IAS ಅಧಿಕಾರಿ ಆತ್ಮಹತ್ಯೆ, ರಾಜಕಾರಣಿಗಳ ಕಡೆ ಬೊಟ್ಟು ಮಾಡಿದ ಮಾಜಿ IPS ಅಧಿಕಾರಿ

ಬೆಂಗಳೂರು: IAS ಅಧಿಕಾರಿ ವಿಜಯ್ ಶಂಕರ್ ಆತ್ಮಹತ್ಯೆಯ ಹಿನ್ನೆಲೆಯಲ್ಲಿ ಮಾಜಿ IPS ಅಧಿಕಾರಿ ಶಂಕರ್​ ಬಿದರಿ ರಾಜ್ಯದ ಎಲ್ಲಾ ಹಿರಿಯ ಅಧಿಕಾರಿಗಳಿಗೆ ಕಿವಿಮಾತೊಂದನ್ನು ಹೇಳಿದ್ದಾರೆ. ತಮ್ಮ ಫೇಸ್​ಬುಕ್​ ಪೇಜ್​ ಪೋಸ್ಟ್​ ಒಂದರಲ್ಲಿ ಬಿದರಿ ಅವರು ಕಾನೂನು, ನಿಯಮ ಉಲ್ಲಂಘಿಸಿ ಯಾವುದೇ ಕೆಲಸ ಮಾಡಬೇಡಿ. ರಾಜಕಾರಣಿಗಳು ದಪ್ಪ ಚರ್ಮದವರು. ನಿಮ್ಮ ಗಳಿಕೆಯ ಶೇಕಡಾ 90 ರಷ್ಟನ್ನು ಕಸಿದುಕೊಳ್ಳುತ್ತಾರೆ. ಬಳಿಕ ಅವರು ನಿಮ್ಮನ್ನು ತಮ್ಮ ಗುಲಾಮರಂಥೆ ನಡೆಸಿಕೊಳ್ಳುತ್ತಾರೆ. ಆದರೆ, ಅಂತಿಮವಾಗಿ ನಿಮ್ಮೆಲ್ಲಾ ಪಾಪ ಹಾಗೂ ತಪ್ಪುಗಳಿಗೆ ನೀವೇ ಉತ್ತರಿಸಬೇಕು. ಯಾರೂ […]

IAS ಅಧಿಕಾರಿ ಆತ್ಮಹತ್ಯೆ, ರಾಜಕಾರಣಿಗಳ ಕಡೆ ಬೊಟ್ಟು ಮಾಡಿದ ಮಾಜಿ IPS ಅಧಿಕಾರಿ
Follow us
KUSHAL V
| Updated By: ಸಾಧು ಶ್ರೀನಾಥ್​

Updated on:Jun 24, 2020 | 2:12 PM

ಬೆಂಗಳೂರು: IAS ಅಧಿಕಾರಿ ವಿಜಯ್ ಶಂಕರ್ ಆತ್ಮಹತ್ಯೆಯ ಹಿನ್ನೆಲೆಯಲ್ಲಿ ಮಾಜಿ IPS ಅಧಿಕಾರಿ ಶಂಕರ್​ ಬಿದರಿ ರಾಜ್ಯದ ಎಲ್ಲಾ ಹಿರಿಯ ಅಧಿಕಾರಿಗಳಿಗೆ ಕಿವಿಮಾತೊಂದನ್ನು ಹೇಳಿದ್ದಾರೆ. ತಮ್ಮ ಫೇಸ್​ಬುಕ್​ ಪೇಜ್​ ಪೋಸ್ಟ್​ ಒಂದರಲ್ಲಿ ಬಿದರಿ ಅವರು ಕಾನೂನು, ನಿಯಮ ಉಲ್ಲಂಘಿಸಿ ಯಾವುದೇ ಕೆಲಸ ಮಾಡಬೇಡಿ. ರಾಜಕಾರಣಿಗಳು ದಪ್ಪ ಚರ್ಮದವರು. ನಿಮ್ಮ ಗಳಿಕೆಯ ಶೇಕಡಾ 90 ರಷ್ಟನ್ನು ಕಸಿದುಕೊಳ್ಳುತ್ತಾರೆ. ಬಳಿಕ ಅವರು ನಿಮ್ಮನ್ನು ತಮ್ಮ ಗುಲಾಮರಂಥೆ ನಡೆಸಿಕೊಳ್ಳುತ್ತಾರೆ. ಆದರೆ, ಅಂತಿಮವಾಗಿ ನಿಮ್ಮೆಲ್ಲಾ ಪಾಪ ಹಾಗೂ ತಪ್ಪುಗಳಿಗೆ ನೀವೇ ಉತ್ತರಿಸಬೇಕು. ಯಾರೂ ಎಂದಿಗೂ ನಿಮಗಾಗಿ ಕಣ್ಣೀರು ಹರಿಸುವುದಿಲ್ಲ ಎಂದು ಹೇಳಿದ್ದಾರೆ.

