ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲಿಗೆ ಗ್ರೀನ್ ಸಿಗ್ನಲ್: ಇಲ್ಲಿದೆ ಟಿಕೆಟ್ ದರ, ವೇಳಾಪಟ್ಟಿ ಮಾಹಿತಿ

ಬಹುನಿರೀಕ್ಷಿತ ಬೆಂಗಳೂರು ಟು ಮುಂಬೈ ವಂದೇ ಭಾರತ್​​ ರೈಲಿಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಇಂದು ನವೆಂಬರ್ 01) ಬೆಂಗಳೂರು-ಮುಂಬೈ 'ವಂದೇ ಭಾರತ್ ಸ್ಲೀಪರ್' ರೈಲಿಗೆ ಚಾಲನೆ ನೀಡಿರು. ಇದೇ ವೇಳೆ ಇನ್ನೊಂದು ವಂದೇ ಭಾರತ್ ಸ್ಲೀಪರ್ ರೈಲು ಘೋಷಣೆ ಮಾಡಿದರು. ಇನ್ನು ಇಂದಿನಿಂದ ಆರಂಭವಾದ ಬೆಂಗಳೂರು-ಮುಂಬೈ ರೈಲಿನ ವೇಳಾಪಟ್ಟಿ ಹಾಗೂ ಟಿಕೆಟ್ ದರದ ಮಾಹಿತಿ ಇಲ್ಲಿದೆ.

ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲಿಗೆ ಗ್ರೀನ್ ಸಿಗ್ನಲ್: ಇಲ್ಲಿದೆ ಟಿಕೆಟ್ ದರ, ವೇಳಾಪಟ್ಟಿ ಮಾಹಿತಿ
Bengaluru Mumbai Vande Bharat Sleeper Train

Updated on: Nov 01, 2026 | 2:17 PM

ಬೆಂಗಳೂರು,  (ನವೆಂಬರ್ 01): ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲೇ ದಕ್ಷಿಣ ಭಾರತದ ಮೊದಲ ಹಾಗೂ ದೇಶದ ಮೂರನೇ ವಂದೇ ಭಾರತ್ ಸ್ಲೀಪರ್ ರೈಲಿಗೆ ಸಚಿವ ಅಶ್ವಿನಿ ವೈಷ್ಣವ್ ಚಾಲನೆ ನೀಡಿದ್ದಾರೆ. ಬೆಂಗಳೂರಿನಿಂದ ಹೊರಟು ಕಲಬುರಗಿ ಮಾರ್ಗವಾಗಿ ಸುಮಾರು 16 ಗಂಟೆಗಳಲ್ಲಿ ಮುಂಬೈ ತಲುಪಲಿದೆ. ನವೆಂಬರ್ 2 ರಂದು ಮುಂಬೈನ ಸಿಎಸ್‌ಎಂಟಿ ನಿಲ್ದಾಣದಿಂದ ಮತ್ತು ನವೆಂಬರ್ 3 ರಂದು ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ನಿಲ್ದಾಣದಿಂದ ಈ ರೈಲಿನ ನಿಯಮಿತ ವಾಣಿಜ್ಯ ಸಂಚಾರ ಆರಂಭವಾಗಲಿದೆ.

16 ಬೋಗಿಗಳ ಆಧುನಿಕ ಸ್ಲೀಪರ್ ರೈಲು

ಈ ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್ ರೈಲು 16 ಬೋಗಿಗಳನ್ನು ಹೊಂದಿರಲಿದೆ. ಇದರಲ್ಲಿ 8 ಮೋಟಾರ್ ಕಾರ್ (MC), 4 ಟ್ರೇಲರ್ ಕಾರ್ (TC), 2 ನಾನ್-ಡ್ರೈವಿಂಗ್ ಟ್ರೇಲರ್ ಕಾರ್ (NDTC) ಹಾಗೂ 2 ಡ್ರೈವಿಂಗ್ ಟ್ರೇಲರ್ ಕಾರ್ (DTC) ಬೋಗಿಗಳು ಇರಲಿವೆ.

ಇದನ್ನೂ ಓದಿ: ಕರ್ನಾಟಕಕ್ಕೆ ಮತ್ತೊಂದು ವಂದೇ ಭಾರತ್ ಸ್ಲೀಪರ್ ಗಿಫ್ಟ್, ಹುಬ್ಬಳ್ಳಿ ಮೂಲಕ ಬೆಂಗಳೂರು-ಮುಂಬೈ ಸಂಪರ್ಕ ಅಶ್ವಿನಿ ವೈಷ್ಣವ್ ಘೋಷಣೆ

