
ಬೆಂಗಳೂರು: ಮೊದಲ ಪಟ್ಟಿಯಲ್ಲಿ ಎರಡು ಕ್ಷೇತ್ರಗಳಿಗೆ ಪೆಂಡಿಂಗ್ ಇಟ್ಟು 13 ಕ್ಷೇತ್ರಗಳಲ್ಲಿ ಅನರ್ಹ ಶಾಸಕರಿಗೇ ಟಿಕೆಟ್ ಹಂಚಿದ್ದ ಬಿಜೆಪಿ ನಾಯಕರು ಇದೀಗ ಶಿವಾಜಿನಗರ ಕ್ಷೇತ್ರದ ಉಪಚುನಾವಣೆಗೂ ಕ್ಯಾಂಡಿಡೇಟ್ ಅನ್ನು ಅನೌನ್ಸ್ ಮಾಡಿದ್ದಾರೆ. ಅಲ್ಲಿಗೆ ಅನರ್ಹ ಶಾಸಕ ರೋಷನ್ ಬೇಗ್ಗೆ ಬಿಜೆಪಿ ಟಿಕೆಟ್ ಕೈತಪ್ಪಿದ್ದು, ರಾಣೆಬೆನ್ನೂರು ಕ್ಷೇತ್ರಕ್ಕೆ ಮಾತ್ರ ಅಭ್ಯರ್ಥಿ ಘೋಷಣೆ ಬಾಕಿ ಇದೆ.
ಬೆಳಗ್ಗೆಯಷ್ಟೇ ಮರುಸೇರ್ಪಡೆಯಾಗಿದ್ದ ಶರವಣಗೆ ಲಕ್!
ಶರವಣ, ಬಿಬಿಎಂಪಿ ಮಾಜಿ ಕಾರ್ಪೊರೇಟರ್. ಇಂದು ಬೆಳಗ್ಗೆ ಬಿಜೆಪಿಗೆ ಮರು ಸೇರ್ಪಡೆಯಾಗಿದ್ದ ಶರವಣಗೆ ಎರಡನೇ ಪಟ್ಟಿಯಲ್ಲಿ ಶಿವಾಜಿನಗರದ ಟಿಕೆಟ್ ದೊರೆತಿದೆ.
Published On - 4:37 pm, Thu, 14 November 19