ಹುಬ್ಬಳ್ಳಿ: ಪಂಚಮಸಾಲಿ ಸಮಾಜದ ಮೂರನೇ ಪೀಠ ಸ್ಥಾಪನೆಗೆ ಸ್ವಾಗತ ಕೋರಿದ ಮಠಾಧೀಶರರು

ಹುಬ್ಬಳ್ಳಿ: ಪಂಚಮಸಾಲಿ ಸಮಾಜದ ಮೂರನೇ ಪೀಠ ಸ್ಥಾಪನೆಗೆ ಸ್ವಾಗತ ಕೋರಿದ ಮಠಾಧೀಶರರು
ನೀಲಕಂಠ ಅಸೂಟಿ ನಿವಾಸದಲ್ಲಿ ನಡೆದಿರುವ ಸಭೆ

ನಿನ್ನೆ (ಜನವರಿ 25) ಸಂಜೆ ನಡೆದ ಸಭೆಯಲ್ಲಿ ಮೂರನೇ ಪೀಠ ಅಗತ್ಯವಾಗಿದ್ದು, ಸಹಕಾರ ನೀಡಲು ಮನವಿ ಮಾಡಲಾಗಿದೆ. ಪಂಚಮಸಾಲಿ ಸಮಾಜದ ರಾಷ್ಟ್ರೀಯ ಘಟದಕ ಮುಖಂಡರಾದ ಪ್ರಭಣ್ಣ ಹುಣಸೀಕಟ್ಟಿ, ಕಲ್ಲಪ್ಪ ಯಲಿವಾಳ, ರಾಜಶೇಖರ ಮೆಣಸಿನಕಾಯಿ ಮುಂತಾದವರು ಈ ವೇಳೆ ಉಪಸ್ಥಿತರಿದ್ದರು.

TV9kannada Web Team

| Edited By: preethi shettigar

Jan 25, 2022 | 3:04 PM

ಹುಬ್ಬಳ್ಳಿ: ಪಂಚಮಸಾಲಿ ಸಮಾಜದ (panchamasali Lingayat) 3ನೇ ಪೀಠ ಸ್ಥಾಪನೆ‌ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಪಂಚಮಸಾಲಿ ಸಮಾಜದ ಮುಖಂಡರ ಸಭೆ ನಡೆದಿದೆ. ಹುಬ್ಬಳ್ಳಿಯ ನೀಲಕಂಠ ಅಸೂಟಿ ನಿವಾಸದಲ್ಲಿ ನಡೆದಿರುವ ಸಭೆಯಲ್ಲಿ(Meeting) ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಮೂರನೇ ಪೀಠ(panchamasali Lingayat third peetha) ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಸ್ಥಾಪನೆಯಾಗುವುದಕ್ಕೆ  ವಿವಿಧ ಮಠಾಧೀಶರು ಸ್ವಾಗತ ಕೋರಿದ್ದಾರೆ. ಬಂಡಿವಾಡ ವಿರಕ್ತಮಠದ ರೇವಣಸಿದ್ದೇಶ್ವರ ಮಹಾಸ್ವಾಮಿ, ಮನಗೂಳಿಯ ಹಿರೇಮಠದ ಶ್ರೀ ಸಂಗನಬಸವ ಮಹಾಸ್ವಾಮಿ, ಕುಚನೂರಿನ ಸಿದ್ಧಲಿಂಗ ಮಹಾಸ್ವಾಮಿಗಳು ಈ ಸಭೆಯಲ್ಲಿ ಭಾಗಿಯಾಗಿದ್ದಾರೆ.

