AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

KSRTC ಚಾಲಕನ ರೀಲ್ಸ್ ಹುಚ್ಚಾಟಕ್ಕೆ 2 ಎತ್ತು ಸಾವು, ರೈತನ ಮೆದುಳು‌ ನಿಷ್ಕ್ರೀಯ: ಬೀದಿಗೆ ಬಿತ್ತು ಬಡ ಕುಟುಂಬ

ರೀಲ್ಸ್​ ಹುಚ್ಚು ಎಷ್ಟರಮಟ್ಟಿಗೆ ಮೀತಿಮೀರಿದೆ ಅಂದರೆ, ಚಿಕ್ಕಮಕ್ಕಳಿಂದ ಹಿಡಿದು ವಯಸ್ಸಾದವರವರೆಗೂ ಸಾಂಕ್ರಾಮಿಕ ರೋಗದಂತೆ ಹರಡಿದೆ. ಇದೀಗ ಈ ರೀಲ್ಸ್​ ಹುಚ್ಚಾಟದಿಂದ ಎರಡು ಎತ್ತು ಬಲಿಯಾಗಿದ್ದು, ಓರ್ವ ರೈತನ ಮೆದುಳು ನಿಷ್ಕ್ರೀಯವಾಗಿದೆ. ಹೌದು, KSRTC ಚಾಲಕನ ರೀಲ್ಸ್ ಹುಚ್ಚಾಟಕ್ಕೆ ರೈತನೋರ್ವನ ಕುಟುಂಬ ಬಿದಿಗೆ ಬಿದ್ದಿದೆ.

ಶಿವಕುಮಾರ್ ಪತ್ತಾರ್
| Updated By: ಕಿರಣ್ ಹನುಮಂತ್​ ಮಾದಾರ್|

Updated on: Jul 17, 2024 | 4:00 PM

Share

ಹುಬ್ಬಳ್ಳಿ, ಜು.17: ರೀಲ್ಸ್(Reels)​ ಹುಚ್ಚಿಗೆ ಎಷ್ಟೋ ಜನ ಬಲಿಯಾದ ಘಟನೆ ನಡೆದಿದೆ. ಇದೀಗ ಸರ್ಕಾರಿ ಬಸ್ ಚಾಲಕನ ರೀಲ್ಸ್ ಹುಚ್ಚಾಟಕ್ಕೆ ಎರಡು ಎತ್ತು ಬಲಿಯಾಗಿದ್ದು, ಓರ್ವ ರೈತನಿಗೆ(Farmer) ಗಂಭೀರ ಗಾಯವಾದ ಘಟನೆ ನಿನ್ನೆ(ಮಂಗಳವಾರ) ಹುಬ್ಬಳ್ಳಿ ತಾಲೂಕಿನ ಕುಸುಗಲ್ ಬಳಿ ನಡೆದಿತ್ತು. ಹುಬ್ಬಳ್ಳಿಯಿಂದ ಬಾಗಲಕೋಟೆ ಕಡೆ ಹೊರಟಿದ್ದ ವೇಳೆ ಬಸ್ ಚಾಲಕ ರೀಲ್ಸ್ ಮಾಡಲು ಶುರು ಮಾಡಿದ್ದಾನೆ. ಇದೇ ಸಮಯದಲ್ಲಿ ಮುಂದೆ ಹೋಗುತ್ತಿದ್ದ ಚಕ್ಕಡಿಯನ್ನು ಗಮನಿಸಿದೆ ರೀಲ್ಸ್ ಗುಂಗಿನಲ್ಲಿದ್ದ ಚಾಲಕ, ಹಿಂಬದಿಯಿಂದ ಚಕ್ಕಡಿಗೆ ಡಿಕ್ಕಿ ಹೊಡೆದಿದ್ದಾನೆ.

