ಮತ್ತೆ ತೆರೆದುಕೊಂಡ ಫ್ಯಾಷನ್ ಲೋಕ: ಮಂಗಳೂರಿನ ಕರಾವಳಿ ಕಾಲೇಜಿನಲ್ಲಿ ಫ್ಯಾಷನ್ ಶೋ ಹೇಗಿತ್ತು ಗೊತ್ತಾ?
ಸಿಕ್ಕ ಅವಕಾಶವನ್ನ ಬಳಸಿಕೊಂಡ ಯುವತಿಯರು ವೇದಿಕೆಯಲ್ಲಿ ಕ್ಯಾಟ್ ವಾಕ್ ಮಾಡುವ ಮೂಲಕ ನೆರೆದಿದ್ದವರ ಮನ ಗೆಲ್ಲುವಲ್ಲಿ ಯಶಸ್ವಿಯಾದರು. ನಾವು ಯಾರಿಗೂ ಕಮ್ಮಿಯಿಲ್ಲ ಎನ್ನುವ ಹಾಗೆ ಹುಡುಗರು ಕೂಡ ತಾವೇ ರೆಡಿ ಮಾಡಿದ ವಿಭಿನ್ನ ವಸ್ತ್ರಗಳ ಜೊತೆಗೆ ವೇದಿಕೆಯೇರಿ ಸ್ಟೆಪ್ ಹಾಕುವ ಮೂಲಕ ನೆರೆದಿದ್ದವರನ್ನು ರಂಜಿಸಿದರು.
ಮಂಗಳೂರು: ಕೊರೊನಾದಿಂದ ಫ್ಯಾಷನ್ ಲೋಕಕ್ಕೆ ಬ್ರೇಕ್ ಬಿದ್ದಿತ್ತು. ಆದರೆ ಈಗ ಸ್ವಲ್ಪ ಚೇತರಿಸಿಕೊಳ್ಳುತ್ತಿದೆ. ವರ್ಷದ ಬಳಿಕ ಭವಿಷ್ಯದ ಫ್ಯಾಷನ್ ವಿದ್ಯಾರ್ಥಿಗಳಿಗಾಗಿ ಮಂಗಳೂರಿನ ಕಾಲೇಜೊಂದು ಉತ್ಸವ ಏರ್ಪಡಿಸಿತ್ತು. ತಾವೇ ಸಿದ್ಧಪಡಿಸಿದ ವಸ್ತ್ರಗಳನ್ನ ವಿದ್ಯಾರ್ಥಿಗಳು ತೊಟ್ಟುಕೊಂಡು ವೇದಿಕೆಯಲ್ಲಿ ಹೊಸ ಫ್ಯಾಷನ್ ಲೋಕವನ್ನೇ ಸೃಷ್ಟಿ ಮಾಡಿದರು.
ವರ್ಷದಿಂದೀಚೆಗೆ ಮಹಾಮಾರಿ ಕೊರೊನಾ ತಡೆಗೆ ಲಾಕ್ಡೌನ್ ಹೇರಿದ ನಂತರ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬ್ರೇಕ್ ಬಿದ್ದಿತ್ತು. ಕಾಲೇಜು ಶುರುವಾದರೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಲಾಗಿತ್ತು. ಆದರೆ ವರ್ಷದ ಬಳಿಕ ಮತ್ತೆ ಫ್ಯಾಷನ್ ಡಿಸೈನಿಂಗ್ ಹಾಗೂ ಇನ್ನಿತರ ವಿಷಯಗಳಲ್ಲಿ ಕಲಿಸುವ ಮಂಗಳೂರಿನ ಕರಾವಳಿ ಫ್ಯಾಷನ್ ಕಾಲೇಜಿನಲ್ಲಿ ಕಲಿಕೆಯನ್ನು ಹಬ್ಬದಂತೆ ಆಚರಣೆ ಮಾಡಿದರು. ಈ ರೀತಿಯ ಯಾವುದೇ ಫೆಸ್ಟ್ ಇದ್ದರೂ ಇಲ್ಲಿ ಇದೇ ರೀತಿ ಒಂದು ಶೋ ನಡೆಸುತ್ತಾರೆ. ಕಾರ್ಯಕ್ರಮಕ್ಕೆ ಶೋ ಮೆರುಗನ್ನು ಕೂಡ ನೀಡುತ್ತಾರೆ.
