ಘಟನೆ ಹಿನ್ನೆಲೆ
ಜೆಡಿಎಸ್ ಮುಖಂಡ ರಸ್ತೆಯಲ್ಲಿ ಮಹಿಳೆಯೊಬ್ಬರ ಕೈಹಿಡಿದು ಎಳೆದಾಡಿದ ಘಟನೆ ಧಾರವಾಡ ನಗರದ ಸತ್ತೂರ ಬಡಾವಣೆಯಲ್ಲಿ ನಡೆದಿದೆ. ಜೆಡಿಎಸ್ ಮುಖಂಡ ಶ್ರೀಕಾಂತ ಜಮನಾಳ ವಿರುದ್ಧ ಕೈಹಿಡಿದು ಎಳೆದಾಡಿದ ಆರೋಪ ಕೇಳಿಬಂದಿದೆ. ಶ್ರೀಕಾಂತ ಜಮನಾಳ ಸತ್ತೂರಿನ ಮಹಿಳೆ ಮನೆಗೆ ತೆರಳಿದ್ದರು. ಈ ವೇಳೆ ಶ್ರೀಕಾಂತ ಮಹಿಳೆಯ ಕೈಹಿಡಿದು ಎಳೆದಾಡಿದ್ದಾರೆ. ಮಹಿಳೆಯ ಕೈಹಿಡಿದು ಎಳೆದಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೆಡಿಎಸ್ ಮುಖಂಡ ಶ್ರೀಕಾಂತ ಜಮನಾಳ ನಡು ಬೀದಿಯಲ್ಲೇ ಸತ್ತೂರ ನಿವಾಸಿಯಾಗಿರುವ ಮಹಿಳೆಯ ಕೈಯನ್ನು ಹಿಡಿದು ಎಳೆದಾಡಿದ್ದಾರೆ. ಘಟನೆಗೆ ಸೂಕ್ತ ಕಾರಣ ತಿಳಿದುಬಂದಿಲ್ಲ. ಹೆಚ್ಚಿನ ಮಾಹಿತಿ ನೀಡಲು ಮಹಿಳೆ ನಿರಾಕರಿಸುತ್ತಿದ್ದು, ವಿದ್ಯಾಗಿರಿ ಠಾಣೆಗೆ ದೂರು ದಾಖಲಿಸಿದ್ದಾರೆ. ಘಟನೆ ಬಳಿಕ ಆರೋಪಿ ಶ್ರೀಕಾಂತ ಜಮನಾಳ ಎಸ್ಕೇಪ್ ಆಗಿದ್ದ. ಮೊಬೈಲ್ಗೆ ಕರೆ ಮಾಡಿದರೆ ಮೊಬೈಲ್ ಸ್ವಿಚ್ ಆಫ್ ಆಗಿತ್ತು ಆದ್ರೆ ಸವದತ್ತಿ ತಾಲೂಕಿನ ಪೊಲೀಸರಿಗೆ ಶ್ರೀಕಾಂತ ಸಿಕ್ಕಿಬಿದ್ದಿದ್ದಾನೆ. ಪೊಲೀಸರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇದನ್ನೂ ಓದಿ: Viral Video: ಆಪ್ತ ಸ್ನೇಹಿತರಾಗಿ ವಾಕಿಂಗ್ ಹೊರಟ ನಾಯಿ ಮರಿ ಮತ್ತು ಕುದುರೆ; ಹೃದಯಸ್ಪರ್ಶಿ ವಿಡಿಯೋ ವೈರಲ್
ಧಾರವಾಡ ರಸ್ತೆಯಲ್ಲಿ ಮಹಿಳೆಯ ಕೈಹಿಡಿದು ಎಳೆದಾಡಿದ ಜೆಡಿಎಸ್ ಮುಖಂಡ; ವಿಡಿಯೋ ವೈರಲ್