ನಮ್ಮ ಮುಖ್ಯಮಂತ್ರಿಗಳಿಗೆ ಯಾಕ್ರೋ ಬ್ಲ್ಯಾಕ್​ಮೇಲ್ ಮಾಡ್ತೀರಾ?: ಕಾಂಗ್ರೆಸ್ ಶಾಸಕರಿಗೇ ಗದರಿದ ಡಿ.ಕೆ. ಶಿವಕುಮಾರ್

ಬಿಎಸ್​ವೈ ವಿರುದ್ಧ ಯತ್ನಾಳ್ ಸಿಡಿ ಬಾಂಬ್ ಅಂದಿದ್ರು, ಆ ಸಿಡಿ ಇದೇನಾ? ವಿಶ್ವನಾಥ್ ಕೂಡ ಸಂಕ್ರಾಂತಿ ಬಳಿಕ ಸಿಡಿ ಬರುತ್ತೆ ಅಂದಿದ್ರು ಅದು ಇದೇನಾ? ಯತ್ನಾಳ್ ಹೇಳಿರೋ ಪ್ರಕಾರ 400 ಸಿಡಿಗಳು ಇವೆಯಂತೆ ಎಂದು ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.

ನಮ್ಮ ಮುಖ್ಯಮಂತ್ರಿಗಳಿಗೆ ಯಾಕ್ರೋ ಬ್ಲ್ಯಾಕ್​ಮೇಲ್ ಮಾಡ್ತೀರಾ?: ಕಾಂಗ್ರೆಸ್ ಶಾಸಕರಿಗೇ ಗದರಿದ ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್ ಹಾಗೂ ಬಿ.ಎಸ್. ಯಡಿಯೂರಪ್ಪ
Follow us
TV9 Web
| Updated By: ganapathi bhat

Updated on:Apr 06, 2022 | 6:51 PM

ಬೆಂಗಳೂರು: ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣ ತನಿಖೆಗೆ ಸಂಬಂಧಿಸಿ ಸದನದಲ್ಲಿ ಕಾಂಗ್ರೆಸ್ ಭಾರೀ ಪ್ರತಿಭಟನೆ ನಡೆಸಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಸಹಿತ ಕೈ ಪಾಳಯದ ನಾಯಕರು ಬಿಜೆಪಿ ನಡೆಯನ್ನು ಆಕ್ಷೇಪಿಸಿದ್ದಾರೆ. ಘಟನೆಗೆ ಸಂಬಂಧಿಸಿ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಈ ವೇಳೆ ಡಿ.ಕೆ. ಶಿವಕುಮಾರ್ ಜಾರಕಿಹೊಳಿ ಸಿಡಿ ಬಗ್ಗೆ ವರದಿಯಾದ ವಿವಿಧ ಪತ್ರಿಕೆಗಳ ಸುದ್ದಿಯ ಪ್ರತಿ ಹಿಡಿದು ಮಾತನಾಡಿದರು. ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರ ಹೇಳಿಕೆಗಳನ್ನೂ ಉಲ್ಲೇಖಿಸಿದರು. ಬಿಎಸ್​ವೈ ವಿರುದ್ಧ ಯತ್ನಾಳ್ ಸಿಡಿ ಬಾಂಬ್ ಅಂದಿದ್ರು, ಆ ಸಿಡಿ ಇದೇನಾ? ವಿಶ್ವನಾಥ್ ಕೂಡ ಸಂಕ್ರಾಂತಿ ಬಳಿಕ ಸಿಡಿ ಬರುತ್ತೆ ಅಂದಿದ್ರು ಅದು ಇದೇನಾ? ಯತ್ನಾಳ್ ಹೇಳಿರೋ ಪ್ರಕಾರ 400 ಸಿಡಿಗಳು ಇವೆಯಂತೆ. ಇದು ಯಾರ್ಯಾರೋ ಹೇಳಿದ್ದಲ್ಲ. ಮಾಜಿ ಕೇಂದ್ರ ಸಚಿವರಾಗಿದ್ದವರು, ಮುಂದೆ ಉಪಮುಖ್ಯಮಂತ್ರಿ, ಮುಖ್ಯಮಂತ್ರಿ ಆಗಲಿರುವ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದು ಎಂದು ಡಿ.ಕೆ. ಶಿವಕುಮಾರ್ ಆಡಳಿತ ಪಕ್ಷಕ್ಕೆ ಚಾಟಿ ಬೀಸಿದರು.

