ಹುಬ್ಬಳ್ಳಿ, ಜುಲೈ 09: ಹುಬ್ಬಳ್ಳಿ-ಸೊಲ್ಲಾಪುರ (Hubballi-Solapur) ಪ್ಯಾಸೆಂಜರ್ ಸೇರಿಂದತೆ ರಾಜ್ಯದ ಒಂಬುತ್ತು ರೈಲುಗಳ (Train) ಸಂಚಾರ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಈ ಸಮಯ ಬದಲಾವಣೆ ಮುಂದಿನ ವಾರದಿಂದ ಜಾರಿಗೆ ಬರಲಿದೆ. ಇನ್ನು, ಹುಬ್ಬಳ್ಳಿ (Hubballi) ಮತ್ತು ಬೆಳಗಾವಿಯಿಂದ (Belagavi) ಸೂರತ್ನ ಉಧ್ನಾದಿಂದ ವಿಶೇಷ ರೈಲು ಬಿಡಲಾಗಿದೆ ಎಂದು ನೈಋತ್ಯ ರೈಲ್ವೆ ವಲಯ (North western Railway) ಮಾಧ್ಯಮ ಪ್ರಕಟಣೆ ಹೊರಡಿಸಿದೆ.
ಹುಬ್ಬಳ್ಳಿ-ಸೊಲ್ಲಾಪುರ, ಹುಬ್ಬಳ್ಳಿ-ನರಸಾಪುರ ಅಮರಾವತಿ ಎಕ್ಸಪ್ರೆಸ್, ದಾದರ್-ಮೈಸೂರು ಶರಾವತಿ ವೀಕ್ಲಿ ಎಕ್ಸಪ್ರೆಸ್, ಅಜಮೀರ್-ಮೈಸೂರು ವೀಕ್ಲಿ ಎಕ್ಸಪ್ರೆಸ್, ಜೋದಪುರ-ಕೆಎಸ್ಆರ್ ವೀಕ್ಲಿ ಎಕ್ಸಪ್ರೆಸ್, ಗಾಂಧಿದಾಮ್-ಕೆಎಸ್ಆರ್ ಬೆಂಗಳೂರು ವೀಕ್ಲಿ ಎಕ್ಸಪ್ರೆಸ್, ದಾದರ್-ಪಾಂಡಿಚೇರಿ ವೀಕ್ಲಿ ಎಕ್ಸಪ್ರೆಸ್, ಹುಬ್ಬಳ್ಳಿ-ಯಶವಂತಪುರ ವೀಕ್ಲಿ ಸೂಪರ್ ಫಾಸ್ಟ್ ಎಕ್ಸಪ್ರೆಸ್, ಮತ್ತು ದಾದರ್-ತಿರುನೆಲ್ವೇಲಿ ವೀಕ್ಲಿ ಎಕ್ಸಪ್ರೆಸ್ ರೈಲಿನ ಸಮಯ ಬದಲಾವಣೆಯಾಗಲಿದೆ.
Attention passengers:
Kindly note the revision in timings of the following trains as detailed below.#SWRupdates pic.twitter.com/WlhYK2ErlK— South Western Railway (@SWRRLY) July 8, 2024
ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ನೇರಳೆ ಮಾರ್ಗದಲ್ಲಿ ಹೆಚ್ಚುವರಿ ರೈಲು ಸೇವೆ
ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ಹೆಚ್ಚುವರಿ ದಟ್ಟಣೆಯನ್ನು ತೆರವುಗೊಳಿಸುವ ಸಲುವಾಗಿ, ಭಾರತೀಯ ರೈಲ್ವೆಯು ಬೆಳಗಾವಿ ಮತ್ತು ಶ್ರೀ ಸಿದ್ದಾರೂಢ ಸ್ವಾಮೀಜಿ ಹುಬ್ಬಳ್ಳಿ ನಿಲ್ದಾಣದಿಂದ ಉದ್ಘಾ ನಿಲ್ದಾಣಕ್ಕೆ ಏಕಮುಖ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ ವಿವರ ಇಲ್ಲಿದೆ.
ಈ ರೈಲು ಜುಲೈ 10 ರಂದು ಬೆಳಗ್ಗೆ 10:30 ಗಂಟೆಗೆ ಬೆಳಗಾವಿಯಿಂದ ಹೊರಟು ಘಟಪ್ರಭಾ, ರಾಯಬಾಗ, ಕುಡಚಿ, ಮೀರಜ್, ಸಾಂಗ್ಲಿ ಕರಾಡ, ಸತಾರಾ, ಪುಣೆ, ಕಲ್ಯಾಣ್, ಭಿವಂಡಿ ರೋಡ್, ವಸಾಯಿ ರೋಡ್ ಪಾಲ್ವರ್, ವಾಪಿ ಮತ್ತು ವಲ್ಸಾರ್ ನಿಲ್ದಾಣಗಳಲ್ಲಿ ನಿಲುಗಡೆಯ ಮೂಲಕ ಮರುದಿನ ಮಧ್ಯರಾತ್ರಿ 2:45 ಕ್ಕೆ ಉದ್ಘಾ ನಿಲ್ದಾಣವನ್ನು ತಲುಪಲಿದೆ.
ಈ ವಿಶೇಷ ರೈಲು ಜುಲೈ 13 ರಾತ್ರಿ 8:20 ಗಂಟೆಗೆ ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ನಿಲ್ದಾಣದಿಂದ ಹೊರಟು ಬಾದಾಮಿ, ಬಾಗಲಕೋಟಿ, ವಿಜಯಪುರ, ಸೋಲಾಪುರ, ದೌಂಡ್, ಪುಣೆ, ಲೋನಾವಲ್, ಕಲ್ಯಾಣ್, ಕಮಾನ್ ರೋಡ್, ಸಾಯಿ ರೋಡ್ ಮತ್ತು ವಾಸಿ ನಿಲ್ದಾಣಗಳಲ್ಲಿ ನಿಲುಗಡೆಯ ಮೂಲಕ ಮರುದಿನ ಸಂಜೆ 4:45 ಗಂಟೆಗೆ ಸೂರತ್ನ ಉಧ್ನಾ ನಿಲ್ದಾಣವನ್ನು ತಲುಪಲಿದೆ.
ಮುಂಗಡ ಬುಕಿಂಗ್ ಮತ್ತು ವೇಳಾಪಟ್ಟಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ, ಪ್ರಯಾಣಿಕರು www.enquiry.indianrail.gov.in ವೆಬ್ಸೈಟ್ಗೆ ಭೇಟಿ ನೀಡಿ ಅಥವಾ ಸಹಾಯವಾಣಿ 139ಗೆ ಕರೆ ಮಾಡಿ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