ಮುಖ್ಯಮಂತ್ರಿ ಬದಲಾವಣೆ ಕೇವಲ ಊಹಾಪೋಹ, ಅದು ಕಾಂಗ್ರೆಸ್ ಸೃಷ್ಟಿ ಮಾಡಿದ ಭ್ರಮೆ -ಉಸ್ತುವಾರಿ ಅರುಣ್ ಸಿಂಗ್
ಸಿಎಂ ಬಸವರಾಜ ಬೊಮ್ಮಾಯಿ ಅವರ ಆಡಳಿತ ಸಂತೃಪ್ತಿ ತಂದಿದೆ. ತುಂಬಾ ಸರಳ ಸಜ್ಜನ ವ್ಯಕ್ತಿ ಅವರು. ರೈತರಿಗೆ, ಅವರ ಮಕ್ಕಳಿಗೆ ನೇರವಾಗಿ ಅವರ ಖಾತೆಗೆ ಹಣ ವರ್ಗಾವಣೆ, ಬಡವರಿಗೆ ಮನೆ ನಿರ್ಮಾಣ, ಪ್ರವಾಹ ಪರಿಸ್ಥಿತಿಯಲ್ಲಿ ಖುದ್ದಾಗಿ ನಿರ್ವಹಣೆ ಮಾಡಿದ ಕಾರ್ಯ ಪ್ರಶಂಸನಾರ್ಹ. -ಉಸ್ತುವಾರಿ ಅರುಣ್ ಸಿಂಗ್
ಹುಬ್ಬಳ್ಳಿ: ಮುಖ್ಯಮಂತ್ರಿ ಬದಲಾವಣೆ ವಿಚಾರ ಕೇವಲ ಊಹಾಪೋಹ. ಅದು ಕಾಂಗ್ರೆಸ್ ಸೃಷ್ಟಿ ಮಾಡಿದ ಭ್ರಮೆ ಅಷ್ಟೇ ಎಂದು ಹುಬ್ಬಳ್ಳಿಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಟಿವಿ9ಗೆ ಹೇಳಿಕೆ ನೀಡಿದ್ದಾರೆ. ಜೊತೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಗರಂ ಆಗಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಅವರ ಆಡಳಿತ ಸಂತೃಪ್ತಿ ತಂದಿದೆ. ತುಂಬಾ ಸರಳ ಸಜ್ಜನ ವ್ಯಕ್ತಿ ಅವರು. ರೈತರಿಗೆ, ಅವರ ಮಕ್ಕಳಿಗೆ ನೇರವಾಗಿ ಅವರ ಖಾತೆಗೆ ಹಣ ವರ್ಗಾವಣೆ, ಬಡವರಿಗೆ ಮನೆ ನಿರ್ಮಾಣ, ಪ್ರವಾಹ ಪರಿಸ್ಥಿತಿಯಲ್ಲಿ ಖುದ್ದಾಗಿ ನಿರ್ವಹಣೆ ಮಾಡಿದ ಕಾರ್ಯ ಪ್ರಶಂಸನಾರ್ಹ. ಹಿಂದಿನ ಸಿದ್ದರಾಮಯ್ಯ ಸರಕಾರ ಭ್ರಷ್ಟಾಚಾರ ದಿಂದ ಮುಳುಗಿತ್ತು. ನಮ್ಮ ನಿಷ್ಕಳಂಕ ಸರಕಾರದ ಮೇಲೆ 40%ಸರ್ಕಾರ ಅಂತ ಆಧಾರರಹಿತ ಆರೋಪ ಮಾಡಿದ್ದಾರೆ. ಸಿದ್ದರಾಮಯ್ಯ ಅಪ್ಪಟ ಹಿಂದೂ ವಿರೋಧಿ. ಕುತಂತ್ರ ಮಾಡೋದು, ಸಿಡಿ ತಯಾರು ಮಾಡೋದು ಕಾಂಗ್ರೆಸ್ ಕೆಲ್ಸ. ಮುಂದಿನ ಚುನಾವಣೆ ಬೊಮ್ಮಾಯಿ ನೇತೃತ್ವದಲ್ಲೇ ನಡೆಯಲಿದೆ. ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಬಿಜೆಪಿಗಿಂತ ಕಾಂಗ್ರೆಸ್ ಹೆಚ್ಚಿಗೆ ತಲೆ ಕೆಡಿಸಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಡಳಿತ ಬಗ್ಗೆ ಅರುಣ್ ಸಿಂಗ್ ಹಾಡಿ ಹೋಗಳಿದ್ದಾರೆ. ಜೊತೆಗೆ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಮೈತ್ರಿಯನ್ನು ತಳ್ಳಿ ಹಾಕಿದ್ದಾರೆ.
