ಕುಟುಂಬಸ್ಥರು ಹಿಂದೆ ಸರಿದರೆ ಜಿಲ್ಲಾಡಳಿತದಿಂದಲೇ ಕೊವಿಡ್​ ಸೋಂಕಿನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ: ಕರ್ನಾಟಕ ಸರ್ಕಾರ ನಿರ್ಧಾರ

ಕುಟುಂಬಸ್ಥರು ಹಿಂದೆ ಸರಿದರೆ ಜಿಲ್ಲಾಡಳಿತದಿಂದಲೇ ಕೊವಿಡ್​ ಸೋಂಕಿನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ: ಕರ್ನಾಟಕ ಸರ್ಕಾರ ನಿರ್ಧಾರ
ಅಸ್ಥಿ ವಿಸರ್ಜನೆ ಕಾರ್ಯದಲ್ಲಿ ಭಾಗಿಯಾದ ಆರ್ ಅಶೋಕ್

ಅಸ್ಥಿಯನ್ನು 15 ದಿನ ಕಾಯ್ದಿರಿಸಲಾಗುವುದು. ಅಸ್ಥಿ ವಿಸರ್ಜನೆಗೂ ಕುಟುಂಬಸ್ಥರು ಮುಂದೆ ಬರದಿದ್ದರೆ ಆಯಾಯ ತಹಶೀಲ್ದಾರ್, ಉಪವಿಭಾಗಾಧಿಕಾರಿ ಅಥವಾ ಜಿಲ್ಲಾಧಿಕಾರಿಗಳು ಅಸ್ಥಿ ವಿಸರ್ಜನೆ ನಡೆಸಬೇಕು ಎಂದು ಕಂದಾಯ ಇಲಾಖೆ ಆದೇಶ ಹೊರಡಿಸಿದೆ.

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Jun 03, 2021 | 9:45 PM


ಬೆಂಗಳೂರು: ಕೊರೊನಾ ಸೋಂಕಿನಿಂದ ಮೃತಪಟ್ಟವರ ಶವಗಳನ್ನು ಸ್ವೀಕರಿಸಲು ಕುಟುಂಬದ ಇತರ ಸದಸ್ಯರು ಹಿಂಜರಿಯುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಜಿಲ್ಲಾಡಳಿತದಿಂದಲೇ ಕೊವಿಡ್ ಸೋಂಕಿನಿಂದ ಸಾವನ್ನಪ್ಪಿದವರ ಅಂತಿಮ ಸಂಸ್ಕಾರ ಮಾಡಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಅಂತ್ಯಸಂಸ್ಕಾರ ನಡೆಸಲು ಕುಟುಂಬದ ಸದಸ್ಯರು ಮುಂದೆ ಬರದಿದ್ದರೆ ಮೃತದೇಹವನ್ನು ಆಯಾ ಧರ್ಮದ ವಿಧಿವಿಧಾನದಂತೆ ಗೌರವಯುತವಾಗಿ ಅಂತ್ಯಸಂಸ್ಕಾರ ನಡೆಸಲು ರಾಜ್ಯ ಸರ್ಕಾರ ಗುರುವಾರ ಸೂಚಿಸಿದೆ.

ಅಸ್ಥಿಯನ್ನು 15 ದಿನ ಕಾಯ್ದಿರಿಸಲಾಗುವುದು. ಅಸ್ಥಿ ವಿಸರ್ಜನೆಗೂ ಕುಟುಂಬಸ್ಥರು ಮುಂದೆ ಬರದಿದ್ದರೆ ಆಯಾಯ ತಹಶೀಲ್ದಾರ್, ಉಪವಿಭಾಗಾಧಿಕಾರಿ ಅಥವಾ ಜಿಲ್ಲಾಧಿಕಾರಿಗಳು ಅಸ್ಥಿ ವಿಸರ್ಜನೆ ನಡೆಸಬೇಕು ಎಂದು ಕಂದಾಯ ಇಲಾಖೆ ಆದೇಶ ಹೊರಡಿಸಿದೆ.

ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಬೆಳಕವಾಡಿ ಗ್ರಾಮದ ಕಾಶಿ ವಿಶ್ವೇಶ್ವರ ದೇವಾಲಯದಲ್ಲಿ ಬುಧವಾರ (ಜೂನ್ 2) ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಭಾಗವಹಿಸಿದ್ದರು. ಕೊವಿಡ್​ನಿಂದ ಮೃತಪಟ್ಟ ಸಾವಿರಕ್ಕೂ ಹೆಚ್ಚು ಜನರ ಅಸ್ಥಿಯನ್ನು ಕಾವೇರಿ ನದಿಗೆ ವಿಸರ್ಜನೆ ಮಾಡಿದ್ದರು.

ವೇದವಿದ್ವಾಂಸ ಭಾನುಪ್ರಕಾಶ್ ಶರ್ಮ ನೇತೃತ್ವದಲ್ಲಿ ಧಾರ್ಮಿಕ ವಿಧಿಗಳು ನೆರವೇರಿದವು. ಬೆಂಗಳೂರಿನ ಚಿತಾಗಾರಗಳಲ್ಲಿ ನಡೆದಿದ್ದ ಕೊವಿಡ್‌ನಿಂದ ಮೃತಪಟ್ಟವರ ಅಂತ್ಯಕ್ರಿಯೆಯ ನಂತರ ಅಸ್ಥಿ ಪಡೆಯಲು ಸಹ ಸಂಬಂಧಿಕರು ಬಂದಿರಲಿಲ್ಲ. ಕಳೆದ ತಿಂಗಳು ಕೊರೊನಾ ಸೋಂಕಿತರ ಮರಣ, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಅಧಿಕವಾಗಿತ್ತು. ಸೋಂಕಿತರ ಸಂಖ್ಯೆಯೂ ಹೆಚ್ಚಾಗಿತ್ತು. ಆ ವೇಳೆ, ಅಂತ್ಯಕ್ರಿಯೆ ಬಳಿಕ ಅಸ್ಥಿ ಪಡೆಯಲು ಸಂಬಂಧಿಕರು ಬಾರದ ಹಿನ್ನೆಲೆಯಲ್ಲಿ ಸರ್ಕಾರದಿಂದಲೇ ಈಗ ಮುಕ್ತಿ ಕಾರ್ಯ ನಡೆಸಿಕೊಡಲಾಗಿದೆ.

(District Administration to Cremate Dead Bodies of Person Died from Coronavirus Infection in Karnataka in case of Family deny to do last rites)

ಇದನ್ನೂ ಓದಿ: ಕೊರೊನಾದಿಂದ ಮೃತಪಟ್ಟ ಸಾವಿರಕ್ಕೂ ಹೆಚ್ಚು ಮಂದಿಯ ಅಸ್ಥಿ ವಿಸರ್ಜನೆ; ಸರ್ಕಾರದ ಪರವಾಗಿ ಸಂಕಲ್ಪಕ್ಕೆ ಕುಳಿತ ಆರ್ ಅಶೋಕ್

ಇದನ್ನೂ ಓದಿ: 1 ಸಾವಿರ ಅನಾಥ ಶವಗಳ ಅಸ್ಥಿಯ ಗೌರವಯುತ ವಿಸರ್ಜನೆ ಮಾಡಲಿದೆ ಕರ್ನಾಟಕ ಸರ್ಕಾರ


Follow us on

Related Stories

Most Read Stories

Click on your DTH Provider to Add TV9 Kannada