ಸಂಸತ್ ಭವನದ ಆವರಣದಲ್ಲಿ ಕೆಂಪೇಗೌಡರ ಕಂಚಿನ ಪುತ್ಥಳಿ ಸ್ಥಾಪಿಸುವಂತೆ ಪ್ರಧಾನಿ ಮೋದಿಗೆ ಪತ್ರ ಬರೆದ ಹೆಚ್ಡಿ ದೇವೇಗೌಡ
ಸಂಸತ್ ಭವನದ ಆವರಣದಲ್ಲಿ ಕೆಂಪೇಗೌಡರ ಕಂಚಿನ ಪುತ್ಥಳಿ ಸ್ಥಾಪಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಪತ್ರ ಬರೆದಿದ್ದಾರೆ.
ಬೆಂಗಳೂರು: ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ಏರ್ಪೋರ್ಟ್ನಲ್ಲಿ ಕೆಂಪೇಗೌಡರ 108 ಅಡಿಯ ಪ್ರತಿಮೆ (Kempegowda statue) ನಿರ್ಮಾಣವಾಗಿದ್ದು, ನವೆಂಬರ್ 11 ರಂದು ಉದ್ಘಾಟನೆಯಾಗಲಿದೆ. ಈ ಬೆನ್ನಲ್ಲೇ ಸಂಸತ್ ಭವನದ ಆವರಣದಲ್ಲಿ ಕೆಂಪೇಗೌಡರ ಕಂಚಿನ ಪುತ್ಥಳಿ ಸ್ಥಾಪಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಪತ್ರ ಬರೆದಿದ್ದಾರೆ.
“ಕೆಂಪೇಗೌಡರು 16ನೇ ಶತಮಾನದಲ್ಲಿ ಬೆಂಗಳೂರು ನಗರವನ್ನು ಸ್ಥಾಪಿಸಿದರು ಮತ್ತು ಶತಮಾನಗಳ ಹಿಂದೆ ಅವರು ಬಿತ್ತಿದ ಬೀಜಗಳು ಇಂದು ಜಾಗತಿಕವಾಗಿ ಪ್ರಸಿದ್ಧವಾದ ಮಹಾನಗರವಾಗಿ ಅರಳಿವೆ. ಅದು ನಾವೆಲ್ಲರೂ ಹೆಮ್ಮೆಪಡುತ್ತೇವೆ” ಎಂದು ದೇವೆಗೌಡರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
I have forwarded the request of the Bangalore Founder Kempegowda Central Committee to the Prime Minister with my personal recommendation. pic.twitter.com/7sxhiic8Sx
— H D Devegowda (@H_D_Devegowda) November 6, 2022
ಬೆಂಗಳೂರಲ್ಲಿ ಉದ್ಘಾಟನೆಗೆ ಸಿದ್ಧವಾಗಿರುವ ಪ್ರತಿಮೆ ಹಿನ್ನೆಲೆ
ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ಏರ್ಪೋರ್ಟ್ನಲ್ಲಿ ಕೆಂಪೇಗೌಡರ ಪ್ರತಿಮೆ (Kempegowda statue) ನಿರ್ಮಾಣವಾಗಿದ್ದು, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ನವೆಂಬರ್ 11ರಂದು ಉದ್ಘಾಟನೆ ಮಾಡಲಿದ್ದಾರೆ. ಕೆಂಪೇಗೌಡರ ಪ್ರತಿಮೆ ಮುಂಭಾಗ ಥೀಮ್ ಪಾರ್ಕ್ ಸಹ ನಿರ್ಮಾಣವಾಗಿದೆ. ವಿಮಾನ ನಿಲ್ದಾಣ ಪ್ರವೇಶ ದ್ವಾರದ ಬಳಿ 64 ಕೋಟಿ ರೂ. ವೆಚ್ಚದಲ್ಲಿ ಕೆಂಪೇಗೌಡರ ಪ್ರತಿಮೆ ನಿರ್ಮಾಣವಾಗಿದೆ. 98 ಕೆಜಿ ಕಂಚು, 120 ಕೆಜಿ ಸ್ಟೀಲ್ ಬಳಸಿ ನಿರ್ಮಿಸಿರುವ ಪ್ರತಿಮೆ ಇದಾಗಿದೆ.
ರಾಜ್ಯಾದ್ಯಂತ 45 ದಿನ ಕೆಂಪೇಗೌಡರ ಪ್ರತಿಮೆ ಅಭಿಯಾನ
ರಾಜ್ಯಾದ್ಯಂತ ಕೆಂಪೇಗೌಡರ ಪ್ರತಿಮೆ ಅಭಿಯಾನ ನಡೆಯುತ್ತಿದೆ. ರಾಜ್ಯದ ಪ್ರತಿ ಜಿಲ್ಲೆಯಲ್ಲೂ 45 ದಿನಗಳ ಕಾಲ ಪ್ರತಿಮೆ ಉದ್ಘಾಟನಾ ಅಭಿಯಾನ ನಡೆಯುತ್ತಿದೆ. ಕಂಚಿನ ಪ್ರತಿಮೆ ಸ್ಥಾಪನೆ ಮತ್ತು ಥೀಮ್ ಪಾರ್ಕ್ ಉದ್ಘಾಟನಾ ಅಭಿಯಾನ ಇದಾಗಿದೆ.
ಏರ್ಪೋಟ್ ನಲ್ಲಿ ತಲೆ ಎತ್ತಿದೆ 108 ಅಡಿಯ ಬೃಹತ್ ಕೆಂಪೇಗೌಡ ಪ್ರತಿಮೆ:
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಲೆ ಎತ್ತಿರೂ 64 ಕೋಟಿ ರೂ ವೆಚ್ಚದ 108 ಅಡಿಯ ಬೃಹತ್ ಕಂಚಿನ ಪ್ರತಿಮೆ ಅನಾವರಣವಾಗಲಿದೆ. ಇನ್ನು ಪ್ರತಿಮೆಯ ಮುಂಭಾಗದಲ್ಲಿ 3 ಎಕರೆ ಜಾಗದಲ್ಲಿ 20 ಕೋಟಿ ವೆಚ್ಚದಲ್ಲಿ ಥೀಮ್ ಪಾರ್ಕ್ ಸಹ ತಲೆ ಎತ್ತಲಿದ್ದು ನಾಡಪ್ರಭು ಕೆಂಪೇಗೌಡರ ಜೀವನ ಚರಿತ್ರೆ ಆಡಳಿತದ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸುವ ಕಾರ್ಯವನ್ನು ಸರ್ಕಾರ ಮಾಡಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:10 pm, Sun, 6 November 22