ಅಖಾಡದಲ್ಲಿ ಜಗಜಟ್ಟಿಗಳ ಸೆಣಸಾಟ, ದಂಗಲ್ ಕಾಳಗ ಕಂಡು ಜನಸ್ತೋಮ ಬಹುಪರಾಕ್

ಬೀದರ್: ರಂಗೇರಿದ ಅಖಾಡದಲ್ಲಿ ಜಗಜಟ್ಟಿಗಳ ಸೆಣಸಾಟ. ಗೆಲುವು ನಂದೇ ಹುಲಿಯಾ ಅಂತ ರಣಕಣದಲ್ಲಿ ಕಾದಾಟ. ತಮ್ಮ ತಮ್ಮ ಸಾಮರ್ಥ್ಯಕ್ಕೆ ತಕ್ಕವರೊಂದಿಗೆ ಕೈ ಕೈ ಹಿಡಿದು ಹೋರಾಟ. ಅಭಿಮಾನಿಗಳ ಶಿಳ್ಳೆ, ಚಪ್ಪಾಳೆ ಮುಗಿಲು ಮುಟ್ಟಿದ್ರೆ, ಹಲಗೆ ನಾದ ಕುಸ್ತಿ ಪಟುಗಳನ್ನು ಹುರಿದುಂಬಿಸುತ್ತಿತ್ತು. ಬೀದರ್ ತಾಲೂಕಿನ ಕಾಶೆಂಪುರ ಗ್ರಾಮದಲ್ಲಿ ಪವಾಡ ಪುರುಷ ಗುರು ಚಿದಾನಂದ ಸ್ವಾಮೀಜಿ ಜಾತ್ರೆ ಪ್ರಯುಕ್ತ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿತ್ತು. ಕ್ಕಿಕ್ಕಿರಿದು ತುಂಬಿದ್ದ ಜನಸ್ತೋಮದ ಮಧ್ಯೆ ಜಗಜಟ್ಟಿಗಳು ಸೆಣಸಾಡಿದ್ರು. ನೂರಕ್ಕೂ ಹೆಚ್ಚು ಕುಸ್ತಿ ಪಟುಗಳು ಕುಸ್ತಿಯಲ್ಲಿ ಭಾಗವಹಿಸಿ, […]

ಅಖಾಡದಲ್ಲಿ ಜಗಜಟ್ಟಿಗಳ ಸೆಣಸಾಟ, ದಂಗಲ್ ಕಾಳಗ ಕಂಡು ಜನಸ್ತೋಮ ಬಹುಪರಾಕ್
Follow us
ಸಾಧು ಶ್ರೀನಾಥ್​
|

Updated on:Dec 14, 2019 | 1:45 PM

ಬೀದರ್: ರಂಗೇರಿದ ಅಖಾಡದಲ್ಲಿ ಜಗಜಟ್ಟಿಗಳ ಸೆಣಸಾಟ. ಗೆಲುವು ನಂದೇ ಹುಲಿಯಾ ಅಂತ ರಣಕಣದಲ್ಲಿ ಕಾದಾಟ. ತಮ್ಮ ತಮ್ಮ ಸಾಮರ್ಥ್ಯಕ್ಕೆ ತಕ್ಕವರೊಂದಿಗೆ ಕೈ ಕೈ ಹಿಡಿದು ಹೋರಾಟ. ಅಭಿಮಾನಿಗಳ ಶಿಳ್ಳೆ, ಚಪ್ಪಾಳೆ ಮುಗಿಲು ಮುಟ್ಟಿದ್ರೆ, ಹಲಗೆ ನಾದ ಕುಸ್ತಿ ಪಟುಗಳನ್ನು ಹುರಿದುಂಬಿಸುತ್ತಿತ್ತು.

ಬೀದರ್ ತಾಲೂಕಿನ ಕಾಶೆಂಪುರ ಗ್ರಾಮದಲ್ಲಿ ಪವಾಡ ಪುರುಷ ಗುರು ಚಿದಾನಂದ ಸ್ವಾಮೀಜಿ ಜಾತ್ರೆ ಪ್ರಯುಕ್ತ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿತ್ತು. ಕ್ಕಿಕ್ಕಿರಿದು ತುಂಬಿದ್ದ ಜನಸ್ತೋಮದ ಮಧ್ಯೆ ಜಗಜಟ್ಟಿಗಳು ಸೆಣಸಾಡಿದ್ರು. ನೂರಕ್ಕೂ ಹೆಚ್ಚು ಕುಸ್ತಿ ಪಟುಗಳು ಕುಸ್ತಿಯಲ್ಲಿ ಭಾಗವಹಿಸಿ, ನರೆದಿದ್ದವರನ್ನ ರಂಜಿಸಿದ್ರು.

ರಾಜ್ಯ ಸೇರಿದಂತೆ ಹೊರರಾಜ್ಯದಿಂದ ಬಂದ ಕುಸ್ತಿಪಟುಗಳು ಅಖಾಡದಲ್ಲಿ ತಮ್ಮ ತಾಕತ್ತು ತೋರಿಸಿದ್ರು. ಕುಸ್ತಿಯನ್ನ ನೋಡುತ್ತಿದ್ದ ಪ್ರೇಕ್ಷಕರು ಕೇಕೆ, ಶಿಳ್ಳೆ ಹಾಕಿ ಕುಸ್ತಿಪಟುಗಳನ್ನ ಹುರಿದುಂಬಿಸಿದರು. ಅಲ್ಲದೇ ಹಲಗೆ ನಾದ ಪಟುಗಳಿಗೆ ಮತ್ತಷ್ಟು ಕಿಕ್ ನೀಡ್ತು. ಸತತ ಎರಡೂವರೆ ಗಂಟೆಗಳ ಕಾಲ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ಬೆಳ್ಳಿಯ ಖಡ್ಗವನ್ನ ಕುಸ್ತಿಪಟು ನಂದಕುಮಾರ್ ಗೆದ್ದುಕೊಂಡರು.

ಒಟ್ಟಾರೆ ನಶಿಸಿ ಹೋಗುತ್ತಿರುವ ಇಂಥಾ ಕ್ರೀಡೆಗಳು ಇನ್ನೂ ಹಳ್ಳಿಯಲ್ಲಿ ಜೀವಂತವಾಗಿವೇ ಅನ್ನುವುದೇ ಖುಷಿ ವಿಚಾರ. ಕುಸ್ತಿಯಂತಹ ಗ್ರಾಮೀಣ ಕ್ರೀಡೆಯಲ್ಲಿ ಭಾಗವಹಿಸಿ ತಮ್ಮ ತಾಕತ್ತು ತೋರಿಸುವ ಇಂತಹ ಯುವಕರಿಗೆ ಪ್ರೋತ್ಸಾಹ ಸಿಗಬೇಕಿದೆ. ಆಗ ಮಾತ್ರ ಇಂತಹ ಕ್ರೀಡೆಗಳು ಜೀವಂತವಾಗಿರಲು ಸಾಧ್ಯ.

Published On - 1:43 pm, Sat, 14 December 19