AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

11 ತಿಂಗಳ ಕಂದನಿಗೆ ಇಡೀ ವಿಶ್ವವೇ ಬೆಚ್ಚುವಂತಾ ಸಮಸ್ಯೆ! ಮಗು ಬದುಕುಳಿಯಲು 16 ಕೋಟಿ ರೂ. ಬೇಕು..

TV9 Campaign ಮಕ್ಕಳಂದ್ರೆ ಹೆತ್ತವರಿಗೆ ಖುಷಿ.. ನೋವು ಮರೆಸೋ ಚಿಲುಮೆ.. ಮಗು ಮನೆಯಲ್ಲಿ ಆಡ್ತಿದ್ರೆ ತಂದೆ-ತಾಯಿಯ ನೋವೇ ಮಾಯವಾಗಿಬಿಡುತ್ತೆ. ಆದ್ರೆ, ಈ ದಂಪತಿಯ ಬಾಳಲ್ಲಿ ಹಾಗಾಗಿಲ್ಲ. ಮಗುವಿನ ಜೊತೆ ದೇವರು ಯಾರಿಂದಲೂ ಎದುರಿಸಲಾಗದಂಥಾ ನೋವು ಕೊಟ್ಟಿದ್ದು, 16 ಕೋಟಿ ರೂಪಾಯಿಯ ಸಂಜೀವಿನಿಗಾಗಿ ಪುಟಾಣಿ ಜೀವ ಕೈಯಲ್ಲಿಡಿದು ಕಾಯುತ್ತಿದೆ.

11 ತಿಂಗಳ ಕಂದನಿಗೆ ಇಡೀ ವಿಶ್ವವೇ ಬೆಚ್ಚುವಂತಾ ಸಮಸ್ಯೆ! ಮಗು ಬದುಕುಳಿಯಲು 16 ಕೋಟಿ ರೂ. ಬೇಕು..
ಜನೀಶ್
ಆಯೇಷಾ ಬಾನು
ಆಯೇಷಾ ಬಾನು|

Updated on: Feb 05, 2021 | 3:01 PM

Share

ಬೆಂಗಳೂರು: ಪುಟ್ಟ ಕಂದ.. ಪಿಳಿ ಪಿಳಿ ಕಣ್ಣು ಬಿಡುತ್ತಾ.. ಪಿಸು ಪಿಸು ನಗುತಾ.. ತುಂಟಾಟ ನೋಡ್ತಾ ಹೆತ್ತವರು ನೋವು ಮರೆತು ಖುಷಿಯಾಗಿರಬೇಕಿತ್ತು. ಜೀವನದುದ್ದಕ್ಕೂ ಹರುಷವಾಗಿ ಇರಬೇಕಿತ್ತು. ಆದ್ರೆ, ಈ ದಂಪತಿಗೆ ದೇವರು ಆ ಖುಷಿ ಅನುಭವಿಸೋ ಅವಕಾಶವನ್ನೇ ಕೊಟ್ಟಿಲ್ಲ. ಯಾಕಂದ್ರೆ, ದೇವರು ಮಗು ಕೊಟ್ಟ. ಆದ್ರೆ, ಮಗುವಿನ ಜೊತೆ ಈ ಜಗತ್ತಿನಲ್ಲಿ ಯಾರಿಗೂ ಕೊಡಲಾರದಂಥಾ ದೊಡ್ಡ ನೋವು ಕೊಟ್ಟು ಕಳಿಸಿದ್ದಾನೆ.

