ನೆಲಮಂಗಲ: ಪಾನಮತ್ತನಾಗಿ ತನ್ನದೇ ಬೈಕ್​ಗೆ ಬೆಂಕಿ ಹಚ್ಚಿ ಸುಟ್ಟ ಕುಡುಕ!

ನೆಲಮಂಗಲದ ವಿಜಯನಗರದಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿಯೋರ್ವ ಗಂಟಲು ಪೂರ್ತಿ ಕುಡಿದಿದ್ದ. ಅಷ್ಟೇ ಅಲ್ಲ, ದೊಡ್ಡದಾಗಿ ಗಲಾಟೆ ಕೂಡ ಮಾಡುತ್ತಿದ್ದ. ವಿಚಿತ್ರ ಎಂಬಂತೆ ಏಕಾಏಕಿ ಬೈಕ್​ಗೆ ಬೆಂಕಿ ಹಚ್ಚಿದ್ದಾನೆ! ಅದೂ ಆತನದ್ದೇ ಬೈಕ್​!

ನೆಲಮಂಗಲ: ಪಾನಮತ್ತನಾಗಿ ತನ್ನದೇ ಬೈಕ್​ಗೆ ಬೆಂಕಿ ಹಚ್ಚಿ ಸುಟ್ಟ ಕುಡುಕ!
Edited By:

Updated on: Dec 20, 2020 | 9:05 PM

ನೆಲಮಂಗಲ: ಕುಡಿದ ಅಮಲಿನಲ್ಲಿ ಯಾರು ಏನು ಮಾಡುತ್ತಾರೆ ಎಂದು ಹೇಳೋದು ತುಂಬಾನೇ ಕಷ್ಟ. ಕೆಲವರು ಪಾನಮತ್ತರಾಗಿ ಹೆಂಡತಿಗೆ ಹೊಡೆದರೆ, ಇನ್ನೂ ಕೆಲವರು ಸಾರ್ವುಜನಿಕ ಆಸ್ತಿ ಹಾಳುಮಾಡುತ್ತಾರೆ. ಇಲ್ಲವೇ ದೊಡ್ಡದಾಗಿ ಗದ್ದಲ ಎಬ್ಬಿಸಿ ಬೇರೆಯವರಿಗೆ ತೊಂದರೆ ನೀಡುತ್ತಾರೆ. ಆದರೆ, ತಮಗೆ ತಾವೇ ತೊಂದರೆ ಮಾಡಿಕೊಳ್ಳುವ ಪ್ರಕರಣ ತುಂಬಾನೇ ಅಪರೂಪ. ಆದರೆ, ಬೆಂಗಳೂರಿನ ನೆಲಮಂಗಲದಲ್ಲಿ ಈ ವಿಚಾರ ಸುಳ್ಳಾಗಿದೆ. ಕುಡಿದ ಅಮಲಿನಲ್ಲಿ ವ್ಯಕ್ತಿಯೋರ್ವ ತನ್ನ ಬೈಕ್​ಗೆ ತಾನೇ ಬೆಂಕಿ ಹಚ್ಚಿಕೊಂಡಿದ್ದಾನೆ!

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ವಿಜಯನಗರದಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿಯೋರ್ವ ಗಂಟಲು ಪೂರ್ತಿ ಕುಡಿದಿದ್ದ. ಅಷ್ಟೇ ಅಲ್ಲ, ದೊಡ್ಡದಾಗಿ ಗಲಾಟೆ ಕೂಡ ಮಾಡುತ್ತಿದ್ದ. ವಿಚಿತ್ರ ಎಂಬಂತೆ ಏಕಾಏಕಿ ಬೈಕ್​ಗೆ ಬೆಂಕಿ ಹಚ್ಚಿದ್ದಾನೆ! ಅದೂ ಆತನದ್ದೇ ಬೈಕ್​!

ಸ್ಥಳೀಯರು ಎಷ್ಟೇ ಕೂಗಾಡಿದರೂ ಕೇಳದ ಕುಡುಕ ಬೈಕ್​ ಹೊತ್ತಿ ಉರಿಯುವಂತೆ ಮಾಡಿದ್ದಾನೆ. ಬೈಕ್​ಗೆ ಬೆಂಕಿ ಬಿದ್ದಿದ್ದನ್ನು ಗಮಿಸಿದ ಸ್ಥಳೀಯರು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿ ಅಗ್ನಿಶಾಮಕ ದಳದವರು ಬೆಂಕಿ ನಂದಿಸಿದ್ದಾರೆ. ಆದರೆ, ಬೈಕ್​ ಆಗಲೇ ಸಂಪೂರ್ಣ ಬೆಂಕಿಗೆ ಆಹುತಿಯಾಗಿತ್ತು.

ಎರಡು ಬೈಕ್​​ಗಳಿಗೆ ಲಾರಿ ಡಿಕ್ಕಿ; ಇಬ್ಬರು ಸಾವು

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us