ಕರ್ನಾಟಕ ಜನತೆಗೆ ಶಾಕ್! ಏಪ್ರಿಲ್​ನಲ್ಲಿ ವಿದ್ಯುತ್ ದರ ಏರಿಕೆ ಸಾಧ್ಯತೆ

ಕಳೆದ ವರ್ಷ 1.39 ಪೈಸೆಗೆ ದರ ಪರಿಷ್ಕರಣೆಗೆ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಆದರೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಪರಿಷ್ಕರಣೆ ಮಾಡಿದ್ದು ಕೇವಲ 30 ಪೈಸೆ. ಈ ವರ್ಷವೂ 1.50 ಪೈಸೆ ದರ ಏರಿಕೆಗೆ ಪ್ರಸ್ತಾವನೆ ನೀಡಲಾಗಿದೆ.

ಕರ್ನಾಟಕ ಜನತೆಗೆ ಶಾಕ್! ಏಪ್ರಿಲ್​ನಲ್ಲಿ ವಿದ್ಯುತ್ ದರ ಏರಿಕೆ ಸಾಧ್ಯತೆ
ಸಾಂದರ್ಭಿ ಚಿತ್ರ
Follow us
TV9 Web
| Updated By: sandhya thejappa

Updated on:Feb 13, 2022 | 9:28 AM

ಬೆಂಗಳೂರು: ರಾಜ್ಯದ ಜನತೆಗೆ ವಿದ್ಯುತ್ ದರ (Electricity Rate) ಏರಿಕೆ ಬಿಸಿ ತಟ್ಟುವ ಸಾಧ್ಯತೆಯಿದೆ. ಬೆಲೆ ಏರಿಕೆ ಮಾಡುವಂತೆ ಎಸ್ಕಾಂಗಳಿಂದ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ (Karnataka Electricity Regulatory Commission) ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಪ್ರತಿ ಯೂನಿಟ್​ಗೆ 1.50 ರೂ. ವಿದ್ಯುತ್ ದರ ಏರಿಕೆ ಮಾಡುವಂತೆ ಪ್ರಸ್ತಾವನೆಯಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಕೆಇಆರ್​ಸಿ (KERC) ನಾಳೆಯಿಂದ ಗ್ರಾಹಕರ ಅಹವಾಲು ಸ್ವೀಕರಿಸಲಿದೆ. ನಾಳೆಯಿಂದ 3 ದಿನ ದರ ಪರಿಷ್ಕರಣೆ ಪರಿಶೀಲನಾ ಕಾರ್ಯ ನಡೆಯಲಿದ್ದು, ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ದರ ಏರಿಕೆಯಾಗುವ ಸಾಧ್ಯತೆಯಿದೆ.

ಕಳೆದ ವರ್ಷ 1.39 ಪೈಸೆಗೆ ದರ ಪರಿಷ್ಕರಣೆಗೆ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಆದರೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಪರಿಷ್ಕರಣೆ ಮಾಡಿದ್ದು ಕೇವಲ 30 ಪೈಸೆ. ಈ ವರ್ಷವೂ 1.50 ಪೈಸೆ ದರ ಏರಿಕೆಗೆ ಪ್ರಸ್ತಾವನೆ ನೀಡಲಾಗಿದ್ದು, ಎಷ್ಟು ದರ ಏರಿಕೆಯಾಗುತ್ತದೆ ಎಂದು ಕಾದು ನೋಡಬೇಕು. ಈಗಾಗಲೇ ರಾಜ್ಯದ ಜನ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿದ್ದಾರೆ. ಇದರ ಬೆನ್ನಲ್ಲೇ ವಿದ್ಯುತ್ ದರ ಏರಿಕೆಯಿಂದ ಮತ್ತೊಂದು ಶಾಕ್ ಎದುರಾಗುತ್ತದೆ. ದರ ಹೆಚ್ಚಳಕ್ಕೆ ವಿದ್ಯುತ್ ಕಂಪನಿಗಳು ನಷ್ಟದ ಕಾರಣ ಹೇಳಿವೆ.

ಯಾವ ಯಾವ ವರ್ಷದಲ್ಲಿ ಎಷ್ಟೆಷ್ಟು ದರ ಪರಿಷ್ಕರಣೆಯಾಗಿತ್ತು? * 2009ರಲ್ಲಿ ಪ್ರತಿ ಯೂನಿಟ್​ಗೆ 34 ಪೈಸೆ ಹೆಚ್ಚಳ.

* 2010 ಪ್ರತಿ ಯೂನಿಟ್​ಗೆ 30 ಪೈಸೆ ಹೆಚ್ಚಳ.

* 2011 ಪ್ರತಿ ಯೂನಿಟ್​ಗೆ 28 ಪೈಸೆ ಹೆಚ್ಚಳ.

* 2012 ಪ್ರತಿ ಯೂನಿಟ್​ಗೆ 13 ಪೈಸೆ ಹೆಚ್ಚಳ.

* 2013 ಪ್ರತಿ ಯೂನಿಟ್​ಗೆ 13 ಪೈಸೆ ಹೆಚ್ಚಳ.

* 2017 ಪ್ರತಿ ಯೂನಿಟ್​ಗೆ 48 ಪೈಸೆ ಹೆಚ್ಚಳ.

* 2019 ರಲ್ಲಿ ಪ್ರತಿ ಯೂನಿಟ್​ಗೆ 35 ಪೈಸೆ ಹೆಚ್ಚಳ.

* 2020 ರಲ್ಲಿ ಪ್ರತಿ ಯೂನಿಟ್​ಗೆ 30 ಪೈಸೆ ಹೆಚ್ಚಳ.

ಇದನ್ನೂ ಓದಿ

ಹಲವಾರು ಬ್ರಿಟಿಷ್ ಪ್ರಜೆಗಳನ್ನು ಅಫ್ಘಾನಿಸ್ತಾನದಲ್ಲಿ ಸೆರೆಹಿಡಿದಿಡಲಾಗಿದೆ ಎನ್ನುತ್ತಿದೆ ಯುಕೆ ಸರ್ಕಾರ

Weather Today: ಕರ್ನಾಟಕದಲ್ಲಿ ತಗ್ಗಿದ ಮಳೆ; ತಮಿಳುನಾಡಿನಲ್ಲಿ ಇಂದು ವರುಣನ ಆರ್ಭಟ

Published On - 9:27 am, Sun, 13 February 22