ಸಿಎಂ ಬದಲಾವಣೆ ಎಂಬ ಶಬ್ದಕ್ಕೆ ಅರ್ಥವೆ ಇಲ್ಲ ಹಾವೇರಿ ನಗರದ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಿದ ನಂತರ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಿಎಂ ಬದಲಾವಣೆ ಬಗ್ಗೆ ಮಾತನಾಡಿದ್ದಾರೆ.
ಸಿಎಂ ಬದಲಾವಣೆ ಎಂಬ ಶಬ್ದಕ್ಕೆ ಅರ್ಥವೆ ಇಲ್ಲ. ಯಾರೂ ಸಿಎಂ ಬದಲಾವಣೆ ಬಗ್ಗೆ ಮಾತನಾಡಿಲ್ಲ. ಬಸವರಾಜ ಬೊಮ್ಮಾಯಿಯವರ ಮುಖ್ಯಮಂತ್ರಿತನ ನಮ್ಮ ಸರಕಾರದ ಮತ್ತು ನಮ್ಮೆಲ್ಲರ ಗೌರವವನ್ನ ಹೆಚ್ಚಿಸಿದೆ. ಅತ್ಯಂತ ಪಾರದರ್ಶಕತೆಯಿಂದ ಪ್ರತಿಯೊಬ್ಬ ಮಂತ್ರಿಗೂ ಮಾರ್ಗಸೂಚಿ ಹಾಕಿಕೊಟ್ಟು ಚೆನ್ನಾಗಿ ಕೆಲಸ ಮಾಡಿ ಅಂತಾ ಹೇಳಿದ್ದಾರೆ. ಏನಾದ್ರೂ ಲೋಪದೋಷಗಳಾದ್ರೆ ಸರಿಪಡಿಸಿಕೊಳ್ಳಿ ಅಂತಾರೆ. ಪಾರದರ್ಶಕ, ಪ್ರಾಮಾಣಿಕ ಮತ್ತು ಜನಪರ ಕೆಲಸಗಳನ್ನ ಮಾಡಲು ಚಿಂತನೆ ಮಾಡ್ತಿದ್ದಾರೆ. ಗೌರವಾನ್ವಿತ ಮುಖ್ಯಮಂತ್ರಿಗಳು ಮುಂದುವರಿತಾರೆ. ಅವರ ನೇತೃತ್ವದಲ್ಲೇ ಚುನಾವಣೆ ಎದುರಿಸ್ತೀವಿ ಎಂಬ ವಿಶ್ವಾಸವಿದೆ. ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಖಡಕ್ ಆಗಿ ತಿಳಿಸಿದ್ದಾರೆ.
ಇದನ್ನೂ ಓದಿ: Shiva Rajkumar: ಶಿವಣ್ಣ ಹೃದಯವಂತಿಕೆಗಿಲ್ಲ ಸರಿಸಾಟಿ; ಮಕ್ಕಳೊಂದಿಗೆ ಖೋ ಖೋ ಆಡುತ್ತಿರುವ ಅಪರೂಪದ ವಿಡಿಯೋ ಇಲ್ಲಿದೆ