ಎಫ್​ಐಆರ್​ ದಾಖಲಾದ ಬಳಿಕ ನಾನು ಯಾರು ಅಂತ ಗೊತ್ತಾಗಿದೆ: ಕುಮಾರಸ್ವಾಮಿಗೆ ವಿಜಯ್ ಟಾಟಾ ಟಾಂಗ್​

ಉದ್ಯಮಿ ವಿಜಯ್​ ಟಾಟಾಗೆ ಬೆದರಿಕೆ ಆರೋಪದ ಬಗ್ಗೆ ಕೇಂದ್ರ ಸಚಿವ ಹೆಚ್​.ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಬೀದಿಲಿ ಹೋಗೋ ನಾಯಿ, ನರಿಗಳಿಗೆ ಉತ್ತರ ಕೊಡುವುದಕ್ಕೆ ಆಗುತ್ತಾ ಎಂದು ಟಾಂಗ್​ ಕೊಟ್ಟಿದ್ದರು. ಈಗ ಉದ್ಯಮಿ ವಿಜಯ್ ಟಾಟಾ ಪ್ರತಿಕ್ರಿಯಿಸಿ ಎಫ್​ಐಆರ್​ ದಾಖಲಾದ ಬಳಿಕ ಅವರಿಗೆ ನಾನು ಯಾರು ಅಂತ ಗೊತ್ತಾಗಿದೆ ಎಂದು ತಿರುಗೇಟು ನೀಡಿದ್ದಾರೆ.

ಎಫ್​ಐಆರ್​ ದಾಖಲಾದ ಬಳಿಕ ನಾನು ಯಾರು ಅಂತ ಗೊತ್ತಾಗಿದೆ: ಕುಮಾರಸ್ವಾಮಿಗೆ ವಿಜಯ್ ಟಾಟಾ ಟಾಂಗ್​
ಎಫ್​ಐಆರ್​ ದಾಖಲಾದ ಬಳಿಕ ನಾನು ಯಾರು ಅಂತ ಗೊತ್ತಾಗಿದೆ: ಕುಮಾರಸ್ವಾಮಿಗೆ ವಿಜಯ್ ಟಾಟಾ ಟಾಂಗ್​
Follow us
Prajwal Kumar NY
| Updated By: ಗಂಗಾಧರ​ ಬ. ಸಾಬೋಜಿ

Updated on: Oct 03, 2024 | 10:34 PM

ಬೆಂಗಳೂರು, ಅಕ್ಟೋಬರ್​ 03: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯಿಂದ (HD Kumaraswamy) 50 ಕೋಟಿ ರೂ. ಬೇಡಿಕೆ ಮತ್ತು ಜೀವ ಬೆದರಿಕೆ ಹಾಕಿದ್ದಾರೆಂದು ಗಂಭೀರ ಆರೋಪ ಮಾಡಿರುವ ಉದ್ಯಮಿ ವಿಜಯ್ ಟಾಟಾ ವಿರುದ್ಧ ಈಗಾಗಲೇ ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಗೆ ಪ್ರತಿದೂರು ದಾಖಲಾಗಿದೆ. ದೂರು ದಾಖಲಾಗುತ್ತಿದ್ದಂತೆ ಪ್ರತಿಕ್ರಿಯಿಸಿರುವ ಅವರು, ಎಫ್​ಐಆರ್​ ದಾಖಲಾದ ಬಳಿಕ ಅವರಿಗೆ ನಾನು ಯಾರು ಅಂತ ಗೊತ್ತಾಗಿದೆ ಎಂದು ತಿರುಗೇಟು ನೀಡಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಉದ್ಯಮಿ ವಿಜಯ್ ಟಾಟಾ, ಇಂದು ನನ್ನ ಮುಖದಲ್ಲಿ ನಗು ಇದೆ. ಇಂದು ಖುಷಿ ಆಗುತ್ತಿದೆ. ನನ್ನ ಎಫ್ಐಆರ್ ಆದ ಮೇಲೆ ಅವರು ದೂರು ಕೊಟ್ಟಿದ್ದಾರೆ. ಮೊದಲು ಯಾರೂ ಅಂಥ ಗೊತ್ತಿಲ್ಲ ಅಂಥ ಹೇಳಿದ್ದರು. ಈಗ ಅವರಿಗೆ ನಾನು ಯಾರು ಅಂಥ ಗೊತ್ತಿದೆ ಎಂದು ಸಾಬೀತಾಯಿತು ಎಂದಿದ್ದಾರೆ.

