AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೆಟ್ರೋಲ್‌ನಲ್ಲಿ ಮಿತಿಮೀರಿದ ಎಥೆನಾಲ್ ಮಿಶ್ರಣ: ಕಳಪೆ ಇಂಧನ ತಡೆಯಲು ಸಚಿವ ರಿಜ್ವಾನ್ ಅರ್ಷದ್ ಇಟ್ಟ ಬೇಡಿಕೆಗಳೇನು?

ಪೆಟ್ರೋಲ್‌ನಲ್ಲಿ ನಿಗದಿತ ಶೇ 20ಕ್ಕಿಂತಲೂ ಹೆಚ್ಚು ಎಥೆನಾಲ್ ಬೆರೆಸುತ್ತಿರುವ ಪರಿಣಾಮ ವಾಹನಗಳ ಎಂಜಿನ್ ಹಾಳಾಗುತ್ತಿದ್ದು, ವಾಹನ ಸವಾರರು ತೀವ್ರ ಸಂಕಷ್ಟಕ್ಕೆ ಈಡಾಗಿದ್ದಾರೆ. ಈ ಕಳಪೆ ಇಂಧನ ತಡೆಗೆ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಪೆಟ್ರೋಲ್ ಬಂಕ್‌ಗಳಲ್ಲಿ ಎಥೆನಾಲ್ ಪ್ರಮಾಣ ಕಡ್ಡಾಯ ಪ್ರದರ್ಶನ, ನಿಯಮ ಮೀರಿದ ತೈಲ ಕಂಪನಿಗಳಿಗೆ ದಂಡ ಹಾಗೂ ಎಂಜಿನ್ ಹಾನಿಗೆ ವಿಶೇಷ ಪರಿಹಾರ ನಿಧಿ ಸ್ಥಾಪನೆ ಸೇರಿದಂತೆ ಆಹಾರ ಸಚಿವ ರಿಜ್ವಾನ್ ಅರ್ಷದ್ ಕೇಂದ್ರದ ಮುಂದೆ ಪ್ರಮುಖ ಬೇಡಿಕೆಗಳನ್ನಿಟ್ಟಿದ್ದಾರೆ.

ಪೆಟ್ರೋಲ್‌ನಲ್ಲಿ ಮಿತಿಮೀರಿದ ಎಥೆನಾಲ್ ಮಿಶ್ರಣ: ಕಳಪೆ ಇಂಧನ ತಡೆಯಲು ಸಚಿವ ರಿಜ್ವಾನ್ ಅರ್ಷದ್ ಇಟ್ಟ ಬೇಡಿಕೆಗಳೇನು?
ರಿಜ್ವಾನ್ ಅರ್ಷದ್
ಭಾವನಾ ಹೆಗಡೆ
|

Updated on: Nov 07, 2026 | 8:24 AM

Share

ಮುಖ್ಯಾಂಶಗಳು

  • ಪೆಟ್ರೋಲ್‌ನಲ್ಲಿ ಮಿತಿಮೀರಿದ ಎಥೆನಾಲ್ ಮಿಶ್ರಣದಿಂದ ವಾಹನಗಳ ಎಂಜಿನ್‌ಗಳು ತೀವ್ರ ಹಾಳು.
  • ಲ್ಯಾಬ್ ಪರೀಕ್ಷೆಯಲ್ಲಿ ಶೇ 20ಕ್ಕಿಂತ ಹೆಚ್ಚು ಎಥೆನಾಲ್ ಪತ್ತೆಯಾದ ಹಿನ್ನೆಲೆ.
  • ಕಳಪೆ ಇಂಧನ ತಡೆಗೆ ಸಚಿವ ರಿಜ್ವಾನ್ ಅರ್ಷದ್ ಬಿಗಿ ಬೇಡಿಕೆ.

ಬೆಂಗಳೂರು, ನವೆಂಬರ್ 07: ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಭರ್ತಿ ಮಾಡುವಾಗ ಡೆನ್ಸಿಟಿ ನೋಡಿ ತೃಪ್ತಿಪಡುತ್ತಿದ್ದ ವಾಹನ ಸವಾರರಿಗೆ ಈಗ ಹೊಸ ಆತಂಕ ಶುರುವಾಗಿದೆ. ಪೆಟ್ರೋಲ್‌ನಲ್ಲಿ ನಿಗದಿಗಿಂತ ಹೆಚ್ಚು ಎಥೆನಾಲ್ ಮಿಶ್ರಣ ಮಾಡುತ್ತಿರುವ ಪರಿಣಾಮ ವಾಹನಗಳ ಎಂಜಿನ್‌ಗಳು ಹಾಳಾಗುತ್ತಿದ್ದು, ವಾಹನ ಸವಾರರು ಮತ್ತು ರಾಜ್ಯ ಸರ್ಕಾರ ಈ ವಿಚಾರವನ್ನು ತೀವ್ರ ಗಂಭೀರವಾಗಿ ಪರಿಗಣಿಸಿದೆ. ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್ ಅವರು ಈ ಕುರಿತು ಕೇಂದ್ರ ಸರ್ಕಾರದ ಮುಂದೆ ಪ್ರಮುಖ ಬೇಡಿಕೆಗಳನ್ನಿಟ್ಟಿದ್ದಾರೆ.

