Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಚೋದನಕಾರಿ ವಾಟ್ಸಾಪ್ ಸ್ಟೇಟಸ್‌ನಿಂದ ಗಲಾಟೆ ಪ್ರಕರಣ; ಗಲಭೆ ಹಿಂದೆ AIMIM ಮುಖಂಡನ ಕೈವಾಡವಿರುವ ಶಂಕೆ

AIMIM ಮುಖಂಡನಿಂದ ಗಲಭೆಗೆ ಕುಮ್ಮಕ್ಕು ಸಿಕ್ತಾ‌ ಎನ್ನುವ ಪ್ರಶ್ನೆ ಉಂಟಾಗಿದೆ. ಉಂಡು ಮಲಗಿದ್ದ ಯುವಕರನ್ನ ಬಡಿದೆಬ್ಬಿಸಿ ಗಲಭೆಗೆ ಪ್ರಚೋದನೆ ನೀಡಿದ್ನಾ ಎನ್ನುವ ಮಾತು ಕೂಡ ಕೇಳಿಬರುತ್ತಿದೆ.

ಪ್ರಚೋದನಕಾರಿ ವಾಟ್ಸಾಪ್ ಸ್ಟೇಟಸ್‌ನಿಂದ ಗಲಾಟೆ ಪ್ರಕರಣ; ಗಲಭೆ ಹಿಂದೆ AIMIM ಮುಖಂಡನ ಕೈವಾಡವಿರುವ ಶಂಕೆ
ಗಲಭೆ ಹಿಂದೆ ಎಐಎಂಐಎಂ ಮುಖಂಡನ ಕೈವಾಡವಿರುವ ಶಂಕೆ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Apr 18, 2022 | 6:06 PM

ಹುಬ್ಬಳ್ಳಿ: ಪ್ರಚೋದನಕಾರಿ ವಾಟ್ಸಾಪ್ ಸ್ಟೇಟಸ್‌ನಿಂದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಗಲಭೆ ಹಿಂದೆ ಎಐಎಂಐಎಂ (AIMIM) ಮುಖಂಡನ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಹಳೇ ಹುಬ್ಬಳ್ಳಿ ಠಾಣೆಗೆ ಶನಿವಾರ ರಾತ್ರಿ ತಮ್ಮ ವಾರ್ಡ್​​ನ 200-250 ಜನರ ಗುಂಪು ಕಟ್ಟಿಕೊಂಡು ಇರ್ಫಾನ್ ಬಂದಿದ್ದ. ವಾಟ್ಸಾಪ್, ಫೋನ್​ಕಾಲ್ ಮೂಲಕ ಜನರನ್ನು ಜಮಾಯಿಸಿದ್ದ ಎಂದು ಪೊಲೀಸರ ವಿಚಾರಣೆ ವೇಳೆ ಕಿಡಿಗೇಡಿಗಳು ಮಾಹಿತಿ ಬಿಚ್ಚಿಟ್ಟಿದ್ದಾರೆ. ಎಐಎಂಐಎಂ ಮುಖಂಡನಿಂದ ಗಲಭೆಗೆ ಕುಮ್ಮಕ್ಕು ಸಿಕ್ತಾ‌ ಎನ್ನುವ ಪ್ರಶ್ನೆ ಉಂಟಾಗಿದೆ. ಉಂಡು ಮಲಗಿದ್ದ ಯುವಕರನ್ನ ಬಡಿದೆಬ್ಬಿಸಿ ಗಲಭೆಗೆ ಪ್ರಚೋದನೆ ನೀಡಿದ್ನಾ ಎನ್ನುವ ಮಾತು ಕೂಡ ಕೇಳಿಬರುತ್ತಿದೆ. ಸದ್ಯ ಇರ್ಫಾನ್ ಸಿಡಿಆರ್ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.

