AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು, ಬೆಳಗಾವಿಯಲ್ಲಿ ‘ಅನಾರೋಗ್ಯಕರ’ ಗಾಳಿಮಟ್ಟ: ಕೆಮ್ಮು, ನೆಗಡಿ, ಉಸಿರಾಟದ ತೊಂದರೆಗಳು ಹೆಚ್ಚಾಗುವ ಸಾಧ್ಯತೆ

ಇಂದು (ಫೆ. 19) ಕರ್ನಾಟಕದಾದ್ಯಂತ ವಾಯು ಗುಣಮಟ್ಟ ಸೂಚ್ಯಂಕ (AQI) ಕಳಪೆಯಾಗಿದೆ. ಬೆಂಗಳೂರಿನಲ್ಲಿ 117-157, ಬೆಳಗಾವಿಯಲ್ಲಿ 277 ರಷ್ಟು ದಾಖಲಾಗಿದ್ದು, ಇದು 'ಅನಾರೋಗ್ಯಕರ' ಮಟ್ಟ. ವಾಹನ ದಟ್ಟಣೆ ಮತ್ತು ಒಣ ಹವೆ ಇದಕ್ಕೆ ಪ್ರಮುಖ ಕಾರಣ. ವೈದ್ಯರು ಉಸಿರಾಟದ ತೊಂದರೆ ಮತ್ತು ಇತರ ಆರೋಗ್ಯ ಸಮಸ್ಯೆಗಳ ಬಗ್ಗೆ ಎಚ್ಚರಿಸಿದ್ದು, N95 ಮಾಸ್ಕ್ ಧರಿಸಲು ಹಾಗೂ ಮಕ್ಕಳು ಮತ್ತು ಅಸ್ತಮಾ ಇರುವವರು ಹೊರಗೆ ಹೋಗುವುದನ್ನು ಮಿತಿಗೊಳಿಸಲು ಸಲಹೆ ನೀಡಿದ್ದಾರೆ.

ಬೆಂಗಳೂರು, ಬೆಳಗಾವಿಯಲ್ಲಿ 'ಅನಾರೋಗ್ಯಕರ' ಗಾಳಿಮಟ್ಟ: ಕೆಮ್ಮು, ನೆಗಡಿ, ಉಸಿರಾಟದ ತೊಂದರೆಗಳು ಹೆಚ್ಚಾಗುವ ಸಾಧ್ಯತೆ
ಸಾಂದರ್ಭಿಕ ಚಿತ್ರ Image Credit source: Tv9 kannada
ಅಕ್ಷಯ್​ ಪಲ್ಲಮಜಲು​​
|

Updated on: Feb 19, 2026 | 7:28 AM

Share

ಬೆಂಗಳೂರು, ಫೆ.19: ಇಂದು (ಫೆ. 19) ಕರ್ನಾಟಕದ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟವು (Air Quality Index) ಹದಗೆಟ್ಟಿದ್ದು, ಅದರಲ್ಲೂ ಬೆಂಗಳೂರು ಮತ್ತು ಬೆಳಗಾವಿಯಲ್ಲಿ ಆತಂಕಕಾರಿ ಮಟ್ಟಕ್ಕೆ ತಲುಪಿದೆ. ನಗರದ ಸರಾಸರಿ ಗಾಳಿಯ ಮಟ್ಟ 117 ರಿಂದ 157 ರ ನಡುವೆ ದಾಖಲಾಗಿದ್ದು, ಇದು ‘ಕಳಪೆ’ ಮತ್ತು ಕೆಲವು ಭಾಗಗಳಲ್ಲಿ ‘ಅನಾರೋಗ್ಯಕರ’ ಮಟ್ಟಕ್ಕೆ ತಲುಪಿದೆ. ಸಿಲ್ಕ್ ಬೋರ್ಡ್, ವೈಟ್‌ಫೀಲ್ಡ್ ಮತ್ತು ಬಿಟಿಎಂ ಲೇಔಟ್‌ನಂತಹ ಪ್ರದೇಶಗಳಲ್ಲಿ ಮಾಲಿನ್ಯದ ಮಟ್ಟ ಹೆಚ್ಚಿದೆ.

