾಯತಿಯ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಅಭ್ಯರ್ಥಿ ಎಂದು ಜಿಲ್ಲಾಡಳಿತ ಮೀಸಲಾತಿ ಕೂಡ ನಿಗದಿ ಪಡಿಸಿತ್ತು. ಇತ್ತ ವಿಶಾಲಾಕ್ಷಿ ಸಮಾನ್ಯ ಮಹಿಳಾ ಕೋಟಾದಿಂದಲೇ ಗೆದ್ದು ಬಂದಿದ್ದರು. ಅಲ್ಲದೆ ಪತಿ ಕೂಡ ಉಪಾಧ್ಯಕ್ಷ ಸ್ಥಾನಕ್ಕೆ ಅರ್ಹರಿದ್ದರು. ಹೀಗಾಗಿ ಗ್ರಾಮದ ಎಲ್ಲಾ ಪಕ್ಷದ ಮುಖಂಡರು ಹಾಗೂ ಹಿರಿಯರ ಸಹಾಕರದಿಂದ ಸದ್ಯ ದಂಪತಿಗಳಿಬ್ಬರು ಪಂಚಾಯತಿ ಚುಕ್ಕಾಣಿ ಹಿಡಿಯೋ ಮೂಲಕ ದರ್ಬಾರ್ ಶುರು ಮಾಡಿದ್ದಾರೆ.

ಅಧ್ಯಕ್ಷರಾದ ಪತ್ನಿ ವಿಶಾಲಾಕ್ಷಿ ಮತ್ತು ಉಪಾಧ್ಯಾಕ್ಷರಾದ ಪತಿ ಚನ್ನಬಸವಗೌಡ

ಜೀವನದಲ್ಲಿ ಸತಿಪತಿಗಳಾಗಿ ಸಂಸಾರ ನೌಕೆ ಸಾಗಿಸುತ್ತಿದ್ದವರು ಸದ್ಯ ರಾಜಕೀಯ ಜೀವನಕ್ಕೂ ಒಟ್ಟಾಗಿ ಕಾಲಿಟ್ಟಿದ್ದಾರೆ. ಆ ಮೂಲಕ ರಾಜ್ಯದಲ್ಲೇ ಮೊದಲ ಬಾರಿಗೆ ಗಂಡ ಪಂಚಾಯತಿವೊಂದರ ಉಪಾಧ್ಯಕ್ಷರಾಗಿದ್ದು, ಪತ್ನಿ ಅಧ್ಯಕ್ಷರಾಗಿದ್ದಾರೆ. ಅಲ್ಲದೇ ಇದು ದಾಖಲೆಯೂ ಹೌದು. ಏಕೆಂದರೆ ಮೊದಲಿಗೆ ಇಬ್ಬರು ಚುನಾವಣೆಯಲ್ಲಿ ಆಯ್ಕೆಯಾದ ಮೇಲೆ ಅಧ್ಯಕ್ಷ- ಉಪಾಧ್ಯಕ್ಷ ಮೀಸಲಾತಿಯೂ ಇವರಿಗೆ ಸಹಾಕರ ನೀಡಿದೆ.

ಹೀಗಾಗಿ ಗ್ರಾಮಸ್ಥರು ಹಾಗೂ ಪಂಚಾಯತಿ ಸದಸ್ಯರೆಲ್ಲರೂ ಸೇರಿ ಮೊದಲ 30 ತಿಂಗಳ ಅವಧಿಗೆ ಸತಿಪತಿಗಳ ಕೈಗೆ ಚುಕ್ಕಾಣಿ ನೀಡಿದ್ದಾರೆ. ಇನ್ನು ಇಷ್ಟು ದಿನ ಗಂಡನ ರಾಜಕೀಯಕ್ಕೆ ಹೆಗಲು ನೀಡಿದ್ದ ವಿಶಾಲಾಕ್ಷಿ ಸದ್ಯ ಗಂಡನ ಜೊತೆಯಲ್ಲೆ ಪಂಚಾಯತಿಯಲ್ಲಿ ದರ್ಬಾರ್ ಮಾಡಲು ರೆಡಿಯಾಗಿದ್ದು, ಗಂಡನಿಗಿಂತಲೂ ಒಂದು ಹೆಜ್ಜೆ ಮೇಲೆಂಬಂತೆ ಅಧ್ಯಕ್ಷೆಯಾಗಿದ್ದಾರೆ. ಒಲ್ಲದ ಮನಸ್ಸಿನಿಂದಲೇ ರಾಜಕೀಯಕ್ಕೆ ಕಾಲಿಟ್ಟರು ವಿಶಾಲಾಕ್ಷಿ. ಸದ್ಯ ಗಂಡನ ಪ್ರಯತ್ನ ಹಾಗೂ ಗ್ರಾಮದ ಜನರ ಸಹಕಾರಿಂದ ಅಧ್ಯೆಕ್ಷೆಯಾಗಿದ್ದಾರೆ. ಹೀಗಾಗಿ ಖುಷಿಯಿಂದಲೇ ಎಲ್ಲರಿಗೂ ಧನ್ಯವಾದ ಹೇಳುತ್ತಿದ್ದಾರೆ.

