AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೆಟ್ರೋಲ್​ನಲ್ಲಿ ಎಥೆನಾಲ್‌ ಮಿಶ್ರಣ ಆಗ್ತಿದೆ: ಇಂಜಿನ್​​ಗಳು ಹಾಳಾಗ್ತಿವೆ ಎಂದ ಸಿಎಂ ಡಿಕೆ ಶಿವಕುಮಾರ್​

ಎಥೆನಾಲ್ ಮಿಶ್ರಿತ ಪೆಟ್ರೋಲ್‌ನಿಂದ ವಾಹನಗಳ ಇಂಜಿನ್‌ಗಳಿಗೆ ಹಾನಿಯಾಗುತ್ತಿವೆ ಎಂದು ಸಿಎಂ ಡಿಕೆ ಶಿವಕುಮಾರ್​ ಹೇಳಿದ್ದಾರೆ. ರಾಜ್ಯ ಸರ್ಕಾರ 67 ಕಡೆ ತನಿಖೆ ನಡೆಸಿದ್ದು, ಪೆಟ್ರೋಲ್ ಬಂಕ್‌ಗಳಲ್ಲಿ ಅಲ್ಲ, ವಿತರಕರ ಹಂತದಲ್ಲಿ ಮಿಶ್ರಣ ನಡೆಯುತ್ತಿದೆ ಎಂದು ವರದಿ ತಿಳಿಸಿದೆ. ನಾಳೆ ಸಚಿವರು ಈ ಬಗ್ಗೆ ಅಧಿಕೃತ ಮಾಹಿತಿ ನೀಡಲಿದ್ದಾರೆ ಎಂದರು.

ಪೆಟ್ರೋಲ್​ನಲ್ಲಿ ಎಥೆನಾಲ್‌ ಮಿಶ್ರಣ ಆಗ್ತಿದೆ: ಇಂಜಿನ್​​ಗಳು ಹಾಳಾಗ್ತಿವೆ ಎಂದ ಸಿಎಂ ಡಿಕೆ ಶಿವಕುಮಾರ್​
ಡಿ.ಕೆ.ಶಿವಕುಮಾರ್​
ಈರಣ್ಣಾ ಬಸವಾ
| Edited By: |

Updated on: Nov 08, 2026 | 4:50 PM

Share

ಬೆಂಗಳೂರು, ನವೆಂಬರ್​​ 08: ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣದ ವಿಚಾರ ಈಗ ರಾಜ್ಯ ರಾಜಕಾರಣದಲ್ಲಿ ಹೊಸ ಕಿಚ್ಚು ಹೊತ್ತಿಸಿದೆ. ವಾಹನಗಳ ಇಂಜಿನ್ ಹಾಳಾಗ್ತಿದೆ, ಎಥೆನಾಲ್‌ನಿಂದ ಇಡೀ ದೇಶಕ್ಕೆ ಸಮಸ್ಯೆಯಾಗ್ತಿದೆ ಅನ್ನೋ ಆರೋಪ ಈಗ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಸದ್ಯ ಈ ಕುರಿತಾಗಿ ಸಿಎಂ ಡಿಕೆ ಶಿವಕುಮಾರ್​ ಪ್ರತಿಕ್ರಿಯಿಸಿದ್ದು, ‘ಎಥೆನಾಲ್​ ಮಿಶ್ರಣದಿಂದ ರಾಜ್ಯದಲ್ಲಿ ಸಾವಿರಾರು ವಾಹನಗಳ ಎಂಜಿನ್​​ಗಳಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು, ಮೈಲೇಜ್​​ ಕೂಡ ಕಡಿಮೆಯಾಗುತ್ತಿದೆ’ ಎಂದು ಆರೋಪಿಸಿದ್ದಾರೆ.

ಡಿಸ್ಟ್ರಿಬ್ಯೂಟರ್ಸ್​ ಕಡೆಯಿಂದಲೇ‌ ಎಥೆನಾಲ್​ ಮಿಕ್ಸ್ ಆರೋಪ  

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ‘ಪೆಟ್ರೋಲ್​ನಲ್ಲಿ ಎಥೆನಾಲ್‌ ಮಿಶ್ರಣ ಆಗ್ತಿದೆ ಎಂಬ ಆರೋಪವಿದೆ. ಕೇಂದ್ರಕ್ಕೂ‌ ಮಾಹಿತಿ ಕೊಟ್ಟು ನಾವು ಪರಿಶೀಲನೆ ಮಾಡಿದ್ದೇವೆ. ಇಂಜಿನ್ ಹಾಳಾಗ್ತಿದೆ, ನಾಳೆ ಸಚಿವರು ಮತ್ತೆ ಸುದ್ದಿಗೋಷ್ಠಿ ಮಾಡುತ್ತಾರೆ’ ಎಂದು ಅವರು ಮಾಹಿತಿ ನೀಡಿದರು.