ಶೇ 20ಕ್ಕಿಂತಲೂ ಹೆಚ್ಚಿನ ಪ್ರಮಾಣದ ಎಥೆನಾಲ್

ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಿಂದ ಸಂಗ್ರಹಿಸಲಾದ 63 ಪೆಟ್ರೋಲ್ ಸ್ಯಾಂಪಲ್‌ಗಳನ್ನು ISO ಪ್ರಮಾಣೀಕೃತ ಖಾಸಗಿ ಪ್ರಯೋಗಾಲಯಗಳಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಪರೀಕ್ಷೆಯ ವರದಿಯಲ್ಲಿ ಪ್ರಮುಖ ತೈಲ ಕಂಪನಿಗಳ ಪೆಟ್ರೋಲ್‌ನಲ್ಲಿ ನಿಗದಿತ ಶೇ 20ಕ್ಕಿಂತಲೂ ಹೆಚ್ಚಿನ ಪ್ರಮಾಣದ ಎಥೆನಾಲ್ ಪತ್ತೆಯಾಗಿದೆ ಎಂದು ಸಚಿವರು ಆರೋಪಿಸಿದ್ದಾರೆ.

ಲ್ಯಾಬ್ ಪರೀಕ್ಷಾ ವರದಿಯ ವಿವರ

  • IOCL ಪೆಟ್ರೋಲ್ (MS): 31.2% ಎಥೆನಾಲ್
  • HPCL ಪೆಟ್ರೋಲ್ (MS – ಪವರ್): 30.5% ಎಥೆನಾಲ್
  • HPCL ಪೆಟ್ರೋಲ್ (MS): 27.0% ಎಥೆನಾಲ್
  • BPCL ಪೆಟ್ರೋಲ್ (MS – ಸ್ಪೀಡ್): 26.1% ಎಥೆನಾಲ್
  • ನಯಾರಾ ಪೆಟ್ರೋಲ್ (MS): 25.5% ಎಥೆನಾಲ್
  • BPCL ಪೆಟ್ರೋಲ್ (MS): 22.6% ಎಥೆನಾಲ್

ಹೆಚ್ಚಿನ ಎಥೆನಾಲ್ ಮಿಶ್ರಣದಿಂದ ವಾಹನಗಳ ಮೈಲೇಜ್ ಗಣನೀಯವಾಗಿ ಕಡಿಮೆಯಾಗುತ್ತಿದ್ದು, ಫ್ಯೂಯಲ್ ಪಂಪ್ ಹಾಗೂ ಎಂಜಿನ್‌ಗಳು ರಿಪೇರಿಗೆ ಬರುತ್ತಿವೆ. ವಾಹನಗಳ ದುರಸ್ತಿಗೆ ಪ್ರತಿ ಸವಾರರಿಗೆ 2,000 ರೂ. ದಿಂದ 3,000 ರೂ. ರವರೆಗೆ ಹೆಚ್ಚುವರಿ ಖರ್ಚು ತಗುಲುತ್ತಿದ್ದು, ಸಾರ್ವಜನಿಕರ ಮೇಲೆ ಆರ್ಥಿಕ ಹೊರೆ ಬೀಳುತ್ತಿದೆ. E20 ಇಂಧನ ಬಳಕೆಯಿಂದ ಉಂಟಾಗುವ ಎಂಜಿನ್ ಹಾನಿಗೆ ಇನ್ಶೂರೆನ್ಸ್ ಕಂಪನಿಗಳು ಅಥವಾ ವಾಹನ ತಯಾರಕರು ವಾರಂಟಿ ನೀಡುತ್ತಾರೆಯೇ ಎಂಬ ಪ್ರಶ್ನೆಯನ್ನು ಸಚಿವರು ಎತ್ತಿದ್ದಾರೆ.

ಸಚಿವ ರಿಜ್ವಾನ್ ಅರ್ಷದ್ ಅವರ ಪ್ರಮುಖ ಬೇಡಿಕೆಗಳು

  1.  ಪೆಟ್ರೋಲ್ ಬಂಕ್‌ಗಳಲ್ಲಿ ಎಥೆನಾಲ್ ಮಿಶ್ರಣದ ಪ್ರಮಾಣವನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು.
  2. ಗ್ರಾಹಕರಿಗೆ ತಮ್ಮ ವಾಹನಕ್ಕೆ ಸೂಕ್ತವಾದ ಇಂಧನ ಆಯ್ಕೆ ಮಾಡುವ ಅವಕಾಶ ನೀಡಬೇಕು.
  3. ಮಿತಿಮೀರಿ ಎಥೆನಾಲ್ ಬೆರೆಸುವ ಕಂಪನಿಗಳಿಗೆ ದಂಡ ವಿಧಿಸಬೇಕು.
  4. E20 ಇಂಧನದಿಂದಾಗುವ ಹಾನಿಗೆ ಪರಿಹಾರ ನೀಡಲು ‘ವಿಶೇಷ ನಿಧಿ’ ಸ್ಥಾಪಿಸಬೇಕು.
  5. ಕೇಂದ್ರ ಸರ್ಕಾರ ತಜ್ಞರ ಸಮಿತಿ ರಚಿಸಿ ದೇಶಾದ್ಯಂತ ಇಂಧನದ ಗುಣಮಟ್ಟ ಪರಿಶೀಲಿಸಬೇಕು.

ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣದ ಈ ಗಂಭೀರ ವಿಚಾರವು ಈಗ ರಾಜ್ಯ ಮತ್ತು ಕೇಂದ್ರ ರಾಜಕೀಯ ಸಂಘರ್ಷಕ್ಕೆ ವೇದಿಕೆಯಾಗಿದ್ದು, ರಾಜ್ಯದ ವರದಿಗೆ ಕೇಂದ್ರ ಸರ್ಕಾರ ಹೇಗೆ ಸ್ಪಂದಿಸಲಿದೆ ಎಂಬುದನ್ನು ಕಾದುನೋಡಬೇಕಿದೆ.

ವರದಿ: ಅನಿಲ್, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಭಾವನಾ ಹೆಗಡೆ
ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More