AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜನನ-ಮರಣ ಪ್ರಮಾಣ ಪತ್ರದಲ್ಲಿ ಅಕ್ರಮ: ಬದುಕಿದ್ದವರನ್ನ ಸಾಯಿಸಿದ ಕೋಲಾರ ನಗರಸಭೆ

ಕೋಲಾರ ನಗರಸಭೆಯಲ್ಲಿ ಜನನ ಮತ್ತು ಮರಣ ಪ್ರಮಾಣಪತ್ರ ವಿತರಣೆಯಲ್ಲಿ ಭಾರೀ ಅಕ್ರಮ ಬಯಲಾಗಿದೆ. ಶಾಸಕ ಕೊತ್ತೂರು ಮಂಜುನಾಥ್, ಸಚಿವರ ಎದುರೇ ಆಕ್ರೋಶ ಹೊರಹಾಕಿದ್ದಾರೆ. ಆರೋಗ್ಯ ನಿರೀಕ್ಷಕ ಮೊಹಮದ್ ನವಾಜ್ ಸೇರಿ ಅಧಿಕಾರಿಗಳು ಜೀವಂತ ಇರುವವರಿಗೆ ಮರಣ ಪತ್ರ ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಕಾರ್ಯಕರ್ತರು ದೂರು ನೀಡಿದ್ದರೂ ಕ್ರಮವಾಗಿಲ್ಲ. ಕೂಡಲೇ ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ.

ಜನನ-ಮರಣ ಪ್ರಮಾಣ ಪತ್ರದಲ್ಲಿ ಅಕ್ರಮ: ಬದುಕಿದ್ದವರನ್ನ ಸಾಯಿಸಿದ ಕೋಲಾರ ನಗರಸಭೆ
ಜನನ, ಮರಣ ಪ್ರಮಾಣ ಪತ್ರದಲ್ಲಿ ಅಕ್ರಮ
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Edited By: |

Updated on: Nov 28, 2026 | 4:50 PM

Share

ಕೋಲಾರ, ನವೆಂಬರ್​​ 28: ಕೋಲಾರ ನಗರಸಭೆ ಒಂದಲ್ಲೊಂದು ವಿವಾದಗಳಿಂದ ಸದಾ ಸುದ್ದಿಯಲ್ಲಿರುತ್ತದೆ. ನಗರದಲ್ಲಿ ಹಲವು ಸಮಸ್ಯೆಗಳ ಕಾರಣಕ್ಕೆ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿರುವ ನಗರಸಭೆ ಇದೀಗ ಜನನ ಮತ್ತು ಮರಣ ಪ್ರಮಾಣ ಪತ್ರಗಳ ವಿತರಣೆಯಲ್ಲಿ ಅಕ್ರಮ ಎಸಗಿದ ಆರೋಪದ ಮೂಲಕ ಮತ್ತೆ ಸುದ್ದಿಯಾಗಿದೆ. ಬದುಕಿರುವವರಿಗೂ ಮರಣ ಪ್ರಮಾಣ ಪತ್ರ ನೀಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ನಗರಸಭೆಯ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಜನನ ಮತ್ತು ಮರಣ ಪ್ರಮಾಣ ಪತ್ರ ವಿತರಣೆಯಲ್ಲಿ ಅಕ್ರಮ

ಹೌದು, ಕೋಲಾರ ನಗರಸಭೆಯಲ್ಲಿ ಜನನ ಮತ್ತು ಮರಣ ಪ್ರಮಾಣ ವಿಭಾಗದ ಅಧಿಕಾರಿಗಳು ಕಳೆದ 2004 ರಿಂದ 2026 ಅವಧಿಯಲ್ಲಿ ಹಲವು ಜನರಿಗೆ ಅಕ್ರಮವಾಗಿ ಜನನ ಮತ್ತು ಮರಣ ಪ್ರಮಾಣ ಪತ್ರ ವಿತರಣೆ ಮಾಡಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಬದುಕಿದ್ದವರಿಗೆ ಮರಣ ಪ್ರಮಾಣ ಪತ್ರ ವಿತರಣೆ ಮಾಡಲಾಗಿದೆ. ಕಾನೂನಿನ ಅಡಿಯಲ್ಲಿ ಅಗತ್ಯವಾದ ದಾಖಲಾತಿಗಳನ್ನು ಪಡೆಯದೆ ಈ ರೀತಿ ದಾಖಲಾತಿಗಳನ್ನು ನೀಡಲಾಗಿದೆ. ಹೀಗಾಗಿ ಹಲವು ಬಾರಿ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ, ಅಲ್ಲದೆ ಜನನ ಮತ್ತು ಮರಣ ಪ್ರಮಾಣ ಪತ್ರ ನೀಡಿರುವ ಬಗ್ಗೆ ನಗರಸಭೆಯಲ್ಲಿ ಯಾವುದೇ ದಾಖಲಾತಿಗಳನ್ನು ನಿರ್ವಹಣೆ ಮಾಡಿಲ್ಲ ಎನ್ನುವ ಪ್ರಮುಖ ಆರೋಪ ಸಹ ಕೇಳಿಬಂದಿದೆ.

