ರಾಜ್ಯದಲ್ಲಿ ವೈದ್ಯಕೀಯ ಆಕ್ಸಿಜನ್ ಕೊರತೆ ಇದೆ ಎಂಬ ತಪ್ಪು ಮಾಹಿತಿ ಹಬ್ಬಿಸಬೇಡಿ.. ಏನೂ ತೊಂದರೆ ಇಲ್ಲ: ಡಾ. ಕೆ.ಸುಧಾಕರ್​

ಕೊವಿಡ್​ 19 ಸೋಂಕು ಹೆಚ್ಚುತ್ತಿರುವುದರಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಸಹಜವಾಗಿಯೇ ಮಿತಿಮೀರುತ್ತಿದೆ. ಇದರಿಂದ ಆಸ್ಪತ್ರೆಗಳಲ್ಲಿ ವೆಂಟಿಲೇಟರ್, ಐಸಿಯು, ಆಕ್ಸಿಜನ್​ಗಳ ಸಮಸ್ಯೆ ಎದುರಾಗುತ್ತಿದೆ.

ರಾಜ್ಯದಲ್ಲಿ ವೈದ್ಯಕೀಯ ಆಕ್ಸಿಜನ್ ಕೊರತೆ ಇದೆ ಎಂಬ ತಪ್ಪು ಮಾಹಿತಿ ಹಬ್ಬಿಸಬೇಡಿ.. ಏನೂ ತೊಂದರೆ ಇಲ್ಲ: ಡಾ. ಕೆ.ಸುಧಾಕರ್​
ಆರೋಗ್ಯ ಸಚಿವ ಡಾ.ಕೆ.ಸುಧಾಕರ
Follow us
Lakshmi Hegde
|

Updated on:Apr 18, 2021 | 5:07 PM

ಬೆಂಗಳೂರು: ಕೊರೊನಾ ಸೋಂಕಿನ ಹರಡುವಿಕೆ ಮಿತಿಮೀರುತ್ತಿರುವ ಬೆನ್ನಲ್ಲೇ ಬೆಂಗಳೂರು ಸೇರಿ ಹಲವು ನಗರಗಳ ಆಸ್ಪತ್ರೆಗಳಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆ ಎದುರಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಅನೇಕ ಆಸ್ಪತ್ರೆಗಳಲ್ಲಿ ಆಕ್ಸಿಜನ್​ ಲಭ್ಯವಾಗದೆ ರೋಗಿಗಳು ಒದ್ದಾಡುತ್ತಿದ್ದಾರೆ. ಇವತ್ತಷ್ಟೇ ದೆಹಲಿ, ಮಹಾರಾಷ್ಟ್ರ ಸರ್ಕಾರಗಳು ತಮ್ಮಲ್ಲಿ ಆಕ್ಸಿಜನ್​ ಕೊರತೆ ಇರುವುದಾಗಿ ಹೇಳಿವೆ. ಈ ಮಧ್ಯೆ ಕರ್ನಾಟಕ ರಾಜ್ಯದಲ್ಲಿ ಯಾರೂ ಹೆದರಬೇಕಿಲ್ಲ. ಆಕ್ಸಿಜನ್​ ಕೊರತೆ ಉಂಟಾಗುವುದಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.

ಇಂದು ಟ್ವೀಟ್ ಮಾಡಿರುವ ಡಾ. ಕೆ. ಸುಧಾಕರ್​, ಕರ್ನಾಟಕದಲ್ಲಿ 7 ವೈದ್ಯಕೀಯ ಆಕ್ಸಿಜನ್​ ಉತ್ಪಾದನಾ ಘಟಕಗಳು ಇವೆ. ಇವು ಒಂದು ದಿನಕ್ಕೆ 812 ಟನ್​ಗಳಷ್ಟು ಆಕ್ಸಿಜನ್​ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿವೆ. ಇನ್ನು ಶನಿವಾರ ಬಳಕೆಯಾದ ಆಮ್ಲಜನಕ 272.61 ಟನ್​. ಹೀಗಿರುವಾಗ ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಇದೆ ಎಂಬ ಗಾಳಿಸುದ್ದಿಯನ್ನು ಅನಗತ್ಯವಾಗಿ ಹಬ್ಬಿಸಿ, ಜನರಲ್ಲಿ ಗಾಬರಿ ಹುಟ್ಟಿಸುವ ಕೆಲಸವನ್ನು ಯಾರೂ ಮಾಡಬಾರದು ಎಂದು ಹೇಳಿದ್ದಾರೆ.

ಕೊವಿಡ್​ 19 ಸೋಂಕು ಹೆಚ್ಚುತ್ತಿರುವುದರಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಸಹಜವಾಗಿಯೇ ಮಿತಿಮೀರುತ್ತಿದೆ. ಇದರಿಂದ ಆಸ್ಪತ್ರೆಗಳಲ್ಲಿ ವೆಂಟಿಲೇಟರ್​, ಐಸಿಯು, ಆಕ್ಸಿಜನ್​ಗಳ ಸಮಸ್ಯೆ ಎದುರಾಗುತ್ತಿದೆ. ರಾಜ್ಯದಲ್ಲಿರುವ ಆಮ್ಲಜನಕ ಉತ್ಪಾದನಾ ಘಟಕಗಳು ದು:ಸ್ಥಿತಿಯಲ್ಲಿದ್ದು, ಅವುಗಳನ್ನು ಆದಷ್ಟು ಬೇಗ ದುರಸ್ತಿ ಮಾಡಿಸಬೇಕು ಎಂಬ ಮಾತೂ ಕೇಳಿಬರುತ್ತಿದೆ.

ಇದನ್ನೂ ಓದಿ: ರೈಲುಗಳ ಮೂಲಕ ವೈದ್ಯಕೀಯ ಆಕ್ಸಿಜನ್​ ಸಾಗಣೆಗೆ ಅವಕಾಶ ಕೊಡಿ; ಕೇಂದ್ರ ಸರ್ಕಾರಕ್ಕೆ ಮಹಾರಾಷ್ಟ್ರ ಸರ್ಕಾರದ ಮನವಿ

ಹೆಚ್ಚುತ್ತಿದೆ ಕೊರೊನಾ ಅಟ್ಟಹಾಸ; ಜನರೇ ಜನತಾ ಕರ್ಫ್ಯೂ ಹಾಕಿಕೊಳ್ಳಬೇಕು ಎಂದ ಸಚಿವ ಡಾ. ಕೆ.ಸುಧಾಕರ್

ಕೊರೊನಾ ಎಫೆಕ್ಟ್​: ತಡರಾತ್ರಿ ಕಾರ್ಯಾಚರಣೆಗಿಳಿದ ಸಚಿವ ಡಾ.ಕೆ.ಸುಧಾಕರ್​.. ನಿಯಮ ಪಾಲಿಸದ ಖಾಸಗಿ ಆಸ್ಪತ್ರೆಗಳಿಗೆ ಎಚ್ಚರಿಕೆ

Do not create panic about shortage of medical oxygen in the Karnataka says K.Sudhakar

Published On - 5:05 pm, Sun, 18 April 21