ನಿನ್ನೆ (ಜನವರಿ 25) ಸಂಜೆ ನಡೆದ ಸಭೆಯಲ್ಲಿ ಮೂರನೇ ಪೀಠ ಅಗತ್ಯವಾಗಿದ್ದು, ಸಹಕಾರ ನೀಡಲು ಮನವಿ ಮಾಡಲಾಗಿದೆ. ಪಂಚಮಸಾಲಿ ಸಮಾಜದ ರಾಷ್ಟ್ರೀಯ ಘಟದಕ ಮುಖಂಡರಾದ ಪ್ರಭಣ್ಣ ಹುಣಸೀಕಟ್ಟಿ, ಕಲ್ಲಪ್ಪ ಯಲಿವಾಳ, ರಾಜಶೇಖರ ಮೆಣಸಿನಕಾಯಿ ಮುಂತಾದವರು ಈ ವೇಳೆ ಉಪಸ್ಥಿತರಿದ್ದರು. ಜತೆಗೆ ಹರಿಹರ, ಕೂಡಲಸಂಗಮ ಪೀಠದ ಪರ್ಯಾಯವಾಗಿ ಪಂಚಮಸಾಲಿ ಮಠಾಧೀಶರ ಒಕ್ಕೂಟ, ಬಬಲೇಶ್ವರದ ಮಹಾದೇವ ಶಿವಾಚಾರ್ಯರರು ನೂತನ ಪೀಠದ‌ ಮಹಾಸ್ವಾಮಿಗಳು ಭಾಗಿಯಾಗಿದ್ದರು.

ಆರೋಪ ಪ್ರತ್ಯಾರೋಪಗಳಿಗೆ ಸಾಕ್ಷಿಯಾದ ಮೂರನೇ ಪೀಠ ಅಖಿಲ ಭಾರತ ಪಂಚಮಸಾಲಿ ಮಠಾಧೀಶರ ಒಕ್ಕೂಟ ಮೂರನೇ ಪೀಠ ಸ್ಥಾಪನೆ ವಿಚಾರವನ್ನು ಬಹಿರಂಗ ಪಡಿಸುತ್ತಿದ್ದಂತೆ ಪರ ವಿರೋಧ ಹೇಳಿಕೆಗಳು ಕೇಳಿ ಬಂದವು. ವಿವಿಧ ಮಠಾಧೀಶರು, ಸಚಿವರು, ಶಾಸಕರು, ಇತರೆ ರಾಜಕಾರಣಿಗಳು ಪರ ವಿರೋಧ ಹೇಳಿಕೆಗಳನ್ನು ನೀಡಿದರು. ಇದರ ಮದ್ಯೆ ಅಖಿಲ ಭಾರತ ಪಂಚಮಸಾಲಿ ಮಠಾಧೀಶರ ಒಕ್ಕೂಟ ನಮ್ಮ ಮೂರನೇ ಪೀಠಕ್ಕೂ ರಾಜಕೀಯಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ. ಜೊತೆಗೆ ಮೂರು ಪೀಠ ಮಾತ್ರವಲ್ಲ ಐದು ಪೀಠಗಳಾದರೂ ನಮ್ಮ ಅಭ್ಯಂತರವಿಲ್ಲ ಅಂತ ಹೇಳಿದೆ. ಆದರೆ ಸದ್ಯ ಆರೋಪ ಪ್ರತ್ಯಾರೋಪಗಳು ಮಾತ್ರ ನಿಲ್ಲುವ ಸೂಚನೆಗಳು ಕಾಣುತ್ತಿಲ್ಲ.