ಸಚಿವರ ಎದುರೇ ಅಧಿಕಾರಿಗಳನ್ನ ತರಾಟೆ ತೆಗೆದುಕೊಂಡ ಶಾಸಕ

ಈ ಬಗ್ಗೆ ತನಿಖೆ ನಡೆಸುವಂತೆ ಆದೇಶ ನೀಡಿದರೂ ಯಾವುದೇ ಕ್ರಮ ವಹಿಸಿಲ್ಲ. ಜೊತೆಗೆ ಪದೇ ಪದೇ ಈ ರೀತಿಯ ಅಕ್ರಮ ದಾಖಲಾತಿಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದು ಪೌರಾಡಳಿತ ಸಚಿವರ ಎದುರು ಕೋಲಾರ ಶಾಸಕ ಕೊತ್ತೂರು ಮಂಜುನಾಥ್, ನಗರಸಭೆ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು.

ಇದನ್ನೂ ಓದಿ: ಚಿಂತಾಮಣಿಯನ್ನು ಜಲಸುರಕ್ಷಿತ ನಗರವನ್ನಾಗಿಸಲು 4 ವರ್ಷಗಳ ಯೋಜನೆ ಘೋಷಣೆ: ಕೆರೆಗಳ ಪುನಶ್ಚೇತನ, ಅಂತರ್ಜಲ ಮರುಪೂರಣಕ್ಕೆ ಹಲವು ಕ್ರಮ

ಇನ್ನು ನಗರಸಭೆಯ ಆರೋಗ್ಯ ನಿರೀಕ್ಷಕ ಮೊಹಮದ್ ನವಾಜ್​, ಕೋಲಾರ ನಗರಸಭೆಯ ಜನನ ಮತ್ತು ಮರಣ ಪ್ರಮಾಣ ಪತ್ರ ವಿಭಾಗದ ನಿರ್ವಹಣೆ ಮಾಡುತ್ತಿದ್ದು, ನವಾಜ್ ಅವರಿಂದಲೇ ಈ ರೀತಿಯ ಅಕ್ರಮವಾಗಿದೆ. ಉದ್ದೇಶ ಪೂರ್ವಕವಾಗಿಯೇ ಇಂಥದೊಂದು ಕೃತ್ಯ ಎಸಗಲಾಗಿದೆ ಎನ್ನುವ ನಿಟ್ಟಿನಲ್ಲಿ ಸಾಮಾಜಿಕ ಕಾರ್ಯಕರ್ತ ಸುರೇಶ್ ಎಂಬುವವರು ಹಲವು ದೂರು ನೀಡಿದ್ದಾರೆ. ಆದರೂ ಈವರೆಗೂ ಯಾವುದೇ ಕ್ರಮವಹಿಸಿಲ್ಲ ಎಂದು ಆರೋಪಿಸಲಾಗಿದೆ.

ಒಬ್ಬರ ದಾಖಲೆ ಬಳಸಿ ಮತ್ತೊಬ್ಬರಿಗೆ ಮರಣ ಪ್ರಮಾಣ ಪತ್ರ

ಇನ್ನು ನವಾಜ್ ಅವರು ಕೋಲಾರ ಜಿಲ್ಲಾಸ್ಪತ್ರೆಯ ಸಿಬ್ಬಂದಿ ಜೊತೆಗೆ ಶಾಮೀಲಾಗಿ, ಇಲ್ಲಿ ಜನಿಸಿದವರಲ್ಲದಿದ್ದರೂ ಅದಕ್ಕೆ ಬೇಕಾದ ಯಾವುದೇ ದಾಖಲೆಗಳಿಲ್ಲವಾದರೂ ನಕಲಿ ದಾಖಲೆ ಬಳಸಿ ಅವರಿಗೆ ಜನನ ಪ್ರಮಾಣ ಪತ್ರ ನೀಡಿದ್ದಾರೆ. ಯಾರದೋ ದಾಖಲೆ ಹೊಂದಾಣಿಕೆ ಮಾಡಿ ಬೇರೆಯವರಿಗೆ ಮರಣ ಪ್ರಮಾಣ ಪತ್ರ ನೀಡಿದ್ದಾರೆ. ಇಂಥ ನಾಲ್ಕು ಪ್ರಕರಣಗಳು ಬೆಳಕಿಗೆ ಬಂದಿದೆ. ಶ್ರೀನಿವಾಸಪುರ ತಾಲ್ಲೂಕು ಎಂ.ನಾರಾಯಣಸ್ವಾಮಿ ಎಂಬುವರು ಮರಣ ಹೊಂದಿದ್ದರೆ ಅವರು ನೀಡಿದ್ದ ದಾಖಲೆಗಳನ್ನು ಸೇರಿಸಿ ಕೋಲಾರ ತಾಲ್ಲೂಕು ಭಟ್ರಹಳ್ಳಿ ಗ್ರಾಮದ ನಾರಾಯಣಸ್ವಾಮಿ ಎಂಬುವರು ಮೃತಪಟ್ಟಿದ್ದಾರೆ ಎಂದು ಮರಣ ಪ್ರಮಾಣ ಪತ್ರ ನೀಡಿದ್ದಾರೆ.

