Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಬ್ಬಳ್ಳಿ; ಮನೆಗೆ ನುಗ್ಗಿ ಅಂಜಲಿ ಕೊಲೆ ಮಾಡಿದ್ದ ಆರೋಪಿ ವಿಶ್ವ ಅಲಿಯಾಸ್ ಗಿರೀಶ್​ ಅರೆಸ್ಟ್

ಆರೋಪಿ ವಿಶ್ವ ಮೇ 15ರ ಮುಂಜಾನೆ 5.30ಕ್ಕೆ ಮನೆಗೆ ನುಗ್ಗಿ ಅಂಜಲಿಗೆ ಚಾಕುವಿನಿಂದ ಇರಿದು ಕೊಲೆಗೈದು ಪರಾರಿಯಾಗಿದ್ದ. ಸದ್ಯ ಶೋಧ ನಡೆಸಿ ವಿಶ್ವ ಅಲಿಯಾಸ್ ಗಿರೀಶ್​ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಟಿವಿ9ಗೆ ಹು-ಧಾ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಮಾಹಿತಿ ನೀಡಿದರು.

ಹುಬ್ಬಳ್ಳಿ; ಮನೆಗೆ ನುಗ್ಗಿ ಅಂಜಲಿ ಕೊಲೆ ಮಾಡಿದ್ದ ಆರೋಪಿ ವಿಶ್ವ ಅಲಿಯಾಸ್ ಗಿರೀಶ್​ ಅರೆಸ್ಟ್
ಬಂಧನ
Follow us
ಶಿವಕುಮಾರ್ ಪತ್ತಾರ್. ಹುಬ್ಬಳ್ಳಿ
| Updated By: ಆಯೇಷಾ ಬಾನು

Updated on:May 17, 2024 | 7:35 AM

ಹುಬ್ಬಳ್ಳಿ, ಮೇ.17: ಹುಬ್ಬಳ್ಳಿಯಲ್ಲಿ ಮನೆಗೆ ನುಗ್ಗಿ ಅಂಜಲಿ ಅಂಬಿಗೇರ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ವಿಶ್ವ ಅಲಿಯಾಸ್ ಗಿರೀಶ್​ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಟಿವಿ9ಗೆ ಹು-ಧಾ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಮಾಹಿತಿ ನೀಡಿದರು. ಆರೋಪಿ ವಿಶ್ವ ಮೇ 15ರ ಮುಂಜಾನೆ 5.30ಕ್ಕೆ ಮನೆಗೆ ನುಗ್ಗಿ ಅಂಜಲಿಗೆ ಚಾಕುವಿನಿಂದ ಇರಿದು ಕೊಲೆಗೈದು ಪರಾರಿಯಾಗಿದ್ದ. ಸದ್ಯ ಶೋಧ ನಡೆಸಿ ವಿಶ್ವ ಅಲಿಯಾಸ್ ಗಿರೀಶ್​ನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ವಿಶ್ವ ವೃತಿಯಲ್ಲಿ ಕಳ್ಳ. ಪ್ರವೃತಿಯಲ್ಲಿ ಅಮಾಯಕ ಹೆಣ್ಣುಮಕ್ಕಳನ್ನು ಮೋಸ ಮಾಡುತ್ತಿದ್ದ. ಮದ್ಯವ್ಯಸನಿ ಚಟಕ್ಕೆ ಬಲಿಯಾಗಿ ಕಳ್ಳತನ ಮಾಡಿ ಹಲವು ಸಲ ಸಿಕ್ಕಿ ಹಾಕಿಕೊಂಡಿದ್ದ. ಹಂತಕನ‌ ಪತ್ತೆಗೆ ಎರಡು ಪೊಲೀಸ್ ಟೀಮ್ ರಚನೆ ಮಾಡಿದ್ದು,‌ ಒಂದು ತಂಡ ಮೈಸೂರು ಹಾಗೂ ಮತ್ತೊಂದು ತಂಡ ದಾವಣಗೆರೆಯಲ್ಲಿ ಹುಡುಕಾಟ ನಡೆಸುತ್ತಿತ್ತು. ಹತ್ಯೆ ಸ್ಥಳದ ಅಕ್ಕಪಕ್ಕದಲ್ಲಿನ ಮತ್ತು ಬಸ್ ನಿಲ್ದಾಣದ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಆಧರಿಸಿ ವಿಶ್ವನ ಬಂಧನಕ್ಕೆ ಬಲೆ ಬೀಸಲಾಗಿತ್ತು. ಸದ್ಯ ನಿನ್ನೆ ರಾತ್ರಿ ದಾವಣಗೆರೆಯಲ್ಲಿ ಅರೆಸ್ಟ್ ಆಗಿದ್ದಾನೆ. ಆರೋಪಿಯ ಬಳಿ ಯಾವುದೇ ಮೊಬೈಲ್ ಇರಲಿಲ್ಲ, ಕಳೆದ ಹದಿನೈದು ದಿನಗಳಿಂದ ವಿಶ್ವ ಅಲಿಯಾಸ್ ಗಿರೀಶ್ ಮೊಬೈಲ್ ‌ಬಳಕೆ‌ ಮಾಡಿಲ್ಲ. ಹೀಗಾಗಿ ಹಂತಕನನ್ನು ಹುಡುಕುವುದು ಪೊಲೀಸರಿಗೆ ಕಷ್ಟವಾಗಿತ್ತು.

