AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ಮ ಕರ್ನಾಟಕದಲ್ಲಿರೋ ಈ ರೈಲ್ವೇ ಸ್ಟೇಷನ್ ವಿಶ್ವಕ್ಕೇ ಕಿರೀಟ!

ವಿಶ್ವದಲ್ಲಿಯೇ ಅತೀ ಉದ್ದನೆಯ ಪ್ಲಾಟಫಾರಂ ಹೊಂದಿರುವ ನಿಲ್ದಾಣ ಎಂಬ ಕೀರ್ತಿಗೆ ಹುಬ್ಬಳ್ಳಿಯ ಶ್ರೀ ಸಿದ್ದಾರೂಢ ಸ್ವಾಮಿಜಿ ರೈಲು ನಿಲ್ದಾಣ ಪಾತ್ರವಾಗಿದ್ದು, ಇದು ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ.

ನಮ್ಮ ಕರ್ನಾಟಕದಲ್ಲಿರೋ ಈ ರೈಲ್ವೇ ಸ್ಟೇಷನ್ ವಿಶ್ವಕ್ಕೇ ಕಿರೀಟ!
ಹುಬ್ಬಳ್ಳಿಯ ಶ್ರೀ ಸಿದ್ದಾರೂಢ ಸ್ವಾಮಿಜಿ ರೈಲು ನಿಲ್ದಾಣ
TV9 Web
| Updated By: ಆಯೇಷಾ ಬಾನು|

Updated on:Jun 10, 2022 | 10:50 AM

Share

ಹುಬ್ಬಳ್ಳಿ: ತನ್ನ ಸಾಂಸ್ಕೃತಿಕ ಹಾಗು ವಾಣಿಜ್ಯ ಚಟುವಟಿಕೆಯಿಂದ ಸದಾ ಸುದ್ದಿಯಲ್ಲಿರುವ ಹುಬ್ಬಳ್ಳಿ-ಧಾರವಾಡ ಅವಳಿ ನಗರ ಈ ಬಾರಿ ವಿಶಿಷ್ಟ ಕಾರಣಕ್ಕಾಗಿ ಸುದ್ದಿಯಲ್ಲಿವೆ. ವಿಶ್ವದಲ್ಲಿಯೇ ಅತೀ ಉದ್ದನೆಯ ಪ್ಲಾಟಫಾರಂ ಹೊಂದಿರುವ ನಿಲ್ದಾಣ ಎಂಬ ಕೀರ್ತಿಗೆ ಹುಬ್ಬಳ್ಳಿಯ ಶ್ರೀ ಸಿದ್ದಾರೂಢ ಸ್ವಾಮಿಜಿ ರೈಲು ನಿಲ್ದಾಣ ಪಾತ್ರವಾಗಿದ್ದು, ಇದು ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ. ಶ್ರೀ ಸಿದ್ಧಾರೂಡ ಸ್ವಾಮೀಜಿ-ಹುಬ್ಬಳ್ಳಿ ಜಂಕ್ಷನ್ ಭಾರತೀಯ ನೈಋತ್ಯ ರೈಲ್ವೆ ವ್ಯಾಪ್ತಿಗೆ (South Western Railway -SWR) ಬರುತ್ತದೆ.

ವೇಗದಿಂದ ಬೆಳವಣಿಗೆ ಕಾಣುತ್ತಿರುವ ಹುಬ್ಬಳ್ಳಿಯಲ್ಲಿ ಜನಸಂಖ್ಯೆ ಕೂಡ ಗಣನೀಯ ಪ್ರಮಾಣದಲ್ಲಿ ಬೆಳೆಯುತ್ತಿದೆ. ಈ ಅಂಶಗಳನ್ನ ಗಮನದಲ್ಲಿಟ್ಟುಕೊಂಡು, ರೈಲು ನಿಲ್ದಾಣ ನವೀಕರಣ ಮಾಡುವ ನಿರ್ಧಾರ ಮಾಡಲಾಗಿತ್ತು. 115 ಕೋಟಿ ರೂಪಾಯಿ ಅನುದಾನದಲ್ಲಿ 2019ರಲ್ಲಿ ಪ್ರಾರಂಭವಾದ ನವೀಕರಣ ಕಾರ್ಯ ಕೇವಲ ಎರಡೇ ವರ್ಷದಲ್ಲಿ ಪೂರ್ಣಗೊಂಡು 24 ಫೆಬ್ರವರಿ 2021ರಂದು ಲೋಕಾರ್ಪಣೆಗೊಂಡಿತು.