LIVE TV

ಪಿಂಚಣಿ, ಪಡಿತರ ಎಲ್ಲವೂ ನಿಲ್ಲಿಸಲಾಗಿದೆ. ಈ ವೇಳೆ ಪರಿಶೀಲನೆ ನಡೆಸಿದಾಗ ಅಕ್ರಮ ಮರಣ ಪ್ರಮಾಣ ಪತ್ರ ವಿತರಣೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ರೀತಿ ದಾಖಲೆ ಸಮೇತ ದೂರು ನೀಡಿದರೂ ಯಾವುದೇ ಕ್ರಮ ವಹಿಸಿಲ್ಲ, ಕೋಲಾರದಲ್ಲಿ ಅಕ್ರಮವಾಗಿ ಜನನ ಮತ್ತು ಮರಣ ಪ್ರಮಾಣ ಪತ್ರ ನೀಡುವ ಜಾಲವೊಂದು ಸಕ್ರಿಯವಾಗಿದ್ದು, ಈ ಬಗ್ಗೆ ತನಿಖೆಯಾಗಬೇಕು ಎನ್ನುವುದು ಸಾಮಾಜಿಕ ಹೋರಾಟಗಾರರ ಆಗ್ರಹ.

ಇದನ್ನೂ ಓದಿ: ಕೋಲಾರ ನಗರಸಭೆಯಲ್ಲಿ ಮುಂದುವರೆದ ಅಕ್ರಮಗಳ ಸರಮಾಲೆ: ಕೋಟ್ಯಂತರ ರೂ ಆಸ್ತಿ ಕೊಳ್ಳೆ ಹೊಡೆದ ಖದೀಮರು

ಒಟ್ಟಾರೆ ಕೋಲಾರ ನಗರಸಭೆಯಲ್ಲಿ ಒಂದಾದ ಮೇಲೊಂದು ಅಕ್ರಮಗಳು ಬೆಳಕಿಗೆ ಬರುತ್ತಿದ್ದು, ಸದ್ಯ ನಗರಸಭೆಯಲ್ಲಿ ನಡೆದಿರುವ ಅಕ್ರಮಗಳ ಕುರಿತು ಸಮಗ್ರ ತನಿಖೆಯಾದಾಗ ಮಾತ್ರವೇ ಇದರಲ್ಲಿ ಯಾರು ಯಾರು ಭಾಗಿಯಾಗಿದ್ದಾರೆ ಅನ್ನೋದು ಬೆಳಕಿಗೆ ಬರಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ

18 ವರ್ಷಗಳ ಹಿಂದೆ ಉತ್ತಮ ಸಮಾಜಕ್ಕಾಗಿ ಟಿವಿ9 ಚಾನೆಲ್​​ ಆರಂಭವಾದಾಗಿನಿಂದ ನನ್ನ ಮಾಧ್ಯಮ ಕಾಯಕವೂ ಆರಂಭ ಪಡೆಯಿತು. ಸ್ನಾತಕೋತ್ತರ ಪದವಿ ಮುಗಿಸಿದ್ದ ನಾನು ಚಿನ್ನದ ನಾಡು, ಕೃಷಿಕರ ಬೀಡು ಕೋಲಾರ ಜಿಲ್ಲೆಯ ಹಿರಿಯ ಪ್ರತಿನಿಧಿಯಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ. ಟಿವಿ9 ಸಂಸ್ಥೆಯ ಆಶೋತ್ತರಗಳಿಗೆ ತಕ್ಕಂತೆ ಕೋಲಾರ ಜನತೆಯ ಪರವಾಗಿ ಧ್ವನಿ ಎತ್ತುವ ಕೆಲಸ ಮಾಡಿದ್ದೇನೆ. ನನ್ನದು ಸಾಮಾಜಿಕ ಕಳಕಳಿ ಇರುವ ಟಿವಿ9 ಸಂಸ್ಥೆಯಲ್ಲಿ ಕೆಲಸ ಅನ್ನೋದಕ್ಕಿಂತ ಉತ್ತಮ ಸಮಾಜಕ್ಕಾಗಿ ನನ್ನ ಸೇವೆ ಅನ್ನುವ ಭಾವನೆಯಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇನೆ.

Read More