ಮೂರನೇ ಪೀಠಾಧಿಪತಿಯಾಗಿ ಷ. ಭ್ರ. ಡಾ ಮಹಾದೇಶ ಶಿವಾಚಾರ್ಯ ಸ್ವಾಮೀಜಿ ಎರಡು ಪೀಠಗಳ ಹೊರತಾಗಿಯೂ ಪಂಚಮಸಾಲಿ ಸಮುದಾಯದ ಮೂರನೇ ಪೀಠ ಮುಂಬರುವ ಫೆಬ್ರವರಿ 14 ಕ್ಕೆ ಅಸ್ತಿತ್ವಕ್ಕೆ ಬರಲಿದೆ. ರಾಜ್ಯದ ಪಂಚಮಸಾಲಿ ಸಮುದಾಯದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ ಜಮಖಂಡಿ (ಆಲಗೂರ) ಪೀಠಾಧಿಪತಿಯಾಗಿ ಷ. ಭ್ರ. ಡಾ ಮಹಾದೇಶ ಶಿವಾಚಾರ್ಯ ಸ್ವಾಮೀಜಿ ಗದ್ದುಗೆ ಏರಲಿದ್ದಾರೆ. ಮೂಲತಃ ವಿಜಯಪುರ ಜಿಲ್ಲೆಯವರಾದ ಡಾ. ಮಹಾದೇಶ ಶಿವಾಚಾರ್ಯ ಸ್ವಾಮೀಜಿ ಸದ್ಯ ವಿಜಯಪುರ ಜಿಲ್ಲೆಯ ಬಬಲೇಶ್ವರ ಪಟ್ಟಣದ ಗುರುಪಾದೇಶ್ವರ ಭ್ರಹನ್ಮಠದ ಪೀಠಾಧಿಪತಿಯಾಗಿದ್ದಾರೆ. ಈ ಮಠದ ಉಸ್ತುವಾರಿ ಜೊತೆಗೆ ಡಾ. ಮಹಾದೇಶ ಶಿವಾಚಾರ್ಯ ಸ್ವಾಮೀಜಿ ಪಂಚಮಸಾಲಿ ಮೂರನೇ ಪೀಠದ ಪೀಠಾಧಿಪತಿಗಳಾಗಿದ್ದಾರೆ.

ಡಾ ಮಹಾದೇಶ ಶಿವಾಚಾರ್ಯ ಸ್ವಾಮೀಜಿ ಹಿನ್ನಲೆ ವಿಜಯಪುರ ಜಿಲ್ಲೆಯ ಬಬಲೇಶ್ವರ ಮೂಲದ ಮುತ್ತುರಾಜ್ ಸಂಕಣ್ಣನವರ ಹಾಗೂ ನೀಲಾಂಬಿಕಾ ದಂಪತಿಯ ಎರಡನೇ ಮಗುವಾಗಿ 1948 ರ ಜುಲೈ 11 ರಂದು ಜನಿಸಿದ್ದಾರೆ. ಸ್ವಾಮೀಜಿಗಳ ಪೂರ್ವಾಶ್ರಮದಲ್ಲಿ ಓರ್ವ ಹಿರಿಯ ಸಹೋದರಿ, ಓರ್ವ ತಮ್ಮ ಹಾಗೂ ಮೂವರು ಕಿರಿಯ ಸಹೋದರಿಯರಿದ್ದಾರೆ. ಇವರ ತಂದೆ ಮುತ್ತುರಾಜ್ ಆಗಿನ ಕಾಲದಲ್ಲಿ ಲೊಕೋಪಯೋಗಿ ಇಲಾಖೆಯಲ್ಲಿ ಕಿರಿಯ ಇಂಜಿನೀಯರ್ ಆಗಿದ್ದರು. ತಾಯಿ ಗೃಹಿಣಿಯಾಗಿದ್ದರು. ಇವರು 1 ರಿಂದ 8 ನೇ ತರಗತಿಯವರೆಗೆ ಬಾಗಲಕೋಟೆ ಜಿಲ್ಲೆ ಬಾದಮಿನ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ಬಳಿಕ 9 ರಿಂದ 10 ತರಗತಿಯನ್ನು ವಿಜಯಪುರ ನಗರದ ಶ್ರೀ ಸಿದ್ದೇಶ್ವರ ಹೈಸ್ಕೂಲ್ನಲ್ಲಿ ಪೂರೈಸಿದರು. ಬಳಿಕ ಬಿಎಲ್ಡಿಇ ಸಂಸ್ಥೆಯ ಕೆಸಿಪಿ ಸೈನ್ಸ್ ಕಾಲೇಜಿನಲ್ಲಿ ಪ್ರಥಮ ಪಿಯುಸಿಯಿಂದ ಹಿಡಿದು ಬಿಎಸ್ಸಿ ಪದವಿಯವರೆಗೂ ವಿದ್ಯಾಭ್ಯಾಸ ಮಾಡಿದ್ದಾರೆ.

