ಚುನಾವಣೆ ಡೆಪಾಸಿಟ್ ಕಟ್ಟಲು 250 ರೂ ಸಹ ಇರಲಿಲ್ಲ: ಮುಡಾ ಆರೋಪದ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟ ಸಿಎಂ

ಸಾಂಸ್ಕೃತಿಕ ನಗರಿ ಮೈಸೂರು ಆಡಳಿತ ಪಕ್ಷ ವಿಪಕ್ಷಗಳ ಹೋರಾಟಕ್ಕೆ ವೇದಿಕೆಯಾಗುತ್ತಿದೆ. ಆಡಳಿತ ಪಕ್ಷ ಕಾಂಗ್ರೆಸ್ ಇಂದು ಜನಾಂದೋಲನ ಸಮಾವೇಶ ಮಾಡಿದೆ. ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಚುನಾವಣೆ ಡೆಪಾಸಿಟ್ ಕಟ್ಟಲು 250 ರೂ. ಸಹ ಇರಲಿಲ್ಲ. 12-13 ವರ್ಷಗಳ ಕಾಲ ಹಣಕಾಸಿನ ಮಂತ್ರಿಯಾಗಿದ್ದೆ. ಆದ್ರೂ ಸಾಲ ಮಾಡಿ ಕಟ್ಟಿದ್ದ 2 ಮನೆಗಳನ್ನು ಮಾರಾಟ ಮಾಡಿದ್ದೇನೆ ಎಂದು ಹೇಳಿದ್ದಾರೆ.

ಚುನಾವಣೆ ಡೆಪಾಸಿಟ್ ಕಟ್ಟಲು 250 ರೂ ಸಹ ಇರಲಿಲ್ಲ: ಮುಡಾ ಆರೋಪದ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟ ಸಿಎಂ
ಮುಡಾ ಪ್ರಾಸಿಕ್ಯೂಷನ್: ಹೈಕೋರ್ಟ್​ನಲ್ಲಿ ವಿಚಾರಣೆ ಮುಂದೂಡಿಕೆ, ಸಿದ್ದರಾಮಯ್ಯಗೆ ಸದ್ಯಕ್ಕೆ ರಿಲೀಫ್
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Aug 09, 2024 | 3:51 PM

ಮೈಸೂರು, ಆಗಸ್ಟ್​ 09: 1983ರಲ್ಲಿ ಚುನಾವಣೆಗೆ ಡಿಪಾಸಿಟ್​ ಕಟ್ಟಲು 250 ರೂ. ಕೂಡ ನನ್ನ ಬಳಿ ಇರಲಿಲ್ಲ. ಚುನಾವಣೆಗೆ ಜನರೇ ದುಡ್ಡು ಖರ್ಚು ಮಾಡಿ ನನ್ನನ್ನು ಗೆಲ್ಲಿಸಿದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಸಿದ್ದ ಜನಾಂದೋಲನ (janandolana) ಸಮಾವೇಶದಲ್ಲಿ ಮಾತನಾಡಿದ ಅವರು, 1978ರಲ್ಲಿ ಚುನಾವಣೆಗೆ ನಿಲ್ತೇನೆ ಅಂತಾ ನನ್ನ ತಂದೆಗೆ ಕೇಳಿದೆ. ನೀನು ಚುನಾವಣೆಗೆ ನಿಲ್ಲಬೇಡ ಅಂತಾ ನನ್ನ ತಂದೆ ಹೇಳಿದರು. ಬಳಿಕ ಪಂಚಾಯಿತಿ ಸೇರಿಸಿ ಜನರು ನನ್ನ ತಂದೆಯನ್ನು ಒಪ್ಪಿಸಿದರು. ಬಳಿಕ ನಾನು ತಾಲೂಕು ಬೋರ್ಡ್ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದೆ. ನನ್ನ 9 ಚುನಾವಣೆಗಳನ್ನ ಕೂಡ ಜನರೇ ಗೆಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ.

