ಬಿಲ್ ಪಾವತಿಸದ ಮಹಿಳೆ, ವಿದ್ಯುತ್ ಸರಬರಾಜು ಬಂದ್ ಮಾಡಿದ್ದ ಹೆಸ್ಕಾಂ – ಗ್ರಾಹಕರ ಆಯೋಗ ಹೇಳಿದ್ದೇನು?
ಆರು ಮೀಟರುಗಳ ವಿದ್ಯುತ್ ಬಳಕೆಯ ಶುಲ್ಕವನ್ನು ಕಟ್ಟಿಲ್ಲದ ಕಾರಣ ವಿದ್ಯಾಗಿರಿ ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ಸರಬರಾಜು ಬಂದ್ ಮಾಡಿದ್ದರು. ತಮ್ಮ ವಾಸ್ತವ್ಯದ ಎರಡು ಮನೆಗಳ ವಿದ್ಯುತ್ ಸರಬರಾಜು ನಿಲ್ಲಿಸಿದರೆ ತನಗೆ ತೊಂದರೆಯಾಗುತ್ತದೆ ಎಂದು ಹೆಸ್ಕಾಂಗೆ ಆದೇಶ ನೀಡಬೇಕೆಂದು ದೂರುದಾರರು ದೂರು ಸಲ್ಲಿಸಿದರು.
ಆರು ಮೀಟರುಗಳ ವಿದ್ಯುತ್ ಬಳಕೆಯ ಶುಲ್ಕವನ್ನು ಕಟ್ಟಿಲ್ಲದ ಕಾರಣ ವಿದ್ಯಾಗಿರಿ ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ಸರಬರಾಜು ಬಂದ್ ಮಾಡಿದ್ದರು. ತಮ್ಮ ವಾಸ್ತವ್ಯದ ಎರಡು ಮನೆಗಳ ವಿದ್ಯುತ್ ಸರಬರಾಜು ನಿಲ್ಲಿಸಿದರೆ ತನಗೆ ತೊಂದರೆಯಾಗುತ್ತದೆ ಎಂದು ಹೆಸ್ಕಾಂಗೆ (HESCOM) ಆದೇಶ ನೀಡಬೇಕೆಂದು ದೂರುದಾರರು ದೂರು ಸಲ್ಲಿಸಿದರು. ಧಾರವಾಡದ ನಿವಾಸಿ ಆರ್.ಎಂ. ಉಷಾ ಎಂಬುವವರು (Woman) ಶಕ್ತಿ ನಗರದ ಮನೆ ನಂ. 97 ರಲ್ಲಿ ವಾಸವಿದ್ದು, ಅದರಲ್ಲಿ ಒಟ್ಟು ಆರು ಮನೆಗಳ ಭಾಗಗಳಿದ್ದವು. ಅವುಗಳ ಪೈಕಿ ಎರಡಲ್ಲಿ ದೂರುದಾರರು (Consumer) ಮತ್ತು ಅವರ ಮಗ ವಾಸಿಸುತ್ತಿದ್ದರು. ಉಳಿದ ನಾಲ್ಕು ಮನೆಗಳಲ್ಲಿ ಬಾಡಿಗೆದಾರರು ಇದ್ದರು. ಈ ಮನೆಗಳ ಕುರಿತು ವ್ಯಾಜ್ಯ ಇರುವುದರಿಂದ ಬಾಡಿಗೆದಾರರು ಮನೆ ಖಾಲಿ ಮಾಡಿದ್ದರು.
ಆರು ಮೀಟರುಗಳ ವಿದ್ಯುತ್ ಬಳಕೆಯ ಶುಲ್ಕವನ್ನು ಕಟ್ಟಿಲ್ಲದ ಕಾರಣ ವಿದ್ಯಾಗಿರಿ ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ಸರಬರಾಜು ಬಂದ್ ಮಾಡಿದ್ದರು. ತಮ್ಮ ವಾಸ್ತವ್ಯದ ಎರಡು ಮನೆಗಳ ವಿದ್ಯುತ್ ಸರಬರಾಜು ನಿಲ್ಲಿಸಿದರೆ ತನಗೆ ತೊಂದರೆಯಾಗುತ್ತದೆ ಎಂದು ಹೆಸ್ಕಾಂಗೆ ಆದೇಶ ನೀಡಬೇಕೆಂದು ದೂರುದಾರರು ದೂರು ಸಲ್ಲಿಸಿದರು.
