ರಾಜ್ಯದಲ್ಲಿ ಸಮುದಾಯದಲ್ಲಿ ಕೊರೊನಾ ಹರಡುವಿಕೆ: ಸಿರೊ ಸಮೀಕ್ಷೆ ಪ್ರಕಟ, ದೀಪಾವಳಿ ಕಂಟಕ ತರುತ್ತ?
ಬೆಂಗಳೂರು: ಕೋವಿಡ್-19 ಸಿರೊ-ಸಮೀಕ್ಷೆ ಬಗ್ಗೆ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಸುದ್ದಿಗೋಷ್ಠಿ ನಡೆಸಿದ್ದಾರೆ. ಸಭೆಯಲ್ಲಿ ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ, ನಿರ್ದೇಶಕ ಡಾ. ಪಾಟೀಲ್ ಓಂ ಪ್ರಕಾಶ್, ಸಾಂಕ್ರಾಮಿಕ ಸೋಂಕು ಶಾಸ್ತ್ರಜ್ಞ ಗಿರಿಧರ್ ಬಾಬು ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಇನ್ನು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುಧಾಕರ್, ಸೆರೊ ಸರ್ವೆಗೆ ಸಭೆಯನ್ನ ಮಾಡಿದ್ವಿ. ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಬಗ್ಗೆ ಸರ್ವೆ ಮಾಡಲಾಗಿದೆ. ಸಮುದಾಯದಲ್ಲಿ ಯಾವ ರೀತಿ ಹರಡ್ತಿದೆ ಅನ್ನೋದನ್ನ ತಿಳಿದುಕೊಳ್ಳಲು ಈ ಸರ್ವೆ ಮಾಡಲಾಗಿದೆ. ಮಹಾರಾಷ್ಟ್ರ, ರಾಜ್ಯದ […]

ಬೆಂಗಳೂರು: ಕೋವಿಡ್-19 ಸಿರೊ-ಸಮೀಕ್ಷೆ ಬಗ್ಗೆ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಸುದ್ದಿಗೋಷ್ಠಿ ನಡೆಸಿದ್ದಾರೆ. ಸಭೆಯಲ್ಲಿ ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ, ನಿರ್ದೇಶಕ ಡಾ. ಪಾಟೀಲ್ ಓಂ ಪ್ರಕಾಶ್, ಸಾಂಕ್ರಾಮಿಕ ಸೋಂಕು ಶಾಸ್ತ್ರಜ್ಞ ಗಿರಿಧರ್ ಬಾಬು ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.
ಇನ್ನು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುಧಾಕರ್, ಸೆರೊ ಸರ್ವೆಗೆ ಸಭೆಯನ್ನ ಮಾಡಿದ್ವಿ. ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಬಗ್ಗೆ ಸರ್ವೆ ಮಾಡಲಾಗಿದೆ. ಸಮುದಾಯದಲ್ಲಿ ಯಾವ ರೀತಿ ಹರಡ್ತಿದೆ ಅನ್ನೋದನ್ನ ತಿಳಿದುಕೊಳ್ಳಲು ಈ ಸರ್ವೆ ಮಾಡಲಾಗಿದೆ. ಮಹಾರಾಷ್ಟ್ರ, ರಾಜ್ಯದ ಎಲ್ಲ ಜಿಲ್ಲೆ, ಬೆಂಗಳೂರಿನ 8 ವಲಯಗಳಲ್ಲಿ ಸಮೀಕ್ಷೆ ಮಾಡಿದ್ದು ತಮಿಳುನಾಡು, ದೆಹಲಿಯಲ್ಲೂ ಈ ಸರ್ವೆ ಮಾಡಲಾಗಿದೆ.