ಇನ್ನು ಉತ್ತರ ಕರ್ನಾಟಕದ ಬೆಳಗಾವಿಯಲ್ಲಿ ವಾಯು ಗುಣಮಟ್ಟ ಕಳಪೆಯಾಗಿದ್ದು, ಗಾಳಿಯ ಮಟ್ಟ 277 ದಾಖಲಾಗಿದೆ. ಇದು ‘ಅನಾರೋಗ್ಯಕರ’ ಹಂತ ಎಂದು ಹೇಳಲಾಗಿದೆ. ಹಾಗಾಗಿ ಶ್ವಾಸಕೋಶದ ಸಮಸ್ಯೆ ಇರುವವರಿಗೆ ಹಾನಿಕಾರಕವಾಗಿದೆ. ಕರಾವಳಿ ಭಾಗದಲ್ಲೂ ವಾಯು ಗುಣಮಟ್ಟ ಕುಸಿತ ಕಂಡಿದ್ದು, ವಾಹನ ದಟ್ಟಣೆ ಮತ್ತು ಒಣ ಹವೆಯಿಂದಾಗಿ ಗಾಳಿಯಲ್ಲಿ ಧೂಳಿನ ಪ್ರಮಾಣ ಹೆಚ್ಚಾಗಿದೆ. ರಾಜ್ಯದಲ್ಲಿ ತಾಪಮಾನದ ಏರಿಳಿತ (ಬೆಳಿಗ್ಗೆ ಚಳಿ, ಮಧ್ಯಾಹ್ನ ಬಿಸಿಲು) ಮತ್ತು ವಾಯು ಮಾಲಿನ್ಯದ ಕಾರಣದಿಂದಾಗಿ ಕೆಮ್ಮು, ನೆಗಡಿ ಮತ್ತು ಉಸಿರಾಟದ ತೊಂದರೆಗಳು ಹೆಚ್ಚಾಗುತ್ತಿವೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ಮಾಲಿನ್ಯ ಹೆಚ್ಚಿರುವ ಪ್ರದೇಶಗಳಲ್ಲಿ ಸಂಚರಿಸುವಾಗ N95 ಮಾಸ್ಕ್ ಬಳಸುವುದು ಉತ್ತಮ.ಉಸಿರಾಟದ ತೊಂದರೆ ಇರುವವರು ಮತ್ತು ಮಕ್ಕಳು ಬೆಳಿಗ್ಗೆ ಅಥವಾ ಸಂಜೆ ಹೊರಗೆ ಹೋಗುವುದನ್ನು ಕಡಿಮೆ ಮಾಡುವುದು ಸೂಕ್ತ ಹಾಗೂ ಒಣ ಹವೆಯಿರುವುದರಿಂದ ಸಾಕಷ್ಟು ನೀರು ಕುಡಿಯಿರಿ ಎಂದು ಸಲಹೆ ನೀಡಿದ್ದಾರೆ. ಇನ್ನು ಈ ಗಾಳಿ ಗುಣಮಟ್ಟ ಮಧ್ಯಾಹ್ನ ಅಥವಾ ಸಂಜೆ ಹೊತ್ತಿಗೆ ಬದಲಾಗಬಹುದು ಎಂದು ಹೇಳಲಾಗಿದೆ. ಗಾಳಿಯಲ್ಲಿ ಪ್ರಮುಖವಾಗಿ PM2.5 ಮತ್ತು PM10 ಕಣಗಳ ಪ್ರಮಾಣ ಹೆಚ್ಚಾಗಿದೆ, ಇದು ಒಣ ಹವೆಯಿಂದಾಗಿ ಗಾಳಿಯಲ್ಲಿ ಧೂಳು ಸುಲಭವಾಗಿ ಹರಡುತ್ತದೆ.

ಇದನ್ನೂ ಓದಿ: ಕರ್ನಾಟಕ ಹವಾಮಾನ ವರದಿ: ಈ ಜಿಲ್ಲೆಗಳಲ್ಲಿ ಶಾಖದ ತೀವ್ರತೆ ಹೆಚ್ಚಾಗಲಿದೆ, ದೇಹದ ಚರ್ಮದ ಬಗ್ಗೆ ಇರಲಿ ಎಚ್ಚರ

ಪ್ರಮುಖ ಜಿಲ್ಲೆಗಳಲ್ಲಿ ವಾಯುಗುಣ ಮಟ್ಟ:

