ಚಿಕ್ಕವಯಸ್ಸಿನಲ್ಲೆ ಯೋಗದಲ್ಲಿ ಸಾಧನೆ ಮಾಡಿದ ಪೋರಿ: ಬೆಳ್ಳಿ ಸೇರಿ ಹಲವು ಪದಕ ಗೆದ್ದ ದೊಡ್ಡಬಳ್ಳಾಪುರ ಬಾಲಕಿ

ದೊಡ್ಡಬಳ್ಳಾಪುರ ಯೋಗಪಟುಗಳ ತವರೂರಾಗಿದ್ದು, ನಗರದಲ್ಲಿ ಹಲವು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಯೋಗಪಟುಗಳಿದ್ದಾರೆ. ಇದೀಗ 10 ನೇ ತರಗತಿ ಮುಗಿಸಿ ಪ್ರಥಮ ಪಿಯುಸಿಗೆ ಕಾಲಿಟ್ಟಿರುವ ಈ ಬಾಲಕಿ ಯೋಗ ಕ್ಷೇತ್ರದಲ್ಲಿ ಸಾಧನೆಗೈದಿದ್ದಾಳೆ. ನಗರದ ಶಾಂತಿನಗರದ ನಿವಾಸಿಗಳಾದ ರವಿಕುಮಾರ್ ಮತ್ತು ರತ್ನ ದಂಪತಿ ಮಗಳಾದ ಜಾಹ್ನವಿ ಅಂತರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿ ಅತ್ಯುನ್ನತ ಸಾಧನೆ ಮಾಡಿದ್ದಾಳೆ.

ಚಿಕ್ಕವಯಸ್ಸಿನಲ್ಲೆ ಯೋಗದಲ್ಲಿ ಸಾಧನೆ ಮಾಡಿದ ಪೋರಿ: ಬೆಳ್ಳಿ ಸೇರಿ ಹಲವು ಪದಕ ಗೆದ್ದ ದೊಡ್ಡಬಳ್ಳಾಪುರ ಬಾಲಕಿ
ಚಿಕ್ಕವಯಸ್ಸಿನಲ್ಲೆ ಯೋಗದ ಸಾಧನೆ ಮಾಡಿದ ಪೋರಿ: ಬೆಳ್ಳಿ ಸೇರಿ ಹಲವು ಪದಕ ಗೆದ್ದ ದೊಡ್ಡಬಳ್ಳಾಪುರ ಬಾಲಕಿ
Follow us
ನವೀನ್ ಕುಮಾರ್ ಟಿ
| Updated By: ಗಂಗಾಧರ​ ಬ. ಸಾಬೋಜಿ

Updated on:Jun 20, 2024 | 10:54 PM

ಬೆಂಗಳೂರು ಗ್ರಾಮಾಂತರ, ಜೂನ್​ 20: ಆ ಬಾಲಕಿ ಇಗಷ್ಟೆ ಹತ್ತನೇ ತರಗತಿ ಮುಗಿಸಿ ಪಿಯುಸಿ ಸೇರಿದ್ದಾಳೆ. ಚಿಕ್ಕವಯಸ್ಸಿನಲ್ಲೆ ಆ ಬಾಲಕಿ (girl) ಏನಾದ್ರು ಸಾಧನೆ ಮಾಡಬೇಕೆಂಬ ಹಂಬಲದಿಂದ ಯೋಗವನ್ನ (Yoga) ಆಯ್ಕೆ ಮಾಡಿಕೊಂಡು ಯೋಗ ಕ್ಷೇತ್ರದಲ್ಲಿ ಭರವಸೆಯ ಬೆಳಕಾಗಿದ್ದಾಳೆ. ದೇಶ, ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆದಿರೋ ಯೋಗ ಸ್ಫರ್ಧೆಗಳಲ್ಲಿ ಬೆಳ್ಳಿ ಹಾಗೂ ಹಲವು ಪ್ರಶಸ್ತಿಗಳ ಗೆದ್ದು ಸಾಧನೆ ಮಾಡಿರುವ ಈ ಬಾಲಕಿ ಮತ್ತಷ್ಟು ಸಾಧನೆ ಮಾಡುವತ್ತಾ ಹೆಜ್ಜೆ ಹಾಕಿದ್ದಾಳೆ.

ಯೋಗ ಕ್ಷೇತ್ರದಲ್ಲಿ ಸಾಧನೆಗೈದ ಬಾಲಕಿ 

ಅಂದಹಾಗೆ ದೊಡ್ಡಬಳ್ಳಾಪುರ ಯೋಗಪಟುಗಳ ತವರೂರಾಗಿದ್ದು, ನಗರದಲ್ಲಿ ಹಲವು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಯೋಗಪಟುಗಳಿದ್ದಾರೆ. ಇದೀಗ 10 ನೇ ತರಗತಿ ಮುಗಿಸಿ ಪ್ರಥಮ ಪಿಯುಸಿಗೆ ಕಾಲಿಟ್ಟಿರುವ ಈ ಬಾಲಕಿ ಯೋಗ ಕ್ಷೇತ್ರದಲ್ಲಿ ಸಾಧನೆಗೈದಿದ್ದಾಳೆ. ನಗರದ ಶಾಂತಿನಗರದ ನಿವಾಸಿಗಳಾದ ರವಿಕುಮಾರ್ ಮತ್ತು ರತ್ನ ದಂಪತಿ ಮಗಳಾದ ಜಾಹ್ನವಿ ಅಂತರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿ ಅತ್ಯುನ್ನತ ಸಾಧನೆ ಮಾಡಿದ್ದಾಳೆ.

ಇದನ್ನೂ ಓದಿ: International Yoga Day 2024: ಜೂನ್‌ 21ರಂದೇ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸುವುದು ಏಕೆ?

