ಅಮೇರಿಕಾದ ಹ್ಯಾರಿಸ್​ಬರ್ಗ್ ವಿಶ್ವವಿದ್ಯಾಲಯ ಜತೆ ಕರ್ನಾಟಕ ವಿಶ್ವವಿದ್ಯಾಲಯದ ಒಪ್ಪಂದ; ವರ್ಚುವಲ್ ಮೂಲಕ ಸಹಿ

ಶೈಕ್ಷಣಿಕ ವಲಯದಲ್ಲಿ ಪರಸ್ಪರ ಸಹಕಾರ ನೀಡುವುದು ಜೊತೆಗೆ ಇತರೆ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೋಡಗಿಸಿಕೊಳ್ಳವುದು ಮತ್ತು ಯೋಜನಾ ಬದ್ಧವಾಗಿ ಶೈಕ್ಷಣಿಕ ಚಟುವಟಿಕೆಗಳನ್ನು ಅನುಷ್ಠಾನಗೊಳಿಸುವುದು ಜಂಟಿ ಒಪ್ಪಂದದ ಮುಖ್ಯ ಉದ್ದೇಶ

ಅಮೇರಿಕಾದ ಹ್ಯಾರಿಸ್​ಬರ್ಗ್ ವಿಶ್ವವಿದ್ಯಾಲಯ ಜತೆ ಕರ್ನಾಟಕ ವಿಶ್ವವಿದ್ಯಾಲಯದ ಒಪ್ಪಂದ; ವರ್ಚುವಲ್  ಮೂಲಕ ಸಹಿ
ವರ್ಚುವಲ್ ಮೂಲಕ ಶೈಕ್ಷಣಿಕ ಒಪ್ಪಂದಕ್ಕೆ ಸಹಿ

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ ಜಂಟಿಯಾಗಿ ಅಮೇರಿಕಾದ ಹ್ಯಾರಿಸ್​ಬರ್ಗ್​ನ ವಿಶ್ವವಿದ್ಯಾಲಯದ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಜೊತೆಗೆ ಶೈಕ್ಷಣಿಕ, ಸಂಶೋಧನೆ, ಶಿಕ್ಷಕರ ವಿನಿಮಯ ಸೇರಿದಂತೆ ಶೈಕ್ಷಣಿಕ ಚಟುವಟಿಕೆಗಳ ಒಪ್ಪಂದಕ್ಕೆ ಜಂಟಿಯಾಗಿ ಆನ್‌ಲೈನ್ ವರ್ಚುವಲ್ ಮೂಲಕ ಬುಧವಾರ ಸಹಿ ಹಾಕಿದೆ.

ಈ ಒಪ್ಪಂದದ ಅನ್ವಯ ಜೈವಿಕ ತಂತ್ರಜ್ಞಾನ ಸೇರಿದಂತೆ ವಿವಿಧ ವಿಷಯಗಳ ಸಂಶೋಧನೆ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವುದು, ಜಂಟಿಯಾಗಿ ಶೈಕ್ಷಣಿಕ ಮತ್ತು ಸಂಶೋಧನೆಗೆ ಹೆಚ್ಚು ಒತ್ತು ನೀಡುವುದರ ಜೊತೆಗೆ ವಿಜ್ಞಾನ ಮತ್ತು ತಂತ್ರಜ್ಞಾನ, ಸಾಮಾಜಿಕ ವಿಜ್ಞಾನ ಮತ್ತು ವಿವಿಧ ವಿಷಯಗಳ ಅಧ್ಯಯನಕ್ಕಾಗಿ ಶಿಕ್ಷಕರ, ವಿದ್ಯಾರ್ಥಿಗಳ ವಿನಿಮಯ ಸೇರಿದಂತೆ ಈ ಸಂಸ್ಥೆಗಳ ಜೊತೆ ಜಂಟಿಯಾಗಿ ಶೈಕ್ಷಣಿಕವಾಗಿ ವಿಚಾರ ಸಂಕಿರಣ, ಕಾರ್ಯಾಗಾರ, ವಿಚಾರಗೋಷ್ಠಿ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ತರಬೇತಿಗಳನ್ನು ಆಯೋಜಿಸುವುದು ಹಾಗೂ ಶಿಕ್ಷಕರಿಗೆ ನವೀನ ಬೋಧನಾ ವಿಧಾನದ ಕುರಿತು ತರಬೇತಿಗಳನ್ನು ಆಯೋಜಿಸಲಾಗುತ್ತದೆ.

ಶೈಕ್ಷಣಿಕ ವಲಯದಲ್ಲಿ ಪರಸ್ಪರ ಸಹಕಾರ ನೀಡುವುದು ಜೊತೆಗೆ ಇತರೆ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೋಡಗಿಸಿಕೊಳ್ಳವುದು ಮತ್ತು ಯೋಜನಾ ಬದ್ಧವಾಗಿ ಶೈಕ್ಷಣಿಕ ಚಟುವಟಿಕೆಗಳನ್ನು ಅನುಷ್ಠಾನಗೊಳಿಸುವುದರ ಜೊತೆಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಸಂಶೋಧನೆಗೆ ಹೆಚ್ಚು ಒತ್ತು ನೀಡುವ ಮುಖ್ಯ ಉದ್ದೇಶವನ್ನು ಇಟ್ಟುಕೊಂಡು ಈ ಒಪ್ಪಂದ ಮಾಡಿಕೊಳ್ಳಲಾಗಿದೆ.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಸಚಿವರಾದ ಡಾ. ಸಿ.ಎನ್ ಅಶ್ವತ್‌ನಾರಾಯಣ, ಪಿನ್ಸಿಲ್ವಿನಿಯಾ ಉನ್ನತ ಶಿಕ್ಷಣ ಇಲಾಖೆಯ ಕಾರ್ಯನಿರ್ವಾಹಕ ಕುಲಪತಿ ಡಾ. ಪೀಟರ್ ಗಾರಲ್ಯಾಂಡ್, ಹ್ಯಾರಿಸ್​ಬರ್ಗ್ ವಿಶ್ವವಿದ್ಯಾಲಯದ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಸಲಹಾ ಮಂಡಳಿಯ ಅಧ್ಯಕ್ಷ ಎರಿಕ್ ಡಾರ್, ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಬಿ.ಗುಡಸಿ ಮತ್ತು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿಯ ಕಾರ್ಯ ನಿರ್ವಾಹಕ ನಿರ್ದೇಶಕರಾದ ಗೋಪಾಲ ಕೃಷ್ಣ ಜೋಶಿ, ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಜಿ.ಕುಮಾರ ನಾಯಕ್ ಮತ್ತು ವಿವಿಯ ಜೈವಿಕ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕರಾದ ಡಾ. ವೇದಮೂರ್ತಿ ವರ್ಚುವಲ್ ಒಪ್ಪಂದದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ:

ಭಾರತದ ಜತೆಗೆ 10,200 ಕೋಟಿ ರೂಪಾಯಿಗೂ ಹೆಚ್ಚಿನ ವ್ಯಾಪಾರ- ಹೂಡಿಕೆ ಒಪ್ಪಂದ ಘೋಷಿಸಿದ ಯುಕೆ ಪ್ರಧಾನಿ ಬೋರಿಸ್ ಜಾನ್ಸನ್

ನಾವು ಎಂದಿಗೂ ಶಾಂತಿಯ ಪರ; ಭಾರತ-ಪಾಕಿಸ್ತಾನ ಕದನವಿರಾಮ ಒಪ್ಪಂದ ಸ್ವಾಗತಿಸಿ ಇಮ್ರಾನ್ ಖಾನ್ ಟ್ವೀಟ್