ಬಬಲೇಶ್ವರ ಪಟ್ಟಣದ ಗುರುಪಾದೇಶ್ವರ ಭ್ರಹನ್ಮಠದ ಉತ್ತರಾಧಿಕಾರಿಯಾಗಿ ಮಹಾದೇವ ಶಿವಾಚಾರ್ಯ ಸ್ವಾಮೀಜಿ ಪದವಿ ಪಡೆದ ಬಳಿಕ ಸ್ವಾಮೀಜಿ ಅವರ ಪೂರ್ವಾಶ್ರಮದ ಎಲ್ಲಾ ಸಂಬಂಧಗಳನ್ನು ತೊರೆದು 1974 ರ ಜುಲೈ 11 ರಂದು ಬಬಲೇಶ್ವರ ಪಟ್ಟಣದ ಗುರುಪಾದೇಶ್ವರ ಭ್ರಹನ್ಮಠದ ಉತ್ತರಾಧಿಕಾರಿಯಾಗಿ ಪಟ್ಟವನ್ನು ಏರಿದರು. ಅಂದಿನ ಮಠದ ಪೀಠಾಧಿಪತಿಯಾಗಿದ್ದ ಶ್ರೀ ಚತುರ್ಥ ಶಾಂತವೀರ ಶಿವಾಚಾರ್ಯ ಸ್ವಾಮೀಜಿಗಳ ಉತ್ತರಾಧಿಕಾರಿಯಾದರು. 1979 ರಿಂದ 1979 ರವರೆಗೆ ಅಂದಿನ ಮಠದ ಪೀಠಾಧಿಪತಿಯಾಗಿದ್ದ ಶ್ರೀ ಚತುರ್ಥ ಶಾಂತವೀರ ಶಿವಾಚಾರ್ಯ ಸ್ವಾಮೀಜಿಯವರ ಸೇವೆ ಮಾಡಿದರು. ಅವರು 1979 ರಲ್ಲಿ ಲಿಂಗೈಕ್ಯರಾದ ಬಳಿಕ ಹೆಚ್ಚಿನ ವೈದಿಕಾಭ್ಯಾಸ ಮಾಡಲು ಕಾಶಿಗೆ ತೆರಳಿದರು. 1980 ರಿಂದ ಮುರು ವರ್ಷಗಳ ಕಾಲ ಕಾಶಿ ವಿದ್ಯಾಪೀಠದಲ್ಲಿ ಸಂಸ್ಕೃತ ಭಾಷೆಯಲ್ಲಿ ಬಿಎ ಪದವಿ ಪಡೆದರು. ನಂತರ ಕಾಶಿಯ ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಅಂದರೆ ಈಗಿನ ಮಹಾತ್ಮಾ ಗಾಂಧಿ ಕಾಶಿ ವಿದ್ಯಾಪೀಠದಲ್ಲಿ ವೇದಾಂತಾಚಾರ್ಯ (ಎಂಎ ಪದವಿ) ಪಡೆದರು. ಬಳಿಕ ಕಾಶಿ ಹಿಂದೂ ವಿಶ್ವವಿದ್ಯಾಲಯದಲ್ಲಿ ಶಕ್ತಿ ವಿಶಿಷ್ಟಾದ್ವೈತ ಸಿದ್ದಾಂತ ವಿಷಯದಲ್ಲಿ ಪಿಎಚ್ಡಿ ಪದವಿ ಪಡೆದರು.

ಇದನ್ನೂ ಓದಿ: ಪಂಚಮಸಾಲಿ 3ನೇ ಪೀಠಕ್ಕೆ 60 ಸ್ವಾಮೀಜಿಗಳ ಬೆಂಬಲವಿದೆ: ಸುರೇಶ್ ಬಿರಾದಾರ್

ಶೀಘ್ರದಲ್ಲೇ ಪಂಚಮಸಾಲಿ ಸಮುದಾಯದ ಮೂರನೇ ಪೀಠ ಸ್ಥಾಪನೆ; ಪೀಠಾಧಿಪತಿಯಾಗಿ ಗದ್ದುಗೆ ಏರಲಿರುವ ಡಾ.ಮಹಾದೇಶ ಶಿವಾಚಾರ್ಯ ಸ್ವಾಮೀಜಿ

Follow us on

Related Stories

Most Read Stories

Click on your DTH Provider to Add TV9 Kannada