ಬೆಂಗಳೂರು-157

ಮಂಗಳೂರು-178

ಬೆಳಗಾವಿ-277

ಮೈಸೂರು-85

ಚಾಮರಾಜನಗರ – 45

ಶಿವಮೊಗ್ಗ – 187

ಬಳ್ಳಾರಿ -146

ಹಬ್ಬಳ್ಳಿ-160

ಉಡುಪಿ – 185

ವಿಜಯಪುರ -144

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

ಉತ್ತಮ- 0-50

ಮಧ್ಯಮ – 50-100

ಕಳಪೆ – 100-150

ಅನಾರೋಗ್ಯಕರ – 150-200

ಗಂಭೀರ – 200 – 300

ಅಪಾಯಕಾರಿ – 300 -500+

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

IIT ಬಾಂಬೆ ತರಗತಿಯ ಟೇಬಲ್ ಮೇಲೆ ಹತ್ತಿ ನಿಂತ ನಾಯಿ; ವಿಡಿಯೋ ವೈರಲ್
IIT ಬಾಂಬೆ ತರಗತಿಯ ಟೇಬಲ್ ಮೇಲೆ ಹತ್ತಿ ನಿಂತ ನಾಯಿ; ವಿಡಿಯೋ ವೈರಲ್
ದಿ ರೈಸ್ ಆಫ್ ಅಶೋಕ: ವೇದಿಕೆಯಲ್ಲಿ ಭಾವುಕವಾಗಿ ಮಾತನಾಡಿದ ಸತೀಶ್ ನೀನಾಸಂ
ದಿ ರೈಸ್ ಆಫ್ ಅಶೋಕ: ವೇದಿಕೆಯಲ್ಲಿ ಭಾವುಕವಾಗಿ ಮಾತನಾಡಿದ ಸತೀಶ್ ನೀನಾಸಂ
ಎಐ ಶೃಂಗಸಭೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಎಂಜಾಯ್ ಮಾಡಿದ ಜಾಗತಿಕ ನಾಯಕರು
ಎಐ ಶೃಂಗಸಭೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಎಂಜಾಯ್ ಮಾಡಿದ ಜಾಗತಿಕ ನಾಯಕರು
ಗೆಳೆಯರೊಂದಿಗೆ ಬ್ಯಾಡ್ಮಿಂಟನ್ ಆಟವಾಡುತ್ತಿದ್ದ ಉದ್ಯಮಿಗೆ ಹೃದಯಾಘಾತ
ಗೆಳೆಯರೊಂದಿಗೆ ಬ್ಯಾಡ್ಮಿಂಟನ್ ಆಟವಾಡುತ್ತಿದ್ದ ಉದ್ಯಮಿಗೆ ಹೃದಯಾಘಾತ
ಧ್ರುವ ಬಗ್ಗೆ ಅಸಭ್ಯ ಮಾತಾಡಿದ್ದಕ್ಕೆ ಕಾರಣ ತಿಳಿಸಿದ ಕನಕಪುರ ಶ್ರೀನಿವಾಸ್
ಧ್ರುವ ಬಗ್ಗೆ ಅಸಭ್ಯ ಮಾತಾಡಿದ್ದಕ್ಕೆ ಕಾರಣ ತಿಳಿಸಿದ ಕನಕಪುರ ಶ್ರೀನಿವಾಸ್
ಮಕ್ಕಳು ಮೊಬೈಲ್ ಅಡಿಕ್ಷನ್ ಆಗಿರುವ ಲಕ್ಷಣಗಳು ಹೇಗಿರುತ್ತೆ?
ಮಕ್ಕಳು ಮೊಬೈಲ್ ಅಡಿಕ್ಷನ್ ಆಗಿರುವ ಲಕ್ಷಣಗಳು ಹೇಗಿರುತ್ತೆ?
50 ಎಕರೆ ಸವಾಲು ಹಾಕಿದ ಮಾಜಿ ಶಾಸಕರಿಗೆ ವಿಡಿಯೋ ಟಾಂಗ್ ಕೊಟ್ಟ ತಂಗಡಗಿ
50 ಎಕರೆ ಸವಾಲು ಹಾಕಿದ ಮಾಜಿ ಶಾಸಕರಿಗೆ ವಿಡಿಯೋ ಟಾಂಗ್ ಕೊಟ್ಟ ತಂಗಡಗಿ
ಕುಡಿದ ನಶೆಯಲ್ಲಿ ಮಾಡಿದ ಎಡವಟ್ಟಿಗೆ ಸುಟ್ಟು ಕರಕಲಾದ ಬಸ್‌
ಕುಡಿದ ನಶೆಯಲ್ಲಿ ಮಾಡಿದ ಎಡವಟ್ಟಿಗೆ ಸುಟ್ಟು ಕರಕಲಾದ ಬಸ್‌
ಪತ್ನಿಯನ್ನ ಹತ್ಯೆಗೈದ ಪತಿ: ಶಾಕಿಂಗ್ ಮಾಹಿತಿ ಬಿಚ್ಚಿಟ್ಟ ಆಯುಕ್ತ
ಪತ್ನಿಯನ್ನ ಹತ್ಯೆಗೈದ ಪತಿ: ಶಾಕಿಂಗ್ ಮಾಹಿತಿ ಬಿಚ್ಚಿಟ್ಟ ಆಯುಕ್ತ
ಶತಕ ಬಾರಿಸಿ ಇಶಾನ್ ಕಿಶನ್ ದಾಖಲೆ ಮುರಿದ ಪಾಕ್ ಆರಂಭಿಕ
ಶತಕ ಬಾರಿಸಿ ಇಶಾನ್ ಕಿಶನ್ ದಾಖಲೆ ಮುರಿದ ಪಾಕ್ ಆರಂಭಿಕ