ನೀವು ಇದೊಂದು ಮಾಡಿ, ಮುಂದೆ ನೀವು ಸಿಎಂ ಆಗುವ ತನಕ ಕೆಲಸ ಮಾಡ್ತೀವಿ: ದಿಂಗಾಲೇಶ್ವರಶ್ರೀ ಆಡಿಯೋ ವೈರಲ್

ವಿಧಾನಸಭೆಯಿಂದ ವಿಧಾನಪರಿಷತ್​ ಚುನಾವಣೆ ನಡಯಲಿದೆ. ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಹೀಗಿರುವಾಗ ದಿಂಗಾಲೇಶ್ವರ ಶ್ರೀಗಳು ಪೂರ್ಣ ಪ್ರಮಾಣದ ರಾಜಕೀಯ ಅಖಾಡಕ್ಕಿಳಿದ್ದಾರೆ. ಬಾಗಲಕೋಟೆಯ ಎಸ್‌.ಆರ್.ಪಾಟೀಲ್ ಪರ ಸ್ವಾಮೀಜಿ ಬ್ಯಾಟಿಂಗ್​ ಮಾಡಿದ್ದು, ದಿಂಗಾಲೇಶ್ವರ ಸ್ವಾಮೀಜಿ    ಮಾತನಾಡಿರುವ ಎನ್ನಲಾದ ಸ್ಫೋಟಕ ಆಡಿಯೋ ಒಂದು ವೈರಲ್ ಆಗಿದೆ. ನೀವು ಇದೊಂದು ಮಾಡಿ ನೋಡಿ, ಮುಂದೆ ನೀವು ಸಿಎಂ ಆಗುವ ತನಕ ಏನೇನು ಕೆಲಸ ಮಾಡುತ್ತೇವೆ ನೋಡಿ ಎಂದು ದಿಂಗಾಲೇಶ್ವರಶ್ರೀ ಹೇಳಿದ್ದಾರೆ. 

ನೀವು ಇದೊಂದು ಮಾಡಿ, ಮುಂದೆ ನೀವು ಸಿಎಂ ಆಗುವ ತನಕ ಕೆಲಸ ಮಾಡ್ತೀವಿ: ದಿಂಗಾಲೇಶ್ವರಶ್ರೀ ಆಡಿಯೋ ವೈರಲ್
ನೀವು ಇದೊಂದು ಮಾಡಿ, ಮುಂದೆ ನೀವು ಸಿಎಂ ಆಗುವ ತನಕ ಕೆಲಸ ಮಾಡ್ತೀವಿ: ದಿಂಗಾಲೇಶ್ವರಶ್ರೀ ಆಡಿಯೋ ವೈರಲ್
Edited By:

Updated on: Jun 02, 2024 | 4:20 PM

ಬೆಂಗಳೂರು, ಜೂನ್​ 2: ವಿಧಾನಸಭೆಯಿಂದ ವಿಧಾನಪರಿಷತ್​ ಚುನಾವಣೆ ನಡಯಲಿದೆ. ಈಗಾಗಲೇ  ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಹೀಗಿರುವಾಗ ದಿಂಗಾಲೇಶ್ವರ ಶ್ರೀಗಳು (Dingaleshwara Swamiji) ಪೂರ್ಣ ಪ್ರಮಾಣದ ರಾಜಕೀಯ ಅಖಾಡಕ್ಕಿಳಿದ್ದಾರೆ. ಬಾಗಲಕೋಟೆಯ ಎಸ್‌.ಆರ್.ಪಾಟೀಲ್ (SR Patil) ಪರ ಸ್ವಾಮೀಜಿ ಬ್ಯಾಟಿಂಗ್​ ಮಾಡಿದ್ದು, ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿರುವ ಎನ್ನಲಾದ ಸ್ಫೋಟಕ ಆಡಿಯೋ ಒಂದು ವೈರಲ್ ಆಗಿದೆ.

ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಸಿಎಂ ಸಿದ್ದರಾಮಯ್ಯರನ್ನ ಒಪ್ಪಿಸುತ್ತೇವೆ. ಇದೊಂದು ಮಾಡಿಕೊಡುವಂತೆ ಡಿಕೆ ಶಿವಕುಮಾರ್​ಗೆ ಹೇಳಿದ್ದೇನೆ ಎಂದಿರುವ ಸ್ವಾಮೀಜಿ, ನೀವು ಇದೊಂದು ಮಾಡಿ ನೋಡಿ, ಮುಂದೆ ನೀವು ಸಿಎಂ ಆಗುವ ತನಕ ಏನೇನು ಕೆಲಸ ಮಾಡುತ್ತೇವೆ ನೋಡಿ ಎಂದು ದಿಂಗಾಲೇಶ್ವರಶ್ರೀ ಹೇಳಿದ್ದಾರೆ.

ಇದನ್ನೂ ಓದಿ: ಧಾರವಾಡದಿಂದ ಲಿಂಗಾಯತ ಸ್ವಾಮೀಜಿ ಸ್ಪರ್ಧೆ: ಯಾರು ಈ ದಿಂಗಾಲೇಶ್ವರ ಶ್ರೀ? ರಾಜಕೀಯಕ್ಕೆ ಧುಮುಕಲು ಕಾರಣ ಇಲ್ಲಿದೆ

ಒಕ್ಕಲಿಗ ಜೊತೆ ಲಿಂಗಾಯತ ಸಮುದಾಯಕ್ಕೂ ಹತ್ತಿರವಾಗುತ್ತಿದ್ದಾರಾ ಡಿಕೆ ಶಿವಕುಮಾರ್​? ನೀವು ಇದೊಂದು ಮಾಡಿ ತೋರಿಸಿ, ನಾವು ಏನು ಇದ್ದೀವೆಂದು ತೋರಿಸುತ್ತೇವೆ. ಡಿ.ಕೆ.ಶಿವಕುಮಾರ್​ರನ್ನು ಒಪ್ಪಿಸಿದ್ದೇನೆ ಎಂದಿದ್ದಾರೆ. ಡಿಕೆ ಶಿವಕುಮಾರ್​ ಬೆಂಬಲ ಇದೆ, ಸಿಎಂರದ್ದು ಸ್ವಲ್ಪ ಕಷ್ಟ ಇದೆ ಎಂದು ಎಸ್​ಆರ್​ ಪಾಟೀಲ್​ ಹೇಳಿದ್ದಾರೆ.

ಎಲ್ಲರಿಗೂ ಪತ್ರ ಬರೆದಿದ್ದೇನೆ, ಹೈಕಮಾಂಡ್ ನಾಯಕರಿಗೂ ಕಳಿಸಿದ್ದೇನೆ. ವಿಧಾನಪರಿಷತ್ ಸದಸ್ಯನಾಗಿ ಮಾಡುತ್ತೇವೆ ಅಂತಾ ಉತ್ತರ ಕೊಟ್ಟಿದ್ದಾರೆ. ಇಂಡಿ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ್ ಹೇಳುತ್ತಿದ್ದರು. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಡಿಕೆ ಶಿವಕುಮಾರ್​ ಒಬ್ಬರನ್ನೇ ನಂಬಿ ಕೂತಿದ್ದರು. ಡಿಕೆ ಶಿವಕುಮಾರ್​ರನ್ನು ನಂಬಿ ಕೂತಿದ್ದಕ್ಕೆ ಲಕ್ಷ್ಮೀ, ಪುತ್ರ ಮೃಣಾಲ್, ಸೋದರ ಚನ್ನರಾಜ್ ಉದ್ಧಾರ ಆದರು ಎಂದಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​ ತಂತ್ರ, ಲೋಕಸಭಾ ಚುನಾವಣಾ ಅಖಾಡದಿಂದ ಹಿಂದೆ ಸರಿದ ದಿಂಗಾಲೇಶ್ವರ ಶ್ರೀ

ರಾಜಕೀಯದಲ್ಲಿ ಯಾವಾಗಲೂ ಒಬ್ಬರನ್ನೇ ನಂಬಿಕೊಂಡು ಹೋಗಬೇಕು. ಸಿಎಂ ಸಿದ್ದರಾಮಯ್ಯರ ಮನೆಗೆ ಹೋಗಿ ಒಪ್ಪಿಸುತ್ತೇನೆ. ಅವರನ್ನು ಹೇಗೆ ಮನವೊಲಿಸಬೇಕೆಂದು ಗೊತ್ತಿದೆ ಎಂದು ಶ್ರೀಗಳು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:03 pm, Sun, 2 June 24