hubli dharwad sri siddarooda swamiji railway station

ಹುಬ್ಬಳ್ಳಿಯ ಶ್ರೀ ಸಿದ್ದಾರೂಢ ಸ್ವಾಮಿಜಿ ರೈಲು ನಿಲ್ದಾಣ

ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆಯನ್ನು ಪರಿಗಣಿಸಿ ಈಗಾಗಲೇ 5 ಪ್ಲಾಟಫಾರಂ ಹೊಂದಿದ್ದ ನಿಲ್ದಾಣದಲ್ಲಿ ಇನ್ನೂ 3 ಪ್ಲಾಟಫಾರಂ ನಿರ್ಮಿಸಲಾಗುತ್ತಿದ್ದು, ಕಾಮಗಾರಿ ಮುಗಿಯುವ ಹಂತದಲ್ಲಿದೆ. ಜಂಕ್ಷನ್ ಆಗಿರುವ ಈ ನಿಲ್ದಾಣ, ದಕ್ಷಿಣದಲ್ಲಿ ಬೆಂಗಳೂರು, ಮೈಸೂರು ಹಾಗು ಉತ್ತರದಲ್ಲಿ ಪುಣೆ, ಮುಂಬೈ, ದೆಹಲಿಗೆ ಪ್ರಯಾಣಿಸುವವರಿಗೆ ಕೇಂದ್ರವಾಗಿದೆ. ಸದಾ ಪ್ರಯಾಣಿಕರಿಂದ ತುಂಬಿ ತುಳುಕುವ ಈ ನಿಲ್ದಾಣದಲ್ಲಿ ಇನ್ನೂ ಹಲವು ಅನುಕೂಲಕರ ಸೌಲಭ್ಯಗಳನ್ನು ಇತ್ತೀಚಿಗೆ ಕಲ್ಪಿಸಲಾಗಿದೆ. ಇದನ್ನೂ ಓದಿ: ತರಬೇತಿ ವೇಳೆ ಮನೆಗೆ ಅಪ್ಪಳಿಸಿದ ಚೀನಾದ ವಾಯುಪಡೆಯ ಯುದ್ಧ ವಿಮಾನ; ಓರ್ವ ಸಾವು

ಮುಖ್ಯವಾಗಿ 5 ಸ್ಟಾರ್ ರೇಟಿಂಗ್ ಪಡೆದ ಭಾರತದ 3 ರೈಲ್ವೇ ಕ್ಯಾಂಟೀನ್ ಗಳಲ್ಲಿ ಇದೂ ಒಂದು. ಉತ್ತಮ ಗುಣಮಟ್ಟದ ಆಹಾರ ಮತ್ತು ಸೇವೆ ನೀಡುವ ಕ್ಯಾಂಟೀನ್ ಗಳಿಗೆ ಎಫ್ ಎಸ್ ಎಸ್ ಎ ಐ ನಿಂದ ಕೊಡುವ ರೇಟಿಂಗ್ ಇದಾಗಿದ್ದು, 5 ರೇಟಿಂಗ್ ಪಡೆದಿರುವುದು ರೈಲ್ವೇ ನಿಲ್ದಾಣದ ಗೌರವ ಹೆಚ್ಚಿಸಿದೆ. ಈ ರೈಲ್ವೆ ನಿಲ್ದಾಣದ ಹೊರನೋಟ ವಿಮಾನ ನಿಲ್ದಾಣಗಳಿಗೆ ಹೋಲಿಕೆಯಾಗುವಂತಿದ್ದು, ವಿಸ್ತಾರವಾದ ಪ್ರದೇಶದಲ್ಲಿ ನಿರ್ಮಾಣಗೊಂಡಿದೆ. ದಿನನಿತ್ಯ ಹಲವಾರು ರೈಲುಗಳ ಸಂಚಾರವಿದ್ದು, ಪ್ರಯಾಣಿಕರ ಸಂಖ್ಯೆ ತುಸು ಹೆಚ್ಚೇ ಇರುತ್ತದೆ. ಅದಕ್ಕಾಗಿ ಎರಡು ಪ್ರವೇಶ ದ್ವಾರ ಹೊಂದಿದ್ದ ನಿಲ್ದಾಣಕ್ಕೆ ಮೂರನೆಯ ಪ್ರವೇಶ ದ್ವಾರವನ್ನು ಇತ್ತೀಚೆಗೆ ಕಲ್ಪಿಸಲಾಗಿದೆ. ಆಕರ್ಷಕವಾದ, ದೊಡ್ಡದಾದ ಪ್ರವೇಶ ದ್ವಾರ ಇದಾಗಿದ್ದು, ಹೆಚ್ಚಿನ ಜನ ಒಂದೇ ವೇಳೆಯಲ್ಲಿ ಓಡಾಡಲು ಇದು ಅನುಕೂಲ ಕಲ್ಪಿಸಿದೆ.

