ಧಾರವಾಡದಲ್ಲಿ ಸಿಕ್ಕ 18 ಕೋಟಿ ಹಣದ ಮೂಲ ಪತ್ತೆ: ಪ್ರಕರಣ ಆದಾಯ ತೆರಿಗೆ ಇಲಾಖೆಗೆ ವರ್ಗಾವಣೆ!
ಮದ್ಯ ಸಂಗ್ರಹ ಮಾಡಲಾಗಿದೆ ಎನ್ನುವ ಮಾಹಿತಿ ಮೇರೆಗೆ ನಡೆಸಿದ ದಾಳಿಯಲ್ಲಿ ಬರೋಬ್ಬರಿ 18 ಕೋಟಿ ರೂಪಾಯಿ ಹಣ ಪತ್ತೆಯಾಗಿದ್ದು, ವಿಷಯ ತಿಳಿಯುತ್ತಿದ್ದಂತೆಯೇ ಐಟಿ ಅಧಿಕಾರಿಗಳು ಸಹ ಪರಿಶೀಲನೆ ನೀಡಿದ್ದಾರೆ. ಇದೀಗ ಈ ಪ್ರಕರಣವನ್ನು ಆದಾಯ ತೆರಿಗೆ ಇಲಾಖೆಗೆ ಶಿಫ್ಟ್ ಮಾಡಲಾಗಿದ್ದು, ಹಣಕ್ಕೆ ದಾಖಲೆಯನ್ನು ನೀಡಲಾಗಿದೆ. ಹಾಗಾದ್ರೆ, ಹಣ ಯಾರದ್ದು? ಎಲ್ಲಿಂದ ಬಂತು ಎನ್ನುವ ವಿವರ ಇಲ್ಲಿದೆ.
ಧಾರವಾಡ, (ಏಪ್ರಿಲ್ 16): ಧಾರವಾಡದ(Dharwad) ಆರ್ನಾ ರೆಸಿಡೆನ್ಸಿಯಲ್ಲಿರುವ ಬಸವರಾಜ್ ದತ್ತನವರ್ ಎನ್ನುವರ ನಿವಾಸದಲ್ಲಿ 18 ಕೋಟಿ ರೂಪಾಯಿ ಹಣ ಪತ್ತೆ ಪ್ರಕರಣವನ್ನು ಆದಾಯ ತೆರಿಗೆ ಇಲಾಖೆಗೆ ವರ್ಗಾವಣೆಯಾಗಿದೆ. 10 ಲಕ್ಷ ರೂಪಾಯಿಗೂ ಹೆಚ್ಚು ಹಣ ಪತ್ತೆಯಾಗಿದ್ದರಿಂದ ಪ್ರಕರಣವನ್ನು ಚುನಾವಣಾಧಿರಿಗಳು, ಆದಾಯ ತೆರಿಗೆ ಇಲಾಕೆಗೆ ವರ್ಗಾಯಿಸಿದ್ದಾರೆ. ಇನ್ನು ಹಣದ ಬಗ್ಗೆ ಬಸವರಾಜ ಎನ್ನುವರನ್ನು ತೀವ್ರ ವಿಚಾರಣೆಗೊಳಪಡಿಸಿದ್ದು, ತಾವು ಯುಬಿ ಶೆಟ್ಟಿ ಅಕೌಂಟೆಂಟ್ ಎಂದು ಬಾಯ್ಬಿಟ್ಟಿದ್ದಾರೆ. ಅಲ್ಲದೇ ಬೆಂಗಳೂರು ಮೂಲದ ರಾಮಲಿಂಗಂ ಕನ್ಸ್ಟ್ರಕ್ಷನ್ ಕಂಪನಿ ದಾಖಲೆಯನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಧಾರವಾಡದಲ್ಲಿ ಐಟಿ ಭರ್ಜರಿ ಬೇಟೆ, ಒಂದೇ ಫ್ಲ್ಯಾಟ್ನಲ್ಲಿ ಬರೋಬ್ಬರಿ 18 ಕೋಟಿ ರೂ.ಹಣ ಜಪ್ತಿ
ಮದ್ಯ ಸಂಗ್ರಹ ಮಾಡಲಾಗಿದೆ ಎಂಬ ಮಾಹಿತಿ ಮೇರೆಗೆ ಧಾರವಾಡದ ದಾಸನಕೊಪ್ಪ ಕ್ರಾಸ್ ಬಳಿಯ ಅರ್ನಾ ರೆಸಿಡೆನ್ಸಿಯ ಮೂರನೇ ಮಹಡಿಯಲ್ಲಿರುವ ಬಸವರಾಜ್ ದತ್ತನವರ್ ಎನ್ನುವರ ಪ್ಲಾಟ್ ನಂ 303ರ ನಿವಾಸದ ಮೇಲೆ ದಾಳಿ ಮಾಡಲಾಗಿತ್ತು. ಮನೆಗಳಲ್ಲಿದ್ದ ಎಲ್ಲಾ ಚೀಲಗಳನ್ನು ಪರಿಶೀಲನೆ ಮಾಡಿದ್ದಾರೆ. ಆದ್ರೆ, ಚೀಲಗಳಲ್ಲಿ ಏನೂ ಸಿಗದಿದ್ದಾಗ ಕೊನೆಗೆ ತಿಜೋರಿ ಓಪನ್ ಮಾಡಿದ್ದಾರೆ. ಆಗ ತಿಜೋರಿಯಲ್ಲಿ ಕಂತೆ ಕಂತೆ ಹಣ ಪತ್ತೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ತನಿಖೆ ನಡೆಸಿದ್ದಾರೆ.
ಇದೀಗ ಈ ಪ್ರಕರಣವನ್ನು ಪೊಲೀಸರು ಆದಾಯ ತೆರಿಗೆ ಇಲಾಖೆಗೆ ವರ್ಗಾಯಿಸಿದ್ದು, ಸದ್ಯ ಐಟಿ ಅಧಿಕಾರಿಗಳು ಬಸವರಾಜ್ ದತ್ತನವರ್ ಅವರನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.