
ಕಳೆದ ಮೂರು ವರ್ಷಗಳಲ್ಲಿ 1.25 ಲಕ್ಷ ಕೋಟಿ ರೂ ಡಿಜಿಟಲ್ ಹಣಕಾಸು ವಂಚನೆಗಳು ನಡೆದಿವೆ ಎಂದು ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ ( The Indian Cybercrime Coordination Centre – I4C) ವರದಿ ಮಾಡಿದೆ. ಮೌಲ್ಯ ನೊಡಿದರೆ ದಿಗ್ಭ್ರಮೆಯಾಗುತ್ತದೆ; ದಿಕ್ಕುತೋಚದಂತಾಗುತ್ತದೆ. 2023 ರಲ್ಲಿ 13,000 ಕ್ಕೂ ಹೆಚ್ಚು ಸೈಬರ್ ಹಣಕಾಸಿನ ವಂಚನೆ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಅರ್ಧದಷ್ಟು ಡಿಜಿಟಲ್ ಪಾವತಿ ವಂಚನೆ (ಕಾರ್ಡ್/ಇಂಟರ್ನೆಟ್ ಬ್ಯಾಂಕಿಂಗ್) ಆಗಿದೆ. ಡಿಜಿಟಲ್ ಹಣಕಾಸು ವಂಚನೆಯ ಸಂತ್ರಸ್ತರು ಕನಿಷ್ಠ 10,319 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಮೊತ್ತ ಹೆಚ್ಚಾದಷ್ಟೂ ಇಂತಹ ಹಣಕಾಸಿನ ವಂಚನೆಗಳು ವೈಯಕ್ತಿಕ ಹಣಕಾಸಿನ ಮೇಲೆ ತೀವ್ರವಾಗಿ ಪರಿಣಾಮ ಬೀರುತ್ತದೆ. ನೇರ ವಿತ್ತೀಯ ನಷ್ಟಗಳು ಭಾರೀ ಒತ್ತಡ ಉಂಟುಮಾಡುತ್ತವೆ. ಬಲಿ ಪಶುಗಳ/ ಸಂತ್ರಸ್ತರ ಖಾತೆಗಳು ಇಂತಹ ವಂಚನೆಗಳಿಂದ ಖಾಲಿಯಾದಾಗ ಕ್ರೆಡಿಟ್ ಸ್ಕೋರ್ಗಳು ಪಾತಾಳ ಕಚ್ಚುತ್ತವೆ. ಹಣಕಾಸು ಸಂಸ್ಥೆಗಳು ನಂಬಿಕಾರ್ಹತೆ ಪ್ರಶ್ನೆಯನ್ನು ಎದುರಿಸುತ್ತವೆ. ಭಾವನಾತ್ಮಕ ಟೋಲ್ ಆತಂಕ ಮತ್ತು ಅಪನಂಬಿಕೆಯನ್ನು ಒಳಗೊಂಡಿರುತ್ತದೆ, ವಂಚನೆಯ ಪರಿಹಾರವನ್ನು ಮೀರಿ ಇರುತ್ತದೆ. ...
Published On - 4:42 am, Tue, 9 July 24