AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪಘಾತದ ವಿಮಾ ಹಣ ನೀಡಲು ಕಂಪನಿ ನಿರಾಕರಣೆ; ವಿಚಾರಣೆ ನಡೆಸಿ ತಾಯಿ-ಮಗಳಿಗೆ 15 ಲಕ್ಷ ರೂ. ಕೊಡುವಂತೆ​ ಆಯೋಗ ಆದೇಶ

ಸರಸ್ವತಿಪುರ ಬಡಾವಣೆಯ ನಿವಾಸಿಯಾಗಿದ್ದ ಪ್ರಶಾಂತ್​ ಶಾನಭಾಗ್ ಎನ್ನುವವರು ತಮ್ಮ ದ್ವಿಚಕ್ರ ವಾಹನದ ಮೇಲೆ ಪಿ.ಎ ಕವರೇಜ್ ಸಮೇತ ವಿಮೆ ಮಾಡಿಸಿದ್ದರು. ಯಾವುದೇ ಅಪಘಾತದಿಂದ ವಿಮಾದಾರ ಮೃತನಾದಲ್ಲಿ ಆತನ ಅವಲಂಬಿತರಿಗೆ 15 ಲಕ್ಷ ರೂ. ಪರಿಹಾರ ಕೊಡಲು ವಿಮಾ ಪಾಲಿಸಿಯಲ್ಲಿ ನಿಯಮ ಇತ್ತು. ಆದರೆ ಅಪಘಾತವಾಗಿ ಮರಹೊಂದಿದರೂ ವಿಮಾ ಕಂಪನಿ ಹಣ ನೀಡಲು ನಿರಾಕರಣೆ ಮಾಡಿತ್ತು. ಇದೀಗ ಗ್ರಾಹಕರ ಆಯೋಗ ವಿಚಾರಣೆ ನಡೆಸಿ ಮೃತರ ಪತ್ನಿ ಹಾಗೂ ಮಗಳಿಗೆ 15 ಲಕ್ಷ ರೂ. ನೀಡಲು ಆದೇಶಿಸಿದೆ.

ಅಪಘಾತದ ವಿಮಾ ಹಣ ನೀಡಲು ಕಂಪನಿ ನಿರಾಕರಣೆ; ವಿಚಾರಣೆ ನಡೆಸಿ ತಾಯಿ-ಮಗಳಿಗೆ 15 ಲಕ್ಷ ರೂ. ಕೊಡುವಂತೆ​ ಆಯೋಗ ಆದೇಶ
ತಾಯಿ-ಮಗಳಿಗೆ ರೂ.15 ಲಕ್ಷ ವಿಮಾ ಹಣ ನೀಡಲು ವಿಮಾ ಕಂಪನಿಗೆ ಆಯೋಗ ಆದೇಶ
ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Edited By: |