ಇದನ್ನೂ ಓದಿ: ಕರ್ನಾಟಕದಲ್ಲಿ ಪೆಟ್ರೋಲ್ ಬಂಕ್​​ಗಳಲ್ಲಿ ಮಿತಿ ಮೀರಿದ ಅಕ್ರಮ ಎಥೆನಾಲ್ ಮಿಶ್ರಣ: ದಾಖಲೆ ಬಹಿರಂಗಪಡಿಸಿದ ಸಚಿವ

‘ಇನ್ನು ಪೆಟ್ರೋಲ್ ಬಂಕ್‌ನಲ್ಲಿ ಎಥೆನಾಲ್​ ಮಿಕ್ಸ್ ಆಗುತ್ತಿಲ್ಲ. ಡಿಸ್ಟ್ರಿಬ್ಯೂಟರ್ಸ್​ ಕಡೆಯಿಂದಲೇ‌ ಆಗುತ್ತಿದೆ ಅನ್ನೋ ಆರೋಪವಿತ್ತು. ಎಥೆನಾಲ್​ನಿಂದ ಇಡೀ ದೇಶಕ್ಕೆ ಸಮಸ್ಯೆ ಆಗುತ್ತಿದೆ. ವಿರೋಧ ಪಕ್ಷದವರು ಇದರ‌ ಬಗ್ಗೆ ಮಾತನಾಡಲ್ಲ’ ಎಂದು ಸಿಎಂ ವಾಗ್ದಾಳಿ ಮಾಡಿದರು.

ಕೇಂದ್ರದವರು ಪೆಟ್ರೋಲ್​, ಡೀಸೆಲ್​​ ಬೆಲೆ ಜಾಸ್ತಿ ಮಾಡ್ತಿದ್ದಾರೆ ಎಂದ ಸಿಎಂ

‘ಎಥೆನಾಲ್​ ಬಳಕೆಯಿಂದ ವಾಹನಗಳು ಹೆಚ್ಚು ಕಡಿಮೆ ಆಗುತ್ತಿವೆ. ಬೆಲೆ ಏರಿಕೆ ಅಂತಾ ವಿಪಕ್ಷ ನಾಯಕರು ಟೀಕೆ ಮಾಡುತ್ತಾರೆ. ಕೇಂದ್ರದವರು ಪೆಟ್ರೋಲ್​, ಡೀಸೆಲ್​​ ಬೆಲೆ ಜಾಸ್ತಿ ಮಾಡ್ತಿದ್ದಾರೆ. ನಾವು 5 ಗ್ಯಾರಂಟಿ ಕೊಟ್ಟು ಜನರಿಗೆ ಸಹಾಯ ಮಾಡುತ್ತಿದ್ದೇವೆ. ರೈತರಿಗೆ ತಲಾ 5 ಸಾವಿರ ರೂ ಬರ ಪರಿಹಾರ ಕೊಡಲು ತೀರ್ಮಾನಿಸಿದ್ದೇವೆ. ಕೇಂದ್ರದಿಂದ ಒಂದು ರೂ. ಕೂಡ ಬಂದಿಲ್ಲ. 10 ವರ್ಷ ಆಯ್ತು ಕಬ್ಬಿಗೆ ಏಕೆ ಬೆಂಬಲ ಬೆಲೆ ನಿಗದಿ ಮಾಡಲಿಲ್ಲ. ಕೇಂದ್ರ ಸರ್ಕಾರಕ್ಕೆ ರೈತರ ಮೇಲೆ ಕಾಳಜಿ ಇಲ್ಲ’ ಎಂದು ಡಿಕೆ ಶಿವಕುಮಾರ್​ ಕಿಡಿಕಾರಿದ್ದಾರೆ.

