Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಬ್ಬಳ್ಳಿ; ಹೆಚ್ಚಾದ ದರ, ಮೆಣಿಸಿನಕಾಯಿ ಬೆಳೆಗೆ ಸಿಸಿ ಕ್ಯಾಮೆರಾ ಕಾವಲು ಇಟ್ಟ ರೈತ

ಶಿವಪುತ್ರಪ್ಪ ಅವರು ಐದು ಎಕರೆಯಲ್ಲಿ ಮೆಣಸಿನಕಾಯಿ ಬೆಳದಿದ್ದಾರೆ. ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಮೆಣಸಿನಕಾಯಿಗೆ 80 ರಿಂದ 90 ಸಾವಿರ ರೂ ಇದೆ. ಮೆಣಿಸಿನಕಾಯಿ ಬೆಳೆಗೆ ಕಳ್ಳರ ಕಾಟ ಹೆಚ್ಚಾದ ಹಿನ್ನಲೆ ಶಿವಪುತ್ರಪ್ಪ ದ್ಯಾಮಣ್ಣವರ ಅವರು ಬೆಳೆಗೆ ಸಿಸಿ ಕ್ಯಾಮೆರಾದ ಹದ್ದಿನ ಕಣ್ಣಿಟ್ಟಿದ್ದಾರೆ.

ಹುಬ್ಬಳ್ಳಿ; ಹೆಚ್ಚಾದ ದರ, ಮೆಣಿಸಿನಕಾಯಿ ಬೆಳೆಗೆ ಸಿಸಿ ಕ್ಯಾಮೆರಾ ಕಾವಲು ಇಟ್ಟ ರೈತ
ಮೆಣಿಸಿನಕಾಯಿ ಬೆಳೆಗೆ ಸಿಸಿ ಕ್ಯಾಮೆರಾ ಕಾವಲು ಇಟ್ಟ ರೈತ
Follow us
ಶಿವಕುಮಾರ್ ಪತ್ತಾರ್. ಹುಬ್ಬಳ್ಳಿ
| Updated By: ಆಯೇಷಾ ಬಾನು

Updated on:Jan 30, 2024 | 12:51 PM

ಹುಬ್ಬಳ್ಳಿ, ಜ.30: ಟೊಮೇಟೊ, ಈರುಳ್ಳಿ ಬೆಲೆ ಗಗನಕ್ಕೇರಿದಾಗ ಖದೀಮರು ಕತ್ತಲಾಗುವುದಕ್ಕಾಗಿಯೇ ಕಾದು ಬೆಲೆಯನ್ನು ಕದ್ದು ಪರಾರಿಯಾಗುತ್ತಿದ್ದರು. ಹೀಗಾಗಿ ರೈತರು (Farmer) ತಮ್ಮ ಜಮೀನಿಗೆ ಸಿಸಿ ಕ್ಯಾಮೆರಾ ಅಳವಡಿಸುತ್ತಿದ್ದರು. ಆದರೆ ಈಗ ಮೆಣಿಸಿನಕಾಯಿ (Chilli) ಬೆಳೆಗೆ ಕಳ್ಳರ ಕಾಟ ಹೆಚ್ಚಾಗಿದ್ದು ಬೆಳೆಯನ್ನು ಕಾಪಾಡಿಕೊಳ್ಳುವುದೇ ರೈತರಿಗೆ ದೊಡ್ಡ ಸಮಸ್ಯೆಯಾಗಿದೆ. ಹೀಗಾಗಿ ಜಮೀನಿಗೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸುತ್ತಿದ್ದಾರೆ.

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ‌ ಹಿರೇನರ್ತಿ ಗ್ರಾಮದ ರೈತ ತಾನು ಬೆಳೆದ ಮೆಣಸಿನಕಾಯಿ ಬೆಳೆಯನ್ನು ಕಳ್ಳರಿಂದ ಕಾಪಾಡಿಕೊಳ್ಳಲು ಜಮೀನಿಗೆ ಸಿಸಿ ಕ್ಯಾಮೆರಾ ಅಳವಡಿಸಿದ್ದಾನೆ. ಮೆಣಿಸಿನಕಾಯಿ ಬೆಳೆಗೆ ಕಳ್ಳರ ಕಾಟ ಹೆಚ್ಚಾದ ಹಿನ್ನಲೆ ಶಿವಪುತ್ರಪ್ಪ ದ್ಯಾಮಣ್ಣವರ ಅವರು ಬೆಳೆಗೆ ಸಿಸಿ ಕ್ಯಾಮೆರಾದ ಹದ್ದಿನ ಕಣ್ಣಿಟ್ಟಿದ್ದಾರೆ. ಸೋಲಾರ್ ಮೂಲಕ ಜಮೀನಿನಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ್ದಾರೆ.

ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಮೆಣಸಿನಕಾಯಿಗೆ 80 ರಿಂದ 90 ಸಾವಿರ ರೂ ಇದೆ. ಹೀಗಾಗಿ ಮೆಣಸಿನಕಾಯಿ ಕಳ್ಳತನ ಮಾಡೋರು ಜಾಸ್ತಿಯಾಗಿದ್ದಾರೆ. ಶಿವಪುತ್ರಪ್ಪ ಅವರು ಐದು ಎಕರೆಯಲ್ಲಿ ಮೆಣಸಿನಕಾಯಿ ಬೆಳದಿದ್ದಾರೆ. ಹೀಗಾಗಿ ಮೆಣಸಿನಕಾಯಿ ಕಳ್ಳತನ ಮಾಡಬಾರದು ಅನ್ನೋ ಉದ್ದೇಶಕ್ಕೆ ಸಿಸಿ ಕ್ಯಾಮೆರಾ ಅಳವಡಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ವರ್ಕ್ ಫ್ರಂ ಹೋಂ ಕೆಲಸ ನೀಡೋದಾಗಿ ಸಾವಿರಾರು ಜನರನ್ನು ನಂಬಿಸಿ 158 ಕೋಟಿ ವಂಚನೆ ಮಾಡಿದ್ದ ದೊಡ್ಡ ಗ್ಯಾಂಗ್ ಅರೆಸ್ಟ್

ಗುರಾಯಿಸಿ ನಿಂದಿಸಿದ ಆರೋಪ, ಯುವಕನಿಗೆ ಚಾಕು ಇರಿತ

ನೆಲಮಂಗಲ ತಾಲೂಕಿನ ಟಿ.ಬೇಗೂರು ಗ್ರಾಮದಲ್ಲಿ ಗುರಾಯಿಸಿದ್ದಕ್ಕೆ ಯುವಕನಿಗೆ ಚಾಕು ಇರಿಯಲಾಗಿದೆ. ಮಂಜುನಾಥ್ ಎಂಬಾತ ಅಶ್ವತ್ಥ್ ಕುಮಾರ್ ಎಂಬಾತನಿಗೆ ಚಾಕು ಇರಿದಿದ್ದಾನೆ. ಆರೋಪಿ ಮಂಜುನಾಥ್‌ಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.

ಮನೆ ಮಾಲೀಕರಿಗೆ ಕಥೆ ಕಟ್ಟಿ ಚಿನ್ನಾಭರಣ ಕದ್ದ ಕಳ್ಳಿ ಬಂಧನ

ಮನೆ ಮಾಲೀಕರಿಗೆ ಕಥೆ ಕಟ್ಟಿ ಚಿನ್ನಾಭರಣ ಕದ್ದಿದ್ದ ಕಳ್ಳಿಯನ್ನ ಬಂಧಿಸಲಾಗಿದೆ. ಬೆಂಗಳೂರಿನ ಸದಾಶಿವನಗರದ ಕೀರ್ತಿವರ್ಧನ್ ಅನ್ನೋರ ಮನೆಯಲ್ಲಿ ಮೂರು ವರ್ಷದಿಂದ ಕೆಲಸಕ್ಕಿದ್ದ ಶಾಂತ 10ಲಕ್ಷ ಮೌಲ್ಯದ ಚಿನ್ನಾಭರಣ ಕದ್ದಿದ್ಲು. ಮಾಲೀಕರು ವಾಪಸ್ ಬಂದಾಗ ಕಳ್ಳರಿಬ್ಬರು ನನ್ನ ಮೇಲೆ ಹಲ್ಲೆ ನಡೆಸಿ ಕಳ್ಳತನ ಮಾಡಿದ್ರು ಅಂತಾ ಕತೆ ಕಟ್ಟಿದ್ಲು. ಆದ್ರೆ, ತನಿಖೆ ವೇಳೆ ಮನೆ ಕೆಲಸದಾಕೆ ಶಾಂತಳಿಂದಲೇ ಚಿನ್ನ ಕಳವು ಮಾಡಿರೋದು ಗೊತ್ತಾಗಿದೆ.

ನಂಜನಗೂಡಿನ ಹಲ್ಲರೆ ಗ್ರಾಮದಲ್ಲಿ ಎರಡು ಗುಂಪುಗಳ ಗಲಾಟೆ

ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹಲ್ಲರೆ ಗ್ರಾಮದಲ್ಲಿ ಎರಡು ಗುಂಪುಗಳ ಮಧ್ಯೆ ಗಲಾಟೆಯಾಗಿದೆ. ಎರಡು ಕಡೆಯಿಂದ ಪರಸ್ಪರ ಕಲ್ಲು ತೂರಾಟ ನಡೆದಿದ್ದು, ಹಲವು ದ್ವಿಚಕ್ರವಾಹನಗಳು ಜಖಂಗೊಂಡಿದೆ. ಪೊಲೀಸರು ಸೇರಿ ಹಲವರಿಗೆ ಗಾಯವಾಗಿದೆ. ಸದ್ಯ ಗ್ರಾಮದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಿದ್ದು, ಹಲ್ಲರೆ ಗ್ರಾಮ ಸಹಜಸ್ಥಿತಿಗೆ ಬಂದಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:49 pm, Tue, 30 January 24