ಇನ್ನು ಕಳೆದ ಭಾರಿ ಇದೇ ಚೆನ್ನಬಸನಗೌಡ ಕೇವಲ 18 ಮತಗಳಿಂದ ಚುನಾವಣೆಯಲ್ಲಿ ಸೋತಿದ್ದರಂತೆ ಹೀಗಾಗಿ ಅದನ್ನು ಸವಾಲಾಗಿ ತೆಗೆದುಕೊಂಡು ಈ ಬಾರಿ ಚುನಾವಣೆಗೆ ತಯಾರಿ ನಡೆಸಿದ್ದಾರೆ. ಆದರೆ ಗ್ರಾಮದಲ್ಲಿ ಮೊದಲನೇ ವಾಡ್೯ನಲ್ಲಿ ಮಹಿಳಾ ಮೀಸಲಾತಿ ಬಂದ ಪರಿಣಾಮ ಪತ್ನಿಯನ್ನು ಕೂಡ ಚುನಾವಣೆ ಕಣಕ್ಕಿಳಿಸಿದ್ದು, ಕಳೆದ ಬಾರಿ ಸೋತ ವಾಡ್೯ನಿಂದಲೇ ಗೆದ್ದು ಬಂದ ಚೆನ್ನಬಸನಗೌಡ ಪತ್ನಿಯನ್ನು ಕೂಡ ಆಯ್ಕೆಯಾಗುವ ಹಾಗೇ ಮಾಡಿದ್ದರು‌.

ಅಲ್ಲದೆ ಮೀಸಲಾತಿ ಕೂಡ ಇವರ ಕೈ ಹಿಡಿದಿದ್ದು, ಗ್ರಾಮದ ಹಿರಿಯರು ಹಾಗೂ ಉಳಿದ ಸದಸ್ಯರ ಬೆಂಬಲ ನೀಡಿದ್ದಕ್ಕೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆಯಿಲ್ಲದೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ತಮ್ಮ ಕೈಗೆ ಚುಕ್ಕಾಣಿ ನೀಡಿದ್ದಕ್ಕೆ ದಂಪತಿ ಹರ್ಷ ವ್ಯಕ್ತಪಡಿಸುತ್ತಿದ್ದು, ಅಲ್ಲದೇ ಗ್ರಾಮಸ್ಥರು ತಮ್ಮ ಮೇಲೆ ಇಟ್ಟಿರುವ ಭರವಸೆಯನ್ನ ಈಡೇರಿಸುವುದಾಗಿ ಕೆಲಸ ಮಾಡುವುದಾಗಿ ಹೇಳಿದ್ದಾರೆ.

ಒಟ್ಟಿನಲ್ಲಿ ವರೂರು ಗ್ರಾಮ ಪಂಚಾಯತಿ ರಾಜ್ಯದಲ್ಲೇ ಮೊದಲ ಬಾರಿಗೆ ಹೊಸ ದಾಖಲೆ ನಿರ್ಮಾಣ ಮಾಡಿದೆ. ಆದರೆ ಅಧಿಕಾರ ಸ್ವಿಕರಿಸಿರುವ ಸತಿಪತಿಗಳಿಬ್ಬರು ಗ್ರಾಮದ ಉದ್ದಾರಕ್ಕಾಗಿ ಕೆಲಸ ಮಾಡಬೇಕು. ಅದು ಏನೇ ಇರಲಿ ಗ್ರಾಮಸ್ಥರ ಸಹಾಕರ ಹಾಗೂ ಅಪಾರ ನೀರಿಕ್ಷೆಗಳನ್ನ ಈ ನೂತನ ಜೋಡಿ ಕೆಲಸ ಮಾಡಿ ನಿರೂಪಿಸಲಿ ಎನ್ನುವುದು ನಮ್ಮ ಅಶಯ‌.

ಪಂಚಾಯತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟವರ ಪ್ರವಾಸ ಕಥನ!

Published On - 12:34 pm, Fri, 5 February 21