ಬಡವರು, ಹಿಂದುಳಿದ ವರ್ಗದವರಿಗೆ ನ್ಯಾಯ ಸಿಗಲು ಹೋರಾಡ್ತಿದ್ದೇನೆ. ಬಿಜೆಪಿ, ಜೆಡಿಎಸ್​ನವರು ಎಷ್ಟೇ ಪಾದಯಾತ್ರೆ ಮಾಡಿದ್ರೂ ನಾನು ಜಗ್ಗಲ್ಲ. ನಿಮ್ಮ ಆಶೀರ್ವಾದ ಇರುವವರೆಗೆ ನನ್ನನ್ನು ಮುಟ್ಟಲು ಯಾರಿಗೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಸಾಲ ಮಾಡಿ ಕಟ್ಟಿದ್ದ 2 ಮನೆಗಳನ್ನು ಮಾರಾಟ ಮಾಡಿದ್ದೇನೆ

ಶ್ರೀಗಂಧ ಕಾವಲು ಕೇಸ್​​ನಲ್ಲಿ ಬೇಲ್​ ಮೇಲೆ ಅಶೋಕ್ ಹೊರಗಿದ್ದಾರೆ. ಯಡಿಯೂರಪ್ಪರ ತರಹ ನಾನೇನು ಡಿನೋಟಿಫೈ ಮಾಡಿದ್ದೀನಾ? ವಿಜಯೇಂದ್ರ ಕೋಲ್ಕತ್ತಾದ ಶೆಲ್ ಕಂಪನಿಗಳಿಂದ ದುಡ್ಡು ಹೊಡೆದಿಲ್ವಾ? 12-13 ವರ್ಷಗಳ ಕಾಲ ಹಣಕಾಸಿನ ಮಂತ್ರಿಯಾಗಿದ್ದೆ. ಆಸ್ತಿ ಬಗ್ಗೆ ವ್ಯಾಮೋಹ ಇದ್ದರೇ ಕೋಟ್ಯಂತರ ಹಣ ಮಾಡಬಹುದಿತ್ತು. ಮೊನ್ನೆವರೆಗೂ ಮೈಸೂರಿನಲ್ಲಿ ನನಗೆ ಸ್ವಂತ ಮನೆ ಇರಲಿಲ್ಲ. ಸಾಲ ಮಾಡಿ ಕಟ್ಟಿದ್ದ 2 ಮನೆಗಳನ್ನು ಮಾರಾಟ ಮಾಡಿದ್ದೇನೆ. ಇದು ನನ್ನ ಇತಿಹಾಸ ಎಂದಿದ್ದಾರೆ.

ಇದನ್ನೂ ಓದಿ: ತನ್ನ ಮಗನನ್ನು ಬೆಳೆಸಲು ಮತ್ತೊಬ್ಬ ಮಗನನ್ನು ಮುಗಿಸಿದ್ರು: ಡಿಕೆಶಿ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಭ್ರಷ್ಟಾಚಾರ ನಡೆದಿದೆ. ಆದರೆ ಹಗರಣದಲ್ಲಿ ನಾನು ಭಾಗಿಯಾಗಿಲ್ಲ. ವಿರೋಧ ಪಕ್ಷಗಳು ದಾಖಲೆ ಸಹಿತ ಯಾವುದೇ ಚರ್ಚೆ ನಡೆಸಿಲ್ಲ. ವಾಲ್ಮೀಕಿ ನಿಗಮದಲ್ಲಿ 84 ಕೋಟಿ 63 ಲಕ್ಷ ರೂ. ಅವ್ಯವಹಾರ ನಡೆದಿದೆ. ಅಧಿಕಾರಿಗಳೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ. ಈಗ ಎಸ್​.ಐ.ಟಿ ಚಾರ್ಜ್​​​ಶೀಟ್​ ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ.

ನನ್ನ ರಾಜೀನಾಮೆ ಕೇಳಲು ಇವರಿಗೆ ಯಾವ ನೈತಿಕತೆ ಇದೆ?

