RTI and FIR: ಇನ್ನು ಮುಂದೆ ಆರ್‌ಟಿಐ ಕಾಯ್ದೆಯಡಿ ಪೊಲೀಸರ ತನಿಖಾ‌ ವರದಿ ಪಡೆಯಬಹುದು – ಹೈಕೋರ್ಟ್‌

TV9 Digital Desk

| Edited By: ಸಾಧು ಶ್ರೀನಾಥ್​

Updated on:Oct 12, 2021 | 1:00 PM

ತನಿಖಾ ಹಂತದಲ್ಲಿ ಮಾಹಿತಿ ನೀಡದಂತೆ ನಿರ್ಬಂಧವಿದೆ. ಆದರೆ ತನಿಖೆ ಪೂರ್ಣಗೊಂಡ ಬಳಿಕ RTI ಅನುಸಾರ ಮಾಹಿತಿ ಪಡೆಯಬಹುದು ಎಂದು ನ್ಯಾಯಮೂರ್ತಿ ಎನ್​ ಎಸ್​ ಸಂಜಯ್‌ ಗೌಡ ಅವರ ಏಕ ಸದಸ್ಯ ಪೀಠ ಅಭಿಪ್ರಾಯ ಪಟ್ಟಿದೆ.

RTI and FIR: ಇನ್ನು ಮುಂದೆ ಆರ್‌ಟಿಐ ಕಾಯ್ದೆಯಡಿ ಪೊಲೀಸರ ತನಿಖಾ‌ ವರದಿ ಪಡೆಯಬಹುದು - ಹೈಕೋರ್ಟ್‌
ಕರ್ನಾಟಕ ಹೈಕೋರ್ಟ್‌


ಬೆಂಗಳೂರು: ಪೊಲೀಸರ ತನಿಖಾ‌ ವರದಿಯನ್ನು ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯಡಿ ಪಡೆಯುವ ಹಕ್ಕಿದೆ ಎಂದು ಹೈಕೋರ್ಟ್‌ ಸಾರಿದೆ. ಕೇಸ್‌ವೊಂದರಲ್ಲಿ CID ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದರು. ಆದರೆ ಸಿಐಡಿ ಮಾಹಿತಿ ಅಧಿಕಾರಿಯು ಮಾಹಿತಿ ಹಕ್ಕಿನಡಿ ಬಿ ರಿಪೋರ್ಟ್ ಪ್ರತಿ ನೀಡಲು ನಿರಾಕರಿಸಿದ್ದರು. ಆಗ ಮಾಹಿತಿ ನೀಡುವಂತೆ ರಾಜ್ಯ ಮಾಹಿತಿ ಆಯೋಗ ಸೂಚಿಸಿತ್ತು. ಇದನ್ನು ಪ್ರಶ್ನಿಸಿ ಸಿಐಡಿ ಮಾಹಿತಿ ಅಧಿಕಾರಿ ರಿಟ್ ಅರ್ಜಿ ಸಲ್ಲಿಸಿದ್ದರು.

ಇದೀಗ ರಿಟ್ ಅರ್ಜಿ ವಜಾಗೊಳಿಸಿದ ಹೈಕೋರ್ಟ್ ಏಕಸದಸ್ಯ ಪೀಠವು ರಾಜ್ಯ ಮಾಹಿತಿ ಆಯುಕ್ತರ ಆದೇಶ ಎತ್ತಿಹಿಡಿದಿದೆ. ತನಿಖಾ ಹಂತದಲ್ಲಿ ಮಾಹಿತಿ ನೀಡದಂತೆ ನಿರ್ಬಂಧವಿದೆ. ಆದರೆ ತನಿಖೆ ಪೂರ್ಣಗೊಂಡ ಬಳಿಕ ಮಾಹಿತಿ ಪಡೆಯಬಹುದು ಎಂದು ನ್ಯಾಯಮೂರ್ತಿ ಎನ್​ ಎಸ್​ ಸಂಜಯ್‌ ಗೌಡ ಅವರ ಏಕ ಸದಸ್ಯ ಪೀಠ ಅಭಿಪ್ರಾಯ ಪಟ್ಟಿದೆ.

Also Read:
ಸಚಿವರ ಮನೆ ಬಳಿ ರಸ್ತೆ ಉತ್ತಮಗೊಂಡರೆ ಸಾಲದು; ಬಡವರ ಮನೆ ಬಳಿ ರಸ್ತೆಯೂ ಸರಿಯಾಗಬೇಕು: ಹೈಕೋರ್ಟ್

Also Read:
ಕರ್ನಾಟಕ ಹೈಕೋರ್ಟ್​ ಆದೇಶದಂತೆ ಕ್ರೈಂ ಸರಣಿಯಲ್ಲಿ ಮೊದಲ ಕಂತು ತೆಗೆದು ಹಾಕಿದ ನೆಟ್​ಫ್ಲಿಕ್ಸ್

ಅನುಮಾನಗಳಿಗೆಲ್ಲಾ ತೆರೆ ಎಳೆದ ಶ್ರಿಯಾ ವಿಡಿಯೋ|Sriya Became Mother|TV9 Kannada

ಮುಖ್ಯಮಂತ್ರಿ ಆಗೋದ್​ ಬಿಡ್ರಿ ಬಾಯಲ್ಲಿ ಮಣ್ಣಾಕ ಎಂದ ಎಂಎಲ್​ಸಿ |CMIbrahim| Tv9kannada

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada