AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಮಹಿಳೆಯರು ವಯಸ್ಸು, ಪುರುಷರು ಸಂಬಳದ ಬಗ್ಗೆ ನಿಖರವಾಗಿ ಹೇಳೋದಿಲ್ಲ ಏಕೆ ಗೊತ್ತಾ?

ಸಾಮಾನ್ಯವಾಗಿ ಮಹಿಳೆಯರ ಬಳಿ ನಿಮ್ಮ ವಯಸ್ಸೆಷ್ಟು ಎಂದು ಕೇಳಿದರೆ, ಹೆಚ್ಚಿನ ಮಹಿಳೆಯರು ಆ ಬಗ್ಗೆ ಸರಿಯಾಗಿ ಹೇಳೋದಿಲ್ಲ. ಅದೇ ರೀತಿ ಪುರುಷರು ಸಹ ತಮ್ಮ ಸಂಬಳ ಎಷ್ಟೆಂದು ಯಾರಿಗೂ ನಿಖರವಾಗಿ ಹೇಳೋದಿಲ್ಲ. ಇದರ ಹಿಂದೆಯೂ ಒಂದಷ್ಟು ಕಾರಣವಿದೆಯೆಂದು ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ವಿವರಿಸಿದ್ದಾರೆ. ಹಾಗಿದ್ದರೆ ಚಾಣಕ್ಯರ ಪ್ರಕಾರ, ಹೆಣ್ಮಕ್ಳು ತಮ್ಮ ವಯಸ್ಸು ಹಾಗೂ ಗಂಡ್ಮಕ್ಳು ತಮ್ಮ ಸಂಬಳದ ವಿಷಯವನ್ನು ಮರೆಮಾಡೋದೇಕೆ ಎಂಬುದನ್ನು ನೋಡೋಣ ಬನ್ನಿ.

Chanakya Niti: ಮಹಿಳೆಯರು ವಯಸ್ಸು, ಪುರುಷರು ಸಂಬಳದ ಬಗ್ಗೆ ನಿಖರವಾಗಿ ಹೇಳೋದಿಲ್ಲ ಏಕೆ ಗೊತ್ತಾ?
ಸಾಂದರ್ಭಿಕ ಚಿತ್ರ Image Credit source: Getty Images
ಮಾಲಾಶ್ರೀ ಅಂಚನ್​
|

Updated on: Aug 09, 2026 | 7:10 PM

Share

ಮಹಿಳೆಯರ ವಯಸ್ಸು (age) ಕೇಳಬಾರದು, ಪುರುಷರ ಸಂಬಳ ಕೇಳಬಾರದು ಎಂಬ ಮಾತನ್ನು ಕೇಳಿರಬಹುದಲ್ವಾ. ಈ ಪರ್ಸನಲ್‌  ಬಗ್ಗೆ ಅವರುಗಳು ಕೂಡ ರಿವೀಲ್‌ ಕೂಡ ಮಾಡುವುದಿಲ್ಲ. ಹೌದು ಹೆಣ್ಣು ಮಕ್ಕಳು ಯಾವಾಗಲೂ ತಮ್ಮ ವಯಸ್ಸನ್ನು ಕಡಿಮೆ ಹೇಳುತ್ತಾರೆ, ಇಲ್ಲವೇ ನಿಜವಾದ ವಯಸ್ಸನ್ನು ಮರೆ ಮಾಚಲು ಇಷ್ಟಪಡುತ್ತಾರೆ. ಅದೇ ರೀತಿ ಗಂಡು ಮಕ್ಕಳು ಕೂಡ ತಾವೆಷ್ಟು ಸಂಪಾದನೆ ಮಾಡುತ್ತಿದ್ದೇವೆ ಎಂಬ ಬಗ್ಗೆ ನಿಖರವಾದ ಮಾಹಿತಿಯನ್ನು ಹೇಳುವುದಿಲ್ಲ. ಆಚಾರ್ಯ ಚಾಣಕ್ಯರು ಗಂಡು ಮತ್ತು ಹೆಣ್ಣಿನ ಈ ನಡವಳಿಕೆಯ ಹಿಂದಿನ ಕಾರಣವನ್ನು ಬಹಳ ಹಿಂದೆಯೇ ವಿವರಿಸಿದ್ದಾರೆ. ಅದೇ ರೀತಿ ಆದಾಯ ಮತ್ತು ವಯಸ್ಸು ಒಬ್ಬರ ಗೌಪ್ಯ ವಿಷಯವಾಗಿದ್ದು, ಅದನ್ನು ಕೇಳುವುದು ಕೂಡ ಸರಿಯಲ್ಲ ಎಂದು ಹೇಳಿದ್ದಾರೆ.  ಈ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ ನೋಡಿ.

ಹೆಣ್ಣಿನ  ವಯಸ್ಸು, ಗಂಡಿನ ಸಂಬಳವನ್ನು ಏಕೆ ಕೇಳಬಾರದು?

ಆಚಾರ್ಯ ಚಾಣಕ್ಯರ ಪ್ರಕಾರ ಪುರುಷರು ಮತ್ತು ಮಹಿಳೆಯರು ಇಬ್ಬರೂ ಸಹ ಸ್ವಾರ್ಥವನ್ನು ಮೀರಿ ಇತರರಿಗಾಗಿ ಬದುಕುತ್ತಾರೆ. ಮಹಿಳೆಯರು ತಮ್ಮ ಕುಟುಂಬಕ್ಕಾಗಿ ತ್ಯಾಗ ಮಾಡುತ್ತಾರೆ ಮತ್ತು ಪುರುಷರು ತಮ್ಮ ಕುಟುಂಬದ ಏಳಿಗೆಗಾಗಿ ಹೋರಾಡುತ್ತಾರೆ. ಆದ್ದರಿಂದ, ಅವರ ವಯಸ್ಸು ಮತ್ತು ಆದಾಯದ ಬಗ್ಗೆ ಕೇಳುವುದು ಅವರ ಕೊಡುಗೆಗಳು ಮತ್ತು ಸಮರ್ಪಣೆಗೆ ಅಗೌರವ ತೋರಿದಂತಾಗುತ್ತದೆ.

ಮಹಿಳೆಯರು ತಮ್ಮ ವಯಸ್ಸನ್ನು ಮರೆಮಾಡಲು ಕಾರಣಗಳೇನು?

ಚಾಣಕ್ಯ ನೀತಿಯ ಪ್ರಕಾರ, ಸಮಾಜದಲ್ಲಿ ಗೌರವ ಮತ್ತು ವೈಯಕ್ತಿಕ ಸ್ಥಾನಮಾನವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಸಮಾಜದಲ್ಲಿನ ವಿಭಿನ್ನ ದೃಷ್ಟಿಕೋನದಿಂದಾಗಿ ಮಹಿಳೆಯರು ತಮ್ಮ ವಯಸ್ಸನ್ನು ಬಹಿರಂಗಪಡಿಸುವುದಿಲ್ಲ. ವಯಸ್ಸನ್ನು ಮರೆ ಮಾಡುವುದು ಮದುವೆ ಇತ್ಯಾದಿಗೆ ಸಂಬಂಧಿಸಿ ಸಾಮಾಜಿಕ ಒತ್ತಡ ಅಥವಾ ನೋಟಕ್ಕೆ ಸಂಬಂಧಿಸಿದ್ದು ಮಾತ್ರವಲ್ಲ ಭದ್ರತೆ ಮತ್ತು ಅವಕಾಶಗಳನ್ನು ಕಾಪಾಡಿಕೊಳ್ಳುವುದು ಆಗಿದೆ. ಮಹಿಳೆಯರು ತಮ್ಮ ನಿಜವಾದ ವಯಸ್ಸನ್ನು ಮರೆಮಾಚುವ ಮೂಲಕ ಸಮಾಜದಲ್ಲಿ ತಮ್ಮ ಮೌಲ್ಯ ಮತ್ತು ಸ್ಥಾನವನ್ನು ಕಾಪಾಡಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳುತ್ತಾರೆ. ಅಲ್ಲದೆ ಮಹಿಳೆಯರ ಜೀವನ ಕುಟುಂಬಕ್ಕೆ ಮೀಸಲಾಗಿರುತ್ತದೆ. ಅವರು ತಮ್ಮ ಮಕ್ಕಳು, ಗಂಡ ಮತ್ತು ಕುಟುಂಬದ ಸಂತೋಷಕ್ಕಾಗಿ ಬದುಕುತ್ತಾರೆ, ತಮ್ಮ ವಯಸ್ಸಿನ ಬಗ್ಗೆ ಯೋಚಿಸುವುದಿಲ್ಲ. ಹಾಗಾಗಿ  ಅವರು ವಯಸ್ಸಲ್ಲ ತಮ್ಮ ಕುಟುಂಬದ ಸಂತೋಷದಿಂದ ತಮ್ಮನ್ನು ಗುರುತಿಸಿಕೊಳ್ಳಲು ಇಷ್ಟಪಡುತ್ತಾರೆ.