ಆರೋಪಗಳನ್ನು ತಳ್ಳಿಹಾಕಿದ ತೈಲ ಕಂಪನಿಗಳು

ಇಂಡಿಯನ್​ ಆಯಿಲ್​​ ಕಾರ್ಪೊರೇಷನ್​​ ಲಿಮಿಟೆಡ್​, ಭಾರತ್​ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಜಂಟಿ ಹೇಳಿಕೆ ಬಿಡುಗಡೆ ಮಾಡಿ ರಾಜ್ಯ ಸರ್ಕಾರದ ಆರೋಪಗಳನ್ನು ತಳ್ಳಿಹಾಕಿವೆ. ಕರ್ನಾಟಕ ಸೇರಿದಂತೆ ದೇಶಾದ್ಯಂತ ತಾವು ಪೂರೈಸುವ ಪೆಟ್ರೋಲ್​​ ಬ್ಯೂರೋ ಆಫ್​​ ಇಂಡಿಯನ್​​ ಸ್ಟ್ಯಾಂಡರ್ಡ್ಸ್​​ ನಿಗದಿಪಡಿಸಿರುವ ಇ20 ಇಂಧನದ ಮಾನದಂಡಗಳಿಗೆ ಅನುಗುಣವಾಗಿದೆ ಎಂದು ಕಂಪನಿಗಳು ತಿಳಿಸಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಈರಣ್ಣಾ ಬಸವಾ
ಈರಣ್ಣಾ ಬಸವಾ

ಈರಣ್ಣಾ ಬಸವಾ.. ಮೂಲತಃ ವಾಣಿಜ್ಯ ನಗರಿ ಹುಬ್ಬಳ್ಳಿಯವರು. ಈರಣ್ಣಾ ಬಿ.ಕಾಮ್ ಪದವೀಧರರಾಗಿದ್ದಾರೆ. ಕಂಟೆಂಟ್ ರೈಟರ್ ಆಗಿ ವೃತ್ತಿಜೀವನ ಆರಂಭಿಸಿದ ನಂತರ ಕನ್ನಡದ ಬೇರೆ ಬೇರೆ ಸುದ್ದಿ ಮಾದ್ಯಮದಲ್ಲಿ ಸುಮಾರು ೬ ವರ್ಷ ಕಾಲ ಡೆಸ್ಕ್ ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸದ್ಯ ಸತತ ಪರಿಶ್ರಮದಿಂದ ಟಿವಿ9 ಕನ್ನಡದಲ್ಲಿ ರಾಜಕೀಯ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಹಲವು ಎಕ್ಸ್ ಕ್ಲೂಸಿವ್ ಸುದ್ದಿಗಳನ್ನು ಹೆಕ್ಕಿ ತೆಗೆದಿದ್ದಾರೆ. ಸಿಎಂ, ಡಿಸಿಎಂ ಬೀಟ್ ಜವಾಬ್ದಾರಿ ಇವರ ಮೇಲಿದ್ದು ಜನರಿಗೆ ಸಿಗಬೇಕಾದ ಅಮೂಲ್ಯ ಸುದ್ದಿಗಳನ್ನು ತಲುಪಿಸುವ ಕಾಯಕವನ್ನು ಜವಾಬ್ದಾರಿಯಿಂದ ಮಾಡುತ್ತಿದ್ದಾರೆ. ಬರವಣಿಗೆ, ಕತೆ, ಕವನ ಇವರ ಆಸಕ್ತಿಯ ಕ್ಷೇತ್ರ.