ನಾನು ಯಾರಿಗೂ ಯಾವುದಕ್ಕೂ ಡಿಮ್ಯಾಂಡ್ ಮಾಡಿಲ್ಲ: ಉದ್ಯಮಿ ವಿಜಯ್ ಟಾಟಾ

ನಾನು ನೂರು ಕೋಟಿ ರೂಪಾಯಿ ಕೇಳಿದ್ದೀನಿ ಅನ್ನೋ ಆರೋಪ ವಿಚಾರವಾಗಿ ಮಾತನಾಡಿದ್ದು, ಹೇಳುವುದಕ್ಕೂ ಒಂದು ಅರ್ಥ ಬೇಡವಾ. 100 ಕೋಟಿ ರೂ. ಕೇಳುವುದಕ್ಕೆ ಸಾಧ್ಯನಾ. ಅದು ಕೇಂದ್ರ ಸಚಿವ ಬಳಿ ಹೋಗಿ. ನಂಬುವ ವಿಚಾರವನ್ನ ಹೇಳಬೇಕಲ್ಲ. ಅದಕ್ಕೆ ಅವರು ದಾಖಲೆಗಳನ್ನ ಕೊಡಲಿ. ಅವರಿಗೆ ನಾನು ದುಡ್ಡು ಕೊಟ್ಟಿಲ್ಲ ಅನ್ನುವ ಕೋಪ ಇದೆ. ಪ್ರಧಾನಿ ನರೇಂದ್ರ ಮೋದಿ ಅವರು ಹೆಚ್​ಡಿ ಕುಮಾರಸ್ವಾಮಿ ಅವರನ್ನು ಕೇಂದ್ರ ಸಚಿವರನ್ನಾಗಿ ಮಾಡಿದ್ದಾರೆ. ಅವರು ದೇಶದ ಅಭಿವೃದ್ಧಿ ಬಗ್ಗೆ ಯೋಚನೆ ಮಾಡಬೇಕು. ಸುಖಾಸುಮ್ಮನೇ ನನ್ನ ಮೇಲೆ ಸಾಲು ಸಾಲು ಆರೋಪ ಮಾಡುವುದಲ್ಲ. ನಾನು ಯಾರಿಗೂ ಯಾವುದಕ್ಕೂ ಡಿಮ್ಯಾಂಡ್ ಮಾಡಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: 50 ಕೋಟಿ ರೂಗೆ ಡಿಮ್ಯಾಂಡ್​: ಹೆಚ್​ಡಿಕೆ ವಿರುದ್ಧ ದೂರು ನೀಡಿದ್ದ ಉದ್ಯಮಿ ವಿರುದ್ಧವೇ ಪ್ರತಿದೂರು

ಕೊನೆಗೂ ವಿಜಯ್ ಟಾಟಾ ಯಾರು ಎನ್ನುವುದನ್ನು ಒಪ್ಪಿಕೊಂಡಿದ್ದಾರೆ. ನಾನು ಜೆಡಿಎಸ್ ಕಾರ್ಯಕರ್ತ. 2019ರಲ್ಲಿ ಸಾಕಷ್ಟು ಖರ್ಚು ಮಾಡಿದ್ದೇನೆ. ಅದಕ್ಕೆ ಸಾಕ್ಷಿಗಳಿವೆ. ಸೂಪರ್ ಮಂಡ್ಯ ಅನ್ನುವ ಕ್ಯಾಂಪೇನ್ ಮಾಡಿದ್ದೀನಿ. ಇಂದು ವಿಜಯ್ ಟಾಟಾ ಯಾರು ಅಂಥ ಗೊತ್ತು. ಮನೆಗೆ ಹೋಗಿ ಊಟ ಮಾಡಿದ್ದೀನಿ ಅಂದಿದ್ದಾರೆ. ಹಾಗಿದ್ದರೆ ಗೊತ್ತಿಲ್ಲದವರ ಮನೆಗೆ ಊಟಕ್ಕೆ ಹೋಗುತ್ತಾರಾ? ಅವರು ಒಪ್ಪಿಕೊಂಡರೆ ನಾನೇ ದೂರು ವಾಪಸ್​ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

ರಮೇಶ್ ಗೌಡರಿಗೂ ಐದು ಕೋಟಿ ರೂ ಸಿಗುತ್ತೆ

ರಮೇಶ್ ಗೌಡರ ಹಣ ಕೊಡುವುದಕ್ಕೆ ಆಗಲ್ಲ ಅಂಥ ಮುಖದ ಮೇಲೆ ಹೊಡೆದ ಹಾಗೇ ಹೇಳಬೇಡಿ. ಹೊಂದಾಣಿಕೆ ಮಾಡಿಕೊಂಡು ಹೋಗಿ ಅಂತಾರೆ. ಯಾಕಂದರೆ ಅವರಿಗೂ ಐದು ಕೋಟಿ ರೂ. ಸಿಗುತ್ತದೆ ಅದಕ್ಕೆ. ಎಡಿಜಿಪಿ ಚಂದ್ರಶೇಖರ್ ನನಗೆ ನಾರ್ಮಲ್ ಪರಿಚಯ ಅಷ್ಟೇ. ನಾನು ತೆಲುಗು ಅವರು ತೆಲುಗು ಅಷ್ಟೇ ಪರಿಚಯ. ಕುಮಾರಸ್ವಾಮಿ ಅವರಿಗೆ ಮನವಿ ಮಾಡುತ್ತಿದ್ದೇನೆ. ಕಾರ್ಯಕರ್ತರನ್ನ ಬೆಳೆಸುವ ಕೆಲಸ ಮಾಡಿ. ಉಪಯೋಗಿಸಿಕೊಂಡು ಬಿಸಾಡುವ ಕೆಲಸ ಮಾಡಬೇಡಿ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಉದ್ಯಮಿಗೆ ಬೆದರಿಕೆ ಆರೋಪ: ಕುಮಾರಸ್ವಾಮಿ ವಿರುದ್ಧ ಎಫ್‌ಐಆರ್ ದಾಖಲು

ಜೆಡಿಎಸ್ ಪಕ್ಷ ಬಿಟ್ಟು ನಾನು ಹೋಗುವುದಿಲ್ಲ. ರಮೇಶ್ ಗೌಡರ ಬೆಂಕಿಗೆ ತುಪ್ಪ ಹಾಕುವ ಕೆಲಸ ಮಾಡಿದರು. ನನ್ನ ಯೋಜನೆ ನಡೆಯುತ್ತಿದೆ. ಹಾಗಾಗಿ ನನ್ನ ಬಳಿ ದುಡ್ಡಿಲ್ಲ. ದುಡ್ಡಿಲ್ಲ ಎನ್ನುವುದನ್ನು ಜೋರಾಗಿ ಹೇಳಿದೆ. ಅದನ್ನೇ ರಮೇಶ್ ಗೌಡ ಬಳಸಿಕೊಂಡಿದ್ದಾರೆ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.