ಪತ್ರಿಕೆಯಲ್ಲಿ ಬಂದಿದ್ದನ್ನು ಓದುತ್ತಿದ್ದೇನೆ ಅಷ್ಟೇ. ಇದು ನಾನು ಹೇಳಿತ್ತಿರೋದಲ್ಲ. ಕಾಂಗ್ರೆಸ್ ಪಕ್ಷದ ನಾಲ್ವರು ನಾಯಕರು ಸಿಡಿ ಹಿಡಿದು ಯಡಿಯೂರಪ್ಪ ಅವರಿಗೆ ಬ್ಲ್ಯಾಕ್​ಮೇಲ್ ಮಾಡುತ್ತಿದ್ದಾರಂತೆ. ಸಿದ್ದರಾಮಯ್ಯ, ಲಕ್ಷ್ಮೀ ಹೆಬ್ಬಾಳ್ಕರ್, ಜಾರ್ಜ್ ಮುಖ್ಯಮಂತ್ರಿಗಳಿಗೆ ಬ್ಲ್ಯಾಕ್​ಮೇಲ್ ಮಾಡಿ ತಮ್ಮ ಕ್ಷೇತ್ರಗಳಿಗೆ ಅನುದಾನ ಪಡೆಯುತ್ತಿದ್ದಾರಂತೆ ಎಂದು ಯತ್ನಾಳ್ ಮಾತುಗಳನ್ನು ಶಿವಕುಮಾರ್ ಪುನರುಚ್ಚರಿಸಿದರು.

ನಮ್ಮ ಮಾನ್ಯ ಮುಖ್ಯಮಂತ್ರಿಗಳಿಗೆ ಯಾಕ್ರೋ ಬ್ಲಾಕ್​ಮೇಲ್ ಮಾಡ್ತೀರಾ? ಎಂದು ಹಿಂತಿರುಗಿ ತಮ್ಮ ಪಕ್ಷದ ಶಾಸಕರಿಗೆ ವ್ಯಂಗ್ಯವಾಗಿ ಗದರಿದರು. ಅದಕ್ಕೆ ಪ್ರತಿಕ್ರಿಯಿಸಿದ ಶಾಸಕ ರಮೇಶ್ ಕುಮಾರ್, ನೋಡಿ ಎಲ್ಲರೂ ಯಡಿಯೂರಪ್ಪ ಪರ ನಿಂತುಬಿಟ್ರು. ಶಿವಕುಮಾರ್ ಅವರೇ ಯಡಿಯೂರಪ್ಪ ಪರ ಮಾತಾಡಿದ್ದಾರೆ ಎಂದು ಚಟಾಕಿ ಹಾರಿಸಿದರು. ಎಲ್ಲರ ಸಂಭಾಷಣೆ ಕೇಳುತ್ತಿದ್ದ ಯಡಿಯೂರಪ್ಪ ಈ ಮಾತಿಗೆ ಮುಗುಳ್ನಗೆಯ ಪ್ರತಿಕ್ರಿಯೆಯಷ್ಟನ್ನೇ ಕೊಟ್ಟರು.

ಇದನ್ನೂ ಓದಿ: ಮಂಚದಲ್ಲಿ ಮಂಚದ ಕೆಲಸ ಮಾಡುವುದು ಬಿಟ್ಟು ರಾಜಕೀಯ ಬೇಕಿತ್ತಾ?; ರಮೇಶ್ ಜಾರಕಿಹೊಳಿ ಸಿಡಿ ಬಗ್ಗೆ ಡಿ.ಕೆ.ಶಿವಕುಮಾರ್ ಪ್ರಶ್ನೆ

ಸಿಡಿ ಬಗ್ಗೆ ಕುಮಾರಸ್ವಾಮಿ ಬಳಿ ಮಾಹಿತಿ ಸಂಗ್ರಹಿಸಿ: ರಮೇಶ್ ಜಾರಕಿಹೊಳಿ ಪ್ರಕರಣದ ಸಮಗ್ರ ತನಿಖೆಗೆ ಡಿ.ಕೆ.ಶಿವಕುಮಾರ್ ಒತ್ತಾಯ

Published On - 8:09 pm, Mon, 22 March 21