ಇಲ್ಲಿಗೆ ವಿವಿಧ ಜಿಲ್ಲೆಗಳಿಂದ ವಿದ್ಯಾರ್ಥಿಗಳು ಫ್ಯಾಷನ್ ಡಿಸೈನ್ ಕೋರ್ಸ್ಗೆ ಬರುತ್ತಾರೆ. ತಮ್ಮ ಕಲಿಕೆಯ ಅವಧಿಯಲ್ಲಿ ಮಾಡಿದ ವಿನ್ಯಾಸಗಳನ್ನು ತಾವೇ ಉಟ್ಟು ಪ್ರದರ್ಶಿಸಬೇಕು. ಇದು ಈ ವಿದ್ಯಾರ್ಥಿಗಳಿಗೆ ಸಕತ್ ಕುಷಿ ಕೂಡ ಕೊಡುತ್ತದೆ. ಭಾರತ ಸೇರಿದಂತೆ ವಿದೇಶಿ ಮಾದರಿಯ ವಿಭಿನ್ನ ಉಡುಗೆಗಳನ್ನ ಹಾಕಿಕೊಂಡು ಹೆಣ್ಣು ಮಕ್ಕಳು ಕ್ಯಾಟ್ ವಾಕ್ ಮಾಡಿದ್ದು, ವಿಶೇಷವಾಗಿತ್ತು. ವೇದಿಕೆಯೇರಿದ ವಿದ್ಯಾರ್ಥಿನಿಯರು ಮೈ ಕೈ ಬಳುಕಿಸುತ್ತಾ ವೇದಿಕೆಯಲ್ಲಿ ಸ್ಟೆಪ್ ಹಾಕಿ ನೆರೆದಿದ್ದ ವಿದ್ಯಾರ್ಥಿಗಳು ಮತ್ತು ಪ್ರೇಕ್ಷಕರನ್ನ ರಂಜಿಸಿದರು.
ಯಾರಿಗೂ ಕಮ್ಮಿಯಿಲ್ಲ ಹುಡುಗರು ಸಿಕ್ಕ ಅವಕಾಶವನ್ನ ಚೆನ್ನಾಗಿ ಬಳಸಿಕೊಂಡ ಯುವತಿಯರು ವೇದಿಕೆಯಲ್ಲಿ ಕ್ಯಾಟ್ ವಾಕ್ ಮಾಡುವ ಮೂಲಕ ನೆರೆದಿದ್ದವರ ಮನ ಗೆಲ್ಲುವಲ್ಲಿ ಯಶಸ್ವಿಯಾದರು. ಇನ್ನು ನಾವು ಯಾರಿಗೂ ಕಮ್ಮಿಯಿಲ್ಲ ಎನ್ನುವ ಹಾಗೆ ಹುಡುಗರು ಕೂಡ ತಾವೇ ರೆಡಿ ಮಾಡಿದ ವಿಭಿನ್ನ ವಸ್ತ್ರಗಳ ಜೊತೆಗೆ ವೇದಿಕೆಯೇರಿ ಸ್ಟೆಪ್ ಹಾಕುವ ಮೂಲಕ ನೆರೆದಿದ್ದವರನ್ನು ರಂಜಿಸಿದರು. ಯುವತಿಯರಂತೂ ವಿಭಿನ್ನ ವೇಷಭೂಷಣಗಳ ಮೂಲಕ ಕಲರ್ ಫುಲ್ ಆಗಿ ಕಾಣಿಸಿಕೊಂಡು ಬೆಕ್ಕಿನ ನಡಿಗೆಯಿಂದ ನೆರೆದಿದ್ದವರನ್ನು ಆಕರ್ಶಿಸಿದರು. ಜೊತೆಗೆ ಜನಪದ ನೃತ್ಯ, ವೆಸ್ಟರ್ನ್ ಡ್ಯಾನ್ಸ್ ಸೇರಿದಂತೆ ವಿವಿಧ ಪ್ರಕಾರದ ಸಾಂಸ್ಕೃತಿಕ ಚಟುವಟಿಕೆಗಳನ್ನು ಮಾಡಿದರು.
ಕಾಲೇಜಿನ ಹೊರಾಂಗಣದಲ್ಲಿ ನಡೆದ ಈ ಫ್ಯಾಷನ್ ಶೋ ಕಾರ್ಯಕ್ರಮದಲ್ಲಿ ಪಾಲ್ಗೊಂಡವರ ಮನಸ್ಸಿಗೆ ಸಖತ್ ಖುಷಿ ಕೊಟ್ಟಿತ್ತು. ಕ್ಯಾಟ್ ವಾಕ್ ಮಾಡಿದ ವಿದ್ಯಾರ್ಥಿಗಳು ಇದು ನಮ್ಮ ಕಾಲೇಜಲ್ಲ. ಬದಲಿಗೆ ಯಾವುದೇ ದೊಡ್ಡ ಸ್ಪರ್ಧೆಯಲ್ಲಿ ಹೆಜ್ಜೆ ಹಾಕುತ್ತಿದ್ದೇವೆ ಎನ್ನುವ ರೀತಿಯಲ್ಲಿ ಎಂಜಾಯ್ ಮಾಡಿ ಸಂತೋಷಪಟ್ಟರು. ಹೀಗೆ ಭವಿಷ್ಯದ ಫ್ಯಾಷನ್ ಡಿಸೈನರ್ಗಳ ವಿನೂತನ ಶೈಲಿಗೆ ಕರಾವಳಿ ಕಾಲೇಜು ಹೊಸ ವೇದಿಕೆ ಕಲ್ಪಿಸಿತ್ತು.
ಇದನ್ನೂ ಓದಿ