ಇದನ್ನೂ ಓದಿ: ನೇಹಾ, ಅಂಜಲಿ ಕೊಲೆ ಆರೋಪಿಗಳನ್ನ ಎನ್ ಕೌಂಟರ್‌ ಮಾಡ್ಬೇಕು- ದಿಂಗಾಲೇಶ್ವರ ಸ್ವಾಮೀಜಿ

ಆರೋಪಿ ವಿಶ್ವ ಸ್ನೇಹಿತರ ಜೊತೆಗೆ ಬೈಕ್ ಕಳ್ಳತನ ಮಾಡುತ್ತಿದ್ದ. ಅಲ್ಲದೆ ಅಮಾಯಕ ಯುವತಿಯರನ್ನು ಟಾರ್ಗೆಟ್ ಮಾಡಿ, ಅವರ ಜೊತೆ ಪ್ರೀತಿ ನಾಟಕವಾಡಿ, ಬಳಿಕ ಅವರನ್ನು ಬಳಸಿಕೊಂಡು, ಯುವತಿರಿಂದ ಬಂಗಾರ, ಬೆಳ್ಳಿ, ಹಣ ಪಡೆದುಕೊಂಡು ಮೋಸ ಮಾಡಿರುವ ಪ್ರಕರಣಗಳು ಸಹ ಹೊರಬಂದಿವೆ. ಇನ್ನೂ ಅಂಜಲಿಗೆ ಇದೇ ರೀತಿ ಮಾಡುವ ಪ್ರಯತ್ನ ಮಾಡಿದ್ದಾನೆ.‌ ಇದಕ್ಕೆ ಅಂಜಲಿ ಒಪ್ಪದಿದ್ದಾಗ, ಹತ್ಯೆ ಮಾಡಿ ಪೈಶಾಚಿಕತೆ ಮರೆದಿದ್ದಾನೆ. ಇನ್ನೂ ವಿಶ್ವನ ಅಪರಾಧ ಹಿನ್ನೆಲೆ ಬಗ್ಗೆ ಬೆಂಡಿಗೇರಿ ಪೋಲಿಸರಿಗೆ ಮೊದಲೇ ಗೊತ್ತಿತ್ತು. ಹೀಗಿದ್ದರೂ ಅಂಜಲಿ ಪ್ರಕರಣದಲ್ಲಿ ಯಾಕೆ ನಿರ್ಲಕ್ಷ್ಯ ತೋರಿದ್ದಾರೆ ಎನ್ನುವುದು ಈಗ ಹಲವಾರು ಅನುಮಾನ ಹುಟ್ಟುಹಾಕುತ್ತಿದೆ.

ಇದರ ಜೊತೆಗೆ ಅಂಜಲಿ ಹತ್ಯೆಗೆ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ‌ ಅಂಜಲಿ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.‌ ಇದರ ಜೊತೆಗೆ ಪ್ರತಿಭಟನಾ ಕಾವು ಸಹ ಜಾಸ್ತಿಯಾಗಿದೆ. ಅಂಬಿಗರ ಚೌಡಯ್ಯ ಸಮುದಾಯದ, ವಿವಿಧ ಮಠಾಧಿಪತಿಗಳು, ಶ್ರೀರಾಮಸೇನೆ ವತಿಯಿಂದ ಹುಬ್ಬಳ್ಳಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಪ್ರಯತ್ನ ಮಾಡಲಾಗುತ್ತಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:28 am, Fri, 17 May 24