ಇದನ್ನೂ ಓದಿ: ಹುಬ್ಬಳ್ಳಿ -ಡೆಪಾಸಿಟ್ ಹಿಂದಿರುಗಿಸದ ಸರಸ್ವತಿ ಕೋ ಆಪ್ ಸೊಸೈಟಿಗೆ 11 ಲಕ್ಷ ರೂ ದಂಡ ವಿಧಿಸಿದ ಕೋರ್ಟ್
ದೂರುದಾರಳು ಮತ್ತು ಅವರ ಗಂಡನಿಗೆ ಸಂಬಂಧಿಸಿದ ಒಟ್ಟು ಆರು ವಿದ್ಯುತ್ ಬಳಕೆಯ ಮೀಟರಗಳಿದ್ದು ಅವುಗಳ ವಿದ್ಯುತ್ ಬಿಲ್ಲನ್ನು ಕಟ್ಟಿರಲಿಲ್ಲ. ವಿದ್ಯುತ್ ಬಳಕೆಯ ಬಾಕಿ ಬಿಲ್ ಕಟ್ಟದೇ ದೂರುದಾರರಿಗೆ ಯಾವುದೇ ರೀತಿ ಸಹಾಯ ಮಾಡಲಾಗುವುದಿಲ್ಲ ಎಂದು ಹೆಸ್ಕಾಂ ಆಕ್ಷೇಪಣೆ ಎತ್ತಿತ್ತು. ಈ ದೂರಿನ ಬಗ್ಗೆ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ, ದೂರುದಾರಳು ಬಾಕಿ ಇರುವ ವಿದ್ಯುತ್ ಬಳಕೆಯ ಶುಲ್ಕ ಕಟ್ಟಲು ತಯಾರು ಇರುವುದಾಗಿ ಮತ್ತು ತಾನು ಉಪಯೋಗಿಸುತ್ತಿರುವ ಎರಡು ಮೀಟರುಗಳ ವಿದ್ಯುತ್ ಬಳಕೆಯ ಶುಲ್ಕವನ್ನು ನಿಯಮಿತವಾಗಿ ಕಟ್ಟುವುದಾಗಿ ಹೇಳಿದರು.
Also Read: ಠೇವಣಿ ಹಣ ಹಿಂದಿರುಗಿಸದ ಧಾರವಾಡದ ಸೊಸೈಟಿಗೆ ದಂಡ, ಪರಿಹಾರಕ್ಕೆ ಗ್ರಾಹಕರ ಆಯೋಗ ಆದೇಶ
ಬಾಕಿ ವಿದ್ಯುತ್ ಶುಲ್ಕ ಎದುರುದಾರ ಹೆಸ್ಕಾಂನವರಿಗೆ ದೂರುದಾರಳು ಕಟ್ಟಿ ಬಂದು ವರದಿ ಮಾಡಿದರು. ದೂರುದಾರಳೂ ಹೆಣ್ಣು ಮಗಳಾದ್ದರಿಂದ ಮಾನವೀಯತೆಯ ದೃಷ್ಟಿಯಿಂದ ಅವರ ಹಾಗೂ ಮಗನ ಬಳಕೆಯ ಎರಡು ವಿದ್ಯುತ್ ಮೀಟರಗಳಿಗೆ ಸರಬರಾಜು ಬಂದ್ ಮಾಡದಂತೆ ಹೆಸ್ಕಾಂನವರಿಗೆ ಆಯೋಗ ಆದೇಶಿಸಿದೆ. ಜೊತೆಗೆ ಇನ್ನು ಮುಂದೆ ವಿದ್ಯುತ್ ಬಳಕೆಯ ಶುಲ್ಕ ತಪ್ಪದೇ ಕಟ್ಟಿಕೊಂಡು ಹೋಗುವಂತೆ ದೂರುದಾರರಿಗೆ ಸೂಚಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