ಸಾರಿಗೆ ಇಲಾಖೆ, ಸಂಚಾರಿ ಪೊಲೀಸರ ಜಂಟಿ ಕಾರ್ಯಾಚರಣೆ: ಡಿಫಾಲ್ಟ್ ನಂಬರ್ ಪ್ಲೇಟ್ ವಾಹನಗಳಿಗೆ ದಂಡ
ನಂಬರ್ ಪ್ಲೇಟ್ ಮೇಲೆ ಯಾವುದೇ ಹೆಸರು ಬರೆಯುವಂತಿಲ್ಲ. G ಎಂಬ ಅಕ್ಷರ ಇಲ್ಲದೆ ಸರ್ಕಾರೇತರ ವಾಹನಗಳ ಮೇಲೆ ಕರ್ನಾಟಕ ಸರ್ಕಾರ ಎಂದು ನಮೂದಿಸಿದ್ದರೆ ಅಂತಹ ವಾಹನಗಳ ಮೇಲೆ ದಂಡ ವಿಧಿಸಲಾಗುವುದು.
ಬೆಂಗಳೂರು: ಸಾರಿಗೆ ಇಲಾಖೆ ಮತ್ತು ಸಂಚಾರಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಡಿಫಾಲ್ಟ್ ನಂಬರ್ ಪ್ಲೇಟ್ ಹೊಂದಿರುವ ವಾಹನಗಳಿಗೆ ದಂಡ ಹಾಕಿದ್ದಾರೆ. ಡಿಫಾಲ್ಟ್ ನಂಬರ್ ಪ್ಲೇಟ್ಗಳನ್ನ ಹೊಂದಿದ್ದ ವಾಹನಗಳ ಮಾಲೀಕರಿಗೆ ದಂಡ ವಿಧಿಸಿ ನೊಟೀಸ್ ನೀಡಲಾಗಿದೆ.
ನಂಬರ್ ಪ್ಲೇಟ್ ಮೇಲೆ ಯಾವುದೇ ಹೆಸರು ಬರೆಯುವಂತಿಲ್ಲ. G ಎಂಬ ಅಕ್ಷರ ಇಲ್ಲದೆ ಸರ್ಕಾರೇತರ ವಾಹನಗಳ ಮೇಲೆ ಕರ್ನಾಟಕ ಸರ್ಕಾರ ಎಂದು ನಮೂದಿಸಿದ್ದರೆ ಅಂತಹ ವಾಹನಗಳ ಮೇಲೆ ದಂಡ ವಿಧಿಸಲಾಗುವುದು. ನಂಬರ್ ಪ್ಲೇಟ್ಗಳ ಮೇಲೆ ಯಾವುದೇ ಸಂಘ ಸಂಸ್ಥೆಗಳ ಹೆಸರುಗಳನ್ನ ಬರೆಯುವಂತಿಲ್ಲ. ಹೀಗಾಗಿ ಸಂಚಾರ ಪೂರ್ವ ವಿಭಾಗ ಡಿಸಿಪಿ ಶಾಂತರಾಜು ಹಾಗು ಹೆಚ್ಚುವರಿ ಆಯುಕ್ತರು ಟ್ರಾನ್ಸ್ಪೋರ್ಟ್ ಎನ್ಪೋರ್ಸ್ಮೆಂಟ್ ಹೋಳ್ಕರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ವಾಹನಗಳ ಮೇಲೆ ದಂಡ ವಿಧಿಸಲಾಗಿದೆ.
ಪೊಲೀಸರು ವಿಧಾನಸೌಧ ಬಳಿ 50ಕ್ಕೂ ಹೆಚ್ಚು ವಾಹನಗಳಿಗೆ ದಂಡ ವಿಧಿಸಿ ನೊಟೀಸ್ ನೀಡಿದ್ದಾರೆ. ವಿಧಾನಸೌಧದ ಹಿಂಭಾಗ ಕಾರ್ಯಾಚರಣೆ ನಡೆಯುತ್ತಿದೆ.
ಇದನ್ನೂ ಓದಿ: ‘ಮೊದಲಿನಂತೆ ಇರೋಕೆ ಸಾಧ್ಯವಿಲ್ಲ, ನನ್ನ ಬಳಿ ಮಾತನಾಡಬೇಡ’; ದಿವ್ಯಾಗೆ ಕಟು ಮಾತಿನಿಂದ ಎಚ್ಚರಿಕೆ ನೀಡಿದ ಮಂಜು