Read More
ಬೆಂಗಳೂರಲ್ಲಿ ವಿಮಾನ ಕ್ಯಾನ್ಸಲ್‌ಗೆ ಪ್ರಯಾಣಿಕರು ಗರಂ, ಸಿಬ್ಬಂದಿಗೆ ತರಾಟೆ
ಬೆಂಗಳೂರಲ್ಲಿ ವಿಮಾನ ಕ್ಯಾನ್ಸಲ್‌ಗೆ ಪ್ರಯಾಣಿಕರು ಗರಂ, ಸಿಬ್ಬಂದಿಗೆ ತರಾಟೆ
ಶಿವಮೊಗ್ಗದ ಬಿಜೆಪಿ ಕಚೇರಿ, ವಿಜಯೇಂದ್ರ ನಿವಾಸದ ಮುಂದೂ ಪೋಸ್ಟರ್​
ಶಿವಮೊಗ್ಗದ ಬಿಜೆಪಿ ಕಚೇರಿ, ವಿಜಯೇಂದ್ರ ನಿವಾಸದ ಮುಂದೂ ಪೋಸ್ಟರ್​
'ಹೌದು.. ನಾನು ಬಲಿತ ದಲಿತನೇ ಸುಮಾರಣ್ಣ': JDSಗೆ ಕಾಂಗ್ರೆಸ್​​ ಕೌಂಟರ್​
'ಹೌದು.. ನಾನು ಬಲಿತ ದಲಿತನೇ ಸುಮಾರಣ್ಣ': JDSಗೆ ಕಾಂಗ್ರೆಸ್​​ ಕೌಂಟರ್​
ಮಂಜನ ಮತ್ತೆ ಬಿಗ್​​ಬಾಸ್​ಗೆ ಸ್ವಾಗತಿಸಿದ ಕಿಚ್ಚ ಸುದೀಪ್: ವಿಡಿಯೋ ನೋಡಿ
ಮಂಜನ ಮತ್ತೆ ಬಿಗ್​​ಬಾಸ್​ಗೆ ಸ್ವಾಗತಿಸಿದ ಕಿಚ್ಚ ಸುದೀಪ್: ವಿಡಿಯೋ ನೋಡಿ
ಹಾಸನಾಂಬೆ ದರ್ಶನಕ್ಕೆ ಬೆಳಿಗ್ಗೆಯಿಂದಲೇ ಮುಗಿಬಿದ್ದ ಭಕ್ತರು
ಹಾಸನಾಂಬೆ ದರ್ಶನಕ್ಕೆ ಬೆಳಿಗ್ಗೆಯಿಂದಲೇ ಮುಗಿಬಿದ್ದ ಭಕ್ತರು
ಕಾರ್ತಿಕ ಮಾಸದ ಆರಂಭದಲ್ಲೇ ಈ 4 ರಾಶಿಗಳಿಗೆ ರಾಜಯೋಗ! ನಿಮ್ಮ ರಾಶಿ ಹೇಗಿದೆ?
ಕಾರ್ತಿಕ ಮಾಸದ ಆರಂಭದಲ್ಲೇ ಈ 4 ರಾಶಿಗಳಿಗೆ ರಾಜಯೋಗ! ನಿಮ್ಮ ರಾಶಿ ಹೇಗಿದೆ?
ದೀಪಾವಳಿ ಹಬ್ಬದ ಖರೀದಿ ಭರಾಟೆ:  ಕೆ.ಆರ್.ಮಾರ್ಕೆಟ್‌ನಲ್ಲಿ ಜನಸಾಗರ
ದೀಪಾವಳಿ ಹಬ್ಬದ ಖರೀದಿ ಭರಾಟೆ:  ಕೆ.ಆರ್.ಮಾರ್ಕೆಟ್‌ನಲ್ಲಿ ಜನಸಾಗರ
ಇಂದು ಈ ರಾಶಿಯವರು ಸಂಗಾತಿಯ ಸಲಹೆಯನ್ನು ಪಡೆದು ನಿರ್ಧಾರ ತೆಗೆದುಕೊಳ್ಳಿ
ಇಂದು ಈ ರಾಶಿಯವರು ಸಂಗಾತಿಯ ಸಲಹೆಯನ್ನು ಪಡೆದು ನಿರ್ಧಾರ ತೆಗೆದುಕೊಳ್ಳಿ
ದೇವಿರಮ್ಮ ಬೆಟ್ಟದಿಂದ ಜಾರಿಬಿದ್ದ ಯುವಕ: ಗಂಭೀರ ಗಾಯ
ದೇವಿರಮ್ಮ ಬೆಟ್ಟದಿಂದ ಜಾರಿಬಿದ್ದ ಯುವಕ: ಗಂಭೀರ ಗಾಯ
ಕರ್ನಾಟಕದ ಡಿಪಿಆರ್‌ ತಿರಸ್ಕರಿಸಲು ಪ್ರಧಾನಿಗೆ ತಮಿಳುನಾಡು ಸಿಎಂ ಪತ್ರ
ಕರ್ನಾಟಕದ ಡಿಪಿಆರ್‌ ತಿರಸ್ಕರಿಸಲು ಪ್ರಧಾನಿಗೆ ತಮಿಳುನಾಡು ಸಿಎಂ ಪತ್ರ