ನಾವು ಸೆಪ್ಟೆಂಬರ್ 3 ರಿಂದ 16 ರವರೆ ಸರ್ವೆ ಮಾಡಿದ್ದೀವಿ. ಬೇರೆ ರಾಜ್ಯದವರು ಕೇವಲ ಅವರ ಮೆಟ್ರೋ ಪಾಲಿಟನ್ ಸಿಟಿಗಳಲ್ಲಿ ಮಾತ್ರ ಮಾಡಿದ್ದಾರೆ. ಆದರೆ ನಾವು ರಾಜ್ಯದ ಎಲ್ಲಾ ಕಡೆ ಮಾಡಿದ್ದೇವೆ. ರಾಜ್ಯದಲ್ಲಿ 16,585 ಮಂದಿಯನ್ನ ಸರ್ವೆಗೆ ಒಳಪಡಿಸಿದ್ವಿ ಅದರಲ್ಲಿ 15,624 ಮಂದಿಯ ಫಲಿತಾಂಶ ಬಂದಿದೆ ಎಂದು ತಿಳಿಸಿದ್ರು.
ರಾಜ್ಯದಲ್ಲಿ 27.3% ಮಂದಿಗೆ ಕೊರೊನಾ: ಕಡಿಮೆ ರಿಸ್ಕ್ ಇರುವವರನ್ನ ಮೊದಲು ಸರ್ವೆ ಮಾಡಲಾಯ್ತು. ನಂತರ ಮಾಡರೇಟ್ ರಿಸ್ಕ್ ಇರುವ ಕಡೆ ಅಂದರೆ ಮಾಲ್ಗಳು, ರೈಲು & ಬಸ್ ನಿಲ್ದಾಣಗಳಲ್ಲಿ ಕೆಲಸ ಮಾಡುವವರ ಸರ್ವೆ ಮಾಡಲಾಯಿತು. ಬಳಿಕ ಸಿವಿಯರ್ ರಿಸ್ಕ್ ಸೇರಿದಂತೆ ಐಸಿಎಂಆರ್ ಮಾರ್ಗಸೂಚಿಯಂತೆ ಮೂರು ವಿಧದಲ್ಲಿ ಸರ್ವೆ ಮಾಡಲಾಗಿದೆ.
ಆ್ಯಂಟಿಜನ್ ಟೆಸ್ಟ್, RTPCR ಟೆಸ್ಟ್ ಹಾಗೂ ಆ್ಯಂಟಿಬಾಡಿ ಟೆಸ್ಟ್ ಮಾಡಲಾಗಿದೆ. ಆ್ಯಂಟಿಬಾಡಿ ಟೆಸ್ಟ್ನಿಂದ ಕೊರೊನಾ ಬಂದು ಹೋಗಿರುವುದರ ಬಗ್ಗೆ ಗೊತ್ತಾಗುತ್ತೆ. ಹೀಗಾಗಿ ಸಮಗ್ರವಾಗಿ ವೈಜ್ಞಾನಿಕವಾಗಿ ಸರ್ವೆಯನ್ನು ನಮ್ಮ ಕಮಿಟಿ ಮಾಡಿದೆ. ರಾಜ್ಯದಲ್ಲಿ 15,624 ಮಂದಿ ಫಲಿತಾಂಶದಲ್ಲಿ ಆ್ಯಂಟಿಬಾಡಿ ಬಂದಿರುವವರ ಪ್ರಮಾಣ 16.4 ಇದೆ.
ಹಾಗೂ ದೆಹಲಿಯಲ್ಲಿ ಇದರ ಪ್ರಮಾಣ 21.9 ಪರ್ಸೆಂಟ್ ಇದೆ. ದೆಹಲಿಯ ಸ್ಲಂಗಳಲ್ಲಿ 57 ಪರ್ಸೆಂಟ್ ಆ್ಯಂಟಿಬಾಡಿ ಬಂದಿದೆ. ಕರ್ನಾಟಕದಲ್ಲಿ 16.4 ಪರ್ಸೆಂಟ್ ಇದೆ. ಆ್ಯಂಟಿಜನ್ ಅಂಡ್ ಆರ್ಟಿಪಿಸಿಆರ್ ರಾಜ್ಯದಲ್ಲಿ ಸಕ್ರಿಯ ಸೋಂಕಿತರ ಪ್ರಮಾಣ 12.7 ಇದೆ. ರಾಜ್ಯದಲ್ಲಿ 27.3 ಪರ್ಸೆಂಟ್ ಮಂದಿಗೆ ಕೊರೊನಾ ಬಂದಿದೆ. ಹಾಗೂ ರಾಜ್ಯದ ಒಟ್ಟು ಮರಣ ಪ್ರಮಾಣ 0.05 ನಷ್ಟಿದೆ. ದೆಹಲಿಯಲ್ಲಿ 0.09 ಪರ್ಸೆಂಟ್ ಇದೆ ಎಂದು ಹೇಳಿದ್ದಾರೆ.