ಸ್ವಚ್ಛತೆಗೆ ಅತೀ ಹೆಚ್ಚು ಮಹತ್ವ ಇಲ್ಲಿ ನೀಡಲಾಗುತ್ತಿದ್ದು, ನಿಲ್ದಾಣವನ್ನು ಶುಚಿಯಾಗಿ ಇಡಲು ಮೂರು ಪಾಳಿಯಲ್ಲಿ ಕರ್ಮಚಾರಿಗಳು ಶ್ರಮಿಸುತ್ತಿದ್ದಾರೆ. ಅತೀ ಉದ್ದನೆಯ ಪ್ಲಾಟಫಾರಂ ಸೇರಿದಂತೆ ಒಟ್ಟು 8 ಪ್ಲಾಟಫಾರಂ, ವೇಟಿಂಗ್ ಕೊಠಡಿಗಳು, ಶೌಚಾಲಯಗಳೆಲ್ಲವನ್ನು ಪ್ರತಿನಿತ್ಯ ಶುಚಿಗೊಳಿಸುವುದು ಸವಾಲಿನ ಕೆಲಸವಾಗಿದ್ದರೂ ಕರ್ಮಚಾರಿಗಳು ಅತ್ಯಂತ ನಿಷ್ಠೆಯಿಂದ ಇದನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಇದನ್ನೂ ಓದಿ: 777 Charlie: ಭರ್ಜರಿ ಓಪನಿಂಗ್​ ಪಡೆದುಕೊಂಡ ‘777 ಚಾರ್ಲಿ’; ರಕ್ಷಿತ್​ ಶೆಟ್ಟಿ ಸಿನಿಮಾಗೆ ಫ್ಯಾನ್ಸ್​ ಫಿದಾ

ರೈಲು ನಿಲ್ದಾಣದ ನವೀಕರಣದ ಜೊತೆಗೆಯೇ ಇತ್ತೀಚೆಗೆ ರೈಲು ಸೌಧ ಹಾಗು ರೈಲ್ವೇ ವಸ್ತು ಸಂಗ್ರಹಾಲಯ ಕೂಡ ಲೋಕಾರ್ಪಣೆಯಾಗಿದೆ. ಸಂಗ್ರಹಾಲಯ ಅವಳಿ ನಗರದ ಜನರನ್ನು ಹಾಗು ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ಇಲ್ಲಿನ ಟಾಯ್ ಟ್ರೇನ್ ಮಕ್ಕಳ ಅಚ್ಚುಮೆಚ್ಚಿನ ಸ್ಥಳವಾಗಿದೆ.

ಹುಬ್ಬಳ್ಳಿ ನಿಲ್ದಾಣದ ಜೊತೆ ಜೊತೆಗೇ ಧಾರವಾಡದ ನಿಲ್ದಾಣ ಕೂಡ ನವೀಕರಣಗೊಂಡಿದ್ದು, ಆಕರ್ಷಕವಾಗಿ ಕಾಣುತ್ತಿದೆ. ಜ್ಞಾನಪೀಠ ಪುರಸ್ಕೃತರ, ಧಾರವಾಡ ಮೂಲದ ದಿಗ್ಗಜ ಕಲಾವಿದರ ಭಾವ ಚಿತ್ರಗಳನ್ನು ಪ್ರವೇಶ ದ್ವಾರದಲ್ಲಿ ಹಾಕಲಾಗಿದ್ದು, ಇದು ನಗರದ ಸಾಂಸ್ಕೃತಿಕ ಮಹತ್ವವನ್ನು ಸಾರುತ್ತಿದೆ. ಇದರ ಲೋಕಾರ್ಪಣೆಗಾಗಿ ಜನರು ಕಾತುರದಿಂದ ಕಾಯುತ್ತಿದ್ದಾರೆ.

