ಡಯಾಲಿಸಿಸ್ ಕೇಂದ್ರ ಬಂದ್ !? ಸಿಬ್ಬಂದಿಗಳ ಪ್ರತಿಭಟನೆ; ರೋಗಿಗಳ ಪರದಾಟ
ವೇತನ ಸಮಸ್ಯೆ ಹಿನ್ನೆಲೆ ಡಯಾಲಿಸಿಸ್ ಸಿಬ್ಬಂದಿ ಕೆಲಸ ಬಂದ್ ಮಾಡಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ. ರಾಜ್ಯದ 202 ಡಯಾಲಿಸಿಸ್ ಕೇಂದ್ರಗಳು ಬಂದ್ ಆಗುವ ಸಧ್ಯತೆ ಇದೆ.
ಬೆಂಗಳೂರು: ವೇತನ ಸಮಸ್ಯೆ ಹಿನ್ನೆಲೆ ಡಯಾಲಿಸಿಸ್ (Dialysis) ಸಿಬ್ಬಂದಿ ಕೆಲಸ ಬಂದ್ ಮಾಡಿ ರಾಜ್ಯ ಸರ್ಕಾರದ (Karnataka Government) ವಿರುದ್ಧ ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ. ರಾಜ್ಯದ 202 ಡಯಾಲಿಸಿಸ್ ಕೇಂದ್ರಗಳು ಬಂದ್ ಆಗುವ ಸಧ್ಯತೆ ಇದೆ. ಇದರಿಂದ ಡಯಾಲಿಸಿಸ್ ರೋಗಿಗಳು ಪರದಾಡಲಿದ್ದು, ಜೀವಕ್ಕೆ ಕುತ್ತು ತರಬಹುದು. ಸರ್ಕಾರ ಕೊರೊನಾ ಕಾರಣ ಹೇಳಿ ಸಂಬಳಕ್ಕೆ ಕತ್ತರಿ ಹಾಕಿತ್ತು. ಈ ಹಿನ್ನೆಲೆ ಕಳೆದ ಎರಡುವರೆ ವರ್ಷಗಳಿಂದ ಸಿಬ್ಬಂದಿ ಅರ್ಧ ಸಂಬಳ ಪಡೆದು ಕೆಲಸ ಮಾಡುತ್ತಿದ್ದಾರೆ. ಇದು ಕನಿಷ್ಠ ಜೀವನಕ್ಕೂ ಸಾಲುತ್ತಿಲ್ಲ. ತಮ್ಮ ಕಷ್ಟಕ್ಕೆ ಸ್ಪಂದಿಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಅವರಿಗೆ ಮೂರು ಬಾರಿ ಭೇಟಿ ಮಾಡಿದರೂ ಸಚಿವರು ಸ್ಪಂದಿಸಿಲ್ಲ.
ಅಲ್ಲದೇ ಕಳೆದ ಎರಡುವರೆ ತಿಂಗಳ ಸಂಬಳ ಕೂಡ ಹೋಲ್ಡ್ ಮಾಡಲಾಗಿದ್ದು, ಅರ್ಧ ಸಂಬಳ ಕೂಡ ಸಿಗದೆ ಸಿಬ್ಬಂದಿ ಪರದಾಡುತ್ತಿದ್ದಾರೆ. ಈ ಹಿಂದೆ ಡಯಾಲಿಸಿಸ್ ಕೇಂದ್ರ ನಿರ್ವಹಣೆ ಮಾಡುತ್ತಿದ್ದ ಬಿಆರ್ಎಸ್ ಸಂಸ್ಥೆ 2021ರಲ್ಲಿ ಸರ್ಕಾರದಿಂದ ಹಣ ಬಿಡುಗಡೆ ಆಗದ ಕಾರಣ ನಿರ್ವಹಣೆಯಿಂದ ಹಿಂದೆ ಸರಿಯಿತು. ನಂತರದಲ್ಲಿ ಯಾವುದೇ ಟೆಂಡರ್ ಆಗದೇ ಕೋಲ್ಕತ್ತ ಮೂಲದ ESKAG ಸಂಜೀವಿನಿಗೆ ನಿರ್ವಹಣೆ ಜವಾಬ್ದಾರಿ ವಹಿಸಲಾಗಿದೆ.
ಇದನ್ನೂ ಓದಿ: ಜನರಿಗೆ ಕಿರುಕುಳ ನೀಡುವ 42 ಸಾಲದ ಆ್ಯಪ್ಗಳ ವಿರುದ್ಧ ಕ್ರಮ; ಕರ್ನಾಟಕ ಸರ್ಕಾರ ಮಾಹಿತಿ
ರಾಜ್ಯದಲ್ಲಿ 45 ಕೇಂದ್ರಗಳ ಜವಬ್ದಾರಿ ಹೊತ್ತಿದ್ದ ESKAG ಸಂಜೀವಿನಿಗೆ ಈಗ 202 ಕೇಂದ್ರಗಳ ಜವಾಬ್ದಾರಿ ನೀಡಲಾಗಿದೆ. ಆದರೆ ಇಲ್ಲಿ ಕಾರ್ಯನಿರ್ವಹಿಸುವ 650 ಸಿಬ್ಬಂದಿಗಳ ಸಂಬಳದ ಬಗ್ಗೆ ಸರ್ಕಾರ ಅಸಡ್ಡೆ ತೋರಿಸುತ್ತಿದೆ. ವೇತನ ಸಿಗದೇ, ಪಿಎಫ್, ಇಎಸ್ಐ ಇಲ್ಲದೇ 650 ಸಿಬ್ಬಂದಿಗಳು ಪರದಾಡುತ್ತಿದ್ದಾರೆ.
ರಾಜ್ಯದಲ್ಲಿ ಒಟ್ಟು 202 ಡಯಾಲಿಸಿಸ್ ಕೇಂದ್ರಗಳಿವೆ. ಈ ಪೈಕಿ ಬೆಂಗಳೂರು, ತುಮಕೂರು, ರಾಮನಗರ, ಗದಗ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 45 ಸೆಂಟರ್ಗಳಿವೆ. ಇಲ್ಲಿ ಗ್ರೂಪ್ ಡಿ, ಸ್ಟಾಫ್, ಡಯಾಲಿಸಿಸ್ ಟೆಕ್ನಿಶಿಯನ್ಸ್ ಸೇರಿ ಒಟ್ಟು 650 ಜನ ಕಾರ್ಯನಿರ್ವಹಿಸುತ್ತಾರೆ. ಪ್ರತಿ ದಿನ ರಾಜ್ಯದಲ್ಲಿ ನಡೆಯುವ ಒಟ್ಟು 2500 ಡಯಾಲಿಸಿಸ್ ನಡೆಯುತ್ತದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:41 am, Wed, 2 August 23