ನಕಲಿ ಔಷಧ ಜಾಲದ ತನಿಖೆ ಮತ್ತಷ್ಟು ಚುರುಕು: ಸೇವಿಸಿದ ರೋಗಿಗಳ ಮಾಹಿತಿ ಸಂಗ್ರಹಕ್ಕೆ ಮುಂದಾದ ಎಫ್​ಡಿಎ

ನಕಲಿ ಔಷಧ ಜಾಲದ ತನಿಖೆ ಮತ್ತೊಂದು ಹಂತಕ್ಕೆ ತಲುಪಿದ್ದು, ಎಫ್​ಡಿಎ ಅಧಿಕಾರಿಗಳು ನಕಲಿ ಔಷಧ ಪೂರೈಕೆಯಾಗಿರುವ ಆಸ್ಪತ್ರೆ, ಫಾರ್ಮಸಿ ಹಾಗೂ ಮೆಡಿಕಲ್ ಶಾಪ್‌ಗಳ ಮಾಹಿತಿ ಕಲೆಹಾಕುತ್ತಿದ್ದಾರೆ. ಇದರ ಜತೆಗೆ ನಕಲಿ ಔಷಧ ಸೇವಿಸಿರುವ ರೋಗಿಗಳ ಆರೋಗ್ಯ ಸ್ಥಿತಿ ಹಾಗೂ ಸಂಭವನೀಯ ಅಡ್ಡ ಪರಿಣಾಮಗಳ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ.

ನಕಲಿ ಔಷಧ ಜಾಲದ ತನಿಖೆ ಮತ್ತಷ್ಟು ಚುರುಕು: ಸೇವಿಸಿದ ರೋಗಿಗಳ ಮಾಹಿತಿ ಸಂಗ್ರಹಕ್ಕೆ ಮುಂದಾದ ಎಫ್​ಡಿಎ
ನಕಲಿ ಔಷಧ ಜಾಲದ ತನಿಖೆ ಮತ್ತಷ್ಟು ಚುರುಕು
Image Credit source: tv9
Edited By:

Updated on: Sep 21, 2026 | 12:05 PM

ಮುಖ್ಯಾಂಶಗಳು

  • ನಕಲಿ ಔಷಧ ಸೇವಿಸಿದ ರೋಗಿಗಳ ಮಾಹಿತಿ ಸಂಗ್ರಹ
  • ಆಸ್ಪತ್ರೆ, ಫಾರ್ಮಸಿಗಳಿಂದ ಔಷಧ ಬಳಕೆ ವಿವರ
  • ರೋಗಿಗಳ ಆರೋಗ್ಯದ ಮಾಹಿತಿ ಕಲೆಹಾಕಲಿರುವ ಎಫ್​ಡಿಎ

ಬೆಂಗಳೂರು, ಸೆಪ್ಟೆಂಬರ್ 21: ನಕಲಿ ಔಷಧ ಜಾಲದ ತನಿಖೆ ಇದೀಗ ಮತ್ತೊಂದು ಹಂತಕ್ಕೆ ತಲುಪಿದೆ. ನಕಲಿ ಔಷಧಗಳು ಎಲ್ಲೆಲ್ಲಿಗೆ ಪೂರೈಕೆಯಾಗಿವೆ ಎಂಬುದರ ಜತೆಗೆ, ಅವುಗಳನ್ನು ಸೇವಿಸಿರುವ ರೋಗಿಗಳ ಮಾಹಿತಿ ಕಲೆಹಾಕಲು ಆಹಾರ ಮತ್ತು ಔಷಧ ಆಡಳಿತ (FDA) ಅಧಿಕಾರಿಗಳು ಮುಂದಾಗಿದ್ದಾರೆ. ಯಾವ ಆಸ್ಪತ್ರೆಗಳಿಗೆ ನಕಲಿ ಔಷಧ ಪೂರೈಕೆಯಾಗಿದೆ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಆಸ್ಪತ್ರೆಗಳ ಫಾರ್ಮಸಿಗಳಿಂದ ಔಷಧಗಳ ಖರೀದಿ ಹಾಗೂ ಬಳಕೆಯ ವಿವರಗಳನ್ನು ಅಧಿಕಾರಿಗಳು ಕಲೆಹಾಕುತ್ತಿದ್ದಾರೆ. ಯಾವ ದಿನ, ಯಾವ ಆಸ್ಪತ್ರೆಯಲ್ಲಿ ಎಷ್ಟು ಪ್ರಮಾಣದ ಔಷಧ ಬಳಕೆಯಾಗಿದೆ ಎಂಬ ಮಾಹಿತಿಯನ್ನೂ ಪರಿಶೀಲಿಸಲಾಗುತ್ತಿದೆ.