ಗಲಭೆಗೆ ಕಾರಣವಾದ್ನಾ ಅದೊಬ್ಬ ವ್ಯಕ್ತಿ. ಟಿರ್ವಿ ಬಿಚ್ಚಿಡ್ತಿದೆ ಹಳೇ ಹುಬ್ಬಳ್ಳಿ ಗಲಭೆ ಹಿಂದಿನ ನಗ್ನ ಸತ್ಯ. ಶಾಂತಿ ಮಂತ್ರ ಜಪಿಸಬೆಕೇಕಾದ ಅದೊಬ್ಬ ಸೋಕಾಲ್ಡ್ ಧರ್ಮಗುರುವಿನಿಂದ ಗಲಭೆಗೆ ಪ್ರಚೋದನೆ ನೀಡಲಾಗಿದೇಯೆ? ಟಿವಿ 9 ಬಳಿ ಇದೆ ಗಲಭೆಯ ಹಿಂದಿನ ಪ್ರಚೋದನೆ ವಿಡಯೋ. ಕಮೀಷನರ್ ಇನ್ನೋವಾ ಕಾರ್ ಮೇಲೆ ಹತ್ತಿ ಪ್ರಚೋದನ ನೀಡಲಾಗಿದೆ ಎನ್ನಲಾಗುತ್ತಿದೆ. ಠಾಣೆ ಎನ್ನೋದನ್ನ ನೋಡದೇ ಕಾರ ಮೇಲೆ ಹತ್ತಿ ಕಿಚ್ಚು ಕಿಡಗೇಡಿಗಳು ಹಚ್ಚು ಹಚ್ಚಿದ್ದಾರೆ. ಸದ್ಯ ಆ ವ್ಯಕ್ತಿಗಾಗಿ ಖಾಕಿ ಬಲೆ ಹಾಕಿದ್ದು, ಆದ್ರೆ ನಿನ್ನೆ ಹುಬ್ಬಳ್ಳಿಯಿಂದ ನಾಪತ್ತೆಯಾಗಿದ್ದಾನೆ. ಹುಬ್ಬಳ್ಳಿಯ ದರ್ಗಾವೊಂದರ ಮೌಲ್ವಿ ಎಂದು ಹೇಳಲಾಗುತ್ತಿರೊ ವ್ಯಕ್ತಿ. ಟಿವಿ 9 ಬಳಿ ಮೌಲ್ವಿಯ ಆಟಾಟೋಪದ ವಿಡಿಯೋ ಲಭ್ಯವಾಗಿದೆ.

ಏಪ್ರಿಲ್ 17ರ ಭಾನುವಾರ ರಾತ್ರಿ ಹುಬ್ಬಳ್ಳಿ ನಗರದಲ್ಲಿ ದೊಡ್ಡ ಗಲಭೆಯೇ ನಡೆದು ಹೋಗಿದ್ದು, ಇಡೀ ರಾಜ್ಯದಲ್ಲೇ ಸಂಚಲನ ಸೃಷ್ಟಿಸಿದೆ. ಧರ್ಮ ಯುದ್ಧದ ಮಧ್ಯೆ ಹುಬ್ಬಳ್ಳಿ ಗಲಾಟೆಯಾಗಿರೋದು ರಾಜ್ಯವನ್ನ ಮತ್ತಷ್ಟು ಅಪಾಯಕಾರಿ ಪರಿಸ್ಥಿತಿಯತ್ತ ತಳ್ಳಿದೆ. ಪ್ರಚೋದನಕಾರಿ ವಾಟ್ಸಾಪ್ ಸ್ಟೇಟಸ್‌ನಿಂದ ಗಲಾಟೆಯಾಗಿದ್ದು ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ 100ಕ್ಕೂ ಹೆಚ್ಚು ಜನರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. 88 ಆರೋಪಿಗಳನ್ನು ಬಂಧಿಸಿದ್ದಾರೆ. ಗಲಾಟೆ ಪ್ರಕರಣ ಸಂಬಂಧ ಈವರೆಗೆ 10 ಪ್ರಕರಣ ದಾಖಲಾಗಿವೆ. ಏಪ್ರಿಲ್ 18ರ ಬೆಳಗ್ಗೆ 10.30ಕ್ಕೆ ಪೊಲೀಸರು ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ. ಪರಾರಿಯಾಗಿರುವ ಮತ್ತಷ್ಟು ಆರೋಪಿಗಳಿಗಾಗಿ 2 ಪೊಲೀಸ್ ತಂಡಗಳಿಂದ ಶೋಧಕಾರ್ಯ ನಡೆಯುತ್ತಿದೆ.

