ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ಪ್ರಸಾದ ದುರಂತಕ್ಕೆ ಒಂದು ವರ್ಷ
ಚಾಮರಾಜನಗರ: ಸುಳ್ವಾಡಿಯ ಕಿಚ್ಚುಗುತ್ತಿ ಮಾರಮ್ಮ ವಿಷ ಪ್ರಸಾದ ಸೇವನೆ ದುರಂತ ಸಂಭವಿಸಿ ಇಂದಿಗೆ ಒಂದು ವರ್ಷವಾಗಿದೆ. ಕಳೆದ ವರ್ಷ ಡಿಸೆಂಬರ್ 14ರಂದು ಹನೂರಿನ ಸುಳ್ವಾಡಿ ಮಾರಮ್ಮ ದೇಗುಲದಲ್ಲಿ ವಿಷ ಪ್ರಸಾದ ಸೇವಿಸಿ 17 ಜನರು ಮೃತಪಟ್ಟಿದ್ದರು. ಸುಮಾರು 120ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದರು. ಮೃತರ ಕುಟುಂಬಗಳಿಗೆ 2 ಎಕರೆ ಜಮೀನು: ಮೃತರ ಕುಟುಂಬಗಳಿಗೆ ಜಮೀನು ನೀಡಲು ಪ್ರಕ್ರಿಯೆ ಆರಂಭಿಸಲಾಗಿದೆ. ಒಂದೊಂದು ಕುಟುಂಬಕ್ಕೂ ತಲಾ 2 ಎಕರೆ ಜಮೀನು ನೀಡಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ. […]
ಚಾಮರಾಜನಗರ: ಸುಳ್ವಾಡಿಯ ಕಿಚ್ಚುಗುತ್ತಿ ಮಾರಮ್ಮ ವಿಷ ಪ್ರಸಾದ ಸೇವನೆ ದುರಂತ ಸಂಭವಿಸಿ ಇಂದಿಗೆ ಒಂದು ವರ್ಷವಾಗಿದೆ. ಕಳೆದ ವರ್ಷ ಡಿಸೆಂಬರ್ 14ರಂದು ಹನೂರಿನ ಸುಳ್ವಾಡಿ ಮಾರಮ್ಮ ದೇಗುಲದಲ್ಲಿ ವಿಷ ಪ್ರಸಾದ ಸೇವಿಸಿ 17 ಜನರು ಮೃತಪಟ್ಟಿದ್ದರು. ಸುಮಾರು 120ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದರು.
ಮೃತರ ಕುಟುಂಬಗಳಿಗೆ 2 ಎಕರೆ ಜಮೀನು: ಮೃತರ ಕುಟುಂಬಗಳಿಗೆ ಜಮೀನು ನೀಡಲು ಪ್ರಕ್ರಿಯೆ ಆರಂಭಿಸಲಾಗಿದೆ. ಒಂದೊಂದು ಕುಟುಂಬಕ್ಕೂ ತಲಾ 2 ಎಕರೆ ಜಮೀನು ನೀಡಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ. ಸರ್ಕಾರಿ ಜಮೀನಿಲ್ಲದ ಕಾರಣ ಖಾಸಗಿಯವರಿಂದ ಜಮೀನು ಖರೀದಿಸಲು ಕ್ರಮ ವಹಿಸಲಾಗಿದೆ. ನಿವೇಶನರಹಿತರಿಗೆ ನಿವೇಶನ ನೀಡಲಾಗುವುದು ಎಂದರು.
ಪ್ರಕರಣದಲ್ಲಿ ಕೆಲವು ಸಂತ್ರಸ್ತರ ಹೆಸರು ಕೈ ಬಿಟ್ಟುಹೋಗಿದೆ. ಸುಳ್ವಾಡಿಯಲ್ಲಿ ಅದಾಲತ್ ನಡೆಸಿ ಹೆಸರು ಸೇರಿಸಲು ತಹಶೀಲ್ದಾರ್ಗೆ ಸೂಚಿಸಿದ್ದೇನೆ. ಕೈಬಿಟ್ಟವರ ಹೆಸರನ್ನು ಸೇರಿಸಿ ಅವರಿಗೂ ಸೂಕ್ತ ಪರಿಹಾರ ನೀಡಲು ಸೂಚಿಸಿದ್ದೇನೆ. ಮೃತ ಕುಟುಂಬಗಳಿಗೆ ಈಗಾಗಲೇ ಪರಿಹಾರ ನೀಡಲಾಗಿದೆ. ಅಸ್ವಸ್ಥರಾದವರಿಗೂ ಚಿಕಿತ್ಸೆ ಕೊಡಿಸಲಾಗಿದೆ. ಇನ್ನೂ ಚಿಕಿತ್ಸೆ ಅಗತ್ಯ ಇರುವವರಿಗೆ ಮೈಸೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
Published On - 1:03 pm, Sat, 14 December 19