hubli dharwad sri siddarooda swamiji railway station 1

ಹುಬ್ಬಳ್ಳಿಯ ಶ್ರೀ ಸಿದ್ದಾರೂಢ ಸ್ವಾಮಿಜಿ ರೈಲು ನಿಲ್ದಾಣ

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

hubli dharwad sri siddarooda swamiji railway station

ಅವಳಿ ನಗರದ ಜನರ ಕನಸು -ಮೋದಿ ಸರ್ಕಾರದಲ್ಲಿ ಜೋಶಿ ಇಚ್ಛಾಶಕ್ತಿಯಿಂದ ನನಸು! ನರೇಂದ್ರ ಮೋದಿಯವರು ಪ್ರಧಾನಿಯಾದಾಗಿನಿಂದ ಕೇಂದ್ರ ಸರ್ಕಾರ ಮೂಲಭೂತ ಸೌಕರ್ಯಗಳ ಕಲ್ಪಿಸುವಲ್ಲಿ ಹಲವಾರು ಕೆಲಸಗಳನ್ನು ಮಾಡುತ್ತಿದೆ. ಕೇಂದ್ರ ಸಚಿವ ಹಾಗೂ ಧಾರವಾಡ ಸಂಸದ ಶ್ರೀ ಪ್ರಹ್ಲಾದ್ ಜೋಶಿಯವರ ಒತ್ತಾಸೆಯಿಂದ ಹುಬ್ಬಳ್ಳಿ-ಧಾರವಾಡ ರೈಲ್ವೇ ನಿಲ್ದಾಣಗಳು ನವೀಕರಣಗೊಂಡಿದ್ದು, ಜನರಲ್ಲಿ ಸಂತಸ ಉಂಟು ಮಾಡಿದೆ. ಹುಬ್ಬಳ್ಳಿ- ಬೆಂಗಳೂರು ಮಧ್ಯೆ ಇಂಟರ್ ಸಿಟಿ ರೈಲು ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಜೋಶಿ ಅವರ ಕಾರ್ಯಕಾಲದಲ್ಲಿಯೇ ರೈಲ್ವೇ ವ್ಯವಸ್ಥೆಗೆ ಸಂಬಂಧಪಟ್ಟ ಮತ್ತಷ್ಟು ಗಣನೀಯ ಕೆಲಸಗಳಾಗಿರುವುದು ವಿಶೇಷ. ಧಾರವಾಡ ಬೆಂಗಳೂರು ಮಧ್ಯದ ರೈಲು ಪ್ರಯಾಣದ ಅವಧಿಯನ್ನು 4 ಗಂಟೆಗೆ ಇಳಿಸುತ್ತೇವೆ ಎಂಬ ಆಶ್ವಾಸನೆ ಇತ್ತೀಚೆಗೆ ಅವರು ನೀಡಿದ್ದು, ಇದು ಕೇವಲ ಅವಳಿನಗರಕ್ಕಷ್ಟೇ ಅಲ್ಲದೆ ಉತ್ತರ ಕರ್ನಾಟಕದ ಹಲವು ಭಾಗಗಳಿಗೆ ಅನುಕೂಲವಾಗಲಿದೆ. ಈ ವ್ಯವಸ್ಥೆಯನ್ನು ಸಹ ಆದಷ್ಟು ಶೀಘ್ರವಾಗಿ ಕೇಂದ್ರ ಸಚಿವರು ಕಲ್ಪಿಸಿಕೊಡುತ್ತಾರೆ ಎಂದು ಜನರು ಭರವಸೆಯಿಂದ ನೋಡಲು ಹುಬ್ಬಳ್ಳಿಯ ಶ್ರೀ ಸಿದ್ದಾರೂಢ ಸ್ವಾಮಿಜಿ ರೈಲು ನಿಲ್ದಾಣ ಅಭಿವೃದ್ಧಿ ಕಂಡ ವೇಗ ಮುಖ್ಯ ಕಾರಣವಾಗಿದೆ‌.

