
ಹುಬ್ಬಳ್ಳಿ, ಸೆಪ್ಟೆಂಬರ್ 16: ಲವ್ ಜಿಹಾದ್ ಹೆಚ್ಚಾಗಿದ್ದು, ಮುಸ್ಲಿಮರು ತಮ್ಮ ಮಕ್ಕಳಿಗೆ ಬುದ್ಧಿ ಹೇಳಬೇಕು. ನಮಗೆ ರಾಮನಂತೆ ಏಕಪತ್ನಿ ವೃತಸ್ಥ ಆಗೋದೂ ಗೊತ್ತಿದೆ, ಕೃಷ್ಣನಂತೆ ಹದಿನಾರು ಸಾವಿರ ಹೆಂಡತಿಯರನ್ನು ಹೊಂದೋದು ಗೊತ್ತಿದೆ. ಹಿಂದೂ ಹುಡುಗರು ಮುಸ್ಲಿಂ ಹುಡುಗಿಯರನ್ನು ಲವ್ ಮಾಡಲು ಆರಂಭ ಮಾಡಿದ್ರೆ ಅವರಿಗೆ ಒಂದು ಹುಡುಗಿ ಕೂಡ ಸಿಗಲ್ಲ ಎಂದು ವಿಹೆಚ್ಪಿ ರಾಷ್ಟ್ರೀಯ ಕಾರ್ಯದರ್ಶಿ ಗೋಪಾಲ್ ನಾಗರಕಟ್ಟೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಹುಬ್ಬಳ್ಳಿಯ ಈದ್ಗಾ ಮೈದಾನ ಗಣೇಶ ಮೂರ್ತಿ ವಿಸರ್ಜನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಲ್ಲಿನ ಮುಸ್ಲಿಮರು ಅರಬ್ನಿಂದ ಬಂದವರಲ್ಲ. ಅವರು ನಮ್ಮದೇ ದೇಶದವರು, ಈ ಹಿಂದೆ ಮತಾಂತರಕ್ಕೊಳಗಾದವರು. ಅವರು ಹಿಂದೂ ಧರ್ಮೀಯರನ್ನು ಇಫ್ತಾರ್ ಕೂಟಕ್ಕೆ ಕರೆಯುತ್ತಾರೆ. ನಮ್ಮ ಅನೇಕ ನಾಯಕರು ಹೋಗುತ್ತಾರೆ. ಹಾಗೆಯೇ ನೀವೂ ಗಣೇಶ ಹಬ್ಬಕ್ಕೆ ಬನ್ನಿ. ಮುಸ್ಲಿಮರು ನಮಾಜ್ ಮಾಡಲು ನಮ್ಮ ಅಂಭ್ಯಂತರವಿಲ್ಲ. ಆದ್ರೆ ಗಣೇಶನ ತಂಟೆಗೆ ಬಂದ್ರೆ ಸುಮ್ಮನಿರಲ್ಲ ಎಂದವರು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ ಪುಷ್ಕರಣಿ ವಿವಾದ: ಹು-ಧಾ ಪಾಲಿಕೆ ಆಯುಕ್ತರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ ಶ್ರೀರಾಮ ಸೇನೆ!
ಕರ್ನಾಟಕದ ಗೃಹ ಮಂತ್ರಿಗಳಿಗೆ ಆರ್ಎಸ್ಎಸ್ ಕಂಡರೆ ಚೇಳು ಕಡಿದಂತೆ ಆಗುತ್ತೆ. ಅವರಿಗೆ ವಂದೇ ಮಾತರಂ ಹಾಡಿದ್ರೆ ‘ಕೈ’ ಹೋಗಿ ‘ಕಮಲ’ ಆಗುತ್ತದೆ ಎಂಬ ಭಯವಿದೆ. ಆದರೆ ವಂದೇ ಮಾತರಂ ಹಾಡಲು ಯಾರ ಅಪ್ಪನ ಪರವಾನಗೆ ಬೇಕಿಲ್ಲ. ಬಹಳ ಅಂದ್ರೆ ಸರ್ಕಾರಿ ಶಾಲೆಗಳಿಗೆ, ಕಚೇರಿಗಳಿಗೆ ನೋಟಿಸ್ ಕೊಡಬಹುದು ಎಂದವರು ಹೇಳಿದ್ದಾರೆ. ರಾಜ್ಯದಲ್ಲಿ ಬರಗಾಲಕ್ಕೆ ಗೋಹತ್ಯೆ ಕೂಡ ಕಾರಣವಾಗಿದೆ. ಗೋ ಮಾತೆಯನ್ನು ರಕ್ಷಣೆ ಮಾಡಬೇಕು. ದೇಶದಲ್ಲಿ ಕೋಟ್ಯಾಂತರ ಮಸೀದಿ, ಚರ್ಚ್ಗಳಿವೆ. ಅವುಗಳ ಆದಾಯದ ಮೇಲೆ ಬೀಳದ ಸರ್ಕಾರದ ಕಣ್ಣು ಹಿಂದೂ ದೇವಾಲಯಗಳ ಮೇಲೆ ಬಿದ್ದಿದೆ. ಮಸೀದಿಗೆ ಆಡಳಿತಾಧಿಕಾರಿ ನೇಮಕ ಮಾಡುವ ಧೈರ್ಯ ಸರ್ಕಾರಕ್ಕೆ ಇಲ್ಲ. ಹೀಗಿರುವಾಗ ದೇವಾಲಯ ನಿರ್ವಹಣೆ ನಿಮಗೆ ಯಾಕೆ ಬೇಕು? ದೇಶದ ಎಲ್ಲ ದೇವಾಲಯಗಳನ್ನು ಹಿಂದೂ ಧರ್ಮೀಯರಿಗೆ ಬಿಟ್ಟು ಕೊಡಬೇಕು ಎಂದವರು ಆಗ್ರಹಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:21 pm, Wed, 16 September 26