ನಕಲಿ ಔಷಧ ಪಡೆದ ರೋಗಿಗಳ ವಿವರ ಕಲೆಹಾಕಲು ಮುಂದಾದ ಎಫ್​​ಡಿಎ

ನಕಲಿ ಔಷಧ ಪಡೆದಿರುವ ರೋಗಿಗಳ ವಿವರಗಳನ್ನು ಸಂಗ್ರಹಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಔಷಧ ಸೇವಿಸಿದ ಬಳಿಕ ರೋಗಿಗಳ ಆರೋಗ್ಯ ಸ್ಥಿತಿ ಹೇಗಿದೆ, ಅವರಿಗೆ ಯಾವುದೇ ತೊಂದರೆ ಅಥವಾ ಅಡ್ಡ ಪರಿಣಾಮ ಉಂಟಾಗಿದೆಯೇ ಎಂಬ ಬಗ್ಗೆಯೂ ಮಾಹಿತಿ ಪಡೆಯಲಾಗುತ್ತಿದೆ. ನಕಲಿ ಔಷಧದಿಂದ ರೋಗಿಗಳ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ರೋಗಿಗಳಿಗೆ ನೀಡಲಾದ ಔಷಧದ ಬ್ಯಾಚ್, ಆಸ್ಪತ್ರೆ ಹಾಗೂ ಫಾರ್ಮಸಿಯ ವಿವರಗಳನ್ನು ಕಲೆಹಾಕಲಾಗುತ್ತಿದೆ.

ಸಂಪೂರ್ಣ ಸಪ್ಲೈ ಚೈನ್ ಪತ್ತೆಗೆ ಕ್ರಮ

ನಕಲಿ ಔಷಧದ ಸಂಪೂರ್ಣ ಸಪ್ಲೈ ಚೈನ್ ಪತ್ತೆಹಚ್ಚಲು ಎಫ್​ಡಿಎ ತನಿಖೆ ನಡೆಸುತ್ತಿದೆ. ನಕಲಿ ಔಷಧ ಪೂರೈಕೆಯಾಗಿರುವ ಆಸ್ಪತ್ರೆಗಳು ಹಾಗೂ ಮೆಡಿಕಲ್ ಶಾಪ್‌ಗಳ ಪಟ್ಟಿಯನ್ನು ಸಿದ್ಧಪಡಿಸುವ ಕಾರ್ಯವೂ ನಡೆಯುತ್ತಿದೆ.

ಇದನ್ನೂ ಓದಿ: ನಕಲಿ ಔಷಧ ಜಾಲ: 15 ಆಸ್ಪತ್ರೆಗೆಳ ಫಾರ್ಮಸಿಗಳಿಗೆ ನೋಟಿಸ್​​, ಡಿಸ್ಟ್ರಿಬ್ಯೂಟರ್​​ಗಳ ವಿರುದ್ಧವೂ ಕ್ರಮ

ನಕಲಿ ಔಷಧ ಸೇವನೆಯಿಂದ ರೋಗಿಗಳಿಗೆ ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಉಂಟಾಗಿದೆಯೇ ಎಂಬುದರ ಮೇಲೂ ಅಧಿಕಾರಿಗಳು ಗಮನಹರಿಸಿದ್ದಾರೆ. ರೋಗಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಕಂಡುಬಂದರೆ ಮುಂದಿನ ಕ್ರಮ ಕೈಗೊಳ್ಳಲು ಎಫ್​ಡಿಎ ಸಿದ್ಧತೆ ನಡೆಸಿದೆ. ಪ್ರಕರಣದ ತನಿಖೆಯ ಜತೆಗೆ ರೋಗಿಗಳ ಮೇಲೆ ಉಂಟಾಗಿರುವ ಪರಿಣಾಮದ ಬಗ್ಗೆಯೂ ವರದಿ ಸಿದ್ಧಪಡಿಸುವ ಸಾಧ್ಯತೆಯಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಿನಯ್​ ಕಾಶಪ್ಪನವರ್​

ವಿನಯಕುಮಾರ್ ಕಾಶಪ್ಪನವರ್ ಅವರು ಸಮೂಹ ಸಂವಹನ ಹಾಗೂ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಕಳೆದ 8 ವರ್ಷಗಳಿಂದ ಟಿವಿ9 ಕನ್ನಡದಲ್ಲಿ ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ 10 ವರ್ಷಗಳ ವರದಿಗಾರಿಕೆ ಅನುಭವ ಹೊಂದಿದ್ದು, ಸಮಾಜಮುಖಿ ಹಾಗೂ ತನಿಖಾ ವರದಿಗಳ ಮೂಲಕ ಜನಪರ ವಿಷಯಗಳನ್ನು ಬೆಳಕಿಗೆ ತರುತ್ತಿದ್ದಾರೆ.

Read More
Loading...
Unable to load recommendations.
Follow Us