ವಾಲ್ಮೀಕಿ ನಿಗಮದಲ್ಲಿ ನನ್ನ ಪಾತ್ರ ಇಲ್ಲ ಅಂತಾ ಗೊತ್ತಾದ ಬಳಿಕ ಈಗ ಮುಡಾದಲ್ಲಿ ಹಗರಣ ಆಗಿದೆ ಅಂತಾ ಹೇಳುತ್ತಿದ್ದಾರೆ. ಮುಡಾದಲ್ಲಿ ನಾನು ಭ್ರಷ್ಟಾಚಾರ ಮಾಡಿಲ್ಲ, ನನ್ನ ಪಾತ್ರವೂ ಇಲ್ಲ. ಬಿವೈ ವಿಜಯೇಂದ್ರ, ಹೆಚ್​ಡಿ ಕುಮಾರಸ್ವಾಮಿ ಮತ್ತು ಬಿಎಸ್​ ಯಡಿಯೂರಪ್ಪಗೆ ನನ್ನ ರಾಜೀನಾಮೆ ಕೇಳಲು ಇವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದ್ದಾರೆ.

82 ವಯಸ್ಸಿನಲ್ಲಿ ಯಡಿಯೂರಪ್ಪ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ. ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ 20 ಹಗರಣಗಳನ್ನು ಮಾಡಿದ್ದೀರಿ. ವಿಜಯೇಂದ್ರ ಕೂಡ ಅನೇಕ ಹಗರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರೇ ಹೇಳಿದ್ದಾರೆ ಎಂದರು.

ರಾಜಭವನ ದುರುಪಯೋಗ

ಮುಡಾದಲ್ಲಿ ಭ್ರಷ್ಟಾಚಾರ ಆಗಿದೆ ಅಂತಾ ಬೊಬ್ಬೆ ಹೊಡೆಯುತ್ತಿದ್ದಾರೆ. ರಾಜಭವನವನ್ನು ದುರುಪಯೋಗ ಮಾಡಿಕೊಳ್ತಿದ್ದಾರೆ. ಜು.26ರಂದು ಟಿ.ಜೆ.ಅಬ್ರಾಹಂ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಅಂದು ರಾತ್ರಿ 10 ಗಂಟೆಗೆ ರಾಜ್ಯಪಾಲರು ನನಗೆ ನೋಟಿಸ್ ಕೊಟ್ಟಿದ್ದಾರೆ. ಜು.29ರಂದು ರಾಜ್ಯಪಾಲರು ಶೋಕಾಸ್​ ನೋಟಿಸ್​ಗೆ ಸ್ಪಷ್ಟನೆ ಕೇಳಿದ್ದಾರೆ. ಟಿ.ಜೆ.ಅಬ್ರಾಹಂಗೆ ಸುಪ್ರೀಂಕೋರ್ಟ್ 25 ಲಕ್ಷ ರೂ. ದಂಡ ವಿಧಿಸಿತ್ತು ಎಂದು ವಾಗ್ದಾಳಿ ಮಾಡಿದ್ದಾರೆ.

2021ರಲ್ಲಿ ನನಗೆ ಸೈಟ್ ಕೊಟ್ಟಾಗ ಬಿಜೆಪಿ ಅಧಿಕಾರದಲ್ಲಿತ್ತು. ಸುಂದರಮ್ಮ ಎಂಬುವರು ಜಮೀನು ಕಳೆದುಕೊಂಡಿದ್ದರು. ಆ ಜಮೀನನ್ನು ಸೈಟ್ ಮಾಡಿ ಮುಡಾದವರು ಮಾರಾಟ ಮಾಡಿದ್ದಾರೆ. 2013ರಿಂದ 2018ರವರೆಗೆ ಬಡವರಿಗೆ ಅನೇಕ ಯೋಜನೆ ತಂದಿದ್ದೇನೆ. ಶೂ ಭಾಗ್ಯ, ಶಾದಿ ಭಾಗ್ಯ ಸೇರಿದಂತೆ ಅನೇಕ ಯೋಜನೆ ತಂದಿದ್ದೇನೆ. ಬಿಜೆಪಿ, ಜೆಡಿಎಸ್ ಏನೇ ದೊಂಬರಾಟ ಮಾಡಿದ್ರೂ ತಲೆಕೆಡಿಸಿಕೊಳ್ಳಲ್ಲ. ನಿಮ್ಮ ಆಶೀರ್ವಾದ ನಮಗೆ ಇರಲಿ. ಈ ಮನುವಾದಿಗಳು, ಜಾತಿವಾದಿಗಳಿಗೆ ನಾನು ಬಗ್ಗುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ: ಸತೀಶ್ ಜಾರಕಿಹೊಳಿಗೆ ಸಮನ್ಸ್​​​​