ಜೊತೆಗೆ, ರಾಜಕಾರಣಿಗಳು ಜೈಲಿಗೆ ಹೋದಾಗ ಅವರನ್ನ ಮೆರವಣಿಗೆಯಲ್ಲಿ ಕರೆದುಕೊಂಡು ಹೋಗುತ್ತಾರೆ. ಹಿಂದಿರುಗಿದಾಗ ಪಟಾಕಿ ಸಿಡಿಸಿ, ಆರತಿ ಎತ್ತಿ ಅವರನ್ನು ಸ್ವಾಗತಿಸಲಾಗುತ್ತದೆ. ಅಂಥವರಿಗೆ ಭಯ ಪಡಬೇಡಿ, ಏಕೆಂದರೆ ಅವರಲ್ಲಿ ಕನಿಷ್ಠ 75 % ಜನರು ನೈತಿಕವಾಗಿ ದಿವಾಳಿಯಾಗಿರುವವರೇ ಎಂದು  ಬಿದರಿ ಬರೆದಿದ್ದಾರೆ.

ಜೈಲಿಗೆ ಹೋದ್ರೂ ಕಾಶಿಯಾತ್ರೆ ಅಥವಾ ತಿರುಮಲೆಗೆ ಯಾತ್ರೆ ಹೋದಂತೆ ವರ್ತಿಸುತ್ತಾರೆ. ಆದರೆ, ನೀವು ಹೆಚ್ಚಾಗಿ ಮಧ್ಯಮ ವರ್ಗದ ಕುಟುಂಬಗಳಿಂದ ಬಂದವರು. ವಿದ್ಯಾವಂತರು. ನೀವು ನಿಮ್ಮ ಗೌರವವನ್ನು ಪರಿಗಣಿಸಿ ಬಹು ಬೇಗನೆ ಅವಮಾನಕ್ಕೆ ಒಳಗಾಗುತ್ತೀರಿ. ಬಂಧನ ಮತ್ತು ವಿಚಾರಣೆಯ ಅವಮಾನವನ್ನು ನೀವು ಅನುಭವಿಸಲು ಸಾಧ್ಯವಿಲ್ಲ. ಬಹಳ ಹೆಚ್ಚಂದರೆ ರಾಜಕಾರಣಿಗಳು ನಿಮ್ಮನ್ನು ವರ್ಗಾವಣೆ ಮಾಡಬಹುದು ಅಷ್ಟೇ. ಆದ್ದರಿಂದ ದಯವಿಟ್ಟು ರಾಜಕಾರಣಿಗಳನ್ನ ಮೆಚ್ಚಿಸಲು ಕಾನೂನು ಮತ್ತು ನಿಯಮಗಳನ್ನು ಉಲ್ಲಂಘಿಸಿ ಏನನ್ನೂ ಮಾಡಬೇಡಿ ಎಂದು ಸಹ ಉಲ್ಲೇಖಿಸಿದ್ದಾರೆ.

ಅವರಿಂದ ಯಾವುದೇ ಪೋಸ್ಟಿಂಗ್‌  ಕೇಳಬೇಡಿ. ದೃಢವಾಗಿರಿ. ಯಾರೂ ನಿಮಗೆ ಏನನ್ನೂ ಮಾಡಲು ಸಾಧ್ಯವಿಲ್ಲ. ನಿಮ್ಮ ನಿಧನದ ತನಕ ನಿಮ್ಮ ವೇತನ, ಪಿಂಚಣಿ ಮತ್ತು ಕುಟುಂಬದ ಪಿಂಚಣಿಯೊಂದಿಗೆ ಸರ್ಕಾರವು ನಿಮ್ಮನ್ನು ನೋಡಿಕೊಳ್ಳಲು ಬದ್ಧವಾಗಿರುತ್ತದೆ. ಹಾಗಾಗಿ ಈ ದುರಂತದಿಂದ ನೀವು ಎಚ್ಚೆತ್ತುಕೊಳ್ಳಬೇಕು ಎಂದು ಶಂಕರ್ ಬಿದರಿ ಬುದ್ಧಿಮಾತು ಹೇಳಿದ್ದಾರೆ.

Published On - 1:57 pm, Wed, 24 June 20

ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