ಇದನ್ನೂ ಓದಿ: ಮಹಿಳೆಯರು ಅಡುಗೆ ಮಾಡುವಾಗ ತಪ್ಪುಗಳನ್ನು ಮಾಡಬಾರದು ಎನ್ನುತ್ತಾರೆ ಚಾಣಕ್ಯ

ಪುರುಷರು ತಮ್ಮ ಆದಾಯವನ್ನು ಏಕೆ ಬಹಿರಂಗಪಡಿಸುವುದಿಲ್ಲ?

ಸಂಪತ್ತು ಮತ್ತು ಹಣಕಾಸಿನ ವಿಚಾರವನ್ನು  ಬಹಿರಂಗಪಡಿಸುವುದರಿಂದ ಸಂಭಾವ್ಯ ಅಪಾಯ ಮತ್ತು ಸ್ಪರ್ಧೆ ಉಂಟಾಗುತ್ತದೆ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಆದ್ದರಿಂದ ಪುರುಷರು ತಮ್ಮ ಆದಾಯವನ್ನು ಮರೆಮಾಡುತ್ತಾರೆ. ತಮ್ಮ ನಿಜವಾದ ಆರ್ಥಿಕ ಸ್ಥಿತಿಯನ್ನು ಖಾಸಗಿಯಾಗಿ ಇಟ್ಟುಕೊಳ್ಳುವುದು ಪುರುಷರು ಸಾಮಾಜಿಕ ಅಥವಾ ಆರ್ಥಿಕ ಹಾನಿಯನ್ನು ತಪ್ಪಿಸಲು ಒಂದು ತಂತ್ರವಾಗಿದೆ. ಇದಲ್ಲದೆ  ಪುರುಷರು ತಮಗಾಗಿ ಮಾತ್ರ ಸಂಪಾದಿಸುವುದಿಲ್ಲ, ಅವರು ತಮ್ಮ ಗಳಿಕೆಯಿಂದ ತಮ್ಮ ಕುಟುಂಬವನ್ನು ಸಹ ಪೋಷಿಸುತ್ತಾರೆ. ಜೊತೆಗೆ ಪುರುಷರ ಗೌರವ ಮತ್ತು ಘನತೆ ಅವರ ಸಂಬಳವನ್ನು ಅವಲಂಬಿಸಿರುತ್ತದೆ. ಇದರಿಂದಾಗಿ ಅವರ ಮೇಲೆ ಮಾನಸಿಕ ಒತ್ತಡವಿರುತ್ತದೆ. ಈ ಒತ್ತಡದಿಂದಾಗಿ ಪುರುಷರು ತಮ್ಮ ಸಂಬಳವನ್ನು ಬಹಿರಂಗಪಡಿಸುವುದಿಲ್ಲ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ನಾನ್ ವೆಜ್​ ಪ್ರಿಯರಿಗೆ ಶಾಕ್:2 ದಿನ ಬೆಂಗಳೂರಲ್ಲಿ ಸಿಗಲ್ಲ ಮಟನ್-ಚಿಕನ್​!
ನಾನ್ ವೆಜ್​ ಪ್ರಿಯರಿಗೆ ಶಾಕ್:2 ದಿನ ಬೆಂಗಳೂರಲ್ಲಿ ಸಿಗಲ್ಲ ಮಟನ್-ಚಿಕನ್​!
ದರ್ಶನ್ ಭೇಟಿ ಮಾಡಿದ ವಿಜಯಲಕ್ಷ್ಮಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಝೈದ್ ಖಾನ್