ಕೋಮುವಾದಿ, ಜಾತಿವಾದಿಗಳನ್ನು ರಾಜಕೀಯದಿಂದ ಓಡಿಸಬೇಕು. ಎನ್.ಧರಂಸಿಂಗ್ ಅವರಿಗೆ ಕೊಟ್ಟ ಮಾತಿನಂತೆ ದೇವೇಗೌಡ, ಕುಮಾರಸ್ವಾಮಿ ಎಂದು ಕೂಡು ಇವರು ನಡೆದುಕೊಂಡಿಲ್ಲ. ನರೇಂದ್ರ ಮೋದಿ ಪ್ರಧಾನಿ ಆದ್ರೆ ದೇಶದಲ್ಲಿ ಇರಲ್ಲ ಎಂದು ಹೆಚ್​.ಡಿ.ದೇವೇಗೌಡರು ಹೇಳಿದ್ದರು. ಆದರೆ ಈಗ ಕೋಮುವಾದಿಗಳ ಜೊತೆ ಸೇರಿಕೊಂಡಿದ್ದಾರೆ ಎಂದು ಕಿಡಿಕಾರಿದರು.

ನನ್ನ ಪತ್ನಿ ಪಾರ್ವತಿ ಮತ್ತು ನಾನು ತಪ್ಪು ಮಾಡುವುದಕ್ಕೆ ಸಾಧ್ಯನಾ?

ಸರ್ಕಾರ ದುರ್ಬಲಗೊಳಿಸುವ ದುಷ್ಟ ಪ್ರಯತ್ನವನ್ನು ಮಾಡ್ತಿದ್ದಾರೆ. 4 ದಶಕಗಳಿಂದ ನಾನು ರಾಜಕೀಯದಲ್ಲಿ ಇದ್ದೇನೆ. ಅನೇಕ ಖಾತೆಗಳನ್ನು ನಿಭಾಯಿಸುವ ಅವಕಾಶ ನನಗೆ ಸಿಕ್ಕಿದೆ. 2 ಬಾರಿ ಉಪಮುಖ್ಯಮಂತ್ರಿ ಕೂಡ ಆಗಿದ್ದೆ. ಶಾಸಕರ ಬೆಂಬಲದಿಂದ 2ನೇ ಬಾರಿ ಮುಖ್ಯಮಂತ್ರಿ ಆಗುವ ಅವಕಾಶ ಇದೆ. ನನ್ನ ರಾಜಕೀಯ ಜೀವನ ತೆರೆದ ಪುಸ್ತಕ. ನನ್ನ ಧರ್ಮಪತ್ನಿ ಪಾರ್ವತಿ ಯಾವತ್ತೂ ಸಾರ್ವಜನಿಕ ಸಭೆಗೂ ಬಂದಿಲ್ಲ. ನನ್ನ ಪತ್ನಿ ಪಾರ್ವತಿ ಮತ್ತು ನಾನು ತಪ್ಪು ಮಾಡುವುದಕ್ಕೆ ಸಾಧ್ಯನಾ? ನಾನು ರಾಜಕೀಯದಲ್ಲಿ ಇರೋವರೆಗೆ ತಪ್ಪು ಮಾಡುವುದಿಲ್ಲ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ನಾವು ಸೇಡು ತೀರಿಸಿಕೊಂಡರೆ ಬಿಜೆಪಿಗೆ ಜೈಲುಗಳು ಸಾಕಾಗಲ್ಲ: ಹೆಬ್ಬಾಳ್ಕರ್
ನಾವು ಸೇಡು ತೀರಿಸಿಕೊಂಡರೆ ಬಿಜೆಪಿಗೆ ಜೈಲುಗಳು ಸಾಕಾಗಲ್ಲ: ಹೆಬ್ಬಾಳ್ಕರ್
‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು
‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
‘ನನಗೂ ಕೆಟ್ಟ ಅನುಭವ ಆಗಿದೆ’; ನೀತು ಶೆಟ್ಟಿ ನೇರ ಮಾತು
‘ನನಗೂ ಕೆಟ್ಟ ಅನುಭವ ಆಗಿದೆ’; ನೀತು ಶೆಟ್ಟಿ ನೇರ ಮಾತು
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