Updated on: May 24, 2024 | 4:06 PM

Share

ಧಾರವಾಡ, ಮೇ.24: ಸರಸ್ವತಿಪುರ ಬಡಾವಣೆಯ ನಿವಾಸಿಯಾಗಿದ್ದ ಪ್ರಶಾಂತ್​ ಶಾನಭಾಗ್ ಎನ್ನುವವರು ತಮ್ಮ ದ್ವಿಚಕ್ರ ವಾಹನದ ಮೇಲೆ ಪಿ.ಎ ಕವರೇಜ್ ಸಮೇತ ವಿಮೆ ಮಾಡಿಸಿದ್ದರು. ಯಾವುದೇ ಅಪಘಾತ(Accidnet)ದಿಂದ ವಿಮಾದಾರ ಮೃತನಾದಲ್ಲಿ ಆತನ ಅವಲಂಬಿತರಿಗೆ 15 ಲಕ್ಷ ರೂ. ಪರಿಹಾರ ಕೊಡಲು ವಿಮಾ ಪಾಲಿಸಿಯಲ್ಲಿ ನಿಯಮ ಇತ್ತು. ಈ ಬಗ್ಗೆ ವಿಮಾದಾರ ಎದುರುದಾರ ವಿಮಾ ಕಂಪನಿ(insurance company)ಗೆ 1489 ರೂಪಾಯಿ ಪ್ರಿಮಿಯಮ್ ಹಣ ಸಂದಾಯ ಮಾಡಿದ್ದರು. 2022 ಅಕ್ಟೋಬರ್ 11 ರಂದು ಪ್ರಶಾಂತ್​ ವಾಹನ ಅಪಘಾತದಲ್ಲಿ ತೀವ್ರಗಾಯಗೊಂಡು ಬಳಿಕ ಮೃತರಾಗಿದ್ದರು. ಈ ಬಗ್ಗೆ ವಾಹನ ಚಾಲಕನ ಮೇಲೆ ಕ್ರಿಮಿನಲ್ ಪ್ರಕರಣ ಸಹ ದಾಖಲಾಗಿತ್ತು. ಆ ಎಲ್ಲ ದಾಖಲೆಗಳ ಸಮೇತ ಮೃತ ಪ್ರಶಾಂತ್​ ಅವರ ಪತ್ನಿ ಪ್ರೀತಿ ಮತ್ತು ಅವರ ಮಗಳಾದ ಪೂರ್ವಿ ತಾವು ಮೃತನ ವಾರಸುದಾರರಿದ್ದು, ತಮಗೆ 15 ಲಕ್ಷ ರೂ. ವಿಮಾ ಹಣ ಕೊಡುವಂತೆ ಐಸಿಐಸಿಐ ಲೋಂಬಾರ್ಡ್ ವಿಮಾ ಕಂಪನಿಗೆ ಕ್ಲೇಮ್ ಅರ್ಜಿ ಸಲ್ಲಿಸಿದ್ದರು. ಮೃತ ಪ್ರಶಾಂತ್​ ಅಪಘಾತ ಕಾಲಕ್ಕೆ ಅಧಿಕೃತ ಚಾಲನಾ ಪತ್ರ ಹೊಂದಿರಲಿಲ್ಲ ಎನ್ನುವ ಕಾರಣವನ್ನು ಕೊಟ್ಟು ಅವರು ವಿಮಾ ಪಾಲಸಿ ಷರತ್ತನ್ನು ಉಲ್ಲಂಘಿಸಿದ್ದಾರೆಂದು ವಿಮಾ ಕಂಪನಿಯವರು ಕ್ಲೇಮ್ ನಿರಾಕರಿಸಿದ್ದರು.

ಈ ಹಿನ್ನಲೆ ವಿಮಾ ಕಂಪನಿಗೆ ಹಲವು ಬಾರಿ ವಿಮೆ ಹಣವನ್ನು ಪಾವತಿಸಲು ಕೇಳಿಕೊಂಡರೂ ಪರಿಹಾರ ಕೊಟ್ಟಿರಲಿಲ್ಲ. ಅಂತಹ ವಿಮಾ ಕಂಪನಿಯವರ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಎಂದು ಹೇಳಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರರು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಆಯೋಗ, ‘ಮೋಟಾರು ವಾಹನ ಕಾಯ್ದೆಯ ನಿಯಮದಂತೆ ಅಪಘಾತವಾದ ದಿನ ಪ್ರಶಾಂತ್​ ಚಾಲನಾ ಪತ್ರ ಹೊಂದಿರುವುದು ಕಂಡುಬರುತ್ತದೆ. ಹೊಸ ಮೋಟಾರು ವಾಹನ ಕಾಯ್ದೆಯ ನಿಯಮವನ್ನು ಅರ್ಥೈಸುವಲ್ಲಿ ಎದುರುದಾರ ವಿಮಾ ಕಂಪನಿಯವರು ವಿಫಲರಾಗಿದ್ದಾರೆಂದು ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.