ಕೊರೊನಾ ಪ್ರಮಾಣ ಎಷ್ಟಿದೆ ಎಂದು ಅಂದಾಜಿಗೆ ಸಮಿತಿ: ಇನ್ನು ಕೊರೊನಾ ಪ್ರಮಾಣ ಎಷ್ಟಿದೆ ಎಂದು ಅಂದಾಜಿಗೆ ಸಮಿತಿ ಮಾಡಲಾಗಿದ್ದು ಅದರಲ್ಲಿ ನಿಮ್ಹಾನ್ಸ್, ಬಿಎಂಸಿಆರ್, PHFI ಸೇರಿ ಹಲವು ಸಂಸ್ಥೆಗಳು ಸೇರಿಕೊಂಡಿವೆ. ಡಿಸೆಂಬರ್ ಅಂತ್ಯದಲ್ಲಿ ಹಾಗೂ ಫೆಬ್ರವರಿ ಅಥವಾ ಮಾರ್ಚ್ನಲ್ಲಿ ಮತ್ತೊಮ್ಮೆ ಸರ್ವೆ ಮಾಡಿಸಲು ತೀರ್ಮಾನ ಮಾಡಲಾಗಿದೆ. ಅನೇಕ ಪರಿಣಿತರು ಚೆನ್ನಾಗಿ ಕೆಲಸ ಮಾಡಿದ್ದಾರೆ. ಬಳ್ಳಾರಿಯಲ್ಲಿ 43.1 ನಷ್ಟು ಸೋಂಕಿತರ ಪ್ರಮಾಣವಿದೆ. ಬೆಂಗಳೂರಿನಲ್ಲಿ 29 ಪರ್ಸೆಂಟ್ ಸೋಂಕಿತರ ಪ್ರಮಾಣವಿದೆ. ಬೆಂಗಳೂರು ಪಶ್ವಿಮದಲ್ಲಿ 45 ಪರ್ಸೆಂಟ್ ಸೋಂಕಿತರ ಪ್ರಮಾಣವಿದೆ.
ಈ ಸರ್ವೆ ಪ್ರಕಾರ ತಿಳಿಯುವುದೇನೆಂದರೆ ರಾಜ್ಯದಲ್ಲಿ ಜನರಿಗೆ ಹೆಚ್ಚಿನ ಇಮ್ಯೂನಿಟಿ ಸಮಸ್ಯೆ ಇದೆ. ಹೀಗಾಗಿ ಸೋಂಕು ಬಂದು ಹೋದವರಿಗೂ ಮತ್ತೆ ಸೋಂಕು ವಕ್ಕರಿಸಬಹುದು. ಹಾಗೂ ಹೊಸದಾಗಿ ಸೋಂಕಿತರ ಸಂಖ್ಯೆ ಹೆಚ್ಚಾಗಬಹುದು. ಹೀಗಾಗಿ ಈ ಬಾರಿ ದೀಪಾವಳಿಯನ್ನು ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಸುರಕ್ಷಿತವಾಗಿ ಆಚರಿಸಿ. ಇಲ್ಲದಿದ್ದರೆ ರಾಜ್ಯದಲ್ಲಿ ಮತ್ತೆ ಕೊರೊನಾ ಅಬ್ಬರ ಹೆಚ್ಚಾಗುವ ಸಾಧ್ಯತೆ ಇದೆ.
Published On - 12:52 pm, Wed, 4 November 20




