50 ಕೋಟಿ ರೂಗೆ ಡಿಮ್ಯಾಂಡ್​: ಹೆಚ್​ಡಿಕೆ ವಿರುದ್ಧ ದೂರು ನೀಡಿದ್ದ ಉದ್ಯಮಿ ವಿರುದ್ಧವೇ ಪ್ರತಿದೂರು

| Updated By: ಗಂಗಾಧರ​ ಬ. ಸಾಬೋಜಿ

Updated on: Oct 03, 2024 | 9:41 PM

50 ಕೋಟಿ ರೂ. ಬೇಡಿಕೆ ಇಟ್ಟು ಜೀವಬೆದರಿಕೆ ಹಾಕಿದ್ದಾರೆಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಉದ್ಯಮಿ ವಿಜಯ್ ಟಾಟಾ ಗಂಭೀರ ಆರೋಪ ಮಾಡಿದ್ದಾರೆ. ಈ ವಿಚಾರವಾಗಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಎಫ್​ಐಆರ್​ ದಾಖಲಾದ ಬೆನ್ನಲ್ಲೇ ಇದೀಗ ಮಾಜಿ ಎಂಎಲ್​ಸಿ ರಮೇಶ್ ಗೌಡ, ವಿಜಯ್ ಟಾಟಾ ವಿರುದ್ಧ ದೂರು ನೀಡಿದ್ದಾರೆ.

50 ಕೋಟಿ ರೂಗೆ ಡಿಮ್ಯಾಂಡ್​: ಹೆಚ್​ಡಿಕೆ ವಿರುದ್ಧ ದೂರು ನೀಡಿದ್ದ ಉದ್ಯಮಿ ವಿರುದ್ಧವೇ ಪ್ರತಿದೂರು
50 ಕೋಟಿ ರೂ.ಗೆ ಡಿಮ್ಯಾಂಡ್​: ಹೆಚ್​ಡಿಕೆ ವಿರುದ್ಧ ದೂರು ನೀಡಿದ್ದ ಉದ್ಯಮಿ ವಿರುದ್ಧವೇ ಪ್ರತಿದೂರು
Follow us on

ಬೆಂಗಳೂರು, ಅಕ್ಟೋಬರ್​ 03: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ವಿರುದ್ಧ 50 ಕೋಟಿ ರೂ. ಬೇಡಿಕೆ ಜೊತೆಗೆ ಜೀವಬೆದರಿಕೆ ಹಾಕಿದ್ದಾರೆಂದು ಆರೋಪಿಸಿರುವ ಉದ್ಯಮಿ ವಿಜಯ್ ಟಾಟಾ ವಿರುದ್ಧ ಇದೀಗ ವಿಧಾನಪರಿಷತ್ ಜೆಡಿಎಸ್​ ಮಾಜಿ​ ಸದಸ್ಯ ರಮೇಶ್​ಗೌಡ ಬೆಂಗಳೂರಿನ ಅಮೃತಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ರಮೇಶ್ ಗೌಡರ ದೂರನ್ನು ಪೊಲೀಸರು ಸ್ವೀಕರಿಸಿದ್ದಾರೆ.

ನೂರು ಕೋಟಿ ರೂ. ಹಣ ಕೇಳಿದ್ದ, ಇಲ್ಲ ಅಂದಿದ್ದಕ್ಕೆ, ಆ.24ರಂದು ಮನೆಗೆ ಊಟಕ್ಕೆ ಕರೆದಾಗ ಬೆದರಿಕೆ ಹಾಕಿದ್ದಾರೆ. ನಾನು ಈಗಾಗಲೇ ಲಾಸ್​ನಲ್ಲಿದ್ದೇನೆ, ನನಗೆ ಹಣ ಬೇಕು. ನೀವು ನೂರು ಕೋಟಿ ರೂ. ಕೊಡಿ, ಇಲ್ಲವಾದರೆ ನಿಮ್ಮನ್ನ ಮತ್ತು ಹೆಚ್​ಡಿ ಕುಮಾರಸ್ವಾಮಿಯನ್ನ ಬಿಡಲ್ಲ ಎಂದು ಬೆದರಿಕೆ ಹಾಕಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಉದ್ಯಮಿಗೆ ಬೆದರಿಕೆ ಆರೋಪ: ಕುಮಾರಸ್ವಾಮಿ ವಿರುದ್ಧ ಎಫ್‌ಐಆರ್ ದಾಖಲು

ಇನ್ನು ದೂರು ನೀಡಿರುವ ವಿಜಯ್ ಟಾಟಾ, ಹೊರಗಿನವರಲ್ಲ. 2018 ರಿಂದ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಇದೀಗ ಹೆಚ್​ಡಿ ಕುಮಾರಸ್ವಾಮಿ ಮತ್ತು ಮಾಜಿ ಎಂಎಲ್​ಸಿ ರಮೇಶ್ ಗೌಡ ವಿರುದ್ಧ ದೂರು ನೀಡಿದ್ದಾರೆ. ದೂರಿನ ಅನ್ವಯ ಇಬ್ಬರ ವಿರುದ್ಧವೂ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್​​ಐಆರ್​ ದಾಖಲಾಗಿದೆ.

ಬೀದಿ ನಾಯಿ, ನರಿಗೆಲ್ಲಾ ಉತ್ತರ ಕೊಡೋಕೆ ಆಗುತ್ತಾ?: ಹೆಚ್​ಡಿ ಕುಮಾರಸ್ವಾಮಿ ಗರಂ

ಇನ್ನು ವಿಜಯ್ ಟಾಟಾ ಆರೋಪದ ಬಗ್ಗೆ ಪ್ರಶ್ನಿಸುತ್ತಿದ್ದಂತೆಯೇ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಕನಲಿ ಕೆಂಡವಾಗಿದ್ದಾರೆ. ‘ಬೀದಿ ನಾಯಿ, ನರಿಗೆಲ್ಲಾ ಉತ್ತರ ಕೊಡೋಕೆ ಆಗುತ್ತಾ? ಅವನು ಯಾರು? ಅವನ ಬಗ್ಗೆ ಯಾಕೆ ಚರ್ಚೆ ಮಾಡಲಿ ಎಂದಿದ್ದಾರೆ.

ಇದನ್ನೂ ಓದಿ: ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ಉದ್ಯಮಿ ವಿಜಯ್ ಟಾಟಾ ದೂರು ದಾಖಲು: 50 ಕೋಟಿ ರೂ.ಗೆ ಬೆದರಿಕೆ ಆರೋಪ

ಕುತೂಹಲ ಸಂಗತಿ ಅಂದ್ರೆ ಸೆಪ್ಟೆಂಬರ್ 28 ರಂದು ಸುದ್ದಿಗೋಷ್ಠಿ ನಡೆಸಿದ್ದ ಕುಮಾರಸ್ವಾಮಿ ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ವಿರುದ್ಧ ಆರೋಪ ಮಾಡಿದ್ದರು. ಅಂದು ಇದೇ ಹೆಚ್​ಡಿಕೆ ವಿಜಯ್ ಟಾಟಾರ ಹೆಸರನ್ನು ಉಲ್ಲೇಖಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.