ಇದನ್ನೂ ಓದಿ:ನಾಮಿನಿಗೆ ವಿಮಾ ಹಣ ಕೊಡದ ಖಾಸಗಿ ವಿಮಾ ಕಂಪನಿಗೆ, 10 ಲಕ್ಷ ರೂ ದಂಡ ವಿಧಿಸಿದ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ

ಮೃತ ಅಧಿಕೃತ ಚಾಲನಾ ಪತ್ರ ಹೊಂದಿದ್ದರೂ ದೂರುದಾರರ ವಿಮಾ ಕ್ಲೇಮ್​ನ್ನು ತಿರಸ್ಕರಿಸಿರುವುದು ವಿಮಾ ನಿಯಮಗಳಿಗೆ ವಿರುದ್ಧವಾಗುತ್ತದೆ ಮತ್ತು ಅಂತಹವರ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆಯ ಉಲ್ಲಂಘನೆಯು ಆಗುತ್ತದೆ ಎಂದು ಆಯೋಗ ತನ್ನ ತೀರ್ಪಿನಲ್ಲಿ ತಿಳಿಸಿದೆ. ಇದರಿಂದ ಎದುರುದಾರ ಐಸಿಐಸಿಐ ಲೋಂಬಾರ್ಡ್ ವಿಮಾ ಕಂಪನಿಯವರು ದೂರುದಾರರಿಗೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಎಸಗಿರುವುದರಿಂದ ವಿಮೆ ತಿರಸ್ಕರಿಸಿದ ದಿನಾಂಕದಿಂದ ಶೇ. 8 % ರಂತೆ ಬಡ್ಡಿ ಸಮೇತ  15 ಲಕ್ಷ ರೂ. ವಿಮಾ ಹಣ ದೂರುದಾರರಿಗೆ ನೀಡುವಂತೆ ಆಯೋಗ ಆದೇಶಿಸಿದೆ. ದೂರುದಾರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ಹಿಂಸೆಗಾಗಿ ಅವರಿಗೆ 50,000 ರೂ. ಪರಿಹಾರ ಮತ್ತು 10,000 ರೂ. ಪ್ರಕರಣದ ಖರ್ಚು ವೆಚ್ಚ ಕೊಡುವಂತೆ ವಿಮಾ ಕಂಪನಿಯವರಿಗೆ ಆಯೋಗ ನಿರ್ದೇಶಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
ತಮಿಳುನಾಡು ಚುನಾವಣೆ: ಯಾವ ಪಕ್ಷದ ಜತೆಯೂ ಮೈತ್ರಿ ಇಲ್ಲ: ವಿಜಯ್
ತಮಿಳುನಾಡು ಚುನಾವಣೆ: ಯಾವ ಪಕ್ಷದ ಜತೆಯೂ ಮೈತ್ರಿ ಇಲ್ಲ: ವಿಜಯ್
ಮಹಾ ಶಿವರಾತ್ರಿಯಂದು ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ: ಜಿಬಿಎ ಆದೇಶ
ಮಹಾ ಶಿವರಾತ್ರಿಯಂದು ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ: ಜಿಬಿಎ ಆದೇಶ
ಫೆ.17 ರಾಹುಗ್ರಸ್ತ ಕಂಕಣ ಸೂರ್ಯಗ್ರಹಣ; ಮಿಥುನ ರಾಶಿಯ ಫಲಾಫಲ ತಿಳಿಯಿರಿ
ಫೆ.17 ರಾಹುಗ್ರಸ್ತ ಕಂಕಣ ಸೂರ್ಯಗ್ರಹಣ; ಮಿಥುನ ರಾಶಿಯ ಫಲಾಫಲ ತಿಳಿಯಿರಿ
ಚಲಿಸುತ್ತಿರುವ ರೈಲಿಂದ ಬಿದ್ದ ಮಹಿಳೆಯನ್ನು ದೇವರಂತೆ ಬಂದು ಕಾಪಾಡಿದ ಟಿಸಿ
ಚಲಿಸುತ್ತಿರುವ ರೈಲಿಂದ ಬಿದ್ದ ಮಹಿಳೆಯನ್ನು ದೇವರಂತೆ ಬಂದು ಕಾಪಾಡಿದ ಟಿಸಿ