ದಾವಣಗೆರೆ; ಎಸ್.ಎಸ್ ಆಸ್ಪತ್ರೆಯ ಮಗುವಲ್ಲಿ ಪತ್ತೆಯಾಗಿದೆ ದೇಶದಲ್ಲೇ ಅಪರೂಪವೆನ್ನುವ ಕಾಯಿಲೆ
ಬ್ಲ್ಯಾಕ್ ಫಂಗಸ್ ರೀತಿಯಲ್ಲಿ ಮಿಸ್ಸಿ ಪ್ರಕರಣಗಳು ಕಂಡು ಬಂದಿದ್ದು. ಇದರಲ್ಲಿ ಎ- ನೆಕ್ ಎಂಬ ಪ್ರಕರಣ ಪತ್ತೆ ಆಗಿದೆ. ಈ ಕಾಯಿಲೆ ವಯಸ್ಕರಲ್ಲಿ ಕಾಣಿಸಿಕೊಳ್ಳುತ್ತಿತ್ತು. ಆದ್ರೆ ಈಗ ಮಕ್ಕಳಲ್ಲಿ ಈ ಕಾಯಿಲೆ ಮೊದಲ ಸಲ ಕಂಡು ಬಂದಿದೆ. ಎಸ್.ಎಸ್ ವೈದ್ಯಕೀಯ ನಿರ್ದೇಶಕ ಡಾ. ನಿಜಲಿಂಗಪ್ಪ ಕಾಳಪ್ಪನವರ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಮಾಹಿತಿ ಸಿಕ್ಕಿದೆ.
ದಾವಣಗೆರೆ: ದೇಶದಲ್ಲಿ ಅಪರೂಪ ಎನ್ನುವಂತಹ ಎ-ನೆಕ್(Acute necrotizing encephalopathy of childhood Multisystem inflammatory syndrome in children) ಎಂಬ ಕಾಯಿಲೆ ಮಕ್ಕಳಲ್ಲಿ ಪತ್ತೆಯಾಗಿದೆ. ದಾವಣಗೆರೆ ನಗರದ ಎಸ್.ಎಸ್ ವೈದ್ಯಕೀಯ ಸಂಶೋಧನಾ ಸಂಸ್ಥೆಯಲ್ಲಿ ಇಂತಹದೊಂದು ಪ್ರಕರಣ ಪತ್ತೆಯಾಗಿದೆ.
ಬ್ಲ್ಯಾಕ್ ಫಂಗಸ್ ರೀತಿಯಲ್ಲಿ ಮಿಸ್ಸಿ ಪ್ರಕರಣಗಳು ಕಂಡು ಬಂದಿದ್ದು. ಇದರಲ್ಲಿ ಎ- ನೆಕ್ ಎಂಬ ಪ್ರಕರಣ ಪತ್ತೆ ಆಗಿದೆ. ಈ ಕಾಯಿಲೆ ವಯಸ್ಕರಲ್ಲಿ ಕಾಣಿಸಿಕೊಳ್ಳುತ್ತಿತ್ತು. ಆದ್ರೆ ಈಗ ಮಕ್ಕಳಲ್ಲಿ ಈ ಕಾಯಿಲೆ ಮೊದಲ ಸಲ ಕಂಡು ಬಂದಿದೆ. ಎಸ್.ಎಸ್ ವೈದ್ಯಕೀಯ ನಿರ್ದೇಶಕ ಡಾ. ನಿಜಲಿಂಗಪ್ಪ ಕಾಳಪ್ಪನವರ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಮಾಹಿತಿ ಸಿಕ್ಕಿದೆ. ಇಂತಹ ಪ್ರಕರಣಗಳಲ್ಲಿ ಶೇಖಡಾ 60 ರಷ್ಟು ಸಾವಿನ ಸಾಧ್ಯತೆ ಇದೆ. ಇಂತಹ ಒಂದು ವಯಸ್ಕ ಪ್ರಕರಣ ದೆಹಲಿ ಎಮ್ಸ್ನಲ್ಲಿ ಪತ್ತೆಯಾಗಿತ್ತು. ಆದ್ರೆ ಮಗುವಿನಲ್ಲಿ ಕಂಡು ಬಂದಿರುವುದು ಇದೇ ಮೊದಲು.
ಎಸ್.ಎಸ್ ಆಸ್ಪತ್ರೆಯಲ್ಲಿ ವಿಜಯ ನಗರ ಜಿಲ್ಲೆಯ ಹೂವಿನ ಹಡಗಲಿ ಮೂಲದ 13 ವರ್ಷ ಮಗುವಿನಲ್ಲಿ ಇಂತಹ ಲಕ್ಷಣಗಳು ಕಂಡು ಬಂದಿದೆ. ಕೊರೊನಾ ಸೋಂಕು ತಗುಲಿ ಗುಣಮುಖರಾದ ಮಕ್ಕಳಿಗೆ ಬರುವ ಕಾಯಿಲೆಯಾಗಿದ್ದು ಈ ಮಗು ಈಗ ಚೇತರಿಸಿಕೊಳ್ಳುತ್ತಿದೆ. ಇದಕ್ಕೆ ಹಿಮೋಗ್ಲೋಬಿನ್ ಔಷಧಿ ನೀಡಿದರೆ ಚೇತರಿಕೆ ಕಂಡು ಬರುತ್ತಿದೆ. ಆದ್ರೆ ಇದು ದುಬಾರಿ ಔಷಧಿ. 30ಕೆಜಿ ಇರುವ ಮಕ್ಕಳಿಗೆ ಕನಿಷ್ಟ 75 ಸಾವಿರದಿಂದ ಒಂದು ಲಕ್ಷ ರೂಪಾಯಿ ವೆಚ್ಚವಾಗಲಿದೆ.
ಇದನ್ನೂ ಓದಿ: ಮಲೆನಾಡಿನ ಏಡಿಗೆ ಬೆಳಗಾವಿಯಲ್ಲಿ ಭಾರೀ ಬೇಡಿಕೆ; ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಖರೀದಿಗೆ ಮುಗಿಬಿದ್ದ ಜನತೆ
Published On - 1:52 pm, Fri, 25 June 21