Published On - 10:05 am, Fri, 10 June 22

ಬೇರೆ ಭಾಷೆಯಿಂದ ಅವಕಾಶ ಇದೆ; ಆದರೆ ಕನ್ನಡಲ್ಲಿ ಚಾನ್ಸ್ ಇಲ್ಲ: ಖುಷಿ ರವಿ
ಬೇರೆ ಭಾಷೆಯಿಂದ ಅವಕಾಶ ಇದೆ; ಆದರೆ ಕನ್ನಡಲ್ಲಿ ಚಾನ್ಸ್ ಇಲ್ಲ: ಖುಷಿ ರವಿ
ಶಿವಕಾಶಿಯ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಕಾರ್ಮಿಕರು ಸಾವು
ಶಿವಕಾಶಿಯ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಕಾರ್ಮಿಕರು ಸಾವು
ಬುಮ್ರಾ ಆಡುವುದರ ಬಗ್ಗೆ ಸಿರಾಜ್ ಹೇಳಿದ್ದೇನು? ವಿಡಿಯೋ
ಬುಮ್ರಾ ಆಡುವುದರ ಬಗ್ಗೆ ಸಿರಾಜ್ ಹೇಳಿದ್ದೇನು? ವಿಡಿಯೋ
ರಿಷಭ್ ಪಂತ್ ಬಗ್ಗೆ ಹೊರಬಿತ್ತು ಮತ್ತೊಂದು ಬಿಗ್ ಅಪ್​ಡೇಟ್
ರಿಷಭ್ ಪಂತ್ ಬಗ್ಗೆ ಹೊರಬಿತ್ತು ಮತ್ತೊಂದು ಬಿಗ್ ಅಪ್​ಡೇಟ್
ಚರ್ಚೆಗೆ ಕರೆದರೆ ವಿಜಯೇಂದ್ರ ಚುನಾವಣೆ ನಡೆಸಿ ಅನ್ನುತ್ತಾರೆ: ಸಿದ್ದರಾಮಯ್ಯ
ಚರ್ಚೆಗೆ ಕರೆದರೆ ವಿಜಯೇಂದ್ರ ಚುನಾವಣೆ ನಡೆಸಿ ಅನ್ನುತ್ತಾರೆ: ಸಿದ್ದರಾಮಯ್ಯ
ಇಬ್ಬರು ಮುಸ್ಲಿಂ ಯುವಕರು ಮಠವನ್ನು ಪ್ರವೇಶಿಸಿದ್ದರು: ಅರವಿಂದ್ ಬೆಲ್ಲದ್
ಇಬ್ಬರು ಮುಸ್ಲಿಂ ಯುವಕರು ಮಠವನ್ನು ಪ್ರವೇಶಿಸಿದ್ದರು: ಅರವಿಂದ್ ಬೆಲ್ಲದ್
ಯಾವ ಸ್ವಾಮೀಜಿಯಿಂದಲೂ ನಾನು ಸ್ವಂತಕ್ಕಾಗಿ ಲಾಭ ಮಾಡಿಕೊಂಡಿಲ್ಲ: ಯತ್ನಾಳ್
ಯಾವ ಸ್ವಾಮೀಜಿಯಿಂದಲೂ ನಾನು ಸ್ವಂತಕ್ಕಾಗಿ ಲಾಭ ಮಾಡಿಕೊಂಡಿಲ್ಲ: ಯತ್ನಾಳ್
ಢಾಕಾ ಕಾಲೇಜಿನ ಮೇಲೆ ಚೀನಾ ನಿರ್ಮಿತ ಯುದ್ಧ ವಿಮಾನ ಪತನ, ಹಲವು ಮಂದಿ ಸಾವು
ಢಾಕಾ ಕಾಲೇಜಿನ ಮೇಲೆ ಚೀನಾ ನಿರ್ಮಿತ ಯುದ್ಧ ವಿಮಾನ ಪತನ, ಹಲವು ಮಂದಿ ಸಾವು
ಚಾಮರಾಜನಗರ ಹಾಗೂ ಪಾವಗಡ ಎರಡಕ್ಕೂ ಭೇಟಿ ನೀಡಿದ ವಿಚಾರವಾದಿ ಸಿಎಂ
ಚಾಮರಾಜನಗರ ಹಾಗೂ ಪಾವಗಡ ಎರಡಕ್ಕೂ ಭೇಟಿ ನೀಡಿದ ವಿಚಾರವಾದಿ ಸಿಎಂ
ರಾಹುಲ್ ಗಾಂಧಿ ತಮ್ಮ ಆಕಾಂಕ್ಷೆಯನ್ನು ತ್ಯಾಗಮಾಡಬಹುದು: ರಾಯರೆಡ್ಡಿ
ರಾಹುಲ್ ಗಾಂಧಿ ತಮ್ಮ ಆಕಾಂಕ್ಷೆಯನ್ನು ತ್ಯಾಗಮಾಡಬಹುದು: ರಾಯರೆಡ್ಡಿ