‘ಸಿ.ಪಿ. ಯೋಗೇಶ್ವರ್ ತಾಲೂಕು ಮಟ್ಟದಲ್ಲಿ ಹಣ ಮಾಡುತ್ತಿದ್ದರು, ಈಗ ರಾಜ್ಯ ಮಟ್ಟದಲ್ಲಿ ಹಣ ಮಾಡಲು ಅಧಿಕಾರ ಕೊಟ್ಟಿದ್ದಾರೆ’

ಸಿ.ಪಿ.ಯೋಗೇಶ್ವರ್ ಮೊದಲು ತಾಲೂಕು ಮಟ್ಟದಲ್ಲಿ ಹಣ ಮಾಡುತ್ತಿದ್ದರು. ಈಗ ರಾಜ್ಯಮಟ್ಟದಲ್ಲಿ ಹಣ ಮಾಡಲು ಅಧಿಕಾರ ಕೊಟ್ಟಿದ್ದಾರೆ ಎಂದು ಕುಮಾರಸ್ವಾಮಿ ಟಾಂಗ್​ ಕೊಟ್ಟರು.

‘ಸಿ.ಪಿ. ಯೋಗೇಶ್ವರ್ ತಾಲೂಕು ಮಟ್ಟದಲ್ಲಿ ಹಣ ಮಾಡುತ್ತಿದ್ದರು, ಈಗ ರಾಜ್ಯ ಮಟ್ಟದಲ್ಲಿ ಹಣ ಮಾಡಲು ಅಧಿಕಾರ ಕೊಟ್ಟಿದ್ದಾರೆ’
ಹೆಚ್.ಡಿ.ಕುಮಾರಸ್ವಾಮಿ
Edited By: ಸಾಧು ಶ್ರೀನಾಥ್​

Updated on: Jan 19, 2021 | 4:31 PM

ರಾಮನಗರ: ಲೆಟರ್ ಹೆಡ್ ವಿಚಾರವಾಗಿ ಸಚಿವ ಸಿ.ಪಿ.ಯೋಗೇಶ್ವರ್‌ಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ. ಸಿ.ಪಿ.ಯೋಗೇಶ್ವರ್ ಮೊದಲು ತಾಲೂಕು ಮಟ್ಟದಲ್ಲಿ ಹಣ ಮಾಡುತ್ತಿದ್ದರು. ಈಗ ರಾಜ್ಯ ಮಟ್ಟದಲ್ಲಿ ಹಣ ಮಾಡಲು ಅಧಿಕಾರ ಕೊಟ್ಟಿದ್ದಾರೆ ಎಂದು ಕುಮಾರಸ್ವಾಮಿ ಟಾಂಗ್​ ಕೊಟ್ಟರು.

ಸಿ.ಪಿ.ಯೋಗೇಶ್ವರ್ ಈಗ ಮಂತ್ರಿಯಾದರು. ಪೊಗ‌ದಸ್ತಾಗಿ ಕೆಲಸ ಮಾಡಲು ಅನುಕೂಲವಾಯ್ತು. ಪ್ರಾಮಾಣಿಕ ಅಧಿಕಾರಿಗಳ ಮೂಲಕ ಕೆಲಸ ಮಾಡಲಿ. ಅವರೇ ಹೆಸರು ಪಡೆಯಲಿ ಎಂದು ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.

ರಾಜಕಾರಣಕ್ಕೆ ಬಂದಾಗಿನಿಂದ ಮಂತ್ರಿಗಳನ್ನ ನೋಡಿದ್ದೇನೆ. ಮಂತ್ರಿಗೆ ಏನ್ ಕೊಂಬಿರುತ್ತಾ? ಎಂದು ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು. ರಾಜ್ಯದ ಜನರು ನಮಗೆ ದೆಹಲಿಯನ್ನೂ ತೋರಿಸಿದ್ದಾರೆ. ಅಧಿಕಾರ ಬಂದಾಗ ಬಡವರ ಬಗ್ಗೆ ಚಿಂತನೆ ಮಾಡಲಿ. ಬಡವರ ಪರವಾಗಿ ಕೆಲಸ ಮಾಡಲಿ ಎಂದು ಕುಮಾರಸ್ವಾಮಿ ಹೇಳಿದರು. ಜೊತೆಗೆ, ನನ್ನನ್ನು ಯಾರೂ ಕಟ್ಟಿಹಾಕಲು ಸಾಧ್ಯವಿಲ್ಲ ಎಂದೂ ಸಹ ಕುಮಾರಸ್ವಾಮಿ ಹೇಳಿದರು.

‘ಸಿ.ಪಿ.ಯೋಗೇಶ್ವರ್ ನನಗೆ ವೈಯಕ್ತಿಕವಾಗಿ ಸ್ನೇಹಿತರು’
ಸಿ.ಪಿ.ಯೋಗೇಶ್ವರ್ ನನಗೆ ವೈಯಕ್ತಿಕವಾಗಿ ಸ್ನೇಹಿತರು. ಕಾರ್ಯಕರ್ತರ ಕುತ್ತಿಗೆ ಕೊಯ್ದು ಸ್ನೇಹ ಉಳಿಸಿಕೊಳ್ಳಲಾಗಿಲ್ಲ. ಆದರೆ, ವೈಯಕ್ತಿಕ ಸ್ನೇಹ ಬೇರೆ, ರಾಜಕೀಯ ಬೇರೆ. ಸಿಎಂ ಬಿ.ಎಸ್.ಯಡಿಯೂರಪ್ಪನವರೂ ನನಗೆ ಸ್ನೇಹಿತರು ಎಂದು ಚನ್ನಪಟ್ಟಣದಲ್ಲಿ ಮಾಜಿ ಸಿಎಂ H.D.ಕುಮಾರಸ್ವಾಮಿ ಹೇಳಿದರು.

ಸುರೇಶ್ ಅಂಗಡಿ ಕಿರಿಯ ಪುತ್ರಿ ಶ್ರದ್ಧಾ ಶೆಟ್ಟರ್‌ಗೆ ಸಿಗುತ್ತಾ ಬಿಜೆಪಿ ಟಿಕೆಟ್?

Loading...
Unable to load recommendations.
Follow Us