ಕಂದನಿಗೆ ಸ್ಪೈನಲ್ ಮಸ್ಕ್ಯೂಲರ್ ಆಟ್ರೋಪಿ ಕುತ್ತು! ಇಷ್ಟಕ್ಕೂ ಈ 11 ತಿಂಗಳ ಕಂದ ಜನೀಶ್.. ಸಂಜೀವಿನಿ ನಗರದ ನಿವಾಸಿಗಳಾಗಿರುವ ನವೀನ್​ಕುಮಾರ್-ಜ್ಯೋತಿ ದಂಪತಿ ಪುತ್ರ. ಕುಟುಂಬದ ಪರಿಸ್ಥಿತಿಯೂ ಅಷ್ಟೇನು ಚೆನ್ನಾಗಿಲ್ಲ. ಇಂಥಾದ್ರ ಮಧ್ಯೆ ಮಗುವಿಗೆ ಜೀನ್ ಸಮಸ್ಯೆ ಕಾಣಿಸಿಕೊಂಡಿದೆ. ಸ್ಪೈನಲ್ ಮಸ್ಕ್ಯೂಲರ್ ಆಟ್ರೋಪಿ ಸಮಸ್ಯೆ ಅಂದ್ರೆ, ಬೆನ್ನು ಮೂಳೆಯ ಸ್ನಾಯು ಕ್ಷೀಣತೆ ಅಂತಾ. ವೈದ್ಯಲೋಕದಲ್ಲೇ ಇದು ಅಪರೂಪದ ಸಮಸ್ಯೆ. ಈಗ ಜನೀಶ್ ಉಳಿಯಬೇಕಾದ್ರೆ ಬರೋಬ್ಬರಿ 16 ಕೋಟಿಯ ಮೆಡಿಸಿನ್ ಬೇಕಾಗಿದೆ. ಅದೂ ಅಮೆರಿಕದಲ್ಲಿ ಸಿಗುವ ಔಷಧಿಯೇ ಬೇಕು. ಇಷ್ಟೊಂದು ದುಡ್ಡು ಎಲ್ಲಿಂದ ತರೋದು ಅಂತಾ ತಂದೆ ನವೀನ್​ಕುಮಾರ್ ಕಣ್ಣೀರಿಡ್ತಿದ್ದಾರೆ.

ಲಕ್ಷಾಂತರ ಮಕ್ಕಳಲ್ಲಿ ಒಬ್ಬರಿಗೆ ಇಂಥಹ ರೋಗ ಕಾಣಿಸುತ್ತೆ. ಇಂಥಹ ಕಾಯಿಲೆ ಇರುವವರಿಗೆ, ದೇಹದ ಯಾವುದೇ ಅಂಗಾಂಗಗಳು ಕೆಲಸ ಮಾಡುವುದಿಲ್ಲ. ಉಸಿರಾಡಲೂ ಕಷ್ಟವಾಗುತ್ತೆ. ಕೈ ಕಾಲು ಕದಲಿಸೋಕೂ ಆಗಲ್ಲ. ಆಹಾರ ಸೇವಿಸಲೂ ಆಗಲ್ಲ. ತುಟಿ ಬಿಚ್ಚಿ ಮಾತಾಡೋದೂ ಕಷ್ಟ. ಇಂಥಾ ಸಮಸ್ಯೆಯಿಂದ ಬಳಲುತ್ತಿರೋ ಜನೀಶ್​ಗೆ ಸದ್ಯ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ತಂದೆ ಇನ್ಶುರೆನ್ಸ್ ಸರ್ವೆಯರ್ ಆಗಿ ಕೆಲಸ ಮಾಡುತ್ತಿದ್ದು, ಜೀವನ ನಡೆಸೋದೇ ಕಷ್ಟ. ದುಡಿಮೆಯಲ್ಲೇ ಮಗು ಉಳಿಸಿಕೊಳ್ಳೋದು ಅಸಾಧ್ಯವೇ ಸರಿ. ಹೀಗಾಗಿ, ಮಗುವನ್ನ ಉಳಿಸಿಕೊಡಿ ಅಂತಾ ತಾಯಿ ಜ್ಯೋತಿ, ಹೃದಯವಂತರ ಸಹಾಯಕ್ಕಾಗಿ ಅಂಗಲಾಚಿದ್ದಾರೆ.

ದೇವರೇ ನೀನೆಷ್ಟು ಕ್ರೂರಿ.. ಜಗತ್ತಿನ ಅರಿವೇ ಇಲ್ಲದ ಕಂದನಿಗೆ ಅದೆಂಥಾ ಕಷ್ಟ ಕೊಟ್ಟೆ ಅಂತಾ ಹೆತ್ತವರು ನಿತ್ಯ ಮರುಗುತ್ತಿದ್ದಾರೆ. ಇವರ ಈ ಮರುಕ, ಕಣ್ಣೀರು ಮಾಯವಾಗಿ ಖುಷಿಯಾಗಿರಬೇಕು ಅಂದ್ರೆ, ಈ ಕರುನಾಡಿನ ಪುಣ್ಯವಂತರು, ಹೃದಯವಂತರು, ಆಳುವ ಸರ್ಕಾರ ನೆರವಿಗೆ ಬರಬೇಕಿದೆ. ಈ ದಂಪತಿಯ ಕಣ್ಣೀರಿಗೆ ಆಸರೆಯಾಗಬೇಕಿದೆ.

Follow Us
ಆಯೇಷಾ ಬಾನು
ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