ನ. 3ರಿಂದ ವಾರದಲ್ಲಿ ಆರು ದಿನ ನಿಯಮಿತ ಸಂಚಾರ

ಉದ್ಘಾಟನಾ ವಿಶೇಷ ರೈಲಿನ ಬಳಿಕ ರೈಲು ಸಂಖ್ಯೆ 27652/27651 ಬೆಂಗಳೂರು–ಮುಂಬೈ–ಬೆಂಗಳೂರು ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್ ನಿಯಮಿತವಾಗಿ ವಾರದಲ್ಲಿ ಆರು ದಿನ ಸಂಚರಿಸಲಿದೆ. ರೈಲು ಸಂಖ್ಯೆ 27652 – ಬೆಂಗಳೂರು–ಮುಂಬೈ ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್ ನವೆಂಬರ್ 3ರಿಂದ ಸೋಮವಾರ ಹೊರತುಪಡಿಸಿ ವಾರದ ಆರು ದಿನ ಸಂಚರಿಸಲಿದೆ. ಬೆಂಗಳೂರಿನ ಎಸ್‌ಎಂವಿಟಿಯಿಂದ ರಾತ್ರಿ 7:45ಕ್ಕೆ ಹೊರಡುವ ರೈಲು ಮರುದಿನ ಬೆಳಗ್ಗೆ 11:55ಕ್ಕೆ ಮುಂಬೈನ ಸಿಎಸ್‌ಎಂಟಿ ತಲುಪಲಿದೆ.

ಎಲ್ಲೆಲ್ಲಿ ನಿಲುಗಡೆ?

ರೈಲು ಅನಂತಪುರ (22:28/22:30), ಗುಂತಕಲ್ (23:20/23:25), ರಾಯಚೂರು (01:03/01:05), ಯಾದಗಿರಿ (01:43/01:45), ಕಲಬುರಗಿ (03:08/03:10), ಸೋಲಾಪುರ (04:20/04:25), ಪುಣೆ (08:00/08:05) ಮತ್ತು ಕಲ್ಯಾಣ್ (10:42/10:44) ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.

ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಟಿಕೆಟ್ ದರ

ಬೆಂಗಳೂರು-ಮುಂಬೈ-ಬೆಂಗಳೂರು ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಒಟ್ಟು 16 ಬೋಗಿಗಳಿವೆ. ಪ್ರಯಾಣಿಕರಿಗೆ ಥರ್ಡ್ ಎಸಿ, ಸೆಕೆಂಡ್ ಎಸಿ ಮತ್ತು ಫಸ್ಟ್ ಎಸಿ ಎಂಬ ಮೂರು ದರ್ಜೆಗಳಿವೆ. ಅವುಗಳ ಪೈಕಿ ನೀವು ಯಾವ ಬೋಗಿಯಲ್ಲಿ ಪ್ರಯಾಣಿಸುತ್ತೀರಿ ಎಂಬುದರ ಮೇಲೆ ಟಿಕೆಟ್ ದರಗಳು ಬದಲಾಗುತ್ತವೆ.

  • ಫಸ್ಟ್ ಎಸಿ: 4,450 ರೂಪಾಯಿ
  • ಸೆಕೆಂಡ್ ಎಸಿ: 3,630 ರೂಪಾಯಿ
  • ಥರ್ಡ್ ಎಸಿ: 2,810 ರೂಪಾಯಿ

ಮುಂಬೈನಿಂದ ಬೆಂಗಳೂರಿಗೆ ಹಿಂತಿರುಗುವ ರೈಲು ವೇಳಾಪಟ್ಟಿ

ರೈಲು ಸಂಖ್ಯೆ 27651 – ಮುಂಬೈ–ಬೆಂಗಳೂರು ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್ ನವೆಂಬರ್ 2ರಿಂದ ಮಂಗಳವಾರ ಹೊರತುಪಡಿಸಿ ವಾರದ ಆರು ದಿನ ಸಂಚರಿಸಲಿದೆ. ಮುಂಬೈನ ಸಿಎಸ್‌ಎಂಟಿಯಿಂದ ರಾತ್ರಿ 8:10ಕ್ಕೆ ಹೊರಡುವ ರೈಲು ಮರುದಿನ ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನ ಎಸ್‌ಎಂವಿಟಿ ತಲುಪಲಿದೆ.
Mumbai To Bengaluru Vande Bharat Sleeper Express Officially Launched
ಹಿಂತಿರುಗುವ ಮಾರ್ಗದಲ್ಲಿ ಕಲ್ಯಾಣ್ (20:48/20:50), ಪುಣೆ (23:40/23:45), ಸೋಲಾಪುರ (03:00/03:05), ಕಲಬುರಗಿ (04:13/04:15), ಯಾದಗಿರಿ (05:08/05:10), ರಾಯಚೂರು (06:03/06:05), ಗುಂತಕಲ್ (07:30/07:35) ಮತ್ತು ಅನಂತಪುರ (08:38/08:40) ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:02 pm, Sun, 1 November 26

ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More
Loading...
Unable to load recommendations.
Follow Us