2019ರ ಸೆಪ್ಟಂಬರ್​ನಲ್ಲಿ ದಕ್ಷಿಣ ಕೊರಿಯದಲ್ಲಿ ನಡೆದ 9ನೇ ಏಷ್ಯನ್ ಯೋಗ ಸ್ಪೋರ್ಟ್ಸ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ ಬೆಳ್ಳಿ ಸಾಧನೆ ಮಾಡಿದ್ದಾಳೆ. ಸಾಂಪ್ರದಾಯಿಕ ಯೋಗದಲ್ಲಿ ಬೆಳ್ಳಿ ರಿದಮಿಕ್ ಯೋಗದಲ್ಲಿ ಕಂಚಿನ ಸಾಧನೆ ಮಾಡಿದ್ದಾಳೆ. ಅಲ್ಲದೆ ಮೈಸೂರು ದಸರಾದಲ್ಲಿ ಯೋಗ ಪ್ರದರ್ಶನ ಮಾಡಿರುವ ಜಾಹ್ನವಿ ರಾಜ್ಯ ಮಟ್ಟದ ಯೋಗ ಸ್ವರ್ಥೆಯಲ್ಲಿ ಭಾಗವಹಿಸಿ ಹಲವು ಪದಕಗಳನ್ನ ಮುಡಿಗೇರಿಸಕೊಂಡಿದ್ದು ಮತ್ತೆ ಕ್ಲಿಷ್ಟಕರ ಯೋಗವನ್ನ ಮಾಡಲು ಸಜ್ಜಾಗುತ್ತಿದ್ದಾಳೆ.

ಯೋಗಪಟು ಜಾಹ್ನವಿ ನಗರದ ನಿಸರ್ಗ ಯೋಗ ಕೇಂದ್ರದಲ್ಲಿ ಕಳೆದ 10 ವರ್ಷಗಳಿಂದ ತರಬೇತಿಯನ್ನು ಪಡೆಯುತ್ತಿದ್ದಾಳೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಯೋಗ ಸ್ಪರ್ಧೆಯಲ್ಲಿ ಭಾಗವಹಿಸುವ ಯೋಗಪಟುಗಳಿಗೆ ವಿದ್ಯಾಭ್ಯಾಸ ಮತ್ತು ಸರ್ಕಾರಿ ಕೆಲಸ ಸೇರಲು ನೇರವಾಗುತ್ತೆ ಜೊತೆಗೆ ಉತ್ತಮ ಆರೋಗ್ಯವನ್ನು ಹೊಂದಬಹುದು ಎನ್ನುವುದು ಜಾಹ್ನವಿ ಪೋಷಕರ ಮಾತಾಗಿದೆ. ಯೋಗದಲ್ಲೇ ವಿವಿಧ ಕ್ಲಿಷ್ಟಕರ ಆಸನಗಳನ್ನ ಮಾಡುವ ಮೂಲಕ ಎಲ್ಲರನ್ನ ನಿಬ್ಬೆರಗಾಗುವಂತೆ ಮಾಡಿರುವ ಜಾಹ್ನವಿ ತಂದೆ ತಾಯಿ ಮಗಳ ಸಾಧನೆ ಕಂಡು ಖುಷಿಗೊಂಡಿದ್ದಾರೆ.

ಇದನ್ನೂ ಓದಿ: International Yoga Day 2024 : ಯೋಗ ಮಾಡುವ ವೇಳೆ ಪಾಲಿಸಲೇಬೇಕಾದ ನಿಯಮಗಳಿವು

ಫ್ಯಾನ್ಸಿ ಸ್ಟೋರ್ ನಡೆಸಿಕೊಂಡು ಮಗಳನ್ನ ಯೋಗದಲ್ಲೇ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿಸಬೇಕೆಂಬ ಹಂಬಲ ಇಟ್ಟುಕೊಂಡಿದ್ದಾರೆ. ಇನ್ನೂ ಸ್ಮರಣ ಶಕ್ತಿ ಮತ್ತು ಸದೃಢ ಆರೋಗ್ಯಕ್ಕಾಗಿ ಚಿಕ್ಕ ವಯಸ್ಸಿಂದ ಮಗಳನ್ನು ಯೋಗ ಕಲಿಯಲು ಸೇರಿಸಿದ್ದು, ಈಗ ಅದೇ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವುದು ಜಾಹ್ನವಿ ಪೋಷಕರ ಸಂತಸಕ್ಕೆ ಕಾರಣವಾಗಿದೆ.

ಯೋಗವನ್ನ ಅಳವಡಿಸಿಕೊಂಡ್ರೆ ಒಳ್ಳೆಯ ಆರೋಗ್ಯ ವೃದ್ಧಿ ಆಗಬಹುದೆಂದು ಸೇರಿಕೊಂಡ ಈ ಬಾಲಕಿ ಯೋಗ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಬೇಕೆಂಬ ಹಂಬಲ ಇಟ್ಟುಕೊಂಡಿದ್ದಾಳೆ. ಇನ್ನೂ ಪ್ರಪಂಚಕ್ಕೆ ಯೋಗವನ್ನು ಪರಿಚಯಿಸಿದ ಭಾರತ ತನ್ನ ನೆಲದಲ್ಲಿ ಹಲವು ಸಾಧಕರನ್ನ ಹೊಂದಿದ್ದು, ಜಾಹ್ನವಿ ಸಹ ಅಂತರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಿ ಮತ್ತಷ್ಟು ಪ್ರಶಸ್ತಿ ಗೆದ್ದು ದೇಶಕ್ಕೆ ಹೆಸರು ತರಲಿ ಅನ್ನೋದು ಎಲ್ಲರ ಆಶಯ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:53 pm, Thu, 20 June 24

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