ರಾತ್ರೋ ರಾತ್ರಿ ಹೊತ್ತಿ ಉರಿದ ಹುಬ್ಬಳ್ಳಿ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಒಂದೇ ಒಂದು ಪೋಸ್ಟ್ಗೆ ಗಲಭೆಯಾಗಿದೆ. ನಿನ್ನೆ(ಏಪ್ರಿಲ್ 17) ಸಂಜೆ 7 ಗಂಟೆ ಸುಮಾರಿಗೆ ಯುವಕನೊಬ್ಬ ತನ್ನ ವಾಟ್ಸಾಪ್ ಸ್ಟೇಟಸ್ನಲ್ಲಿ ಮಸೀದಿ ಮೇಲೆ ಕೇಸರಿ ಧ್ವಜ ಹಾರಿಸಿದ ಮಾದರಿಯ ಪೋಸ್ಟ್ ಒಂದನ್ನ ಹಾಕ್ಕೊಂಡಿದ್ದ. ಕೆಲವೇ ಕ್ಷಣಗಳಲ್ಲಿ ಸ್ಟೇಟಸ್ ಕಾಡ್ಗಿಚ್ಚಿನಂತೆ ವೈರಲ್ ಆಗಿದೆ. ಮುಸ್ಲಿಂ ಸಮುದಾಯದ ಗ್ರೂಪ್ಗಳಲ್ಲಿ ಪೋಸ್ಟ್ ಶೇರ್ ಆಗಿದೆ. ಕೆಲವೇ ಕ್ಷಣಗಳಲ್ಲಿ ಕೆರಳಿದ ಉದ್ರಿಕ್ತರು ಮನಬಂದಂಗೆ ಕಲ್ಲೆಸೆದು ಹುಬ್ಬಳ್ಳಿಯಲ್ಲಿ ದೊಡ್ಡ ರಾದ್ಧಾಂತವನ್ನೇ ಸೃಷ್ಟಿಸಿದ್ರು. ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಹಳೇ ಹುಬ್ಬಳ್ಳಿ ಠಾಣೆ ಬಳಿ ಜಮಾಯಿಸಿ ಕಲ್ಲು ತೂರಾಟ ಆರಂಭಿಸಿದ್ರು. ಬಸ್ಗಳ ಮೇಲೂ ಕಲ್ಲು ತೂರಾಡಿದ್ರು. ಬಸ್ಗಳ ಗಾಜು ಪುಡಿ ಪುಡಿಯಾದ್ವು. ಅಷ್ಟೇ ಅಲ್ಲ, ಪೊಲೀಸರ ವಾಹನದ ಮೇಲೂ ಕಲ್ಲೆಸೆದ್ರು. ಉದ್ರಿಕ್ತರ ಪುಂಡಾಟಕ್ಕೆ ಪೊಲೀಸ್ ಜೀಪ್ಗಳು ಜಖಂ ಆಗಿವೆ.

ದುಷ್ಕರ್ಮಿಗಳ ಗುಂಪು ಆಸ್ಪತ್ರೆಯನ್ನ ಕೂಡ ಬಿಟ್ಟಿಲ್ಲ. ಹಳೇ ಹುಬ್ಬಳ್ಳಿಯ ಸಂಜೀವಿನಿ ಆಸ್ಪತ್ರೆ ಮೇಲೂ ಕಲ್ಲು ತೂರಿದ್ರು. ಏಕಾಏಕಿ ಆಸ್ಪತ್ರೆ ಬಳಿ ಜಮಾಯಿಸಿ ದಾಳಿ ನಡೆಸಿದ ಕಿಡಿಗೇಡಿಗಳು ಆಸ್ಪತ್ರೆ ಮುಂಭಾಗದ ಕಿಟಕಿ ಗಾಜು ಪುಡಿ ಪುಡಿ ಮಾಡಿದ್ರು. ಹುಬ್ಬಳ್ಳಿ ನಗರದ ಆಂಜನೇಯ ದೇಗುಲದ ಮೇಲೂ ಕಲ್ಲು ತೂರಿದ್ದು ಈ ಪರಿಣಾಮ ದೇವಸ್ಥಾನದ ಕಿಟಕಿ ಗಾಜು ಪುಡಿ ಪುಡಿಯಾಗಿದೆ.

ಇದನ್ನೂ ಓದಿ:

ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ; ಚುರುಕುಗೊಂಡ ತನಿಖೆ, ಗೌಪ್ಯವಾಗಿ ರಮೇಶ್ ಜಾರಕಿಹೊಳಿ ಭೇಟಿಯಾದ ತುಂಡು ಗುತ್ತಿಗೆದಾರರು

Published On - 3:23 pm, Mon, 18 April 22