ದರ್ಶನ್ ಭೇಟಿ ಮಾಡಿದ ವಿಜಯಲಕ್ಷ್ಮಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಝೈದ್ ಖಾನ್
ಮಾಫಿ ಸಾಕ್ಷಿಗೆ ದರ್ಶನ್ ಆಕ್ಷೇಪ; ತುರ್ತು ವಿಚಾರಣೆಗೆ ಹೈಕೋರ್ಟ್ ಸಮ್ಮತಿ
ಮಾಫಿ ಸಾಕ್ಷಿಗೆ ದರ್ಶನ್ ಆಕ್ಷೇಪ; ತುರ್ತು ವಿಚಾರಣೆಗೆ ಹೈಕೋರ್ಟ್ ಸಮ್ಮತಿ
ಬಗೆದಷ್ಟು ಬಯಲಾಗ್ತಿದೆ KPSC ಹಗರಣ: Dysp ನೇಮಕಾತಿಯಲ್ಲೂ ಅಕ್ರಮ ಶಂಕೆ
ಬಗೆದಷ್ಟು ಬಯಲಾಗ್ತಿದೆ KPSC ಹಗರಣ: Dysp ನೇಮಕಾತಿಯಲ್ಲೂ ಅಕ್ರಮ ಶಂಕೆ
ಇಲ್ಲಿ ಎದೆಮಟ್ಟದ ನೀರಿನಲ್ಲಿ ನಡೆದರೆ ಮಾತ್ರ ನರಸಿಂಹನ ದರ್ಶನ ಭಾಗ್ಯ!
ಇಲ್ಲಿ ಎದೆಮಟ್ಟದ ನೀರಿನಲ್ಲಿ ನಡೆದರೆ ಮಾತ್ರ ನರಸಿಂಹನ ದರ್ಶನ ಭಾಗ್ಯ!
ನೆಲಮಂಗಲ-ಹಾಸನ ಹೆದ್ದಾರಿ ಟೋಲ್ ದರ ಹೆಚ್ಚಳ: ವಾಹನ ಸವಾರರ ಆಕ್ರೋಶ
ನೆಲಮಂಗಲ-ಹಾಸನ ಹೆದ್ದಾರಿ ಟೋಲ್ ದರ ಹೆಚ್ಚಳ: ವಾಹನ ಸವಾರರ ಆಕ್ರೋಶ
ಹಸುವಿಗೆ ಶಾಸ್ತ್ರೋಕ್ತವಾಗಿ ಸೀಮಂತ ಮಾಡಿದ ಯುವಕ; ಊರ ಜನರಿಗೆ ಹೋಳಿಗೆ ಊಟ!
ಹಸುವಿಗೆ ಶಾಸ್ತ್ರೋಕ್ತವಾಗಿ ಸೀಮಂತ ಮಾಡಿದ ಯುವಕ; ಊರ ಜನರಿಗೆ ಹೋಳಿಗೆ ಊಟ!
ಬಿಜೆಪಿ ಪಾದಯಾತ್ರೆಗೆ ಅಸಲಿ ಕಾರಣ ಬಿಚ್ಚಿಟ್ಟ ವಿಜಯೇಂದ್ರ!
ಬಿಜೆಪಿ ಪಾದಯಾತ್ರೆಗೆ ಅಸಲಿ ಕಾರಣ ಬಿಚ್ಚಿಟ್ಟ ವಿಜಯೇಂದ್ರ!
Live: ಬಿಜೆಪಿ ಪಾದಯಾತ್ರೆಗೆ ಚಾಲನೆ ನೇರಪ್ರಸಾರ
Live: ಬಿಜೆಪಿ ಪಾದಯಾತ್ರೆಗೆ ಚಾಲನೆ ನೇರಪ್ರಸಾರ
ನಾಗೇಂದ್ರ ಆಯ್ತು, ಇನ್ನೊಂದು ವಿಕೆಟ್ ಪತನವಾಗುತ್ತೆ: ಆರ್ ಅಶೋಕ್
ನಾಗೇಂದ್ರ ಆಯ್ತು, ಇನ್ನೊಂದು ವಿಕೆಟ್ ಪತನವಾಗುತ್ತೆ: ಆರ್ ಅಶೋಕ್