ಯುಪಿಎಸ್​ಸಿಯಲ್ಲಿ 440ನೇ ರ್‍ಯಾಂಕ್ ಪಡೆದ ಕಿರಾಣಿ ವರ್ತಕರ ಮಗಳು

ಕಿರಾಣಿ ವರ್ತಕರ ಮಗಳಾದ ಕೃಪಾ ಜೈನ್, ಓದಿರುವುದು ಇಂಜಿನಿಯರಿಂಗ್ ಆಗಿದ್ದರೂ ಸಿವಿಲ್ ಸರ್ವೀಸ್ ಮಾಡಬೇಕು ಎಂಬುವ ಮಹದಾಸೆಯಲ್ಲಿಯೇ ಸತತ ಪರಿಶ್ರಮದಿಂದ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಓದುವುದನ್ನೇ ಫ್ಯಾಷನ್ ಆಗಿಸಿಕೊಂಡ ಯುವತಿ ಈಗ ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ 440ನೇ ರ್‍ಯಾಂಕ್ ಪಡೆದಿದ್ದಾರೆ.

ಯುಪಿಎಸ್​ಸಿಯಲ್ಲಿ 440ನೇ ರ್‍ಯಾಂಕ್ ಪಡೆದ ಕಿರಾಣಿ ವರ್ತಕರ ಮಗಳು
ಯುಪಿಎಸ್​ಸಿಯಲ್ಲಿ 440ನೇ ರ್‍ಯಾಂಕ್ ಪಡೆದ ಕೃಪಾ ಎ ಜೈನ್‌
Follow us
ಶಿವಕುಮಾರ್ ಪತ್ತಾರ್. ಹುಬ್ಬಳ್ಳಿ
| Updated By: ಕಿರಣ್ ಹನುಮಂತ್​ ಮಾದಾರ್

Updated on:Apr 16, 2024 | 8:12 PM

ಹುಬ್ಬಳ್ಳಿ, ಏ.16: ಯುಪಿಎಸ್​ಸಿ(UPSC) ಪರೀಕ್ಷೆಯ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಯಾವುದೇ ಕೋಚಿಂಗ್ ಸಹಾಯವಿಲ್ಲದೇ. ಸ್ವಂತ ಪರಿಶ್ರಮದಿಂದಲೇ ಓದಿ ಹುಬ್ಬಳ್ಳಿಯ(Hubballi) ಯುವತಿಯೊಬ್ಬರು ಬಹುದೊಡ್ಡ ಸಾಧನೆಯನ್ನು ಮಾಡಿದ್ದಾರೆ. ಹೌದು, ಹುಬ್ಬಳ್ಳಿಯ ಅಭಯ ಜೈನ್ ಹಾಗೂ ಇಂದಿರಾ ಜೈನ್ ಅವರ ಪುತ್ರಿ ಕೃಪಾ ಎ ಜೈನ್‌ ಎಂಬುವವರು ಯುಪಿಎಸ್​ಸಿ ಪರೀಕ್ಷೆಯಲ್ಲಿ ಬರೊಬ್ಬರಿ 440 ನೇ ರ್‍ಯಾಂಕ್ ಪಡೆದಿದ್ದಾರೆ.

ಕಿರಾಣಿ ವರ್ತಕರ ಮಗಳಾದ ಕೃಪಾ ಜೈನ್

ಕಿರಾಣಿ ವರ್ತಕರ ಮಗಳಾದ ಕೃಪಾ ಜೈನ್, ಓದಿರುವುದು ಇಂಜಿನಿಯರಿಂಗ್ ಆಗಿದ್ದರೂ ಸಿವಿಲ್ ಸರ್ವೀಸ್ ಮಾಡಬೇಕು ಎಂಬುವ ಮಹದಾಸೆಯಲ್ಲಿಯೇ ಸತತ ಪರಿಶ್ರಮದಿಂದ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಓದುವುದನ್ನೇ ಫ್ಯಾಷನ್ ಆಗಿಸಿಕೊಂಡ ಯುವತಿ ಈಗ ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ 440ನೇ ರ್‍ಯಾಂಕ್ ಪಡೆಯುವ ಮೂಲಕ ಹುಬ್ಬಳ್ಳಿಯ ಕೀರ್ತಿಯನ್ನು ರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಿದ್ದಾರೆ.

ಇದನ್ನೂ ಓದಿ:ಯುಪಿಎಸ್‌ಸಿ ಫಲಿತಾಂಶ ಪ್ರಕಟ, ಆದಿತ್ಯ ಶ್ರೀವಾಸ್ತವ ದೇಶಕ್ಕೆ ಟಾಪರ್

ಸ್ವಂತ ಪರಿಶ್ರಮ, ನಿರಂತರ ಪ್ರಯತ್ನದ ಮೂಲಕ ಮಹತ್ವದ ಸಾಧನೆ

ಇನ್ನು ಇವರು ಬೆಂಗಳೂರಿನ ಆರ್.ವಿ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಓದಿ, ಬಳಿಕ ಬೆಂಗಳೂರಿನ ಸಿಸ್ಕೋ ಕಂಪನಿಯಲ್ಲಿ ಕೆಲಸ ನಿರ್ವಹಿಸಿದ್ದಾರೆ. 2020ರಲ್ಲಿ ಯು.ಪಿ.ಎಸ್.ಸಿ ಮಾಡಲೇಬೇಕು ಎಂದು ಛಲತೊಟ್ಟು ದೆಹಲಿಗೆ ತೆರಳಿ, ಯಾವುದೇ ಕೋಚಿಂಗ್ ಇಲ್ಲದೆಯೇ ಸ್ವಂತ ಪರಿಶ್ರಮ ಮತ್ತು ನಿರಂತರ ಪ್ರಯತ್ನದ ಮೂಲಕ ಈಗ ಮಹತ್ವದ ಸಾಧನೆ ಮಾಡಿದ್ದಾರೆ. ಕಳೆದ ವರ್ಷ ಯುಪಿಎಸ್​ಸಿಯಲ್ಲಿ ರೈಲ್ವೆ ಜಾಬ್ ಆಗಿದ್ದರೂ ಕೂಡ ಮರಳಿ ಯತ್ನ ಮಾಡಿ ಈಗ 440ನೇ ರ್ಯಾಂಕ್ ಪಡೆದಿದ್ದಾರೆ‌. ಯುವತಿಯ ಸಾಧನೆಗೆ ಹೆತ್ತವರು ಹಾಗೂ ಕುಟುಂಬಸ್ಥರು ಖುಷಿಯನ್ನು ಹಂಚಿಕೊಂಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:07 pm, Tue, 16 April 24