KSRTC ಚಾಲಕನ ರೀಲ್ಸ್ ಹುಚ್ಚಾಟಕ್ಕೆ ಬೀದಿಗೆ ಬಿತ್ತು ಬಡ ಕುಟುಂಬ

ಬಸ್ ಡಿಕ್ಕಿಯಾದ ರಭಸಕ್ಕೆ ಎರಡು ಎತ್ತು ಸ್ಥಳದಲ್ಲೆ ಸಾವನ್ನಪ್ಪಿದೆ. ಇತ್ತ ರೈತನಿಗೆ ಗಂಭೀರ ಗಾಯವಾಗಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. KSRTC ಚಾಲಕನ ರೀಲ್ಸ್ ಹುಚ್ಚಾಟಕ್ಕೆ ಇದೀಗ ಬಡ ಕುಟುಂಬ ಬೀದಿಗೆ ಬಂದಿದೆ. ಹೌದು, ಘಟನೆಯಲ್ಲಿ ಗಾಯಗೊಂಡಿದ್ದ ರೈತ ಮಂಜುನಾಥ್ ರಂಗಪ್ಪ ಹೆಗ್ಗಣ್ಣವರ ಅವರ ಮೆದಳು‌ ನಿಷ್ಕ್ರೀಯವಾಗಿದೆ. ನಿನ್ನೆ ಸಂಜೆ‌ ಅಪಘಾತವಾದಗಿಂದ ಮಾತನಾಡದ ರೈತ ಮಂಜುನಾಥ, ಮೆದುಳಿನಲ್ಲಿ ಬ್ಲಡ್ ಬ್ಲಾಕ್ ಆಗಿದೆ ಎಂದು ವೈದ್ಯರು ಹೇಳಿದ್ದಾರೆ.

ಇದನ್ನೂ ಓದಿ:ಇದೆಂಥಾ ಹುಚ್ಚಾಟ… ಚಲಿಸುತ್ತಿರುವ ಬಸ್ಸಿನ ಕೆಳಗೆ ಮಲಗಿ ಯುವಕನ ಡೇಂಜರಸ್ ರೀಲ್ಸ್

ನೆನಪಿನ ಶಕ್ತಿಯನ್ನು ಕಳೆದುಕೊಂಡಿರೋ ರೈತ ಮಂಜುನಾಥ್

ಇನ್ನು ರೈತ ಮಂಜುನಾಥ್​ ನೆನಪಿನ ಶಕ್ತಿಯನ್ನು ಕಳೆದುಕೊಂಡಿದ್ದಾನೆ. ಇಷ್ಟೇಲ್ಲಾ ಆದರೂ ಸಾಂತ್ವನ ಹೇಳಲು ಕೆಎಸ್ಆರ್​ಟಿಸಿ ​ ಚಾಲಕ, ಅಧಿಕಾರಿಗಳು ಬಂದಿಲ್ಲ. ಇತ್ತ ರೈತ ಸ್ವಸಹಾಯ ಗುಂಪಿನಲ್ಲಿ ಸಾಲ ಮಾಡಿ ಎತ್ತುಗಳನ್ನು ಖರೀದಿ ಮಾಡಿದ್ದ. ಇದೀಗ ಎತ್ತುಗಳು ಹೋದವು, ರೈತನೂ ನೆನಪಿನ‌ ಶಕ್ತಿ ಕಳೆದುಕೊಂಡಿದ್ದಾನೆ. ಇದರಿಂದ ಮನೆಗೆ ಆಧಾರವಾಗಿದ್ದ ಮಂಜುನಾಥ್​ಗೆ ಹೀಗೆ ಆಗಿದ್ದು, ಕುಟುಂಬದವರಿಗೆ ದಿಕ್ಕು ತೋಚದಂತಾಗಿದೆ. ‘ನಮ್ಮ ಕುಟುಂಬ ನೋಡೋರು ಯಾರೂ ಎಂದು ಕುಟುಂಬಸ್ಥರು ಅಳಲು ತೋಡಿಕೊಳ್ಳುತ್ತಿದ್ದಾರೆ. ಈ ಘಟನೆ ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