
ದೇವನಹಳ್ಳಿ: ಕೊರೊನಾ ಸೋಂಕು ಇದೀಗ ಬೆಂಗಳೂರು ಹೊರವಲಯದ ಕೈಗಾರಿಕಾ ಪ್ರದೇಶಕ್ಕೂ ವ್ಯಾಪಿಸಿದೆ. ಬೆಂಗಳೂರು ಉತ್ತರ ತಾಲೂಕಿನ ಹುಣಚೂರು ಬಳಿಯ ಕೈಗಾರಿಕಾ ಪ್ರದೇಶದಲ್ಲಿರುವ ಐಗೆನ್ ಕಂಪನಿಯ ನೌಕರನಿಗೆ ಕೊರೊನಾ ಇರುವುದು ದೃಢವಾಗಿದೆ.
ಇಲ್ಲಿನ ಕಂಪನಿಯಲ್ಲಿ ಅಕೌಂಟ್ ಟೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದ ರಾಜಸ್ಥಾನ ಮೂಲದ ನೌಕರ ನೆಗಡಿ ಬಂದ ಹಿನ್ನಲೆಯಲ್ಲಿ ಕೊರೊನಾ ಟೆಸ್ಟ್ ಮಾಡಿಸಿದ್ದ. ಬಳಿಕ ಇತನಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇದೀಗ ವಿಚಾರ ತಿಳಿದ ಕಂಪನಿಯವರು ಕೆಲಸ ಮಾಡ್ತಿದ್ದ 270 ಜನ ನೌಕರರನ್ನ ಕಂಪನಿಯಲ್ಲೇ ಉಳಿಸಿಕೊಂಡು ಕೊರೊನಾ ಟೆಸ್ಟ್ ಮಾಡಿಸಲು ಮುಂದಾಗಿದ್ದಾರೆ.
ಇನ್ನೂ ಕೊವಿಡ್ ಟೆಸ್ಟ್ ಮಾಡಿ ಕ್ವಾರಂಟೈನ್ ಗೆ ಕಳಿಸೂ ನಿಟ್ಟಿನಲ್ಲಿ ಕಂಪನಿಯಲ್ಲೆ ನೌಕರರು ರಾತ್ರಿಯಿಡೀ ಕಾಲ ಕಳೆದಿದ್ದು, ಎಲ್ಲರಲ್ಲೂ ಆತಂಕ ಮನೆ ಮಾಡಿದೆ. ಇನ್ನೂ ಬೆಂಗಳೂರಿಗೆ ಐಗೆನ್ ಕಂಪನಿ ಕಂಟಕವಾಗುತ್ತಾ? ಎಂಬಂತಾಗಿದ್ದು ಮೈಸೂರಿನ ಜ್ಯುಬಿಲಿಯೆಂಟ್ ಕಾರ್ಖಾನೆಯಂತೆ ವ್ಯಾಪಿಸಲಿದಿಯಾ ಅನ್ನೋ ಪ್ರಶ್ನೆ ಎದ್ದಿದೆ.
Published On - 10:51 am, Thu, 4 June 20